ಕರಾವಳಿ

ಆಧಾರ್ – ಪಾನ್ ಲಿಂಕ್ ಮಾಡಲು ನಾಳೆಯೇ ಕೊನೆದಿನ| ಜೋಡಣೆಯಾಗದಿದ್ರೆ ವೇಸ್ಟಾಗುತ್ತೆ ಪಾನ್ ಕಾರ್ಡ್

ಸಮಗ್ರ ನ್ಯೂಸ್: ಆಧಾರ್ -ಪಾನ್ ಕಾರ್ಡ್ ಜೋಡಣೆಗೆ ನಾಳೆ(ಜೂ.30) ಕೊನೆಯ ದಿನವಾಗಿದ್ದು, ಆಧಾರ್ ಜೋಡಣೆ ಮಾಡದಿದ್ದರೆ ಪಾನ್ ಕಾರ್ಡ್ ಅಮಾನ್ಯವಾಗಲಿದೆ. ಬ್ಯಾಂಕ್, ಆರ್ಥಿಕ ಚಟುವಟಿಕೆಗಳಿಗೆ ಪಾನ್ ಕಾರ್ಡ್ -ಆಧಾರ್ ಕಾರ್ಡ್ ಜೋಡಣೆ ಕಡ್ಡಾಯವಾಗಿದ್ದು, ಬ್ಯಾಂಕ್ ಖಾತೆ ತೆರೆಯಲು, ನಿಗದಿತ ಠೇವಣಿಗಳಲ್ಲಿ ಹೂಡಿಕೆ ಮಾಡಲು, ಡಿಮ್ಯಾಟ್ ಅಕೌಂಟ್ ತೆರೆಯಲು ಪಾನ್ ಕಾರ್ಡ್ ಸಂಖ್ಯೆ ಕಡ್ಡಾಯವಾಗಿದೆ. ನಾಳೆಯೊಳಗೆ ಆಧಾರ್ ಜೋಡಣೆ ಮಾಡಿಸದಿದ್ದರೆ ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ ಎಂದು ಹೇಳಲಾಗಿದ್ದು, ಜೋಡಣೆ ಮಾಡದವರು ಲಿಂಕ್ ಮಾಡಿಸಿಕೊಳ್ಳುವುದು ಒಳಿತು.

ಆಧಾರ್ – ಪಾನ್ ಲಿಂಕ್ ಮಾಡಲು ನಾಳೆಯೇ ಕೊನೆದಿನ| ಜೋಡಣೆಯಾಗದಿದ್ರೆ ವೇಸ್ಟಾಗುತ್ತೆ ಪಾನ್ ಕಾರ್ಡ್ Read More »

ಮಂಗಳೂರು: ಡಿವೈಡರ್ ಗೆ ಸ್ಕೂಟರ್ ಡಿಕ್ಕಿ ಹೊಡೆದು ಬಾಲಕರಿಬ್ಬರು ಸಾವು

ಸಮಗ್ರ ನ್ಯೂಸ್: ಮಂಗಳೂರು ನಗರದ ಮೇರಿಹಿಲ್ ವಿಕಾಸ್ ಕಾಲೇಜಿನ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸ್ಕೂಟರ್ ಸವಾರರಿಬ್ಬರು ಬುಧವಾರ ರಾತ್ರಿ ಮೃತಪಟ್ಟಿದ್ದಾರೆ. ಮೃತರನ್ನು ಸ್ಥಳೀಯ ನಿವಾಸಿಗಳಾದ ಪವನ್ ( 16) ಹಾಗೂ ಚಿರಾಗ್ ( 15) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೊಬ್ಬ ಬಾಲಕನನ್ನು ರಾಜಲಕ್ಷ್ಮೀ ಬಸ್ಸಿನಲ್ಲಿ ತಕ್ಷಣವೇ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆ ತಲುಪುವಷ್ಟರಲ್ಲಿ ಆತನೂ ಮೃತಪಟ್ಟಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಂಗಳೂರು: ಡಿವೈಡರ್ ಗೆ ಸ್ಕೂಟರ್ ಡಿಕ್ಕಿ ಹೊಡೆದು ಬಾಲಕರಿಬ್ಬರು ಸಾವು Read More »

ಎಕ್ಸ್‌ಪ್ರೆಸ್ ಹೈವೇನಲ್ಲಿ ಮತ್ತೊಂದು ಅಪಘಾತ| ಬೊಲೆರೋ ಗೆ ಡಿಕ್ಕಿ ಹೊಡೆದ ಕೆಎಸ್ಆರ್ ಟಿಸಿ ಎಲೆಕ್ಟ್ರಿಕ್ ಬಸ್| ಬಸ್ ಕಂಡಕ್ಟರ್ ಸ್ಥಳದಲ್ಲೇ ಸಾವು

