ಕರಾವಳಿ

ಕಡಬ: ವಿದ್ಯುತ್ ಕಂಬದಲ್ಲಿ ದುರಸ್ತಿ ವೇಳೆ ಕರೆಂಟ್ ಶಾಕ್| ಪವರ್ ಮ್ಯಾನ್ ಗಂಭೀರ; ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ವಿದ್ಯುತ್ ಕಂಬವೇರಿ ಲೈನ್ ದುರಸ್ತಿ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಪವರ್ ಮ್ಯಾನ್ ಒಬ್ಬರು ಗಂಭೀರ ಗಾಯಗೊಂಡ ಘಟನೆ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ತಲೆಕ್ಕಿ ಎಂಬಲ್ಲಿ ನಡೆದಿದೆ. ಗಾಯಗೊಂಡ ಪವರ್ ಮ್ಯಾನ್ ಅನ್ನು ಬಾಗಲಕೋಟೆ ಜಿಲ್ಲೆಯ ದ್ಯಾಮಣ್ಣ ದೊಡ್ಮನಿ ಎಂದು ಗುರುತಿಸಲಾಗಿದೆ. ಇವರುತಲೆಕ್ಕಿ ಬಳಿ ವಿದ್ಯುತ್ ಕಂಬ ಹತ್ತಿ ದುರಸ್ತಿ ಮಾಡುತ್ತಿದ್ದ ವೇಳೆ ಹಠಾತ್ ವಿದ್ಯುತ್ ಪ್ರವಹಿಸಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಸ್ಥಳೀಯರು ಮರದ ಕೋಲಿನ ಸಹಾಯದಿಂದ ಮೇಲಿನಿಂದ ಅವರನ್ನು ಕೆಳಗಿಳಿಸಿದ್ದು

ಕಡಬ: ವಿದ್ಯುತ್ ಕಂಬದಲ್ಲಿ ದುರಸ್ತಿ ವೇಳೆ ಕರೆಂಟ್ ಶಾಕ್| ಪವರ್ ಮ್ಯಾನ್ ಗಂಭೀರ; ಆಸ್ಪತ್ರೆಗೆ ದಾಖಲು Read More »

‘ಸುಳ್ಯವನ್ನು ಮಾದರಿ ಕ್ಷೇತ್ರವನ್ನಾಗಿಸಲು ಅಧಿಕಾರಿಗಳೂ ಸಹಕರಿಸಿ’|ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ

ಸಮಗ್ರ ನ್ಯೂಸ್: ಸರಕಾರದ ಯೋಜನೆಗಳನ್ನು ಉತ್ತಮ ರೀತಿಯಲ್ಲಿ ಅನುಷ್ಠಾನ ಮಾಡುವಲ್ಲಿ ಅಧಿಕಾರಿಗಳ ಜವಬ್ದಾರಿ ಹೆಚ್ಚಿನದ್ದು. ಅಧಿಕಾರಿಗಳು ಜನರನ್ನು ಯಾವುದೇ ಕಾರಣಕ್ಕೂ ಸತಾಯಿಸದೇ ಅವರಿಗೆ ಸೂಕ್ತ ಸಲಹೆಗಳನ್ನು ನೀಡಿ ಅವರ ಕೆಲಸಗಳನ್ನು ಮಾಡಿಕೊಡಬೇಕು. ಸುಳ್ಯವನ್ನು ಮಾದರಿ ಕ್ಷೇತ್ರವನ್ನಾಗಿಸುವ ನನ್ನ ಕನಸಿಗೆ ಅಧಿಕಾರಿಗಳು ಸಹಕರಿಸಬೇಕು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದರು. ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಬುಧವಾರ ಮಾತನಾಡಿದರು. ಅಧಿಕಾರಿಗಳು ತಮ್ಮ ಕ್ಷೇತ್ರದಲ್ಲಿ ಉತ್ತಮ ಅನುಭವವನ್ನು

‘ಸುಳ್ಯವನ್ನು ಮಾದರಿ ಕ್ಷೇತ್ರವನ್ನಾಗಿಸಲು ಅಧಿಕಾರಿಗಳೂ ಸಹಕರಿಸಿ’|ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ Read More »

