ಕರಾವಳಿ

ಕರಾವಳಿಯಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ| ಮಹಿಳೆಯನ್ನು ಕಾರಿನಲ್ಲಿ ಕರೆದೊಯ್ದ ಆರೋಪದಲ್ಲಿ ಅನ್ಯಕೋಮಿನ ಕಾರು ಚಾಲಕನ ಮೇಲೆ ಹಲ್ಲೆ

ಸಮಗ್ರ ನ್ಯೂಸ್: ಮಹಿಳೆಯನ್ನು ತನ್ನ ಕಾರಲ್ಲಿ ಕರೆದೊಯ್ಯುತ್ತಿದ್ದ ಎಂಬ ಕಾರಣಕ್ಕೆ ಕಾರಲ್ಲಿ ಹೋಗುತ್ತಿದ್ದ ಅನ್ಯಕೋಮಿನ ವ್ಯಕ್ತಿಗೆ ಕೆಲ ಯುವಕರು ತಡೆದು ಹಲ್ಲೆ ನಡೆಸಿದ್ದಾರೆನ್ನಲಾದ ಘಟನೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ತೊಡಿಕಾನದಿಂದ ವರದಿಯಾಗಿದೆ. ಸದ್ಯ ಸುಳ್ಯ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ. ತಾಲೂಕಿ‌ನ ಅರಂತೋಡು ಕಡೆ ಟ್ಯಾಪಿಂಗ್ ಕೆಲಸ ವಹಿಸಿಕೊಂಡು ಮಾಡುತ್ತಿದ್ದ ಅನ್ಯಕೋಮಿನ ವ್ಯಕ್ತಿ ಮಹಿಳೆಯೊಬ್ಬರನ್ನು ತನ್ನ ಕಾರಲ್ಲಿ ಸುತ್ತಾಡಿಸುತ್ತಿದ್ದಾನೆ ಎಂಬ ಅನುಮಾನದಿಂದ ಕೆಲ ಯುವಕರು ಕಾರನ್ನು ಹಿಂಬಾಲಿಸುತ್ತಿದ್ದರು ಎನ್ನಲಾಗಿದೆ. ಇಂದು ಸಂಜೆ ಆತ ಮಹಿಳೆಯನ್ನು ಸುಳ್ಯಕ್ಕೆ

ಕರಾವಳಿಯಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ| ಮಹಿಳೆಯನ್ನು ಕಾರಿನಲ್ಲಿ ಕರೆದೊಯ್ದ ಆರೋಪದಲ್ಲಿ ಅನ್ಯಕೋಮಿನ ಕಾರು ಚಾಲಕನ ಮೇಲೆ ಹಲ್ಲೆ Read More »

ಕಡಬದಲ್ಲಿ ಸೆರೆ ಹಿಡಿಯಲಾಗಿದ್ದ ಕಾಡಾನೆ ಕೊಡಗಿನ ಮತ್ತಿಗೋಡು ಶಿಬಿರದಲ್ಲಿ ಮೃತ್ಯು

ಸಮಗ್ರ ನ್ಯೂಸ್: ಕಡಬ ತಾಲೂಕಿನ ರೆಂಜಿಲಾಡಿಯಲ್ಲಿ ಇಬ್ಬರನ್ನು ಬಲಿ ಪಡೆದ ಆನೆಯನ್ನು ಕಡಬ ತಾಲೂಕಿನ ಕೊಂಬಾರು ಸಮೀಪ ಸೆರೆ ಹಿಡಿದಿದ್ದ ಕಾಡಾನೆಯೊಂದು ಕೊಡಗಿನ ಮತ್ತಿಗೋಡು ಆನೆ ಶಿಬಿರದಲ್ಲಿ ಮೃತಪಟ್ಟಿದೆ ಎಂದು ಆ. 11ರಂದು ವರದಿಯಾಗಿದೆ. ಕಡಬದಲ್ಲಿ ಸೆರೆ ಹಿಡಿಯಲಾಗಿದ್ದ ಕಾಡಾನೆಯನ್ನು ಕೊಡಗಿನ ಮತ್ತಿಗೋಡು ಆನೆ ಶಿಬಿರಕ್ಕೆ ಸೇರಿಸಲಾಗಿತ್ತು. ಆದರೆ ಆ.11ರಂದು ಈ ಆನೆ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಅದರ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು. ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಮೀನಾಡಿ ಸಮೀಪದ ನೈಲದಲ್ಲಿ ಫೆಬ್ರವರಿ

