ಕರಾವಳಿ

ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಹೊಸ್ತಾರೋಗಣೆ

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಹೊಸ್ತಾರೋಗಣೆ ಮತ್ತು ಕದಿರು ಕಟ್ಟುವ ಕಾರ್ಯ ಶುಕ್ರವಾರ ಶ್ರದ್ಧಾ ಭಕ್ತಿಯಿಂದ ನಡೆಯಿತು.ದೇವಳದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ಸುಬ್ರಹ್ಮಣ್ಯ ದೇವರ ಮೂಲ ವಿಗ್ರಹಕ್ಕೆ ಪಂಚಾಮೃತಾಭಿಷೇಕ ನೆರವೇರಿಸಿದರು. ಅಭಿಷೇಕದ ಬಳಿಕ ತೆನೆ ತರಲು ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯರು ದರ್ಪಣತೀರ್ಥ ನದಿ ತೀರಕ್ಕೆ ತೆರಳಿದರು. ನದಿ ತಟದಲ್ಲಿ ಭತ್ತದ ತೆನೆಗೆ ಅರ್ಚಕರು ಪೂಜೆ ನೆರವೇರಿಸಿದರು. ಬತ್ತದ ತೆನೆಯನ್ನು ದೀವಟಿಗೆ, ಬ್ಯಾಂಡ್, ವಾದ್ಯದ ನಿನಾದದೊಂದಿಗೆ, ಆನೆ, ಬಿರುದಾವಳಿಗಳ ಮೂಲಕ ಮಂತ್ರಘೋಷದೊಂದಿಗೆ ಮೆರವಣಿಗೆಯಲ್ಲಿ ದೇವಳಕ್ಕೆ

ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಹೊಸ್ತಾರೋಗಣೆ Read More »

ಅಕ್ಕಿ ಕಾಳಿನಲ್ಲಿ ನಾಡಗೀತೆ ಬರೆದು ರೆಕಾರ್ಡ್ ನಿರ್ಮಿಸಿದ ಕುಕ್ಕೆ ಸುಬ್ರಹ್ಮಣ್ಯದ ಕಲಾವಿದ

ಸಮಗ್ರ ನ್ಯೂಸ್: ಅಕ್ಕಿ ಕಾಳಿನಲ್ಲಿ ನಾಡಗೀತೆ ಬರೆಯುವ ಮೂಲಕ ಕುಕ್ಕೆ ಸುಬ್ರಹ್ಮಣ್ಯದ ಕಲಾವಿದ ಮೈಕ್ರೊ ಪರಮೇಶ್ ಇಂಡಿಯಾ ಬುಕ್ ಆಪ್ ರೆಕಾರ್ಡ್‌ ಸೇರಿದ್ದಾರೆ. ನಾಡಗೀತೆ ಬರೆಯಲು 136 ಅಕ್ಕಿ ಕಾಳು ಹಾಗೂ 2 ಗಂಟೆ ಸಮಯ ತೆಗೆದುಕೊಂಡಿದ್ದಾರೆ. ಕಡಿಮೆ ಅವಧಿಯಲ್ಲಿ, ಕಡಿಮೆ ಅಕ್ಕಿ ಕಾಳುಗಳನ್ನು ಬಳಸಿಕೊಂಡು ಈ ದಾಖಲೆ ಮಾಡಿರುವುದು ಅವರ ಸಾಧನೆಯಾಗಿದೆ. ಇಂಡಿಯಾ ಬುಕ್ ಆಪ್ ರೆಕಾರ್ಡ್‌ ಸಂಸ್ಥೆಯುವರು ಇತ್ತೀಚೆಗೆ ಕುಕ್ಕೆಗೆ ಬಂದು ಪರಮೇಶ ಅವರ ಸಾಧನೆಯನ್ನು ವೀಡಿಯೊ ದಾಖಲೆ ಮಾಡಿಕೊಂಡು ಹೋಗಿದ್ದರು. ಗುರುವಾರ ಸಂಸ್ಥೆಯು

