ಕರಾವಳಿ

ಸುಳ್ಯ: ಬೊಲೆರೋ ಮತ್ತು ನೆಕ್ಸಾನ್ ನಡುವೆ ಮುಖಾಮುಖಿ ಡಿಕ್ಕಿ

ಸಮಗ್ರ ನ್ಯೂಸ್: ಸುಳ್ಯದ ಹಳೆಗೇಟು ಪೆಟ್ರೋಲ್ ಬಂಕ್ ಮುಂಭಾಗ ಬೊಲೆರೋ ಮತ್ತು ನೆಕ್ಸಾನ್ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ಆ. 20ರಂದು ನಡೆದಿದೆ. ಡಿಕ್ಕಿಯಾದ ರಭಸಕ್ಕೆ ಎರಡು ಗಾಡಿಗಳು ಜಖಂಗೊಂಡಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಸುಳ್ಯ: ಬೊಲೆರೋ ಮತ್ತು ನೆಕ್ಸಾನ್ ನಡುವೆ ಮುಖಾಮುಖಿ ಡಿಕ್ಕಿ Read More »

ಕಡಲ ಕಿನಾರೆಯಲ್ಲಿ ಸಾಹಿತಿ ಭುವನೇಶ್ವರಿ ಹೆಗಡೆಯವರೊಂದಿಗೆ ಸಂವಾದ ಹಾಗೂ ಕವಿಗೋಷ್ಠಿ

ಸಮಗ್ರ ನ್ಯೂಸ್:”ಹಾಸ್ಯ ಮನಸ್ಸುಗಳನ್ನು ಬೆಸೆಯುವುದರೊಂದಿಗೆ, ನೋವುಗಳನ್ನು ಮರೆಸುವ ದಿವ್ಯೌಷಧಿಯೂ ಹೌದು. ನಾನು ಹುಟ್ಟಿ ಬೆಳೆದ ಪರಿಸರದಲ್ಲಿ ಎಲ್ಲೆಡೆಯೂ ನಾನು ಸಂತೋಷವನ್ನು ಮಾತ್ರ ಕಂಡೆ. ಇನ್ನೊಬ್ಬರಿಗೆ ಯಾವುದೇ ರೀತಿಯಲ್ಲೂ  ಯಾರೂ ನೋವುಂಟು ಮಾಡಿದ್ದನ್ನು ನಾನು ಕಂಡೇ ಇಲ್ಲ. ಹುಟ್ಟಿದೂರನ್ನು ಬಿಟ್ಟು ಮಂಗಳೂರಿಗೆ ಬಂದ ಮೇಲೆ ನನ್ನನ್ನು ಇಲ್ಲಿನವರು ಮುಕ್ತವಾಗಿ ಸ್ವೀಕರಿಸಿ, ತುಂಬು ಪ್ರೀತಿಯನ್ನು ಕೊಟ್ಟಿದ್ದಾರೆ. ಹಾಗಿರುವಾಗ ನಾನು ಹಾಸ್ಯ ಬರಹಗಳನ್ನಲ್ಲದೆ ಇನ್ನೇನನ್ನು ತಾನೇ ಬರೆಯಲಿ?” ಎಂದು ಪ್ರಖ್ಯಾತ ಹಾಸ್ಯ ಸಾಹಿತಿ  ಭುವನೇಶ್ವರಿ ಹೆಗಡೆಯವರು ಹೇಳಿದರು. ದಕ್ಷಿಣ ಕನ್ನಡ ಸಾಹಿತ್ಯ

ಕಡಲ ಕಿನಾರೆಯಲ್ಲಿ ಸಾಹಿತಿ ಭುವನೇಶ್ವರಿ ಹೆಗಡೆಯವರೊಂದಿಗೆ ಸಂವಾದ ಹಾಗೂ ಕವಿಗೋಷ್ಠಿ Read More »

ಕಡಬ ಗೃಹರಕ್ಷಕ ದಳದ ಘಟಕದ ಕಛೇರಿ ಕಟ್ಟಡಕ್ಕೆ ಗುದ್ದಲಿ ಪೂಜೆ…!!