ಕಡಬದಲ್ಲಿ ಸೆರೆ ಹಿಡಿಯಲಾಗಿದ್ದ ಕಾಡಾನೆ ಕೊಡಗಿನ ಮತ್ತಿಗೋಡು ಶಿಬಿರದಲ್ಲಿ ಮೃತ್ಯು Read More »

ಸೌಜನ್ಯ ಕುಟುಂಬ ಹಾಗೂ ಮಹೇಶ್ ಶೆಟ್ಟಿ ಮನೆಗೆ ಭೇಟಿ ನೀಡಿದ ಪ್ರಮೋದ್ ಮುತಾಲಿಕ್| ಹೋರಾಟ ಇನ್ನಷ್ಟು ಪ್ರಬಲ ಸಾಧ್ಯತೆ

ಸಮಗ್ರ ನ್ಯೂಸ್: ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ನ್ಯಾಯ ಸಿಗಬೇಕೆಂದು ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಈ ಬೆನ್ನಲ್ಲೇ ಇಂದು (ಆ.12) ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಧರ್ಮಸ್ಥಳ ಸಮೀಪ ಪಾಂಗಾಳದ ಸೌಜನ್ಯ ಮನೆ ಹಾಗೂ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಭೇಟಿ ನೀಡಿದ್ದಾರೆ. ಸೌಜನ್ಯ ಪ್ರಕರಣದ ಈವರೆಗಿನ ಹೋರಾಟದ ಬಗ್ಗೆ ಜೊತೆಗೆ , ಮುಂದೆ ಯಾವ ರೀತಿಯಾಗಿ ಹೋರಾಟ ನಡೆಯಲಿದೆ ಎಂಬ ಕುರಿತು ಮಾಹಿತಿ ಪಡೆದಿದ್ದಲ್ಲದೆ ಈ ನ್ಯಾಯದ ಹೋರಾಟಕ್ಕೆ

ಸೌಜನ್ಯ ಕುಟುಂಬ ಹಾಗೂ ಮಹೇಶ್ ಶೆಟ್ಟಿ ಮನೆಗೆ ಭೇಟಿ ನೀಡಿದ ಪ್ರಮೋದ್ ಮುತಾಲಿಕ್| ಹೋರಾಟ ಇನ್ನಷ್ಟು ಪ್ರಬಲ ಸಾಧ್ಯತೆ Read More »

ಮಾಜಿ ಸಿಎಂ ಡಿವಿಎಸ್, ಸಂಸದ ನಳಿನ್ ಬ್ಯಾನರ್ ಗೆ ಚಪ್ಪಲಿ ಹಾರ ಹಾಕಿದ ಪ್ರಕರಣ| ದೌರ್ಜನ್ಯದ ಹಿಂದಿನ ರೂವಾರಿಗಳ ಹೆಸರನ್ನು ಇನ್ನೂ ಬಹಿರಂಗಗೊಳಿಸದ ಅಶೋಕ್ ರೈ

ಸಮಗ್ರ ನ್ಯೂಸ್: ಕಳೆದ ಬಾರಿಯ ಚುನಾವಣೆಯಲ್ಲಿ ಪುತ್ತೂರಿನಲ್ಲಿ ಬಿಜೆಪಿ ಸೋಲಿಗೆ ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ರಾಜಕಾರಣವೇ ಕಾರಣವೆಂದು ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಿಎಂ ಡಿ.ವಿ ಸದಾನಂದ ಗೌಡರ ಮೇಲೆ ಆರೋಪಿಸಿ ಅವರ ಬ್ಯಾನರ್ ಗೆ ಚಪ್ಪಲಿ ಹಾರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಯುವಕರ ಮೇಲೆ ಪೊಲೀಸರಿಂದ ದೌರ್ಜನ್ಯ ನಡೆಸಲಾಗಿತ್ತು. ಸದ್ಯ ಪ್ರಕರಣ ನ್ಯಾಯಾಲಯದಲ್ಲಿ ಇದ್ದರೂ ಇದರ ಹಿಂದಿನ ಕಾಣದ ಕೈಗಳ ಹೆಸರು ವಾರದೊಳಗೆ ಬಹಿರಂಗ ಪಡಿಸುತ್ತೇನೆ ಎಂದಿರುವ ಶಾಸಕ ಅಶೋಕ್ ರೈ ಸೈಲೆಂಟ್

