ಕರಾವಳಿ

ಕೊರಗಜ್ಜ ದೈವದ ಕಟ್ಟೆಗೆ ಬೆಂಕಿಯಿಟ್ಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಸಮಗ್ರ ನ್ಯೂಸ್: ದೈವದ ಕಟ್ಟೆಗೆ ಬೆಂಕಿ ನೀಡಲು ಕುಮ್ಮಕ್ಕು ನೀಡಿದ 13 ಮಂದಿ ನೈಜ ಆರೋಪಿಗಳ ವಿರುದ್ದ ದೈವನಿಂದನೆ, ಕೊಲೆ ಬೆದರಿಕೆ ಪ್ರಕರಣ ದಾಖಲಾಗಿದೆ. ಬಜಿರೆ ಗ್ರಾಮದ ಬಡಾರು ನಿವಾಸಿಗಳಾದ ಪ್ರದೀಪ್ ಕುಮಾರ್ ಹೆಗ್ಡೆ, ಉಮೇಶ್ ಪೂಜಾರಿ ತಿಮರಡ್ಕ, ಸಂದೀಪ್ ಕುಮಾರ್ ಹೆಗ್ಡೆ, ಪ್ರಸಾದ್, ದಿನೇಶ್ ಪೂಜಾರಿ, ವಿಜಯ ಶೇಖರ, ಮೋಹನಂದ ಪೂಜಾರಿ, ಹರಿಪ್ರಸಾದ್, ಮನುಗೌಡ, ಶ್ರೀಧರ್ ಪೂಜಾರಿ, ವಸಂತಿ ಪೂಜಾರ್ತಿ, ದಯಾನಂದ ಪೂಜಾರಿ, ಹರೀಶ್ ಪೂಜಾರಿ ಎಂಬವರ ಮೇಲೆ ಡಾ.ರಾಜೇಶ್ ಅವರು ವೇಣೂರು ಪೊಲೀಸ್ ಠಾಣೆಯಲ್ಲಿ

ಕೊರಗಜ್ಜ ದೈವದ ಕಟ್ಟೆಗೆ ಬೆಂಕಿಯಿಟ್ಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ Read More »

ಬೆಳ್ತಂಗಡಿ: ಬಿಜೆಪಿ ಕಾರ್ಯಕರ್ತರಿಂದಲೇ ಅಕ್ರಮ ಜಾನುವಾರು ಸಾಗಾಟ| ನಾಲ್ಕು ಮಂದಿಯ ಬಂಧಿಸಿದ ಪೊಲೀಸರು

ಸಮಗ್ರ ನ್ಯೂಸ್: ಹಿಂಸಾತ್ಮಕವಾಗಿ ದನ-ಕರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರ ಸಹಿತ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಮೋರ್ತಾಜೆ ನಿವಾಸಿ ಪ್ರಮೋದ್ ಸಾಲ್ಯಾನ್, ಒಳಗದ್ದೆ ನಿವಾಸಿ ಪುಷ್ಪರಾಜ್ ಹಾಗೂ ಹಾಸನ ಜಿಲ್ಲೆಯ ಕಸಬಾ ಹೋಬಳಿ, ಅರಕಲಗೂಡು ನಿವಾಸಿ ಚೆನ್ನಕೇಶವ ಮತ್ತು ಹೊಳೆನರಸೀಪುರ ನಿವಾಸಿ ಸಂದೀಪ್ ಹಿರೇಬೆಳಗುಳಿ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಬಿಜೆಪಿಯ ಸಕ್ರಿಯ ಕಾರ್ಯಕರ್ತರೆನ್ನಲಾಗಿದೆ. ಇವರಿಂದ ಸಾಗಾಟಕ್ಕೆ ಬಳಸಿದ ಮೂರು ವಾಹನಗಳು, 6 ದನ ಮತ್ತು 2 ಗಂಡು

ಬೆಳ್ತಂಗಡಿ: ಬಿಜೆಪಿ ಕಾರ್ಯಕರ್ತರಿಂದಲೇ ಅಕ್ರಮ ಜಾನುವಾರು ಸಾಗಾಟ| ನಾಲ್ಕು ಮಂದಿಯ ಬಂಧಿಸಿದ ಪೊಲೀಸರು Read More »

