ತುಳುವಿಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡಿ, ಇಲ್ಲದಿದ್ದರೆ ಪ್ರತ್ಯೇಕ ತುಳುನಾಡು ರಾಜ್ಯಕ್ಕೆ ಹೋರಾಟಕ್ಕೆ ರೆಡಿಯಾಗಿ| ರಾಜ್ಯೋತ್ಸವದಂದೇ ಮತ್ತೆ ಕೇಳಿಬಂದ ಒಕ್ಕೊರಲ ಕೂಗು!!
ಸಮಗ್ರ ನ್ಯೂಸ್: ರಾಜ್ಯದಲ್ಲಿ ಕನ್ನಡದಂತೆ ತುಳುವಿಗೂ ಅಧಿಕೃತ ಭಾಷೆಯ ಸ್ಥಾನಮಾನ ನೀಡಬೇಕು, ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂಬ ಒತ್ತಾಯ ಕನ್ನಡ ರಾಜ್ಯೋತ್ಸವದ ದಿನವೇ ಕೇಳಿಬಂದಿದೆ. ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಅನೇಕರು #TuluOfficialInKA_KL ಹಾಗೂ #TuluTo8thSchedule ಹ್ಯಾಷ್ ಟ್ಯಾಗ್ ಬಳಸಿ ಈ ಬಗ್ಗೆ ಬುಧವಾರ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಕನ್ನಡ ಸತ್ಯ. ಆದರೆ, ನಮಗೆ ತುಳುವೇ ನಿತ್ಯ. ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು. ಈ ರಾಜ್ಯದಲ್ಲಿ ತುಳು ಭಾಷೆಗೂ ಕನ್ನಡದಂತೆ ಮಾನ್ಯತೆ, ಮರ್ಯಾದೆ ಸಿಗಲಿ. ತುಳುವರೂ ಇದು