ಜೂ. ೧ ವಿಶ್ವ ಕ್ಷೀರ ದಿನ| ಹಾಲಿಗೂ ಒಂದು ದಿನವೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಪ್ರತಿ ವರ್ಷ, ವಿಶ್ವ ಹಾಲಿನ ದಿನವನ್ನು ಜೂನ್ 1 ರಂದು ಆಚರಿಸಲಾಗುತ್ತದೆ. ಜಾಗತಿಕ ಆಹಾರವಾಗಿ ಹಾಲಿನ ಮಹತ್ವವನ್ನು ಗುರುತಿಸಲು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಈ ದಿನವನ್ನು ಜಾರಿಗೆ ತಂದಿದೆ. ಇಂದು ವಿಶ್ವ ಹಾಲು ದಿನವನ್ನು ಆಚರಿಸಲು ಹಾಗೂ ಈ ದಿನದ ಮಹತ್ವವನ್ನು ತಿಳಿಯಲು ಇದೊಂದು ಒಳ್ಳೆಯ ಸರಿಯಾದ ಸಂದರ್ಭವಾಗಿದೆ. ಜೂನ್ 1 ವಿಶ್ವ ಹಾಲು ದಿನ. ಹಾಲಿನ ಉದ್ಯಮವು ನಮ್ಮ ಸ್ವಾಸ್ಥ್ಯಕ್ಕೆ ಕೊಡುಗೆ ನೀಡುವುದಲ್ಲದೆ, ಲಕ್ಷಾಂತರ ಜನರಿಗೆ ಜೀವನೋಪಾಯಕ್ಕೆ ದಾರಿ ಮಾಡಿಕೊಟ್ಟಿದೆ.

ಜೂ. ೧ ವಿಶ್ವ ಕ್ಷೀರ ದಿನ| ಹಾಲಿಗೂ ಒಂದು ದಿನವೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ Read More »

ಗುಡ್ ನ್ಯೂಸ್; ಸಿಲಿಂಡರ್ ಬೆಲೆಯಲ್ಲಿ ₹ 83.50 ಇಳಿಕೆ

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರವು ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 83.50 ರೂ.ಗೆ ಇಳಿಕೆಯಾಗಿದ್ದು, ಈ ಮೂಲಕ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 1,773 ರೂ.ಗೆ ತಲುಪಿದೆ. ಜೂನ್ 1 ರ ಇಂದು 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 83.50 ರೂ.ಗೆ ಇಳಿಸಲಾಗಿದೆ. ಈ ಮೂಲಕ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1,773 ರೂ.ಇದೆ. ಆದಾಗ್ಯೂ, ದರಗಳ ಕಡಿತವು ವಾಣಿಜ್ಯ

ಗುಡ್ ನ್ಯೂಸ್; ಸಿಲಿಂಡರ್ ಬೆಲೆಯಲ್ಲಿ ₹ 83.50 ಇಳಿಕೆ Read More »

ಮಂಗಳೂರು: ಮದುರಂಗಿ ಶಾಸ್ತ್ರದಂದೇ ಕಾಣೆಯಾದ ವರ| ರದ್ದುಗೊಂಡ ಮದುವೆ- ದೂರು ದಾಖಲು

ಸಮಗ್ರ ನ್ಯೂಸ್: ವಿವಾಹವಾಗಬೇಕಿದ್ದ ವರ ನಾಪತ್ತೆಯಾಗಿರುವ ಘಟನೆ ಮಂಗಳೂರು ನಗರದ ಕೊಣಾಜೆ ಠಾಣಾ ವ್ಯಾಪ್ತಿಯ ತೌಡುಗೋಳಿ ವರ್ಕಾಡಿ ಎಂಬಲ್ಲಿ ನಡೆದಿದೆ. ಮನೆಯಲ್ಲಿ ಮಂಗಳವಾರ ಸಂಜೆ ಮೆಹಂದಿ ಶಾಸ್ತ್ರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಪೋಷಕರು, ಕುಟುಂಬಸ್ಥರು ಸಂಭ್ರಮದಲ್ಲಿ ತೊಡಗಿದ್ದರೆ, ಇತ್ತ ಹಣ್ಣು ಖರೀದಿಗೆಂದು ತೆರಳಿದ್ದ ವರನೇ ನಾಪತ್ತೆಯಾಗಿರುವುದು ವಧು ವರರ ಕುಟುಂಬವನ್ನು ಆತಂಕಕ್ಕೀಡು ಮಾಡಿದೆ. ತೌಡುಗೋಳಿ- ವರ್ಕಾಡಿ ದೇವಂದಪಡ್ಪುವಿನ ಉದ್ಯಮಿ‌ ಐತಪ್ಪ ಶೆಟ್ಟಿ ಅವರ ಸುಪುತ್ರ ಕಿಶನ್ ಶೆಟ್ಟಿ ನಾಪತ್ತೆಯಾದ ವರ.ಇಂದು (ಜೂ.‌1, ಗುರುವಾರ) ಕಿಶನ್ ಶೆಟ್ಟಿಗೆ ಉಪ್ಪಳ ಮೂಲದ

ಮಂಗಳೂರು: ಮದುರಂಗಿ ಶಾಸ್ತ್ರದಂದೇ ಕಾಣೆಯಾದ ವರ| ರದ್ದುಗೊಂಡ ಮದುವೆ- ದೂರು ದಾಖಲು Read More »