ಬೆಳ್ತಂಗಡಿ ಕಾಂಗ್ರೆಸ್ ನಲ್ಲೂ ಭುಗಿಲೆದ್ದ ಭಿನ್ನಮತ| ರಕ್ಷಿತ್ ಶಿವರಾಂ ಟೀಮ್ ಗೆ ಗೇಟ್ ಪಾಸ್ ನೀಡಿದ ಬ್ಲಾಕ್ ಕಾಂಗ್ರೆಸ್

ಸಮಗ್ರ ನ್ಯೂಸ್: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಸೋಲು-ಗೆಲುವಿನ ಕುರಿತು ಪರಾಮರ್ಶೆ ನಡೆಸುವ ವೇಳೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಹೈಡ್ರಾಮಾ ನಡೆದ ಘಟನೆ ಜು.14 ರಂದು ಸಂಜೆ ನಡೆದಿದೆ. ಬೆಳ್ತಂಗಡಿ ಮೂರು ಮಾರ್ಗದ ಬಳಿ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಜಿ.ಪಂ. ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ, ರಾಜ್ಯಸಭಾ ಮಾಜಿ ಸದಸ್ಯ ಇಬ್ರಾಹಿಂ, ಸಹಿತ ಅಶ್ವಿನ್ ರೈ ಬಂಟ್ವಾಳ್ ವೀಕ್ಷಕರಾಗಿ ಸೇರಿದ್ದರು. ಸಭೆ ಆರಂಭವಾಗುತ್ತಲೆ ರಕ್ಷಿತ್ ಶಿವರಾಂ ಆಪ್ತ ಬಳಗದಲ್ಲಿ ಗುರುತಿಸಿಕೊಂಡ

ಬೆಳ್ತಂಗಡಿ ಕಾಂಗ್ರೆಸ್ ನಲ್ಲೂ ಭುಗಿಲೆದ್ದ ಭಿನ್ನಮತ| ರಕ್ಷಿತ್ ಶಿವರಾಂ ಟೀಮ್ ಗೆ ಗೇಟ್ ಪಾಸ್ ನೀಡಿದ ಬ್ಲಾಕ್ ಕಾಂಗ್ರೆಸ್ Read More »

ಕಡಬ: ನಂದಕುಮಾರ್ v/s ಜಿ.ಕೃಷ್ಣಪ್ಪ| ಎರಡು ಬಣದ ನಡುವೆ ಮಾರಾಮಾರಿ..!

ಸಮಗ್ರ ನ್ಯೂಸ್: ಕಡಬ ಬ್ಲಾಕ್‌ನ ನಡೆದ ಕಾಂಗ್ರೆಸ್‌ನ ಪರಾಮರ್ಶೆ ಸಭೆಯಲ್ಲಿ ಜಿ.ಕೃಷ್ಣಪ್ಪ ಹಾಗೂ ನಂದಕುಮಾರ್ ಬಣದ ನಡುವೆ ಮಾರಾಮಾರಿಯಾದ ಘಟನೆ ಕಡಬ ಅಂಬೇಡ್ಕರ್ ಭವನದಲ್ಲಿ ಜು.14ರಂದು ಸಭೆ ನಡೆದಿದೆ. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿನ ಪರಾಮರ್ಶೆ ಅಭಿಪ್ರಾಯ ಸಂಗ್ರಹಿಸಲು ಕಾಂಗ್ರೆಸ್ ಸಮಿತಿಯ ಮುಖಂಡರು ಆಗಮಿಸಿದ್ದರೆನ್ನಲಾಗಿದೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಎಂಬ ಆರೋಪದಲ್ಲಿ ಇತ್ತೀಚೆಗಷ್ಟೆ ಕಾಂಗ್ರೆಸ್ ಶಿಸ್ತು ಸಮಿತಿಯಿಂದ ಉಚ್ಛಾಟನೆಗೊಳಗಾದ ನಾಯಕರು ಈ ಸಭೆಗೆ ಆಗಮಿಸಿದ್ದ ವೇಳೆ ಜಿ.ಕೃಷ್ಣಪ್ಪ ಬೆಂಬಲಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರೆನ್ನಲಾಗಿದೆ.