ಸಮಗ್ರ ನ್ಯೂಸ್:ಕಡಬ ತಾಲೂಕಿನ ಗೃಹರಕ್ಷಕ ದಳ ಘಟಕ ಕಛೇರಿಗೆ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯ ಕ್ರಮ ಆ.20 ರಂದು ನಡೆಯಿತು. ಈ ಶಿಲಾನ್ಯಾಸ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಮತ್ತು ಗಣ್ಯರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಭೂಮಿ ಪೂಜೆಯ ವೈದಿಕ ವಿಧಿವಿಧಾನವನ್ನು ಪ್ರಸಾದ್ ಕೆದಿಲಾಯರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಮಾಂಡೆಂಟ್ ಮಾತನಾಡಿ, ಇನ್ನು ಆರು ತಿಂಗಳ ಒಳಗೆ ಕಟ್ಟಡ ನಿರ್ಮಾಣವಾಗಿ ಗೃಹರಕ್ಷಕರ ಉಪಯೋಗಕ್ಕೆ ದೊರಕುವಂತಾಗಿ ಎಂದು ಶುಭ ಹಾರೈಸಿದರು. ಇನ್ನು ಮುಂದೆ ಗೃಹರಕ್ಷಕರಿಗೆ

ಕಡಬ ಗೃಹರಕ್ಷಕ ದಳದ ಘಟಕದ ಕಛೇರಿ ಕಟ್ಟಡಕ್ಕೆ ಗುದ್ದಲಿ ಪೂಜೆ…!! Read More »

ನಾಗರಪಂಚಮಿಗೆ ಸಾರ್ವತ್ರಿಕ ರಜೆ ಘೋಷಿಸಿ| ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಜೈ ತುಳುನಾಡ್ ಸಂಘ

ಸಮಗ್ರ ನ್ಯೂಸ್: ತುಳುನಾಡಿನಲ್ಲಿ ವಿಶಿಷ್ಟವಾಗಿ ಆಚರಿಸಲಾಗುವ ನಾಗರ ಪಂಚಮಿಗೆ ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕೆಂದು ಜೈ ತುಳುನಾಡ್‌ ಸಂಘಟನೆ ವತಿಯಿಂದ ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ತುಳುನಾಡು “ದೈವಸೃಷ್ಟಿ ನಾಗದೃಷ್ಟಿ’ ಎಂಬ ಪ್ರತೀತಿ ಹೊಂದಿದೆ. ಇಲ್ಲಿ ದೈವಾರಾಧನೆಯಂತೆ ನಾಗರಾಧನೆಯೂ ತುಂಬಾ ಪ್ರಾಮುಖ್ಯ ಪಡೆದಿದೆ. ಕುಟುಂಬದ ಹಿರಿಯರು-ಕಿರಿಯರು ಸೇರಿ ಮೂಲಸ್ಥಳಕ್ಕೆ ಹೋಗಿ ನಾಗರಪಂಚಮಿ ಆಚರಿಸುವುದು ತುಳುನಾಡಿನ ವೈಶಿಷ್ಟ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ ಮತ್ತು ಶಾಲೆ-ಕಾಲೇಜು, ಕಚೇರಿಗಳಿಗೆ

ನಾಗರಪಂಚಮಿಗೆ ಸಾರ್ವತ್ರಿಕ ರಜೆ ಘೋಷಿಸಿ| ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಜೈ ತುಳುನಾಡ್ ಸಂಘ Read More »

ಸೌಜನ್ಯ ಪ್ರಕರಣದ ತನಿಖಾಧಿಕಾರಿ ಯೋಗೀಶ್ ನನ್ನು ಮೊದಲು ಗಲ್ಲಿಗೇರಿಸಬೇಕು – ತಿಮರೋಡಿ

ಸಮಗ್ರ ನ್ಯೂಸ್: ಪೇಟಧಾರಿಗಳು ಸಾಕಷ್ಟು ಅನ್ಯಾಯ ಅಕ್ರಮದ ಕೆಲಸ ಮಾಡಿದ್ದಾರೆ. ಇವರ ಮೇಲೆ ಇದುವರೆಗೂ ಪ್ರಕರಣ ದಾಖಲು ಮಾಡುವ ಕೆಲಸ ಮಾಡಿಲ್ಲ ಎಂದು ಸೌಜನ್ಯ ನ್ಯಾಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಕಿಡಿಕಾರಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದರು. 11 ವರ್ಷವಾದರೂ ಸೌಜನ್ಯ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥರು ಯಾರು ಅನ್ನೋದು ಗೊತ್ತಾಗಿಲ್ಲ. ಧರ್ಮಸ್ಥಳದ ದೇವಸ್ಥಾನದ ಪೇಟದಾರಿಗಳು ಲಕ್ಷಾಂತರ ಕೋಟಿ

ಸೌಜನ್ಯ ಪ್ರಕರಣದ ತನಿಖಾಧಿಕಾರಿ ಯೋಗೀಶ್ ನನ್ನು ಮೊದಲು ಗಲ್ಲಿಗೇರಿಸಬೇಕು – ತಿಮರೋಡಿ Read More »

