ಕರಾವಳಿ

ಬೆಳ್ತಂಗಡಿ: ಲೋ ಬಿಪಿಯಿಂದ ಹೃದಯಾಘಾತ; ಯುವತಿ ಸಾವು

ಸಮಗ್ರ ನ್ಯೂಸ್: ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆದು ಮನೆಯಲ್ಲಿದ್ದ ಯುವತಿ ಲೋ ಬಿಪಿ ಆಗಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಆ 13 ರಂದು ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲು ಎಂಬಲ್ಲಿ ನಡೆದಿದೆ. ಇಲ್ಲಿನ ಜಾತಿಮಾರು ನಿವಾಸಿ ರಾಜು ದೇವಾಡಿಗ ಮತ್ತು ಸರೋಜ ದಂಪತಿಗಳ ಮಗಳು ಸುಮಾ (19) ಮೃತ ಯುವತಿ. ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಮೊದಲ ವರ್ಷದ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಸುಮಾ ಮನೆಗೆ ಬಂದಿದ್ದಳು. ಆಗಸ್ಟ್ 9 ರಂದು ಅನಾರೋಗ್ಯದ ಕಾರಣದಿಂದ ಸ್ಥಳೀಯ

ಬೆಳ್ತಂಗಡಿ: ಲೋ ಬಿಪಿಯಿಂದ ಹೃದಯಾಘಾತ; ಯುವತಿ ಸಾವು Read More »

ಸುಳ್ಯ: ದರ್ಖಾಸ್ತು ಶ್ರೀ ಮುತ್ತು ಮರಿಯಮ್ಮ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯಕ್ರಮ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಬೆಳ್ಳಾರೆಯ ದರ್ಖಾಸ್ತು ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರ ಒಕ್ಕೂಟದಿಂದ ಸ್ವಚ್ಚತಾ ಕಾರ್ಯಕ್ರಮ ಆ. 13ರಂದು ನಡೆಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಹರೀಶ್ ಪಧಧಿಕಾರಿಗಳು, ಸೇವಾಪ್ರತಿನಿಧಿ ಯಶೋಧ, ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಸುಳ್ಯ: ದರ್ಖಾಸ್ತು ಶ್ರೀ ಮುತ್ತು ಮರಿಯಮ್ಮ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯಕ್ರಮ Read More »

ಅರಂತೋಡು:ಆಧಾರ್ ಕಾರ್ಡ್ ಬದಲಾವಣೆಗೆ ತಂಭ್ ಕೊಡಲು ಹೋದ ವ್ಯಕ್ತಿ ನಾಪತ್ತೆ

ಸಮಗ್ರ ನ್ಯೂಸ್:ಆಧಾರ್ ಕಾರ್ಡ್ ತಿದ್ದುಪಡಿ ಮಾಡಲೆಂದು ಅರಂತೊಡಿಗೆ ಹೋದ ಚೆಂಬು ಗ್ರಾಮದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಆ. 8ರಂದು ವರದಿಯಾಗಿದೆ. ಚೆಂಬುಗ್ರಾಮದ ಮಿನುಂಗೂರು ಮನೆ ಬಾಲಕೃಷ್ಣ (65) ಅವರು ಅರಂತೋಡಿಗೆ ತೆರಳಿದ್ದರು. ಅಲ್ಲಿಂದ ಸುಳ್ಯ ಕಡೆಗೆ ಬರುವ ವ್ಯಾನ್ ನಲ್ಲಿ ತೆರಳಿದ್ದು ಮತ್ತೆ ಮರಳಿ ಹಿಂತಿರುಗದೆ ಇರುವುದರಿಂದ ಮನೆಯವರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಭಾವಚಿತ್ರದಲ್ಲಿರುವ ವ್ಯಕ್ತಿಯು ಕಂಡುಬಂದಲ್ಲಿ ಸುಳ್ಯ ಠಾಣೆಗೆ ತಿಳಿಸುವಂತೆ ಅಥವಾ 9731435253, 7760505928 ಸಂಖ್ಯೆಗೆ ತಿಳಿಸುವಂತೆ ಕೋರಲಾಗಿದೆ.