ಅಕ್ಕಿ ಕಾಳಿನಲ್ಲಿ ನಾಡಗೀತೆ ಬರೆದು ರೆಕಾರ್ಡ್ ನಿರ್ಮಿಸಿದ ಕುಕ್ಕೆ ಸುಬ್ರಹ್ಮಣ್ಯದ ಕಲಾವಿದ Read More »

ಕಾಣಿಯೂರು: ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಮೋನಿಷ್ ತಂಟೆಪ್ಪಾಡಿ ನಾಲ್ಕನೇ ಸ್ಥಾನ

ಸಮಗ್ರ ನ್ಯೂಸ್: ಚಿತ್ರದುರ್ಗದಲ್ಲಿ ನಡೆದ ರಾಜ್ಯ ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ-ಬಾಲಕಿಯರ ಬೆಂಗಳೂರು ವಿಭಾಗ ಮಟ್ಟದ ಯೋಗಸನ ಸ್ಪರ್ಧೆಯಲ್ಲಿ ಮೋನಿಷ್ ತಂಟೆಪ್ಪಾಡಿ ನಾಲ್ಕನೇ ಸ್ಥಾನ. ಇವರು ಕಾಣಿಯೂರು ಪ್ರಗತಿ ವಿದ್ಯದಸಂಸ್ಥೆಯ ಆರನೇ ತರಗತಿ ವಿದ್ಯಾರ್ಥಿ. ಹಾಗೂ ಯೋಗ ಶಿಕ್ಷಕಿ ಶಶಿಕಲಾ ಅವರ ವಿದ್ಯಾರ್ಥಿ.

ಕಾಣಿಯೂರು: ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಮೋನಿಷ್ ತಂಟೆಪ್ಪಾಡಿ ನಾಲ್ಕನೇ ಸ್ಥಾನ Read More »

ಸುಳ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಾಟರ್ ಬೆಡ್, ವೀಲ್ ಚೇರ್ ಹಸ್ತಾಂತರ

ಸಮಗ್ರ ನ್ಯೂಸ್:ಸುಳ್ಯ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿ ನೀಡಲಾದ ವಾಟರ್ ಬೆಡ್ ಮತ್ತು ವೀಲ್ ಚೇರ್ ಅನ್ನು ವಲಯ ಮೇಲ್ವಿಚಾರಕ ಗೋಪಾಲಕೃಷ್ಣ ಅವರು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಸುಳ್ಯ ತಾಲೂಕಿನ ಐವರ್ನಾಡು ಒಕ್ಕೂಟದ ಕೋಡ್ತಿಲು ಸ್ವರ್ಣಗೌರಿ ಸಂಘದ ಸದಸ್ಯ ಮಲ್ಲು ರವರ ತಾಯಿ ಚೋಮು ಅವರಿಗೆ ಹಾಗೂ ಐವರ್ನಾಡು ಗ್ರಾಮದ ಪಾಲೇಪ್ಪಾಡಿ ಒಕ್ಕೂಟದ ಅಧ್ಯಕ್ಷ ರಾಮಚಂದ್ರರವರ ತಾಯಿ ಸೀತಮ್ಮ ಅವರಿಗೆ ವಾಟರ್ ಬೆಡ್ ಮತ್ತು ಶ್ರೀ ಲಕ್ಷ್ಮೀ ಸ್ವ ಸಹಾಯ ಸಂಘದ ಸದಸ್ಯೆ

ಸುಳ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಾಟರ್ ಬೆಡ್, ವೀಲ್ ಚೇರ್ ಹಸ್ತಾಂತರ Read More »