ಮಾಜಿ ಸಿಎಂ ಡಿವಿಎಸ್, ಸಂಸದ ನಳಿನ್ ಬ್ಯಾನರ್ ಗೆ ಚಪ್ಪಲಿ ಹಾರ ಹಾಕಿದ ಪ್ರಕರಣ| ದೌರ್ಜನ್ಯದ ಹಿಂದಿನ ರೂವಾರಿಗಳ ಹೆಸರನ್ನು ಇನ್ನೂ ಬಹಿರಂಗಗೊಳಿಸದ ಅಶೋಕ್ ರೈ Read More »

ಸೌಜನ್ಯ ಪ್ರಕರಣ ಮರುತನಿಖೆಗೆ ಆಗ್ರಹಿಸುವೆ – ಅಶೋಕ್ ಕುಮಾರ್ ರೈ

ಸಮಗ್ರ ನ್ಯೂಸ್: ಧರ್ಮಸ್ಥಳದ ಸೌಜನ್ಯಾ ಕೊಲೆ ಪ್ರಕರಣದ ಬಗ್ಗೆ ಜನರಿಗೆ ಸಂಶಯ ಮತ್ತು ಗೊಂದಲ ಇದೆ. ಈ ಕಾರಣದಿಂದ ಪ್ರಕರಣದ ಮರು ತನಿಖೆಯಾಗಬೇಕಿದ್ದು, ಈ ನಿಟ್ಟಿನಲ್ಲಿ ಪ್ರಕರಣದ ಮರು ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ಅಶೋಕ್‌ಕುಮಾರ್‌ ರೈ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ನೈಜ ಆರೋಪಿಗಳ ಬಂಧನ ಆಗಬೇಕು. ಆ ಮೂಲಕ ಸೌಜನ್ಯಾ ಕುಟುಂಬಕ್ಕೆ ನ್ಯಾಯ ಸಿಗಬೇಕಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸಬಾರದು. ನಿಷ್ಪಕ್ಷಪಾತ ತನಿಖೆ ನಡೆಸಿ

ಸೌಜನ್ಯ ಪ್ರಕರಣ ಮರುತನಿಖೆಗೆ ಆಗ್ರಹಿಸುವೆ – ಅಶೋಕ್ ಕುಮಾರ್ ರೈ Read More »

ಕಡಬ:ನೂತನ ತಹಶೀಲ್ದಾರ್ ಆಗಿ ಪ್ರಭಾಕರ್ ಖಜೂರೆ

ಸಮಗ್ರ ನ್ಯೂಸ್:ಕಡಬ ತಾಲೂಕು ಗ್ರೇಡ್ 1 ತಹಶೀಲ್ದಾರ್ ಆಗಿ ಉಳ್ಳಾಲ ತಹಶೀಲ್ದಾರ್ ಪ್ರಭಾಕರ್ ಖಜೂರೆ ಅವರನ್ನು ನೇಮಕ ಮಾಡಿ ಸರಕಾರ ಇಂದು ಆದೇಶ ಹೊರಡಿಸಿದೆ. ಕಡಬ ತಹಶೀಲ್ದಾರ್ ಆಗಿದ್ದ ರಮೇಶ್ ಬಾಬು ಅವರನ್ನು ಇತ್ತೀಚೆಗೆ ವರ್ಗಾವಣೆ ಮಾಡಲಾಗಿತ್ತು. ಬಳಿಕ ಸುಳ್ಯ ತಹಶೀಲ್ದಾರ್ ಮಂಜುನಾಥ್ ಪ್ರಭಾರ ತಹಶೀಲ್ದಾರ್ ಆಗಿದ್ದರು. ಇದೀಗ ನೂತನ ತಹಶೀಲ್ದಾರ್ ನೇಮಕ ಮಾಡಲಾಗಿದೆ.