ಅರಂತೋಡು:ಆಧಾರ್ ಕಾರ್ಡ್ ಬದಲಾವಣೆಗೆ ತಂಭ್ ಕೊಡಲು ಹೋದ ವ್ಯಕ್ತಿ ನಾಪತ್ತೆ Read More »

ಸುಬ್ರಹ್ಮಣ್ಯ:ಇಂಜಾಡಿ ಹೊಟೇಲೊಂದರಲ್ಲಿ ಮದ್ಯ ಮಾರಾಟ| ಅಧಿಕಾರಿಗಳ ಮೌನ| ಸಾರ್ವಜನಿಕರಿಂದ ಆಕ್ರೋಶ

ಸಮಗ್ರ ನ್ಯೂಸ್: ಸುಬ್ರಹ್ಮಣ್ಯದ ಇಂಜಾಡಿ ಎಂಬಲ್ಲಿ ರಸ್ತೆ ಬದಿಯ ಹೋಟೆಲೊಂದರಲ್ಲಿ ರಾಜಾ ರೋಷವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಂಜಾಡಿಯ ಗ್ರೀನ್‌ ಫಾಮ್ಸ್‌ ನ ಹೋಟೆಲೊಂದರಲ್ಲಿ ಮದ್ಯ ವ್ಯಾಪಾರ ಮಾಡುತ್ತಿರುವ ಆರೊಪ ಕೇಳಿ ಬಂದಿದೆ. ಈ ಬಗ್ಗೆ ಸಾರ್ವಜನಿಕರು ಸ್ಥಳಿಯ ಗ್ರಾಮ ಪಂಚಾಯತ್ ಗೆ ಮತ್ತು ಅಬಕಾರಿ ಇಲಾಖೆಗೆ ಮಾಹಿತಿ ನೀಡಿದರು ಅಧಿಕಾರಿಗಳು ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸ್ಥಳೀಯರು ಮುಂದಿನ ದಿನಗಳಲ್ಲಿ ಈ

ಸುಬ್ರಹ್ಮಣ್ಯ:ಇಂಜಾಡಿ ಹೊಟೇಲೊಂದರಲ್ಲಿ ಮದ್ಯ ಮಾರಾಟ| ಅಧಿಕಾರಿಗಳ ಮೌನ| ಸಾರ್ವಜನಿಕರಿಂದ ಆಕ್ರೋಶ Read More »

ಆದಿಚುಂಚನಗಿರಿ ಶ್ರೀಗಳ ಭೇಟಿ ಮಾಡಿದ ಸೌಜನ್ಯ ಕುಟುಂಬ

ಸಮಗ್ರ ನ್ಯೂಸ್: ಮಂಡ್ಯ ಜಿಲ್ಲೆಯ ನಾಗಮಂಗಲದ ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದ ಶ್ರೀಗಳನ್ನು ಸೌಜನ್ಯ ಕುಟುಂಬಸ್ಥರು ಭೇಟಿ ಮಾಡಿ ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀಗಳು ಸೌಜನ್ಯ ತಾಯಿ ಕುಸುಮಾವತಿ, ತಂಗೆ ಚಂದಪ್ಪ ಗೌಡ, ಹೋರಾಟಗಾರ ಮಹೇಶ್ ತಿಮರೋಡಿ ಜೊತೆಗೆ ಪ್ರಕರಣದ ಕುರಿತು ಚರ್ಚಿಸಿ ಸಾಂತ್ವನ ನೀಡಿದರು. ಅಲ್ಲದೇ ಸೌಜನ್ಯಳ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಸಹಕಾರ ನೀಡುವುದಾಗಿ ಶ್ರೀಗಳು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಆದಿಚುಂಚನಗಿರಿ ಶ್ರೀಗಳ ಭೇಟಿ ಮಾಡಿದ ಸೌಜನ್ಯ ಕುಟುಂಬ Read More »