ಸುಳ್ಯ: ಗಣಪತಿ ಕಲಾ ಕೇಂದ್ರದವರಿಂದ ನವರಾತ್ರಿ ಪ್ರಯುಕ್ತ ಭಜನಾ ಕಾರ್ಯಕ್ರಮ

ಸಮಗ್ರ ನ್ಯೂಸ್: ಶ್ರೀ ಕ್ಷೇತ್ರ ವ್ಯಾಘ್ರಚಾಮುಂಡಿ ದೇವಸ್ಥಾನ ಕಾಯರ್ತೋಡಿಯಲ್ಲಿ ನವರಾತ್ರಿ ಉತ್ಸವದ 5ನೇ ದಿನದಂದು ಶ್ರೀ ಗಣಪತಿ ಕಲಾ ಕೇಂದ್ರ ಸುಳ್ಯ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಹಾರ್ಮೋನಿಯಂನಲ್ಲಿ ಶಿವಾನಂದ ಉಪ್ಪಲ, ತಬಲದಲ್ಲಿ ವಿನೋದ್ ಅರಂಬೂರು, ಕೊಳಲು ವಾದನದಲ್ಲಿ ಜಯರಾಂ ಶಾಂತಿನಗರ ಸಹಕರಿಸಿದರು. ಗಾಯಕರಾಗಿ ಯೋಗೀಶ್ ಎಸ್. ಜಯನಗರ, ಲಕ್ಷ್ಮೀನಾರಾಯಣ, ಚಂದ್ರಶೇಖರ ಮೇನಾಲ, ವಸುಚರಣ್ ಶಾಂತಿನಗರ,ವಿಜೇಶ್ ಬೊಳುಬೈಲು, ಕೀರ್ತನ ಜಯನಗರ, ವಿದ್ಯಾ ಅರಂಬೂರು ಭಾಗವಹಿಸಿದ್ದರು.

ಸುಳ್ಯ: ಗಣಪತಿ ಕಲಾ ಕೇಂದ್ರದವರಿಂದ ನವರಾತ್ರಿ ಪ್ರಯುಕ್ತ ಭಜನಾ ಕಾರ್ಯಕ್ರಮ Read More »

ವಿಟ್ಲದ ಕೊಟ್ಟಾರಿಕಟ್ಟೆ ಬಸ್ ನಿಲ್ದಾಣದಲ್ಲಿ ದನದ ಕಿವಿ!! ಗೋಮಾತೆಯ ಮೇಲೆ ವಿಕೃತಿ ಮೆರೆದವರಿಗೆ ಶೋಧ

ಸಮಗ್ರ ನ್ಯೂಸ್: ದುಷ್ಕರ್ಮಿಗಳು ದನದ ಕಿವಿ ಕತ್ತರಿಸಿ ಬಿಸಾಕಿದ ಘಟನೆ‌ ವಿಟ್ಲದ ಕೆಲಿಂಜ ಕೊಟ್ಟಾರಿ ಕಟ್ಟೆ ಬಸ್ಸು ನಿಲ್ದಾಣದ ಬಳಿ ಅ. 20 ರಂದು ಬೆಳಕಿಗೆ ಬಂದಿದೆ. ವೀರಕಂಭ ಗ್ರಾಮದ ಕೊಟ್ಟಾರಿ ಕಟ್ಟೆ ಬಸ್ ನಿಲ್ದಾಣದ ಬಳಿ ಅ. 20ರಂದು ಮುಂಜಾನೆ ಕತ್ತರಿಸಿದ ದನದ ಕಿವಿ ಮತ್ತು ಚರ್ಮ ಪತ್ತೆಯಾಗಿದೆ. ಸ್ಥಳೀಯರು ವಿಟ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಸೇರಿದ್ದು, ಈ ಕೃತ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಡಹಬ್ಬ ದಸರಾ ಮತ್ತು

ವಿಟ್ಲದ ಕೊಟ್ಟಾರಿಕಟ್ಟೆ ಬಸ್ ನಿಲ್ದಾಣದಲ್ಲಿ ದನದ ಕಿವಿ!! ಗೋಮಾತೆಯ ಮೇಲೆ ವಿಕೃತಿ ಮೆರೆದವರಿಗೆ ಶೋಧ Read More »

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಅಧ್ಯಯನ ಭೇಟಿ.

