ಬೆಳ್ಳಾರೆ ಬೂಡುದ ಸ್ವಾಮಿ ಕೊರಗಜ್ಜ ವಿಡೀಯೋ ಭಕ್ತಿಗೀತೆ ಬಿಡುಗಡೆ ಕಾರ್ಯಕ್ರಮ
ಸಮಗ್ರ ನ್ಯೂಸ್:ಸುಳ್ಯದ ಭಾವನಾ ಮೀಡಿಯಾ ಅರ್ಪಿಸುವ ಬೆಳ್ಳಾರೆ ಬೂಡುದ ಸ್ವಾಮಿ ಕೊರಗಜ್ಜ ವೀಡಿಯೋ ಭಕ್ತಿಗೀತೆಯನ್ನು ಬೆಳ್ಳಾರೆ ಬೂಡುದ ಸ್ವಾಮಿ ಕೊರಗಜ್ಜ ಸನ್ನಿಧಾನದಲ್ಲಿ ಬಿಡುಗಡೆಗೊಂಡಿತು. ಬೂಡು ದೇವಸ್ಥಾನದ ಪೂಜಾರಿ ಹಾಗೂ ಅಧ್ಯಕ್ಷರಾದ ಶ್ರೀ ಸುಂದರ ರವರು ಕಾರ್ಯಕ್ರಮ ಉದ್ಘಾಟಿಸಿದರು.ಸುಳ್ಯದ ಖ್ಯಾತ ಜ್ಯೋತಿಷಿ ಹಾಗೂ ಸಾಹಿತಿ ಮತ್ತು ಗಾಯಕರಾದ ಎಚ್.ಭೀಮರಾವ್ ವಾಷ್ಠರ್ ರವರು ಭಕ್ತಿಗೀತೆಯನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು . ಈ ಭಕ್ತಿಗೀತೆಗೆ ಸಂಪೂರ್ಣ ಸಹಕಾರ ನೀಡಿದ ಐವರ್ನಾಡಿನ ಪೆರುಮಾಳ್ ಲಕ್ಷ್ಮಣ್ ರವರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬೆಳ್ಳಾರೆ ಬೂಡುದ ಸ್ವಾಮಿ ಕೊರಗಜ್ಜ ವಿಡೀಯೋ ಭಕ್ತಿಗೀತೆ ಬಿಡುಗಡೆ ಕಾರ್ಯಕ್ರಮ Read More »