ಕಡಬ:ನೂತನ ತಹಶೀಲ್ದಾರ್ ಆಗಿ ಪ್ರಭಾಕರ್ ಖಜೂರೆ Read More »

ಕಡಬ:ಎಂಡೋಪಾಲನಾ ಕೇಂದ್ರಕ್ಕೆ ಮಾನವಹಕ್ಕುಗಳ ಅಧ್ಯಕ್ಷ ಡಾ. ಯೋಗೇಶ್ ದುಬೆ ಭೇಟಿ.

ಸಮಗ್ರ ನ್ಯೂಸ್: ಕಡಬ ತಾಲೂಕು ಕೊಯಿಲ ಎಂಡೋಪಾಲನಾ ಕೇಂದ್ರಕ್ಕೆ ಮಾನವ ಹಕ್ಕುಗಳ ಅಧ್ಯಕ್ಷ ಡಾ.ಯೋಗೇಶ್ ದುಬೆ ಆ. 10ರಂದು ಭೇಟಿ ನೀಡಿ ಪರಿಶೀಲಿಸಿದರು. ದ.ಕ ಜಿಲ್ಲೆಯಲ್ಲಿರುವ ಎಂಡೋಪೀಡಿತರ ಬಗ್ಗೆ ಮತ್ತೆ ಅವರಿಗಿರುವ ಸೌಲಭ್ಯದ ಬಗ್ಗೆ ಪುತ್ತೂರು ತಾಲ್ಲೂಕಿನ ಅರೋಗ್ಯಧಿಕಾರಿ ಡಾ. ದೀಪಕ್ ರೈ. ಜಿಲ್ಲಾ ಮೆಡಿಕಲ್ ಆಫಿಸರ್ ಡಾ. ನವೀನ್ ಕುಲಾಲ್ ಮಾಹಿತಿ ನೀಡಿದರು. ಇತ್ತೀಚಿಗೆಷ್ಟೆ ಕೊಯಿಲದಲ್ಲಿದ್ದ ಹಳೆ ಕಟ್ಟಡ ದಿಂದ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಇರುವ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ಇಲ್ಲಿಯ ವೆವಸ್ಥೆ,

ಕಡಬ:ಎಂಡೋಪಾಲನಾ ಕೇಂದ್ರಕ್ಕೆ ಮಾನವಹಕ್ಕುಗಳ ಅಧ್ಯಕ್ಷ ಡಾ. ಯೋಗೇಶ್ ದುಬೆ ಭೇಟಿ. Read More »

ಪುತ್ತಿಲ ಪರಿವಾರದಲ್ಲಿ ಬಿರುಕು!? ರಾಜಕೀಯಕ್ಕಷ್ಟೇ ಸೀಮಿತವಾಯ್ತೇ ಹಿಂದುತ್ವ?

ಸಮಗ್ರ ನ್ಯೂಸ್: ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕರಾವಳಿಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಅರುಣ್ ಕುಮಾರ್ ಪುತ್ತಿಲ ಟೀಂ ನಲ್ಲಿ ಬಿರುಕು ಕಾಣಿಸಿಕೊಂಡಿಸಿರುವ ಲಕ್ಷಣಗಳು ಗೋಚರಿಸುತ್ತಿವೆ. ಹೌದು, ಕಳೆದ ಬಾರಿಯ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ‌ ಟಿಕೆಟ್ ಆಕಾಂಕ್ಷಿಯಾಗಿದ್ದ ಅರುಣ್ ಪುತ್ತಿಲ ಟಿಕೆಟ್ ಮಿಸ್ ಆದ ಬಳಿಕ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಪ್ರಬಲ‌ ಪೈಪೋಟಿ ನೀಡಿದ ಪುತ್ತಿಲ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪರನ್ನು ಮೂರನೇ ಸ್ಥಾನಕ್ಕೆ ತಳ್ಳುವಲ್ಲಿ ಯಶಸ್ವಿಯಾಗಿದ್ದರು. ಸ್ವಲ್ಪ ಅಂತರದಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿತ್ತು.