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಾಣಿಜ್ಯಹಾಗೂ ಉದ್ಯಮಾಡಳಿತ ವಿಭಾಗದ ವಿದ್ಯಾರ್ಥಿಗಳಿಂದ ಅಧ್ಯಯನ ಭೇಟಿ. ಕುಕ್ಕೇ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಾಣಿಜ್ಯ ಹಾಗೂ ಉದ್ಯಮಾಡಳಿತ ವಿಭಾಗದಿಂದ ಅ.16ರಂದು ಜಿ.ಕೆ.ಬಯೋ ಪ್ಲೇಟ್ಸ್ ಕೆಂಜಾಲ ಕೈಗಾರಿಕಾ ಸಂಸ್ಥೆಗೆ ಅಧ್ಯಯನ ಭೇಟಿ ನೀಡಲಾಯಿತು. ಜಿ.ಕೆ. ಬಯೋಪ್ಲೇಟ್ಸ್ ಮಾಲೀಕರಾದ ಗೊಪಾಲಕೃಷ್ಣ ಭಟ್ ಹಾಗೂ ವಿದ್ಯಾಭಟ್ ವಿಧ್ಯಾರ್ಥಿ ಗಳಿಗೆ ಉತ್ಪಾದನ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದರು. ವಾಣಿಜ್ಯ ಹಾಗೂ ಉದ್ಯಮಾಡಳಿತ ಉಪನ್ಯಾಸಕರದ ಶ್ರೀಮತಿ ಪುಷ್ಪ ಡಿ ಹಾಗೂ ಶ್ರೀಮತಿ ಪ್ರಮಿಳಾ ಅಧ್ಯಯನ ಭೇಟಿಯನ್ನು

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಅಧ್ಯಯನ ಭೇಟಿ. Read More »

ಉಜಿರೆ: ಹುಟ್ಟುಹಬ್ಬದಂದೇ ದಿ. ಸೌಜನ್ಯಳ ಮೂರ್ತಿ ಪ್ರತಿಷ್ಟಾಪನೆ| ದೇವಿಯಾಗಿ ಆವೀರ್ಭವಿಸಲಿ ಎಂದು ಪ್ರಾರ್ಥನೆ|

ಸಮಗ್ರ ನ್ಯೂಸ್: 2012ರಲ್ಲಿ ಅತ್ಯಾಚಾರಿಗಳ ಅಟ್ಟಹಾಸಕ್ಕೆ ಬಲಿಯಾದ ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಸೌಜನ್ಯಳ 28ನೇ ವರ್ಷದ ಹುಟ್ಟುಹಬ್ಬದಂದು ಮೂರ್ತಿ ಪ್ರತಿಷ್ಠಾಪನೆಗೊಂಡಿದೆ. ಸೌಜನ್ಯ ಜೀವಂತವಾಗಿದ್ದರೆ ಆಕೆ ತನ್ನ 28ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಳು. ಹುಟ್ಟುಹಬ್ಬದ ಪ್ರಯುಕ್ತ ಮೈಸೂರಿನಲ್ಲಿ ನಿರ್ಮಿಸಿದ ಅಂದಾಜು ಒಂದುವರೆ ಅಡಿ ಎತ್ತರದ ಕೂತಿರುವ ಶೈಲಿಯ ಕಲ್ಲಿನ ಪ್ರತಿಮೆ ಪ್ರತಿಷ್ಠಾಪನೆಗೊಳಿಸಿ ನವರಾತ್ರಿ ಪ್ರಯುಕ್ತ 9 ತಂಡದ ಭಜನೋತ್ಸವ ನಡೆಯಿತು. ಬುಧವಾರ ಸೌಜನ್ಯ ನಿವಾಸದಲ್ಲಿ ಆಕೆಯ ಸಮಾಧಿ ಬಳಿ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಆ ಸಂದರ್ಭ ಹಲವು

ಉಜಿರೆ: ಹುಟ್ಟುಹಬ್ಬದಂದೇ ದಿ. ಸೌಜನ್ಯಳ ಮೂರ್ತಿ ಪ್ರತಿಷ್ಟಾಪನೆ| ದೇವಿಯಾಗಿ ಆವೀರ್ಭವಿಸಲಿ ಎಂದು ಪ್ರಾರ್ಥನೆ| Read More »