ಸುಳ್ಯ: ಕ್ಯಾನ್ಸರ್ ಪೀಡಿತರಿಗಾಗಿ 11ರ ಪೋರನಿಂದ ಕೇಶದಾನ| ಎಳೆಯ ವಯಸ್ಸಿನಲ್ಲಿ ಸಮಾಜಕ್ಕೆ ಮಾದರಿಯಾದ ರತೀಶ್

ಸಮಗ್ರ ನ್ಯೂಸ್: ಹನ್ನೊಂದು ವರ್ಷದ ಪೋರನೊಬ್ಬ ಮೂರು ವರ್ಷಗಳಿಂದ ಬೆಳೆಸಿದ ತನ್ನ ತಲೆಕೂದಲನ್ನು ಕ್ಯಾನ್ಸರ್‌ ಪೀಡಿತರಿಗೆ ದಾನ ಮಾಡುವ ಮೂಲಕ ಮಾದರಿಯಾಗಿದ್ದಾನೆ. ಕಾಸರಗೋಡು ಹಾಗೂ ಸುಳ್ಯ‌ತಾಲೂಕಿನ ಗಡಿಭಾಗ ಅಡೂರು ಗ್ರಾಮದ ಮಣಿಯೂರಿನ ನವೀನ್‌ ರಾವ್‌ ಸಿಂಧ್ಯಾ ಹಾಗೂ ಭವಾನಿ ದಂಪತಿಯ 11 ವರ್ಷ ಪ್ರಾಯದ ಪುತ್ರ ರತೀಶ್‌ ಸಿ. ಕೇಶದಾನ ಮಾಡಿರುವ ಬಾಲಕ. ಈತ ಮುಳ್ಳೇರಿಯಾದ ವಿದ್ಯಾಶ್ರೀ ಶಿಕ್ಷಣ ಕೇಂದ್ರದಲ್ಲಿ ಕಲಿಯುತ್ತಿದ್ದಾಗಲೇ ತನ್ನ ಕೂದಲನ್ನು ಕ್ಯಾನ್ಸರ್‌ ಪೀಡಿತರಿಗೆ ದಾನ ಮಾಡಬೇಕೆನ್ನುವ ಸಂಕಲ್ಪ ಕೈಗೊಂಡಿದ್ದನು. ಆಗ ಈತನಿಗೆ 8

ಸುಳ್ಯ: ಕ್ಯಾನ್ಸರ್ ಪೀಡಿತರಿಗಾಗಿ 11ರ ಪೋರನಿಂದ ಕೇಶದಾನ| ಎಳೆಯ ವಯಸ್ಸಿನಲ್ಲಿ ಸಮಾಜಕ್ಕೆ ಮಾದರಿಯಾದ ರತೀಶ್ Read More »

ಪುತ್ತೂರು: ನೂತನ ಗೃಹಪ್ರವೇಶದ ಎರಡನೇ ದಿನದಲ್ಲೇ ಆತ್ಮಹತ್ಯೆಗೆ ಶರಣಾದ ಯಜಮಾನ

ಸಮಗ್ರ ನ್ಯೂಸ್: ಗೃಹಪ್ರವೇಶದ ಎರಡೇ ದಿನದಲ್ಲಿ ಮನೆ ಯಜಮಾನ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಬೀರ್ನಹಿತ್ಲಿನಲ್ಲಿ ಮೇ 29ರಂದು ಸಂಭವಿಸಿದೆ. ಇಲ್ಲಿನ ನಿವಾಸಿ ವಿಜಯ ಕುಮಾರ್‌ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ವಿಜಯಕುಮಾರ್ ಮನೆಯ ಹಿಂದುಗಡೆಯ ಶೆಡ್‌ನ‌ ಮೇಲ್ಛಾವಣಿಗೆ ಅಳವಡಿಸಿದ ಕಬ್ಬಿಣದ ರಾಡ್‌ಗೆ ಲುಂಗಿಯನ್ನು ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೇ 27ರಂದು ಮನೆಯ ಗೃಹಪ್ರವೇಶ ನಡೆದಿತ್ತು. ಮೇ 28ರಂದು ಅಮಲು ಪದಾರ್ಥ ಸೇವಿಸಿ ಕ್ಷುಲ್ಲಕ

ಪುತ್ತೂರು: ನೂತನ ಗೃಹಪ್ರವೇಶದ ಎರಡನೇ ದಿನದಲ್ಲೇ ಆತ್ಮಹತ್ಯೆಗೆ ಶರಣಾದ ಯಜಮಾನ Read More »