ಪುತ್ತಿಲ ಪರಿವಾರದಲ್ಲಿ ಬಿರುಕು!? ರಾಜಕೀಯಕ್ಕಷ್ಟೇ ಸೀಮಿತವಾಯ್ತೇ ಹಿಂದುತ್ವ? Read More »

ದುರ್ಬಲಗೊಂಡ ಮುಂಗಾರು| ಕರಾವಳಿಯಲ್ಲಿ ಕುಂಠಿತಗೊಂಡ ಮಳೆ| ವೈರಲ್ ಜ್ವರ ಜೋರು

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಸೇರಿದ ಕರ್ನಾಟಕ ಕರಾವಳಿ ಹಾಗೆಯೇ ಕೇರಳದ ಕನ್ನಡ ಕರಾವಳಿಯಾದ ಕಾಸರಗೋಡು ಜಿಲ್ಲೆ ಸೇರಿದಂತೆ ಕಡಲತೀರದಲ್ಲಿ ಬಿಸಿಲ ಝಳ ಗುರುವಾರವೂ ಜಾಸ್ತಿ ಕಂಡುಬಂದಿದ್ದು, ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ದಕ್ಷಿಣೋತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಹುತೇಕ ಮೋಡ ಕವಿದ ವಾತಾವರಣ ಇತ್ತು. ಕೆಲವೆಡೆ ಇಡೀ ದಿನ ಮಳೆ ಸುರಿಯಲಿಲ್ಲ. ಆಷಾಢ ಮಾಸದ ಬಿಸಿಲಿಗೆ ರೋಗರುಜಿನಗಳು ಜಾಸ್ತಿಯಾಗುತ್ತವೆ ಎಂಬ ಹೇಳಿಕೆಗೆ ಇಂಬು ನೀಡುವಂತೆ ವೈದ್ಯರ ಬಳಿ ಸಾಲುಗಟ್ಟಲೆ

ದುರ್ಬಲಗೊಂಡ ಮುಂಗಾರು| ಕರಾವಳಿಯಲ್ಲಿ ಕುಂಠಿತಗೊಂಡ ಮಳೆ| ವೈರಲ್ ಜ್ವರ ಜೋರು Read More »

ಕರಾವಳಿಯಲ್ಲಿ ಕಿಚ್ಚು ಹಬ್ಬಿಸಿದ ಸೌಜನ್ಯ ಪ್ರಕರಣ| ಇಂದಿನಿಂದ ಸಾಲು – ಸಾಲು ಪ್ರತಿಭಟನೆ

ಸಮಗ್ರ ನ್ಯೂಸ್: ಹನ್ನೊಂದು ವರ್ಷಗಳ ಹಿಂದೆ ಕಾಮುಕರ ಕೈಯಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾದ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಗೌಡ ಪ್ರಕರಣಕ್ಕೆ ಮರುಜೀವ ಬಂದಿದ್ದು, ನ್ಯಾಯಕ್ಕಾಗಿ ಮತ್ತೆ ಹೋರಾಟಗಳು ಉಗ್ರ ರೂಪ ಪಡೆದುಕೊಳ್ಳುತ್ತಿವೆ. ರಾಜ್ಯದಲ್ಲಿ ತೀವ್ರ ಸಂಚಲನ ಉಂಟು ಮಾಡುತ್ತಿರುವ ಈ ಪ್ರಕರಣ ಕರಾವಳಿಯಲ್ಲಿ ಕಿಚ್ಚು ಹಬ್ಬಿಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜ ಆರೋಪಿಗಳ ಬಗ್ಗೆ ಮರುತನಿಖೆ ನಡೆಸಿ ಸೌಜನ್ಯಳಿಗೆ ನ್ಯಾಯ ದೊರಕಿಸಿಕೊಡುವಂತೆ ಸೌಜನ್ಯ ಹೋರಾಟ ಸಮಿತಿ ಕರಾವಳಿಯ ವಿವಿಧೆಡೆ

ಕರಾವಳಿಯಲ್ಲಿ ಕಿಚ್ಚು ಹಬ್ಬಿಸಿದ ಸೌಜನ್ಯ ಪ್ರಕರಣ| ಇಂದಿನಿಂದ ಸಾಲು – ಸಾಲು ಪ್ರತಿಭಟನೆ Read More »