ಮಂಗಳೂರು: ನಡೆದುಕೊಂಡು ಹೋಗುತ್ತಿದ್ದ ಐವರ ಮೇಲೆ ಹರಿದ ಕಾರು|ಓರ್ವ ಮೃತ್ಯು, ನಾಲ್ವರು ಗಂಭೀರ

ಸಮಗ್ರ ನ್ಯೂಸ್: ಮಂಗಳೂರಿನ ಲೇಡಿ ಹಿಲ್‌ ಬಳಿ ಫುಟ್ ಪಾತ್‌ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಐವರು ಯುವತಿಯರ ಗುಂಪಿನ ಮೇಲೆ ವಾಹನ ಹರಿಸಿ ಒರ್ವ ಮಹಿಳೆ ಸಾವನ್ನಪ್ಪಿದ್ದು ಒರ್ವ ಬಾಲಕಿ ಸಹಿತ ನಾಲ್ವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಅಪಘಾತದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರೂಪಶ್ರೀ(23) ಎಂಬ ಯುವತಿ ಸಾವನ್ನಪ್ಪಿದ್ದಾರೆ. ಸುರತ್ಕಲ್ ನ ಕಾನ, ಬಾಳದ ಗಂಗಾಧರ್ ಅವರ ಪುತ್ರಿಯಾದ ರೂಪಶ್ರೀ ಕುದ್ರೋಳಿ ದೇವಸ್ಥಾನಕ್ಕೆ ತೆರಳಿ ವಾಪಸಾಗುತ್ತಿದ್ದರೆಂದು ತಿಳಿದುಬಂದಿದೆ. ಸಂಜೆ 4 ಗಂಟೆ ಸುಮಾರಿಗೆ ಅಪಘಾತ ನಡೆದಿದೆ.

ಮಂಗಳೂರು: ನಡೆದುಕೊಂಡು ಹೋಗುತ್ತಿದ್ದ ಐವರ ಮೇಲೆ ಹರಿದ ಕಾರು|ಓರ್ವ ಮೃತ್ಯು, ನಾಲ್ವರು ಗಂಭೀರ Read More »

ಬೆಳ್ತಂಗಡಿ:ಪಿಕಪ್ ಡಿಕ್ಕಿ | ಬಾಲಕ ಸಾವು

ಸಮಗ್ರ ನ್ಯೂಸ್:ರಸ್ತೆ ದಾಟುತ್ತಿರುವ ವೇಳೆ ಪಿಕಪ್‌ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಬಾಲಕ ಸಾವನ್ನಪ್ಪಿದ ಘಟನೆ ಅ. 18ರಂದು ಬೆಳ್ತಂಗಡಿಯ ಲಾಯಿಲದಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ಅರ್ತಿಲಾ ಮನೆಯ ಮಹಮ್ಮದ್ ರಫೀಕ್ ಅವರ ಮಗ ಮಹಮ್ಮದ್ ರಂಝಿನ್(10) ಶಾಲಾ ರಜೆಯ ಹಿನ್ನಲೆ ಸಂಬಂಧಿಕರ ಮನೆಗೆ ಬಂದಿದ್ದು, ಅ. 18ರಂದು 11:50ರ ಸುಮಾರಿಗೆ ಅಂಗಡಿಗೆ ಹೋಗಿ ವಾಪಾಸ್‌ ರಸ್ತೆ ದಾಟುವಾಗ ಲಾಯಿಲ ಜಂಕ್ಷನ್‌ ಬಳಿ ಉಜಿರೆಯಿಂದ ಬೆಳ್ತಂಗಡಿ ಕಡೆಗೆ ಬಂದ ಪಿಕಪ್ ವಾಹನ

ಬೆಳ್ತಂಗಡಿ:ಪಿಕಪ್ ಡಿಕ್ಕಿ | ಬಾಲಕ ಸಾವು Read More »