ಕಡಬ: ನಂದಕುಮಾರ್ v/s ಜಿ.ಕೃಷ್ಣಪ್ಪ| ಎರಡು ಬಣದ ನಡುವೆ ಮಾರಾಮಾರಿ..! Read More »

ಎರಡೆರಡು ಆಟಿ ಅಮಾವಾಸ್ಯೆ| ಆಟಿ ಕಷಾಯ ಕುಡಿಯೋದು ಯಾವಾಗ ಮರ್ರೆ!?

ಸಮಗ್ರ ನ್ಯೂಸ್: ಕರಾವಳಿಗರಿಗೆ ಆಟಿ ಅಂದರೆ ಅದು ವಿಶೇಷವಾದ ತಿಂಗಳು. ಇನ್ನು ಆಟಿ ತಿಂಗಳಿನಲ್ಲಿ ಅಮಾವ್ಯಾಸೆಯಂದು ವಿಶೇಷವಾದ ಹಾಲೆ ಮರದ ಕಷಾಯವನ್ನು ತುಳುನಾಡಿನಾದ್ಯಂತ ಕುಡಿಯುವುದು ರೂಢಿ. ಆದರೆ ಈ ಬಾರಿ ಆಟಿ ತಿಂಗಳಿನಲ್ಲಿ ಎರಡೆರಡು ಅಮಾವ್ಯಾಸೆ ಬಂದು ಯಾವ ದಿನ ಮದ್ದು ಕುಡಿಬೇಕು ಅನ್ನೋ ಕನ್ಫ್ಯೂಷನ್ ನಲ್ಲಿದ್ದಾರೆ ಜನ. ಈಗ ಆ ಸಂಶಯಕ್ಕೆ ಉತ್ತರ ನಾವು ಹೇಳ್ತೇವೆ . ಈ ವರ್ಷ ಆಟಿಯಲ್ಲಿ ಎರಡು ಅಮಾವಾಸ್ಯೆ ಬರಲಿದೆ. ಒಂದು ಜುಲೈ 17 ಮತ್ತೊಂದು ಆಗಸ್ಟ್ 16. ಮೊದಲನೆಯದ್ದು

ಎರಡೆರಡು ಆಟಿ ಅಮಾವಾಸ್ಯೆ| ಆಟಿ ಕಷಾಯ ಕುಡಿಯೋದು ಯಾವಾಗ ಮರ್ರೆ!? Read More »

ಸಂಪಾಜೆ: ಆಸ್ತಿ ವಿವಾದ ಹಿನ್ನಲೆ| ಸಹೋದರರಿಂದಲೇ ಅಣ್ಣನ ಮರ್ಡರ್

ಸಮಗ್ರ ನ್ಯೂಸ್: ಆಸ್ತಿವಿವಾದ ಹಿನ್ನಲೆಯಲ್ಲಿ ಸ್ವಂತ ತಮ್ಮಂದಿರೇ ಅಣ್ಣನನ್ನು ಕೊಚ್ಚಿ ಕೊಲೆಗೈದ ಘಟನೆ ಮಡಿಕೇರಿ ತಾಲೂಕಿನ ಸಂಪಾಜೆ ಸಮೀಪದ ಚೆಂಬು ಗ್ರಾಮದಿಂದ ವರದಿಯಾಗಿದೆ. ಇಲ್ಲಿನ ಕುದ್ರೆಪಾಯ ನಿವಾಸಿ ಉಸ್ಮಾನ್ ಹತ್ಯೆಯಾದ ದುರ್ದೈವಿ. ಸತ್ತಾರ್, ರಫೀಕ್, ಇಸುಬು,ಅಬ್ಬಾಸ್, ಉಸ್ಮಾನ್ ಮೊದಲಾದ ಅಣ್ಣತಮ್ಮಂದಿರ ಕೃಷಿ ಭೂಮಿ ಸುಮಾರು 50 ಎಕ್ರೆ ಜಾಗ ಕುದ್ರೆಪಾಯದಲ್ಲಿದ್ದು ಜಾಗದ ತಕರಾರಿನಿಂದಾಗಿ ವಿವಾದವೆದ್ದಿದ್ದು, ಸಹೋದರರು ಸೇರಿ ಉಸ್ಮಾನ್ ಎಂಬವರನ್ನು ಇಂದು ಚೂರಿಯಿಂದ ಇರಿದು ಕೊಂದಿರುವುದಾಗಿ ಮಾಹಿತಿ ಲಭಿಸಿದೆ. ಉಸ್ಮಾನ್ ಕುದ್ರೆಪಾಯದಲ್ಲಿ ಭೂಮಿ ಹೊಂದಿದ್ದರು. ಅರಂತೋಡಿನಲ್ಲೂ ಇವರಿಗೆ