ಬಂಟ್ವಾಳ: ಹೃದಯಾಘಾತದಿಂದ ಪೆಟ್ರೋಲ್ ಬಂಕ್ ಮ್ಯಾನೆಜರ್ ಮೃತ್ಯು

ಸಮಗ್ರ ನ್ಯೂಸ್: ಹೃದಯಾಘಾತದಿಂದ ಬಿಸಿರೋಡಿನ ಪೆಟ್ರೋಲ್ ಬಂಕ್ ಮ್ಯಾನೇಜರ್ ಸಾವನಪ್ಪಿರುವ ಘಟನೆ ನಡೆದಿದೆ. ‌ ಮೃತರನ್ನು ಬಿಸಿರೋಡಿನ ಸರ್ಕಲ್ ಬಳಿಯಲ್ಲಿರುವ ಪೆಲತ್ತಿಮಾರ್ ನಿವಾಸಿ ಪುರುಷೋತ್ತಮ ಪೂಜಾರಿ ( ಪರುಷಣ್ಣ) (45) ಎಂದು ಗುರುತಿಸಲಾಗಿದೆ.ಪುರುಷೋತ್ತಮ ಅವರು ಕೃಷಿಕನಾಗಿದ್ದುಕೊಂಡು ಬಿಸಿರೋಡಿನ ಸುತ್ತಮುತ್ತಲಿನ ಜನರ ಅಚ್ಚುಮೆಚ್ಚಿನ ಪುರುಷಣ್ಣ ಎಂದೇ ಹೆಸರುವಾಸಿಯಾಗಿ ಸಾಮಾಜಿಕ ಸೇವೆಯ ಮೂಲಕ ಚಿರಪರಿಚಿತರಾಗಿದ್ದರು.ನೇರ ನಡೆ ನುಡಿಯ ವ್ಯಕ್ತಿಯಾಗಿದ್ದ ಇವರು ಬಿಸಿರೋಡಿನ ಗುರುಕೃಪ ಪೆಟ್ರೋಲ್ ಪಂಪ್ ನಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ರಾತ್ರಿ ಸುಮಾರು ಒಂದು ಗಂಟೆ ವೇಳೆ

ಬಂಟ್ವಾಳ: ಹೃದಯಾಘಾತದಿಂದ ಪೆಟ್ರೋಲ್ ಬಂಕ್ ಮ್ಯಾನೆಜರ್ ಮೃತ್ಯು Read More »

ವಿಟ್ಲ: ‌ಮುಂಗುಸಿ ಅಡ್ಡ ಬಂದು ರಿಕ್ಷಾ ಪಲ್ಟಿ

ಸಮಗ್ರ ನ್ಯೂಸ್: ಮುಂಗುಸಿ ಅಡ್ಡ ಬಂದು ರಿಕ್ಷಾ ಪಲ್ಟಿಯಾಗಿ ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಎಂಬಲ್ಲಿ ನಡೆದಿದೆ. ಮಂಗಲಪದವು ನಿವಾಸಿ ಆಟೋ ಚಾಲಕ ಇಸ್ಮಾಯಿಲ್ (53) ಗಾಯಾಳು. ಸಾಲೆತ್ತೂರು ಕಡೆಗೆ ಪ್ರಯಾಣಿಕರನ್ನು ಬಿಟ್ಟು ಹಿಂತಿರುಗುತ್ತಿದ್ದಾಗ ಕೊಡಂಗಾಯಿ ಸೇತುವೆ ಬದಿಯಲ್ಲಿ ರಸ್ತೆ ದಾಟುತ್ತಿದ್ದ ಮುಂಗುಸಿಯೊಂದು ಅಡ್ಡಬಂದಿದೆ. ಮುಂಗುಸಿಯ ಪ್ರಾಣ ರಕ್ಷಣೆಗಾಗಿ ಚಾಲಕ ಹಠಾತ್ ಬ್ರೇಕ್ ಹಾಕುತ್ತಿದ್ದಂತೆ ನಿಯಂತ್ರಣ ತಪ್ಪಿದ ಆಟೋ ರಸ್ತೆ ಬದಿಯ ಕಬ್ಬಿಣದ ತಡೆಗೋಡೆಗೆ ಬಲವಾಗಿ ಅಪ್ಪಳಿಸಿ ಜಖಂಗೊಂಡಿದ್ದು