ಸಮಗ್ರ ನ್ಯೂಸ್: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ಹೈವೆಯಲ್ಲಿ ಬುಧವಾರ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಪ್ಲೈವುಡ್ ತುಂಬಿದ್ದ ಬೊಲೆರೋ ವಾಹನಕ್ಕೆ ಕೆಎಸ್‌ಆರ್ ಟಿಸಿ ಎಲೆಕ್ಟ್ರಿಕ್ ಬಸ್ ಢಿಕ್ಕಿಯಾದ ಪರಿಣಾಮ ಬಸ್ ನಿರ್ವಾಹಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಮನಗರ ತಾಲೂಕಿನ ವಿಜಯಪುರ ಗ್ರಾಮದ ಬಳಿ ಘಟನೆ ನಡೆದಿದ್ದು, ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಿಗೊಳಗಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್ ಬಸ್ ಮೈಸೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿತ್ತು, ಈ ವೇಳೆ ಫ್ಲೈವುಡ್ ತುಂಬಿದ್ದ

ಎಕ್ಸ್‌ಪ್ರೆಸ್ ಹೈವೇನಲ್ಲಿ ಮತ್ತೊಂದು ಅಪಘಾತ| ಬೊಲೆರೋ ಗೆ ಡಿಕ್ಕಿ ಹೊಡೆದ ಕೆಎಸ್ಆರ್ ಟಿಸಿ ಎಲೆಕ್ಟ್ರಿಕ್ ಬಸ್| ಬಸ್ ಕಂಡಕ್ಟರ್ ಸ್ಥಳದಲ್ಲೇ ಸಾವು Read More »

Weather report: ಕರಾವಳಿಯ ಮೂರು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್| ರಾಜ್ಯದಲ್ಲಿ ಉತ್ತಮ ಮಳೆ‌ ಮುನ್ಸೂಚನೆ

ಸಮಗ್ರ ನ್ಯೂಸ್: ಕರಾವಳಿಯ ಎಲ್ಲಾ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ ಗುರುವಾರ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದ.ಕ, ಉಡುಪಿ, ಉ.ಕನ್ನಡ ಜಿಲ್ಲೆಗಳಿಗೆ ಗುರುವಾರ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ. ಒಳನಾಡಿನಲ್ಲಿ ಬಿರುಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ಇರುವ ಸಾಧ್ಯತೆಯಿದೆ. ಕರಾವಳಿಯಲ್ಲಿ 40-45 ಕಿ.ಮೀ.ಯಿಂದ 55 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಂಭವವಿದೆ. ಆದ್ದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹೇಳಿದೆ. ಬೆಂಗಳೂರಿನಲ್ಲಿ ಮೋಡ ಕವಿದ

Weather report: ಕರಾವಳಿಯ ಮೂರು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್| ರಾಜ್ಯದಲ್ಲಿ ಉತ್ತಮ ಮಳೆ‌ ಮುನ್ಸೂಚನೆ Read More »

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ| ಆರೋಪಿಗಳ ಪತ್ತೆಗೆ ಹೊಸ ಅಸ್ತ್ರ ಪ್ರಯೋಗಿಸಿದ ಎನ್ಐಎ

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಪ್ರಕರಣವೊಂದರಲ್ಲಿ ಕೊಲೆ ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗುವಂತೆ ಸೂಚಿಸಿ, ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಹೊಸ ಅಸ್ತ್ರ ಪ್ರಯೋಗಿಸಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಶರಣಾಗಲು ಆರೋಪಿಗಳಿಗೆ ಜೂನ್​ 30ರವರೆಗೆ ಗಡುವು ನೀಡಲಾಗಿದೆ. NIA ನ್ಯಾಯಾಲಯಕ್ಕೆ ಶರಣಾಗದಿದ್ದರೆ ಆರೋಪಿಗಳ ಮನೆಗಳಲ್ಲಿ ಎಲ್ಲವನ್ನೂ ಜಪ್ತಿ ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಮೈಕ್ ಅನೌನ್ಸ್ ಮೆಂಟ್​​ ಮೂಲಕ ಸಾರ್ವಜನಿಕವಾಗಿ ಘೋಷಣೆ ಕೂಗಲಾಗಿದೆ. ಇದೇ ವೇಳೆ ನೆಟ್ಟಾರು ಹತ್ಯೆ ಆರೋಪಿಗಳ ಸುಳಿವು ಕೊಟ್ಟಲ್ಲಿ ನಗದು ಬಹುಮಾನ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ| ಆರೋಪಿಗಳ ಪತ್ತೆಗೆ ಹೊಸ ಅಸ್ತ್ರ ಪ್ರಯೋಗಿಸಿದ ಎನ್ಐಎ Read More »

