ಕರಾವಳಿ

ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೇಸು ದಾಖಲು| ಶೀಘ್ರವೇ ಜಿಲ್ಲಾ ಕಾಂಗ್ರೆಸ್ ಮಧ್ಯಪ್ರವೇಶ ಮಾಡಿ ಅನಾಪೇಕ್ಷಿತ ವಿದ್ಯಾಮಾನಗಳನ್ನು ಸರಿಪಡಿಸಲು ಎಂ ವೆಂಕಪ್ಪ ಗೌಡ ಆಗ್ರಹ

ಸಮಗ್ರ ನ್ಯೂಸ್: ಚುನಾವಣೆಯಲ್ಲಿ ಸ್ಪರ್ಧಿಸಿರತಕ್ಕಂತಹವರು ಮತ್ತು ರಾಜಕಾರಣದಲ್ಲಿ ತೊಡಗಿಸಿಕೊಂಡವರು ಒಂದು ವೇಳೆ ಅವರು ಚುನಾವಣೆಗೆ ನಿಂತಾಗ ಆಗಿರತಕ್ಕಂತಹ ತಪ್ಪನ್ನು ಸರಿಪಡಿಸಿಕೊಂಡು ಮುಂದೆ ಅಂತಹ ತಪ್ಪುಗಳು ಆಗಬಾರದೆಂದು ಕಾರ್ಯಕರ್ತರ ಬೆನ್ನು ತಟ್ಟಿ ಪಕ್ಷವನ್ನು ಬೆಳೆಸುವುದು ಒಬ್ಬ ಬುದ್ದಿವಂತ ರಾಜಕಾರಣಿಯ ಲಕ್ಷಣ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡು ಪಕ್ಷದ ಒಳಗೆ ತೀರ್ಮಾನಮಾಡಬೇಕಾದ ಸಂಗತಿಗಳನ್ನು ಬೀದಿಗೆ ತಂದು ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ಮೇಲೆಯೇ ದ್ವೇಷ ಮತ್ತು ಅಸೂಯೆಯಿಂದ ಪೊಲೀಸ್ ಠಾಣೆ ಮತ್ತು ನ್ಯಾಯಾಲಯಗಳಲ್ಲಿ ದೂರು, ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿ ಅವರ ಮೇಲೆ

ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೇಸು ದಾಖಲು| ಶೀಘ್ರವೇ ಜಿಲ್ಲಾ ಕಾಂಗ್ರೆಸ್ ಮಧ್ಯಪ್ರವೇಶ ಮಾಡಿ ಅನಾಪೇಕ್ಷಿತ ವಿದ್ಯಾಮಾನಗಳನ್ನು ಸರಿಪಡಿಸಲು ಎಂ ವೆಂಕಪ್ಪ ಗೌಡ ಆಗ್ರಹ Read More »

ಆರಂಭದ ಮಳೆಯ ನಡುವೆ ಕರ್ನಾಟಕದಲ್ಲಿ ಹೆಚ್ಚಾದ ಡೆಂಗ್ಯೂ ಪ್ರಕರಣ

ಸಮಗ್ರ ನ್ಯೂಸ್: ಈ ಬಾರಿ ಮಳೆಯ ಆರಂಭದಲ್ಲೇ ಡೆಂಗ್ಯೂ ಪ್ರಕರಣಗಳು ಕಂಡುಬಂದಿದ್ದು.ರಾಜ್ಯದಲ್ಲಿ ಈ ತಿಂಗಳು 166 ಮಂದಿ ಡೆಂಗ್ಯೂ ಜ್ವರದಿಂದ ಬಳಲಿದ್ದಾರೆ. ಪ್ರಕರಣಗಳ ಒಟ್ಟು ಸಂಖ್ಯೆ ಎರಡು ಸಾವಿರದ ಗಡಿ ದಾಟಿದ್ದು ಈ ಭಾರಿ ಈಗಾಗಲೇ 70 ಸಾವಿರಕ್ಕೂ ಅಧಿಕ ಡೆಂಗ್ಯೂ ಶಂಕಿತರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅವರಲ್ಲಿ 23 ಸಾವಿರಕ್ಕೂ ಅಧಿಕ ಮಂದಿಯ ರಕ್ತದ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಡೆಂಗಿ ಪ್ರಕರಣಗಳು ಪತ್ತೆಯಾಗಿವೆ. ಕಳೆದ ವರ್ಷ 9,620 ಮಂದಿ ಡೆಂಗಿ ಜ್ವರದಿಂದ ಬಳಲಿದ್ದರು.