ಸಂಪಾಜೆ: ಆಸ್ತಿ ವಿವಾದ ಹಿನ್ನಲೆ| ಸಹೋದರರಿಂದಲೇ ಅಣ್ಣನ ಮರ್ಡರ್ Read More »

ಪುತ್ತೂರು: ಸಹಾಯಕ ಆಯುಕ್ತ ಗಿರೀಶ್ ನಂದನ್ ವರ್ಗಾವಣೆಗೆ ತಡೆ

ಸಮಗ್ರ ನ್ಯೂಸ್: ಪುತ್ತೂರು ಸಹಾಯಕ ಆಯುಕ್ತರಾಗಿದ್ದು, ಎತ್ತಿನಹೊಳೆ ಯೋಜನೆಯ ಭೂಸ್ವಾಧೀನ ವಿಭಾಗಕ್ಕೆ ವರ್ಗಾವಣೆಗೊಂಡಿದ್ದ ಗಿರೀಶ್ ನಂದನ್ ಅವರ ವರ್ಗಾವಣೆಗೆ ಕರ್ನಾಟಕ ರಾಜ್ಯ ಆಡಳಿತಾತ್ಮಕ ಪ್ರಾಧಿಕಾರ ಅವಧಿಪೂರ್ಣ ವರ್ಗಾವಣೆ ಎಂಬ ನೆಲೆಯಲ್ಲಿ ತಡೆ ನೀಡಿರುವುದಾಗಿ ತಿಳಿದುಬಂದಿದೆ. ಗಿರೀಶ್ ನಂದನ್ ಅವರು ಸುಮಾರು ಒಂದೂವರೆ ವರ್ಷದಿಂದ ಪುತ್ತೂರು ಎಸಿ ಆಗಿದ್ದರು. ಅವರ ವರ್ಗಾವಣೆಯ ಬಳಿಕ ಮಂಗಳೂರಿ ಕೆಎಐಡಿಬಿಯಲ್ಲಿ ಭೂಸ್ವಾಧೀನಾಧಿಕಾರಿಯಾಗಿದ್ದ ಮಹೇಶ್ಚಂದ್ರ ಅವರು ಬಂದು ಅಧಿಕಾರ ವಹಿಸಿಕೊಂಡಿದ್ದಾರೆ. ಇದೀಗ ಕೆಎಟಿಯಿಂದ ವರ್ಗಾವಣೆ ಆದೇಶಕ್ಕೆ ತಡೆ ದೊರೆತಿರುವುದರಿಂದ ಮುಂದಿನ ಬೆಳವಣಿಗೆಗಳನ್ನು ಕಾದುನೋಡಬೇಕಾಗಿದೆ. ಅಡ್ವಕೇಟ್

ಪುತ್ತೂರು: ಸಹಾಯಕ ಆಯುಕ್ತ ಗಿರೀಶ್ ನಂದನ್ ವರ್ಗಾವಣೆಗೆ ತಡೆ Read More »

ಸುಳ್ಯ: ವ್ಯಕ್ತಿ ಮೇಲೆ ಹಲ್ಲೆ, ಜೀವಬೆದರಿಕೆ – ದೂರು ದಾಖಲು

ಸಮಗ್ರ ನ್ಯೂಸ್: ವ್ಯಕ್ತಿಯೋರ್ವರಿಗೆ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಳ್ಯ ತಾಲೂಕಿನ ಕಸಬಾ ಗ್ರಾಮದ ಗಾಂಧಿನಗರದ ನಾವೂರು ನಿವಾಸಿ ಅಬ್ದುಲ್ ನಾಜೀರ್ (31) ಈ ಬಗ್ಗೆ ದೂರು ನೀಡಿದ್ದಾರೆ. ಅಬ್ದುಲ್ ನಾಜೀರ್ ಆರೋಪಿ ಶಾಬೀತ್ ಎಂಬವರು ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಮೊಗರ್ಪಣೆ, ಹಳೆಗೇಟು ಎಂಬಲ್ಲಿ ಆಟೋ ಕ್ಯಾರ್ ಎಂಬ ಸರ್ವಿಸ್ ಸ್ಟೇಷನ್ ಅನ್ನು ಪಾರ್ಟನರ್ ಶೀಫ್ ನಲ್ಲಿ ವ್ಯವಹಾರ ನಡೆಸುತ್ತಿದ್ದು, ತಮ್ಮ ವ್ಯವಹಾರದಲ್ಲಿ ತಮ್ಮೊಳಗೆ ತಕರಾರು