ಪುತ್ತೂರು: ಬಾವಿಗೆ ಬಿದ್ದು ಕಾಡುಕೋಣ ಸಾವು

ಸಮಗ್ರ ನ್ಯೂಸ್: ನಾಡಿಗೆ ಬಂದಿದ್ದ‌ ಕಾಡುಕೋಣವೊಂದು ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಪುತ್ತೂರು ತಾಲ್ಲೂಕಿನ ನರಿಮೊಗರು ಗ್ರಾಮದ ಐಟಿಐ ಮೈದಾನದ ಬಳಿ‌ ನಡೆದಿದೆ. ನರಿಮೊಗರು ಐಟಿಐ ಸಮೀಪದ ನಿವಾಸಿ ಪ್ರಕಾಶ್ ಎಂಬುವರ ಜಾಗದಲ್ಲಿರುವ ಬಾವಿಯಲ್ಲಿ ಸುಮಾರು 5 ವರ್ಷದ ಕಾಡುಕೋಣದ ಕಳೇಬರ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಭೇಟಿ ನೀಡಿದ್ದು, ಕ್ರೇನ್ ಬಳಸಿ ಕಳೇಬರ ಮೇಲೆತ್ತಲಾಗಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪುತ್ತೂರು ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ,

ಪುತ್ತೂರು: ಬಾವಿಗೆ ಬಿದ್ದು ಕಾಡುಕೋಣ ಸಾವು Read More »

ನಾಗರ ಪಂಚಮಿಗೆ ರಜೆ ಘೋಷಿಸಿ| ಜಿಲ್ಲಾಧಿಕಾರಿಗೆ ಶಾಸಕ‌ ಸುನಿಲ್ ಮನವಿ

ಸಮಗ್ರ ನ್ಯೂಸ್: ನಾಗರ ಪಂಚಮಿ ಪ್ರಯುಕ್ತ ಆಗಸ್ಟ್ 21 ರಂದು ರಜೆ ಘೋಷಿಸುವಂತೆ ಕಾರ್ಕಳ ಬಿಜೆಪಿ ಶಾಸಕ ವಿ ಸುನೀಲ್ ಕುಮಾರ್ ಅವರು ಶನಿವಾರ ಉಡುಪಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ‘ನಾಗರ ಪಂಚಮಿಯು ದಕ್ಷಿಣ ಕನ್ನಡ ಮತ್ತು ಉಡುಪಿಯ ಅವಳಿ ಜಿಲ್ಲೆಗಳನ್ನು ಒಳಗೊಂಡಿರುವ ತುಳುನಾಡಿನಲ್ಲಿ ಹಿಂದೂಗಳು ಮತ್ತು ಜೈನರು ಆಚರಿಸುವ ನಾಗ ಪಂಚಮಿ ಪ್ರಮುಖ ಸಾಂಪ್ರದಾಯಿಕ ಹಬ್ಬವಾಗಿದ್ದು, ದೈವ ದೇವರುಗಳ ಆರಧಾನೆಯಲ್ಲಿ ನಾಗರಾಧನೆಯು ಪ್ರಮುಖವಾಗಿದೆ. ಹೀಗಾಗಿ ಉಭಯ ಜಿಲ್ಲೆಗಳಲ್ಲಿ ನಾಗರ ಪಂಚಮಿಯಂದು ರಜೆ ಘೋಷಿಸುವಂತೆ

ನಾಗರ ಪಂಚಮಿಗೆ ರಜೆ ಘೋಷಿಸಿ| ಜಿಲ್ಲಾಧಿಕಾರಿಗೆ ಶಾಸಕ‌ ಸುನಿಲ್ ಮನವಿ Read More »

ಸುಳ್ಯ: ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ‌ ಲೆಕ್ಕಾಧಿಕಾರಿ

ಸಮಗ್ರ ನ್ಯೂಸ್: ಹಕ್ಕು ಖುಲಾಸೆಗೆ ಸಂಬಂಧಿಸಿ ಹಣದ ಬೇಡಿಕೆ ಇಟ್ಟು ಲಂಚ ಸ್ವೀಕರಿಸುತ್ತಿದ್ದಾಗ ಅರಂತೋಡು ಗ್ರಾಮ ಆಡಳಿತಾಧಿಕಾರಿಯು ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ವರದಿಯಾಗಿದೆ. ಅರಂತೋಡಿನ ಅಡ್ತಲೆ ಹರಿಪ್ರಸಾದ್‌ ಅವರು ಹಕ್ಕು ಖುಲಾಸೆಗಾಗಿ ಅರ್ಜಿ ಸಲ್ಲಿಸಿದ್ದರು. ಈ ಕಡತ ವಿಲೇಗಾಗಿ ಅರಂತೋಡು ಗ್ರಾಮ ಲೆಕ್ಕಾಧಿಕಾರಿಯಾಗಿರುವ ಮಿಯಾಸಾಬ್ ಮುಲ್ಲಾ ೮ ಸಾವಿರದ ಬೇಡಿಕೆ ಇಟ್ಟರೆಂದೂ ತಿಳಿದಿದೆ. ಇಂದು ಹಣ ಸ್ವೀಕರಿಸುತ್ತಿದ್ದಾಗ ಅವರು ಲೋಕಾಯುಕ್ತ ದಾಳಿ ನಡೆದಿದ್ದು, ಸಿಕ್ಕಿ ಬಿದ್ದಿರುವುದಾಗಿ ತಿಳಿದುಬಂದಿದೆ.