ಆರಂಭದ ಮಳೆಯ ನಡುವೆ ಕರ್ನಾಟಕದಲ್ಲಿ ಹೆಚ್ಚಾದ ಡೆಂಗ್ಯೂ ಪ್ರಕರಣ Read More »

(Weather report)ಹವಾಮಾನ ಸಮಾಚಾರ| ಜೂ.21ರ ವರೆಗೆ ರಾಜ್ಯದಲ್ಲಿ ಸಾಧಾರಣ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವಡೆ ಇಂದಿನಿಂದ ಜೂ.21 ರವರೆಗೆ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಜೂನ್ 18ರ ಬಳಿಕ ಮುಂಗಾರು ಪ್ರಬಲವಾಗಲಿದ್ದು ಜೂನ್ 21ರ ವರೆಗೆ ಮಳೆಯಾಗಲಿದೆ, ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಿಗೆ ಮಳೆಯಾರ್ಭಟ ಜೋರಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ತುಮಕೂರು, ಹಾಸನ, ಮಂಡ್ಯ ಹಾಗೂ ಜೂನ್ 19 ರಂದು ಬೆಂಗಳೂರು ಗ್ರಾಮಾಂತರ,

(Weather report)ಹವಾಮಾನ ಸಮಾಚಾರ| ಜೂ.21ರ ವರೆಗೆ ರಾಜ್ಯದಲ್ಲಿ ಸಾಧಾರಣ ಮಳೆ ಸಾಧ್ಯತೆ Read More »

(Free adhaar update) ಉಚಿತ ಆಧಾರ್ ಅಪ್ ಡೇಟ್ ಗೆ ಅವಧಿ ವಿಸ್ತರಣೆ| ಸೆ.14ರವರೆಗೂ ಇದೆ ಅವಕಾಶ| ನೀವೇ ಮಾಡ್ಕೋಬಹುದು ಆಧಾರ್ ತಿದ್ದುಪಡಿ

ಸಮಗ್ರ ನ್ಯೂಸ್: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ದಾಖಲೆಗಳ ಉಚಿತ ಆಧಾರ್ ನವೀಕರಣವನ್ನು ಜೂನ್ 14 ರಿಂದ ಸೆಪ್ಟೆಂಬರ್ 14, 2023 ರವರೆಗೆ 3 ತಿಂಗಳವರೆಗೆ ವಿಸ್ತರಿಸಿದೆ. 15 ಮಾರ್ಚ್‌ನಿಂದ ಸೆಪ್ಟೆಂಬರ್ 14, 2023 ರವರೆಗೆ ನಿಮ್ಮ ಗುರುತಿನ ಪುರಾವೆ ಮತ್ತು ವಿಳಾಸದ ದಾಖಲೆಗಳನ್ನು ನೀವು ಆನ್‌ಲೈನ್‌ನಲ್ಲಿ ಉಚಿತವಾಗಿ ಅಪ್‌ಡೇಟ್ ಮಾಡಬಹುದು. ಈ ಮೊದಲು ಜೂನ್ 14, 2023 ಆಗಿತ್ತು. UIDAI ವೆಬ್‌ಸೈಟ್ ಪ್ರಕಾರ, ‘ಜನಸಂಖ್ಯಾ ಮಾಹಿತಿಯ ನಿಖರತೆಗಾಗಿ ದಯವಿಟ್ಟು ಆಧಾರ್ ಅನ್ನು ನವೀಕರಿಸಿ. ಅದನ್ನು

(Free adhaar update) ಉಚಿತ ಆಧಾರ್ ಅಪ್ ಡೇಟ್ ಗೆ ಅವಧಿ ವಿಸ್ತರಣೆ| ಸೆ.14ರವರೆಗೂ ಇದೆ ಅವಕಾಶ| ನೀವೇ ಮಾಡ್ಕೋಬಹುದು ಆಧಾರ್ ತಿದ್ದುಪಡಿ Read More »