ವಿಟ್ಲ: ‌ಮುಂಗುಸಿ ಅಡ್ಡ ಬಂದು ರಿಕ್ಷಾ ಪಲ್ಟಿ Read More »

ಸುಳ್ಯ ತಾಲೂಕು ಮಟ್ಟದ ಚೆನ್ನೆಮಣೆ ಸ್ಪರ್ಧೆ|ಚೆನ್ನೆಮಣೆ ಬಗ್ಗೆ ಅರಿವು ಅಗತ್ಯ; ತೀರ್ಥರಾಮ

ಸಮಗ್ರ ನ್ಯೂಸ್:ತುಳುನಾಡಿನ ಜಾನಪದ ಕ್ರೀಡೆಗಳಲ್ಲೊಂದಾದ ಚೆನ್ನೆಮಣೆ ಆಟ ಇಂದು ನಶಿಸಿ ಹೋಗುವ ಹಂತದಲ್ಲಿದೆ. ಚೆನ್ನೆಮಣೆ ಆಟದ ಬಗ್ಗೆ ಹಿರಿಯರು, ಪೋಷಕರು ಇಂದಿನ ಮಕ್ಕಳಿಗೆ ತಿಳಿಸುವ ಜೊತೆಗೆ ಆಟವನ್ನು ಕಲಿಸುವ ಮೂಲಕ ಚೆನ್ನೆಮಣೆ ಆಟದ ಬಗ್ಗೆ ಅರಿವು ಮೂಡಿಸುವ ಅಗತ್ಯ ಇದೆ ಎಂದು ಸರಕಾರಿ ನೌಕರರ ಸಂಘದ ಸುಳ್ಯ ತಾಲೂಕು ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ ಹೇಳಿದರು. ಅವರು ಶನಿವಾರ ದುಗ್ಗಲಡ್ಕ ಸರಕಾರಿ ಪ್ರೌಢಶಾಲೆಯಲ್ಲಿ ಸುಳ್ಯ ತಾಲೂಕು ಶಾಲಾ ಶಿಕ್ಷಣ ಇಲಾಖೆ, ಸಿ.ಸಿ.ಆರ್.ಟಿ. ಗ್ರೂಪ್ ಸುಳ್ಯ ಮತ್ತು ದುಗ್ಗಲಡ್ಕ ಸರಕಾರಿ

ಸುಳ್ಯ ತಾಲೂಕು ಮಟ್ಟದ ಚೆನ್ನೆಮಣೆ ಸ್ಪರ್ಧೆ|ಚೆನ್ನೆಮಣೆ ಬಗ್ಗೆ ಅರಿವು ಅಗತ್ಯ; ತೀರ್ಥರಾಮ Read More »