ಸುಳ್ಯ: ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ‌ ಲೆಕ್ಕಾಧಿಕಾರಿ Read More »

ಹವಾಮಾನ ವರದಿ| ಕರಾವಳಿಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ| ಇನ್ನೆರಡು ದಿನ ಉತ್ತಮ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ಕರ್ನಾಟಕ ಕರಾವಳಿಯ ಹಲವೆಡೆ ಶುಕ್ರವಾರ (ಆಗಸ್ಟ್ 18) ಸಂಜೆಯ ಬಳಿಕ ಗುಡುಗು ಸಹಿತ ಮಳೆಯಾಗಿದ್ದು, ಮತ್ತೆ ಬಿರುಸಿನ ಮಳೆ ಸಾಧ್ಯತೆಯನ್ನು ಹವಾಮಾನ ಇಲಾಖೆ ನೀಡಿದೆ. ಶುಕ್ರವಾರ ಕೆಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣ ಇದ್ದು, ಮಳೆಯ ಮುನ್ಸೂಚನೆಯನ್ನೂ ನೀಡಿತ್ತು. ರಾಜ್ಯದ ಕರಾವಳಿ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಹಾಗೂ ಒಳನಾಡು ವ್ಯಾಪ್ತಿಯಲ್ಲಿ ಅಲ್ಲಲ್ಲಿ ಇಂದು ಶನಿವಾರ ಮತ್ತು ನಾಳೆ ಭಾನುವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಸಮುದ್ರದಲ್ಲೂ

ಹವಾಮಾನ ವರದಿ| ಕರಾವಳಿಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ| ಇನ್ನೆರಡು ದಿನ ಉತ್ತಮ ಮಳೆ ಮುನ್ಸೂಚನೆ Read More »

ಮಂಗಳೂರು: ಈರುಳ್ಳಿ ದರದಲ್ಲಿ ದಿಢೀರ್ ಏರಿಕೆ| ಗ್ರಾಹಕರ ಕಣ್ಣಲ್ಲಿ ಕಣ್ಣೀರು

ಸಮಗ್ರ ನ್ಯೂಸ್: ಟೊಮೆಟೊ ದರ ಕ್ರಮೇಣ ಇಳಿಮುಖವಾಗುತ್ತಿದ್ದಂತೆ ಇದೀಗ ಈರುಳ್ಳಿ ದರ ಗಗನಮುಖಿಯಾಗತೊಡಗಿದೆ. ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈರುಳ್ಳಿ ಬೆಲೆ ಗಣನೀಯವಾಗಿ ಹೆಚ್ಚಳವಾಗಿದೆ. ದೇಶದಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಮಹಾರಾಷ್ಟ್ರದಿಂದ ಪೂರೈಕೆ ಕಳೆದ ಎರಡು ವಾರಗಳಿಂದ ಕಡಿಮೆಯಾಗಿದೆ. ಹೀಗಾಗಿ ಈರುಳ್ಳಿ ಬೆಲೆ ಏರುಗತಿಯಲ್ಲಿ ಸಾಗಿದೆ ಎಂದು ಮೂಲಗಳು ತಿಳಿಸಿವೆ. ಮಂಗಳೂರಿನಲ್ಲಿ ಕಳೆದ ಎರಡು ವಾರಗಳಿಂದ ಈರುಳ್ಳಿ ಬೆಲೆ ನಿರಂತರವಾಗಿ ಏರಿಕೆಯಾಗಿದೆ. ಕಳೆದ ವಾರ ಕ್ವಿಂಟಲ್‌ಗೆ 2000 ರೂ.ಗೆ ತಲುಪಿತ್ತು. ಇದೀಗ 2900

ಮಂಗಳೂರು: ಈರುಳ್ಳಿ ದರದಲ್ಲಿ ದಿಢೀರ್ ಏರಿಕೆ| ಗ್ರಾಹಕರ ಕಣ್ಣಲ್ಲಿ ಕಣ್ಣೀರು Read More »