ಮಂಡ್ಯ:ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮತ್ತೊಂದು ಟೋಲ್ ಪ್ಲಾಜಾ | ಸಂಚಾರಕ್ಕೆ ನಿಗದಿ ಮಾಡಿರುವ ಟೋಲ್ ಹಣದ ಸಂಪೂರ್ಣ ವಿವರ ಇಲ್ಲಿದೆ

ಸಮಗ್ರ ನ್ಯೂಸ್: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ನಲ್ಲಿ ಅಧಿಕ ಟೋಲ್ ಸಂಗ್ರಹಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಅಲ್ಲದೇ, ಹೆದ್ದಾರಿಯಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿವೆ ಎನ್ನುವ ಆರೋಪಗಳು ಕೇಳಿಬರುತ್ತಿದ್ದು. ಇದರ ಮಧ್ಯೆ ಈ ಹೆದ್ದಾರಿಯಲ್ಲಿ ಮತ್ತೊಂದು ಟೋಲ್ ಗೇಟ್ ಕಾರ್ಯಾರಂಭಕ್ಕೆ ಸಜ್ಜಾಗಿದೆ. ಜುಲೈ 1ರಿಂದ ಮಂಡ್ಯ ವ್ಯಾಪ್ತಿಯ ಟೋಲ್ ಸಂಗ್ರಹ ಆರಂಭವಾಗಲಿದೆ. ಮಂಡ್ಯ ಜಿಲ್ಲೆಯ 55-134 ಕಿಮೀ ವ್ಯಾಪ್ತಿಗೆ ಟೋಲ್ ಸಂಗ್ರಹಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ ಇರುವ ಟೋಲ್ ಪ್ಲಾಜಾ ನಿರ್ಮಿಸಿದೆ. ಏಕಮುಖ

ಮಂಡ್ಯ:ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮತ್ತೊಂದು ಟೋಲ್ ಪ್ಲಾಜಾ | ಸಂಚಾರಕ್ಕೆ ನಿಗದಿ ಮಾಡಿರುವ ಟೋಲ್ ಹಣದ ಸಂಪೂರ್ಣ ವಿವರ ಇಲ್ಲಿದೆ Read More »

ಸೋಮವಾರಪೇಟೆ: ಎನ್ಐಎ ದಾಳಿ| ನೆಟ್ಟಾರ್ ಹತ್ಯೆ ಸಂಬಂಧಿಸಿ ಆರೋಪಿಗಳ ಮನೆಯಲ್ಲಿ ಮಹತ್ವದ ದಾಖಲೆ ವಶ

ಸಮಗ್ರ ನ್ಯೂಸ್: ಬಿಜೆಪಿ ಯುವಮೋರ್ಚ ಸದಸ್ಯ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ಆರೋಪಿಗಳ ಸಂಬಂಧಿಕರ ಮನೆಗಳಲ್ಲಿ ರಾಷ್ಟ್ರೀಯ ತನಿಖಾ ದಳ (NIA) ತಪಾಸಣೆ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ. ಸೋಮವಾರಪೇಟೆಯ ಅಬ್ದುಲ್ ನಾಸೀರ್, ಅಬ್ದುಲ್ ರೆಹಮಾನ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ನೌಶಾದ್ ಅವರುಗಳ ಮನೆಯಲ್ಲಿ ದಾಳಿ ಸಂದರ್ಭದಲ್ಲಿ ಕೆಲವು ಎಲೆಕ್ಟ್ರಾನಿಕ್ಸ್ ಉಪಕರಣಗಳು ಮತ್ತು ಮಹತ್ವದ ದಾಖಲೆ ಪತ್ರಗಳು ಎನ್ಐಎ ವಶವಾಗಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಿಗೆ ಈ ಮೂವರೂ

ಸೋಮವಾರಪೇಟೆ: ಎನ್ಐಎ ದಾಳಿ| ನೆಟ್ಟಾರ್ ಹತ್ಯೆ ಸಂಬಂಧಿಸಿ ಆರೋಪಿಗಳ ಮನೆಯಲ್ಲಿ ಮಹತ್ವದ ದಾಖಲೆ ವಶ Read More »