ಬಂಟ್ವಾಳ: ಕೌಟುಂಬಿಕ ಮನಸ್ತಾಪ| ಪತ್ನಿ, ಮಾವನಿಗೆ ಚೂರಿ ಇರಿದು ವ್ಯಕ್ತಿ ಪರಾರಿ

ಸಮಗ್ರ ನ್ಯೂಸ್: ಕುಟುಂಬದ ಮನಸ್ತಾಪದ ವಿಚಾರಕ್ಕೆ ಸಂಬಂಧಿಸಿ ಪತ್ನಿ ಹಾಗೂ ಮಾವನಿಗೆ ಆರೋಪಿ ಪತಿ ಚೂರಿಯಿಂದ ಇರಿದು ಪರಾರಿಯಾದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ತುಂಬೆ ಜಂಕ್ಷನ್‌ ನಲ್ಲಿ ನಡೆದಿದೆ. ಜೂನ್ 15 ರಂದು ರಾತ್ರಿ 10.30 ರ ಸುಮಾರಿಗೆ ತುಂಬೆ ನಿವಾಸಿಗಳಾದ ರಾಜೀವ ಹಾಗೂ ಅವರ ಪುತ್ರಿ ದಿವ್ಯ ಅವರು ಅಟೋ ರಿಕ್ಷಾದಲ್ಲಿ ಮನೆಯಿಂದ ಬಂಟ್ವಾಳ ‌ಕಡೆಗೆ ಆಗಮಿಸುವ ವೇಳೆ ದಿವ್ಯಳ ಗಂಡ ಆರೋಪಿ ಕುಮಾರ ಆಟೋವನ್ನು ತುಂಬೆ ಜಂಕ್ಷನ್ ನಲ್ಲಿ ತಡೆದು,

ಬಂಟ್ವಾಳ: ಕೌಟುಂಬಿಕ ಮನಸ್ತಾಪ| ಪತ್ನಿ, ಮಾವನಿಗೆ ಚೂರಿ ಇರಿದು ವ್ಯಕ್ತಿ ಪರಾರಿ Read More »

ರಾಜ್ಯದ ಜನತೆಗೆ ಗುಡ್ ನ್ಯೂಸ್| ಅನ್ನಭಾಗ್ಯದಲ್ಲಿ 8 ಕೆಜಿ ಅಕ್ಕಿ, 2 ಕೆಜಿ ಧಾನ್ಯ ವಿತರಣೆಗೆ ಚಿಂತನೆ

ಸಮಗ್ರ ನ್ಯೂಸ್: ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಪಡಿತರ ಚೀಟಿದಾರರಿಗೆ 8 ಕೆಜಿ ಅಕ್ಕಿ ಜತೆಗೆ ಎರಡು ಕೆಜಿ ರಾಗಿ ಅಥವಾ ಜೋಳ ವಿತರಿಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ. 8 ಕೆಜಿ ಅಕ್ಕಿ ಜತೆಗೆ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಎರಡು ಕೆಜಿ ರಾಗಿ, ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಎರಡು ಕೆಜಿ ಜೋಳ ವಿತರಿಸುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಯಾವುದೇ ಅಡಚಣೆ ಎದುರಾದರೂ ಅನ್ನಭಾಗ್ಯ ಯೋಜನೆ ಜಾರಿಗೆ ಬರುವುದನ್ನು ತಡೆಯಲು ಸಾಧ್ಯವಿಲ್ಲ.

ರಾಜ್ಯದ ಜನತೆಗೆ ಗುಡ್ ನ್ಯೂಸ್| ಅನ್ನಭಾಗ್ಯದಲ್ಲಿ 8 ಕೆಜಿ ಅಕ್ಕಿ, 2 ಕೆಜಿ ಧಾನ್ಯ ವಿತರಣೆಗೆ ಚಿಂತನೆ Read More »