ಸುಳ್ಯ: ನೈತಿಕ ಪೊಲೀಸ್ ಗಿರಿ ಪ್ರಕರಣ| ಐವರ ವಿರುದ್ಧ ದೂರು; ಓರ್ವ ಅರೆಸ್ಟ್

ಸಮಗ್ರ ನ್ಯೂಸ್: ತಡರಾತ್ರಿ ಸುಳ್ಯ ತಾಲೂಕಿನ ಅರಂತೋಡು ಸಮೀಪ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾಗಿರುವ ಯುವಕ ಸುಳ್ಯ ಪೊಲೀಸ್ ಠಾಣೆಯಲ್ಲಿ ಐವರು ಆರೋಪಿಗಳ ದೂರು ನೀಡಿದ್ದು, ಓರ್ವ ಆರೋಪಿಯ ಬಂಧನವಾಗಿದೆ. ನಿನ್ನೆ ಸಂಜೆ ಈ ಘಟನೆ ನಡೆದಿದ್ದು ಯುವಕ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಅರ್ಜುನ್ ಎಂಬಾತನನ್ನು ವಶಕ್ಕೆ ಪಡೆದಿದ್ದರು. ಈ ವಿಚಾರ ತಿಳಿದ ಸುಳ್ಯದ ಬಿಜೆಪಿ ಮುಖಂಡರು ಪೊಲೀಸ್ ಠಾಣೆಗೆ ತೆರಳಿದ್ದರು. ಪುತ್ತೂರಿನಿಂದ ಅರುಣ್ ಕುಮಾರ್ ಪುತ್ತಿಲ ಕೂಡಾ ಆಗಮಿಸಿದ್ದರು. ಹಲವು

ಸುಳ್ಯ: ನೈತಿಕ ಪೊಲೀಸ್ ಗಿರಿ ಪ್ರಕರಣ| ಐವರ ವಿರುದ್ಧ ದೂರು; ಓರ್ವ ಅರೆಸ್ಟ್ Read More »

ಸುಳ್ಯ: ನೈತಿಕ ಪೊಲೀಸ್‌ಗಿರಿ ಪ್ರಕರಣ| ಪೊಲೀಸ್‌ ಠಾಣೆಗೆ ಅರುಣ್‌ ಕುಮಾರ್‌ ಪುತ್ತಿಲ ಭೇಟಿ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ(sullia) ತೊಡಿಕಾನದಲ್ಲಿ ಅನ್ಯಕೋಮಿನ ವ್ಯಕ್ತಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಸುಳ್ಯ ಪೊಲೀಸ್‌ ಠಾಣೆಗೆ ಅರುಣ್‌ ಕುಮಾರ್‌ ಪುತ್ತಿಲ (Arun kumar puttila) ಭೇಟಿ ನೀಡಿದ್ದಾರೆ. ಘಟನೆಯ ವಿವರ: ಸುಳ್ಯ ತಾಲೂಕಿ‌ನ ಅರಂತೋಡು(Aranthodu) ಕಡೆ ಟ್ಯಾಪಿಂಗ್ ಕೆಲಸ ವಹಿಸಿಕೊಂಡು ಮಾಡುತ್ತಿದ್ದ ಅನ್ಯಕೋಮಿನ ವ್ಯಕ್ತಿ ಮಹಿಳೆಯೊಬ್ಬರನ್ನು ತನ್ನ ಕಾರಲ್ಲಿ ಸುತ್ತಾಡಿಸುತ್ತಿದ್ದಾನೆ ಎಂಬ ಅನುಮಾನದಿಂದ ಕೆಲ ಯುವಕರು ಕಾರನ್ನು ಹಿಂಬಾಲಿಸುತ್ತಿದ್ದರು ಎನ್ನಲಾಗಿದೆ. ಆ.12ರ ಸಂಜೆ ಆತ ಮಹಿಳೆಯನ್ನು ಸುಳ್ಯಕ್ಕೆ ಬಿಟ್ಟು ತೊಡಿಕಾನ ಕಡೆಗೆ ಬರುತ್ತಿದ್ದಾನೆಂಬ

ಸುಳ್ಯ: ನೈತಿಕ ಪೊಲೀಸ್‌ಗಿರಿ ಪ್ರಕರಣ| ಪೊಲೀಸ್‌ ಠಾಣೆಗೆ ಅರುಣ್‌ ಕುಮಾರ್‌ ಪುತ್ತಿಲ ಭೇಟಿ Read More »