ಮಂಗಳೂರು: ಪೊಲೀಸ್ ಗೆ ”ನಿನ್ನನ್ನು ಸಸ್ಪೆಂಡ್ ಮಾಡಿಸ್ತೇನೆ” ಎಂದು ಅವಾಜ್ ಹಾಕಿದ ಕಾಂಗ್ರೆಸ್ ಮುಖಂಡ ಅಂದರ್
ಸಮಗ್ರ ನ್ಯೂಸ್: ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ್ದಲ್ಲದೇ ಠಾಣಾಧಿಕಾರಿಯನ್ನೇ ವರ್ಗಾವಣೆ ಮಾಡುವ ಬೆದರಿಕೆ ಹಾಕಿದ ಮಂಗಳೂರಿನ ಕಾಂಗ್ರೆಸ್ ಮುಖಂಡನನ್ನು ಉರ್ವಾ ಪೊಲೀಸರು ಬಂಧಿಸಿದ್ದಾರೆ. ನಗರದ ಉರ್ವಾ ಠಾಣೆಯ ಇನ್ಸ್ ಪೆಕ್ಟರ್ ಗೆ ಸಸ್ಟೆಂಡ್ ಮಾಡಿಸ್ತೇನೆ ಅಂತ ಕೈ ಮುಖಂಡ ಪುನೀತ್ ಶೆಟ್ಟಿ ಎಂಬಾತ ಬೆದರಿಕೆ ಹಾಕಿದ್ದಲ್ಲದೇ, ನ್ಯಾಯಾಧೀಶರನ್ನು ಠಾಣೆಗೆ ಕರೆಸಬೇಕಾ?ಎಂದು ಬೆದರಿಕೆ ಹಾಕಿದ್ದ. ಯುವ ಕಾಂಗ್ರೆಸ್ ಹಾಗೂ ಇಂಟಕ್ ನ ಮುಖಂಡನಾಗಿರುವ ಪುನೀತ್ ಶೆಟ್ಟಿ ಉರ್ವಾ ಪೊಲೀಸ್ ಠಾಣೆ ಎಎಸ್ಸೈ ವೇಣುಗೋಪಾಲ್ ಗೆ ಬೆದರಿಕೆ