ಬಿಜೆಪಿ ರಾಜ್ಯಾಧ್ಯಕ್ಷರ ಮನೆಯಲ್ಲಿ ರಹಸ್ಯ ಹೋಮ-ಹವನ: ಸ್ಪಷ್ಟನೆ ನೀಡಿದ ನಳಿನ್ ಕುಮಾರ್ ಕಟೀಲ್

ಸಮಗ್ರ ನ್ಯೂಸ್: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮನೆಯಲ್ಲಿ ರಹಸ್ಯ ಹೋಮ-ಹವನ ನಡೆಯುತ್ತಿದೆ ಎನ್ನುವ ಸುದ್ಧಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಸ್ವತಹ ನಳಿನ್ ಕುಮಾರ್ ಕಟೀಲ್ ಅವರೆ ಸ್ಪಷ್ಟನೆ ನೀಡಿದ್ದಾರೆ. ಹೋಮ-ಹವನ ಕುಂಜಾಡಿ ತರವಾಡು ಮನೆಯಲ್ಲಿ ನಡೆಯುತ್ತಿದ್ದು, ಪ್ರತೀ ವರ್ಷವೂ ಈ ಹೋಮ ಹಾಗು ಪೂಜೆಗಳು ನಡೆಯುತ್ತಿದೆ. ಯಾರು ಬೇಕಾದರೂ ಈ ಹೋಮ-ಹವನದಲ್ಲಿ ಭಾಗವಹಿಸಲು ಅವಕಾಶವಿದ್ದು, ರಹಸ್ಯವಾಗಿ ಮಾಡಲಾಗುತ್ತಿದೆ ಎನ್ನುವುದು ಸುಳ್ಳು ಸುದ್ಧಿ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ಸ್ಪಷ್ಟಪಡಿಸಿದ್ದಾರೆ. ರಾಜಕೀಯದಲ್ಲಿ ಮೂಲೆಗುಂಪಾಗುತ್ತಿರುವ

ಬಿಜೆಪಿ ರಾಜ್ಯಾಧ್ಯಕ್ಷರ ಮನೆಯಲ್ಲಿ ರಹಸ್ಯ ಹೋಮ-ಹವನ: ಸ್ಪಷ್ಟನೆ ನೀಡಿದ ನಳಿನ್ ಕುಮಾರ್ ಕಟೀಲ್ Read More »

ಸೌಜನ್ಯ ಕೊಲೆ ಪ್ರಕರಣ| ಆರೋಪಿ ಸಂತೋಷ್ ರಾವ್ ದೋಷಮುಕ್ತ| ಸಿಬಿಐ ವಿಶೇಷ ನ್ಯಾಯಾಲಯದಿಂದ ತೀರ್ಪು|

ಸಮಗ್ರ ನ್ಯೂಸ್: ರಾಷ್ಟ್ರಮಟ್ಟದಲ್ಲಿ ಬಾರೀ ಸುದ್ದಿಯಾಗಿದ್ದ ಉಜಿರೆಯ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಧರ್ಮಸ್ಥಳದ ನಿವಾಸಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಲಯ ಬರೋಬ್ಬರಿ 11 ವರ್ಷಗಳ ಬಳಿಕ ತೀರ್ಪು ಪ್ರಕಟಿಸಿದೆ. ಪ್ರಕರಣದ ಪ್ರಮುಖ ಆರೋಪಿ ಸಂತೋಷ್‌ ರಾವ್‌ ದೋಷಮುಕ್ತ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಬಳಿಯಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣ ದೇಶದಾದ್ಯಂತ ಸುದ್ದಿಯಾಗಿತ್ತು. ಕರಾವಳಿಯಾದ್ಯಂತ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ಕಾಲೇಜು ಮುಗಿಸಿ

ಸೌಜನ್ಯ ಕೊಲೆ ಪ್ರಕರಣ| ಆರೋಪಿ ಸಂತೋಷ್ ರಾವ್ ದೋಷಮುಕ್ತ| ಸಿಬಿಐ ವಿಶೇಷ ನ್ಯಾಯಾಲಯದಿಂದ ತೀರ್ಪು| Read More »