ಸುಳ್ಯ: ವ್ಯಕ್ತಿ ಮೇಲೆ ಹಲ್ಲೆ, ಜೀವಬೆದರಿಕೆ – ದೂರು ದಾಖಲು Read More »

ಬೆಳ್ತಂಗಡಿ: ಸೈನೇಡ್ ಸೇವಿಸಿ ಯುವಕ ಆತ್ಮಹತ್ಯೆ

ಸಮಗ್ರ ನ್ಯೂಸ್: ಯುವಕನೋರ್ವ ಸೈನೇಡ್ ಸೇವಿಸಿ ಆತ್ಮಹತ್ಯೆಗೈದ ಘಟನೆ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆಯಲ್ಲಿ ಗುರುವಾರ ಸಂಭವಿಸಿದೆ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯ ನಿವಾಸಿ ಗಣೇಶ ಆಚಾರ್ಯ ಅವರ ಪುತ್ರ ರೂಪೇಶ್ ಆಚಾರ್ಯ(31) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಸ್ವರ್ಣ ಕುಸುರಿ ಕೆಲಸಗಾರರಾಗಿದ್ದ ರೂಪೇಶ್ ಅವರು ಸ್ಥಳೀಯ ಸಂಸ್ಥೆಯಲ್ಲಿ ನೌಕರರಾಗಿದ್ದು, ಇತ್ತೀಚೆಗೆ ಕೆಲಸ ಬಿಟ್ಟಿದ್ದರು. ಮದ್ಯವ್ಯಸನಿಯಾಗಿದ್ದ ಅವರು ಗುರುವಾರ ಮಧ್ಯಾಹ್ನ ತನ್ನ ಕೊಠಡಿಯಲ್ಲಿ ಸೈನೇಡ್ ಸೇವಿಸಿದ್ದರು. ಇದನ್ನು ಗಮನಿಸಿದ ಮನೆ ಮಂದಿ ಕೂಡಲೇ 108 ಅಂಬ್ಯುಲೆನ್ಸ್ ಮೂಲಕ ಮಂಗಳೂರು

ಬೆಳ್ತಂಗಡಿ: ಸೈನೇಡ್ ಸೇವಿಸಿ ಯುವಕ ಆತ್ಮಹತ್ಯೆ Read More »

ಭಾರೀ ಮಳೆ ಸಾಧ್ಯತೆ| ಕರಾವಳಿ ಸೇರಿದಂತೆ ಆರು ಜಿಲ್ಲೆಗಳಿಗೆ ಎಲ್ಲೋ‌‌‌ ಅಲರ್ಟ್

ಸಮಗ್ರ ನ್ಯೂಸ್: ರಾಜ್ಯದಲ್ಲಿ ಭಾರೀ ಮಳೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆ ಸೇರಿ 6 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗೆ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ. ಕರಾವಳಿಯ ಬಹುತೇಕ ಕಡೆ ಹಾಗೂ ದಕ್ಷಿಣ ಒಳನಾಡಿನ ಹಲವು ಕಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗುವ ಸಂಭವವಿದೆ ಎಂದು ಇಲಾಖೆ ತಿಳಿಸಿದೆ. ಕರಾವಳಿಯಲ್ಲಿ ಬಿರುಗಾಳಿಯ ವೇಗವು ಗಂಟೆಗೆ 40–45 ಕಿ.ಮೀ ಇಂದ

ಭಾರೀ ಮಳೆ ಸಾಧ್ಯತೆ| ಕರಾವಳಿ ಸೇರಿದಂತೆ ಆರು ಜಿಲ್ಲೆಗಳಿಗೆ ಎಲ್ಲೋ‌‌‌ ಅಲರ್ಟ್ Read More »