ಹವಾಮಾನ ವರದಿ| ರಾಜ್ಯದ ದ.ಒಳನಾಡಿನಲ್ಲಿ ಧಾರಾಕಾರ ಮಳೆ ಸಾಧ್ಯತೆ| ಕರಾವಳಿಗೂ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ರಾಜ್ಯದ ದಕ್ಷಿಣ ಒಳನಾಡಿನ 6 ಜಿಲ್ಲೆಗಳಲ್ಲಿ ಇಂದು ಧಾರಾಕಾರ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗದಲ್ಲಿ ಭಾರಿ ಮಳೆ ಸುರಿಯಲಿದ್ದು, ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿಯಲ್ಲಿ ಸಾಧಾರಣ ಮಳೆಯಾಗಲಿದೆ. ಕಲಬುರಗಿಯಲ್ಲಿ 39.2 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾಗಿದೆ, ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡಕವಿದ

ಹವಾಮಾನ ವರದಿ| ರಾಜ್ಯದ ದ.ಒಳನಾಡಿನಲ್ಲಿ ಧಾರಾಕಾರ ಮಳೆ ಸಾಧ್ಯತೆ| ಕರಾವಳಿಗೂ ಅಲರ್ಟ್ ಘೋಷಣೆ Read More »

ಕಾಂಗ್ರೆಸ್ ನ ಚುನಾವಣಾ ಗ್ಯಾರಂಟಿ ದೇಶವನ್ನು ದಿವಾಳಿ ಮಾಡುತ್ತೆ – ನಮೋ ವಾಗ್ದಾಳಿ

ಸಮಗ್ರ ನ್ಯೂಸ್: ಚುನಾವಣೆಗಳಲ್ಲಿ ಗೆಲುವು ಸಾಧಿಸುವ ಉದ್ದೇಶದಿಂದ ಕಾಂಗ್ರೆಸ್‌ ಅನುಸರಿಸುತ್ತಿರುವ ‘ಗ್ಯಾರಂಟಿ ಸೂತ್ರ’ ದೇಶವನ್ನು ದಿವಾಳಿ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಒಂಬತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಜ್ಯಸ್ಥಾನದಲ್ಲಿ ನಡೆದ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಇದೇ ತಿಂಗಳ ಆರಂಭದಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವ ವಿಚಾರ ಉಲ್ಲೇಖಿಸಿದರು. ಕಾಂಗ್ರೆಸ್ ಹೊಸ ಗ್ಯಾರಂಟಿ ಸೂತ್ರವನ್ನು ಅನುಸರಿಸುತ್ತಿದೆ. ಆದರೆ, ಅವರು (ಕಾಂಗ್ರೆಸ್ಸಿಗರು) ಕೊಟ್ಟ ಭರವಸೆಗಳನ್ನು ಪೂರೈಸುತ್ತಿದ್ದಾರೆಯೇ ಎಂದು

ಕಾಂಗ್ರೆಸ್ ನ ಚುನಾವಣಾ ಗ್ಯಾರಂಟಿ ದೇಶವನ್ನು ದಿವಾಳಿ ಮಾಡುತ್ತೆ – ನಮೋ ವಾಗ್ದಾಳಿ Read More »

ಕಡಬ: ಬಸ್ ನಿಂದ ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು

ಸಮಗ್ರ ನ್ಯೂಸ್: ಮೇ.25ರಂದು ಆಲಂಕಾರಿನಲ್ಲಿ ಚಲಿಸುತ್ತಿದ್ದ ಕೆ.ಎಸ್ ಆರ್.ಟಿ.ಸಿ ಬಸ್ಸಿನಿಂದ ಬಿದ್ದು ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಶಾರದಾ ನಗರದ ಗುಲಾಬಿ ಮೃತಪಟ್ಟ ಮಹಿಳೆ. ಗೋಳಿತ್ತಡಿ ಎಂಬಲ್ಲಿಂದ ಬಸ್ಸ್‌ ನಲ್ಲಿ ಬಂದ ಮಹಿಳೆ ಆಲಂಕಾರಿನ ಮುಖ್ಯ ಪೇಟೆ ಸಮೀಪಿಸುತ್ತಿದಂತೆ ಬಸ್ಸಿನಿಂದ ಕೆಳಗೆ ಬಿದ್ದಿದ್ದರು. ಬಸ್ಸಿನಿಂದ ಮಾರ್ಗಕ್ಕೆ ಬಿದ್ದ ಪರಿಣಾಮ ತಲೆಗೆ ಗಾಯವಾಗಿತ್ತು. ತಕ್ಷಣ ಅವರಿಗೆ ಸ್ಥಳೀಯ ಕ್ಲಿನಿಕ್‌ ನಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ

ಕಡಬ: ಬಸ್ ನಿಂದ ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು Read More »