ಪುತ್ತೂರು:ಪಿಕಪ್- ಬೈಕ್ ಡಿಕ್ಕಿ| ಸುಳ್ಯದ ವ್ಯಕ್ತಿ ಸಾವು

ಸಮಗ್ರ ನ್ಯೂಸ್:ಪುತ್ತೂರಿನ ಕಲ್ಲರ್ಪೆಯಲ್ಲಿ ಮಧ್ಯಾಹ್ನ ಪಿಕಪ್ ಹಾಗೂ ಬೈಕ್ ಪರಸ್ಪರ ಢಿಕ್ಕಿ ಹೊಡೆದುಕೊಂಡು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಜೂ.28 ರಂದು ನಡೆದಿದೆ. ಮೃತ ವ್ಯಕ್ತಿಯನ್ನು ಸುಳ್ಯದ ಜಟ್ಟಿಪಳ್ಳ ನಿವಾಸಿ ನಾಗರಾಜ(53) ಎಂದು ತಿಳಿದು ಬಂದಿದೆ. ಮೃತದೇಹ ಪುತ್ತೂರು ಸರಕಾರಿ ಆಸ್ಪತ್ರೆಯ ಶವಗಾರದಲ್ಲಿದ್ದು, ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಪುತ್ತೂರು:ಪಿಕಪ್- ಬೈಕ್ ಡಿಕ್ಕಿ| ಸುಳ್ಯದ ವ್ಯಕ್ತಿ ಸಾವು Read More »

ಅನ್ನ ಭಾಗ್ಯದ ಬದಲು ಹಣದ ಭಾಗ್ಯ| ಪಡಿತರದಲ್ಲಿ 5 ಕೆ.ಜಿ ಅಕ್ಕಿ ಮತ್ತೈದು ಕೆ.ಜಿ ಯ ಹಣ ನೇರ ವರ್ಗಾವಣೆ – ಸಚಿವ ಮುನಿಯಪ್ಪ

ಸಮಗ್ರ ನ್ಯೂಸ್: ಅನ್ನ ಭಾಗ್ಯಕ್ಕಾಗಿ ಅಕ್ಕಿ ಸಿಗೋವರೆಗೂ ಪಡಿತರ ಚೀಟಿ ಹೊಂದಿದ ಮನೆಯೊಡಯನ ಖಾತೆಗೆ ಹತ್ತು ಕೆ.ಜಿ ಅಕ್ಕಿಯ ಹಣ ಹಾಕುವ ಚಿಂತನೆ ಇದೆ ಎಂದು ಸಚಿವ ಮುನಿಯಪ್ಪ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಅಕ್ಕಿ ಪೂರೈಕೆಯಲ್ಲಿ ರಾಜಕೀಯ ಮಾಡಲಾಗುತ್ತಿದೆ. ಇದರಿಂದ ಬಡವರಿಗೆ ಅಕ್ಕಿ ನೀಡಲು ಸಾಧ್ಯವಾಗುತ್ತಿಲ್ಲ. ಆದರೆ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಸದಾ ಸಿದ್ದವಾಗಿದ್ದು ಈವಾಗ ಅಕ್ಕಿ ಬದಲು ಅಕ್ಕಿಯ ಹಣವನ್ನು ವಿತರಿಸಲು ಯೋಜಿಸಲಾಗಿದೆ ಎಂದರು. ಪ್ರತೀ ಕೆ.ಜಿ ಅಕ್ಕಿಯ ಬೆಲೆ

ಅನ್ನ ಭಾಗ್ಯದ ಬದಲು ಹಣದ ಭಾಗ್ಯ| ಪಡಿತರದಲ್ಲಿ 5 ಕೆ.ಜಿ ಅಕ್ಕಿ ಮತ್ತೈದು ಕೆ.ಜಿ ಯ ಹಣ ನೇರ ವರ್ಗಾವಣೆ – ಸಚಿವ ಮುನಿಯಪ್ಪ Read More »

ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ಶ್ರದ್ಧಾಂಜಲಿ ಸಭೆ

ಸಮಗ್ರ ನ್ಯೂಸ್:ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸುಳ್ಯ ಘಟಕದಲ್ಲಿ ಸುಮಾರು 24 ವರ್ಷಗಳ ಕಾಲ ಘಟಕಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಶ್ರೀ ಜಯಂತ್ ಶೆಟ್ಟಿ ಇವರು ದಿನಾಂಕ: 27-06-2023 ರಂದು ದೈವಾಧೀನರಾಗಿರುತ್ತಾರೆ. ಅವರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಕೋರಲೆಂದು ದಿ:8-06-2023 ರಂದು ಜಿಲ್ಲಾ ಗೃಹರಕ್ಷಕದಳ ಕಛೇರಿ ಮೇರಿಹಿಲ್‍ನಲ್ಲಿ ಅವರಿಗೆ ಶ್ರದ್ದಾಂಜಲಿ ಸಭೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಮಾದೇಷ್ಠರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ ಶ್ರೀಯುತ ಜಯಂತ್ ಶೆಟ್ಟಿ ಅವರು 1999 ರಲ್ಲಿ ಸೇರಿ ಸುಮಾರು 24

ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ಶ್ರದ್ಧಾಂಜಲಿ ಸಭೆ Read More »