ಸುಳ್ಯ: ಬಿಜೆಪಿಯ ಹಿರಿಯ ಕಾರ್ಯಕರ್ತರ ಜೊತೆ ಸಂವಾದ ಕಾರ್ಯಕ್ರಮ

ಸಮಗ್ರ ನ್ಯೂಸ್: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 9 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸುಳ್ಯ ಮಂಡಲ ಮಟ್ಟದ ಹಿರಿಯ ಕಾರ್ಯಕರ್ತರೊಡನೆ ಸಂವಾದ ಕಾರ್ಯಕ್ರಮ ಜೂ.16 ರಂದು ಜೆ ಡಿ ಆಡಿಟೋರಿಯಂ ಪೆರುವಾಜೆಯಲ್ಲಿ ನಡೆಯಿತು. ಈ ಸಂವಾದ ಕಾರ್ಯಕ್ರಮವನ್ನು ರಾಜ್ಯ ಬಿಜೆಪಿ ವಕ್ತಾರ,ವಿಧಾನ ಪರಿಷತ್ ನ ಮಾಜಿ ಸದಸ್ಯರಾದ ಸನ್ಮಾನ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ನೆರವೇರಿಸಿದರು, ಈ ಕಾರ್ಯಕ್ರಮದಲ್ಲಿ ನಮ್ಮ ಸುಳ್ಯ ಮಂಡಲದ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ ಆಧ್ಯಕ್ಷತೆಯನ್ನು ವಹಿಸಿದ್ದರು. ಮಂಡಲ ಪ್ರಮುಖರಾದ ಎ.ವಿ ತೀರ್ಥರಾಮ

ಸುಳ್ಯ: ಬಿಜೆಪಿಯ ಹಿರಿಯ ಕಾರ್ಯಕರ್ತರ ಜೊತೆ ಸಂವಾದ ಕಾರ್ಯಕ್ರಮ Read More »

ಮಳೆಗಾಲ ಆರಂಭಕ್ಕೂ ಮುನ್ನ ಸಂಪಾಜೆ-ಮಾಣಿ ಹೆದ್ದಾರಿ ಬಿರುಕು| ಸ್ಥಳೀಯ ನಿವಾಸಿಗಳು, ವಾಹನ ಸವಾರರಲ್ಲಿ ಹೆಚ್ಚಿದ ಆತಂಕ

ಸಮಗ್ರ ನ್ಯೂಸ್ : ಮಡಿಕೇರಿ ತಾಲೂಕಿನ ಸಂಪಾಜೆ ಸಮೀಪದ ಫಾರೆಸ್ಟ್ ಡಿಫೋ ಸಮೀಪದಲ್ಲಿ ಕಳೆದ ವರ್ಷವೇ ಹೆದ್ದಾರಿಯಲ್ಲಿ ಭಾರಿ ಬಿರುಕು ಮೂಡಿತ್ತು. ಇದೀಗ ಮಳೆಗಾಲ ಆರಂಭವಾಗುತ್ತಿದ್ದಂತೆ ಅದು ಈಗ ಇನ್ನಷ್ಟು ಜಾಸ್ತಿಯಾಗಿದ್ದು, ೧ ಅಡಿಯಷ್ಟು ಆಳಕ್ಕೆ ಇಡೀ ರಸ್ತೆಯೇ ಕುಸಿಯುವ ಭೀತಿ ಎದುರಾಗಿದೆ ಎಂದು ತಿಳಿದುಬಂದಿದೆ. ಕೆಳಬಾಗದಲ್ಲಿ ನೀರಿನ ಕೊಲ್ಲಿ ಹರಿಯುತ್ತಿದ್ದು ಮಳೆ ತೀವ್ರಗೊಂಡಿತ್ತೆಂದರೆ ಕೊಲ್ಲಿ ಭಾಗಕ್ಕೆ ಸಂಪೂರ್ಣ ಜಾರಿ ಹೋಗಬಹುದೆಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಹಾಗೆ ಕುಸಿದು ಹೋಗಿತ್ತೆಂದರೆ ಮಡಿಕೇರಿ, ಮಂಗಳೂರು ನಡುವಿನ

ಮಳೆಗಾಲ ಆರಂಭಕ್ಕೂ ಮುನ್ನ ಸಂಪಾಜೆ-ಮಾಣಿ ಹೆದ್ದಾರಿ ಬಿರುಕು| ಸ್ಥಳೀಯ ನಿವಾಸಿಗಳು, ವಾಹನ ಸವಾರರಲ್ಲಿ ಹೆಚ್ಚಿದ ಆತಂಕ Read More »