ಕರಾವಳಿ

ಕುಮಾರ್ ಪೆರ್ನಾಜೆ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರು ಸಂಸ್ಥೆಯ ಸಲಹಾ ಸಮಿತಿಗೆ ನೇಮಕ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯ ಪ್ರಾದೇಶಿಕ ಕಚೇರಿ ಉದ್ಘಾಟನೆ ಮತ್ತು ತೆಂಗು ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮ ನ.16ರಂದು ಮಂಗಳೂರಿನ ಮರೋಲಿ ಸೂರ್ಯನಾರಾಯಣ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಸಭಾ ಕಾರ್ಯಕ್ರಮವನ್ನು ಆದಿಚುಂಚನಗಿರಿ ಮಹಾ ಸಂಸ್ಥಾನದ ಶಾಖ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಕೃಷಿ ಸಂಶೋಧನಾ ಪ್ರಶಸ್ತಿ ಪುರಸ್ಕೃತರು, ಜಿಲ್ಲಾ ರಾಜ್ಯೋತ್ಸವ, ಹವ್ಯಕರತ್ನ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಜಿಲ್ಲಾ ಮಟ್ಟದ ಪ್ರಗತಿ

ಕುಮಾರ್ ಪೆರ್ನಾಜೆ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರು ಸಂಸ್ಥೆಯ ಸಲಹಾ ಸಮಿತಿಗೆ ನೇಮಕ Read More »

ಕುಕ್ಕೆ ಸುಬ್ರಹ್ಮಣ್ಯ: ಗರ್ಭಗುಡಿಯ ಫೋಟೋ ಜೊತೆ ಅರ್ಚಕರ‌ ಮೇಲೆ ನಿಂದನಾತ್ಮಕ ಬರಹ; ದೂರು ದಾಖಲು

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರ ಬಗ್ಗೆ ನಿಂದನಾತ್ಮಕ ಬರಹ ಹಾಗೂ ಗರ್ಭಗುಡಿಯ ಪೋಟೋ ತೆಗೆದ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ದ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ವರ್ಗದವರು ಹಾಗೂ ಒಳಾಂಗಣ ನೌಕರರು ದೂರು ನೀಡಿದ್ದು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಗರ್ಭಗುಡಿಯ ಫೋಟೋ ತೆಗೆಯುಲು ನಿಷೇಧವಿದ್ದರೂ ಕುಲ್ಕುಂದದ ವ್ಯಕ್ತಿಯೊಬ್ಬರು ಗರ್ಭ ಗುಡಿಯ ಪೋಟೋ ತೆಗೆದಿದ್ದಾರೆ. ಅಲ್ಲದೆ ಈ ಫೋಟೋವನ್ನು ಕುಕ್ಕೆ ಶ್ರೀ ದೇವಾಲಯ ಉಳಿಸಿ, ಶೈವಾಗಮ ಕ್ಷೇತ್ರ ಶ್ರೀ

ಕುಕ್ಕೆ ಸುಬ್ರಹ್ಮಣ್ಯ: ಗರ್ಭಗುಡಿಯ ಫೋಟೋ ಜೊತೆ ಅರ್ಚಕರ‌ ಮೇಲೆ ನಿಂದನಾತ್ಮಕ ಬರಹ; ದೂರು ದಾಖಲು Read More »

ಪುತ್ತೂರು ಡಿವೈಎಸ್ಪಿ ಡಾ. ಗಾನಾ ಪಿ. ಕುಮಾರ್ ವರ್ಗಾವಣೆ

ಸಮಗ್ರ ನ್ಯೂಸ್: ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಗಾನಾ ಪಿ.ಕುಮಾರ್ ಅವರನ್ನು ಲೋಕಾಯುಕ್ತಕ್ಕೆ ವರ್ಗಾವಣೆಗೊಳಿಸಿ ಸರಕಾರ ಆದೇಶಿಸಿದೆ. ರಾಜ್ಯ ಗುಪ್ತ ವಾರ್ತೆಗೆ ವರ್ಗಾವಣೆ ಆದೇಶದಲ್ಲಿರುವ ಅರುಣ್ ನಾಗೇಗೌಡ ಅವರನ್ನು ಪುತ್ತೂರು ಡಿವೈಎಸ್‌ಪಿಯಾಗಿ ವರ್ಗಾವಣೆಗೊಳಿಸಲಾಗಿದೆ. ಈ ಹಿಂದೆ ಎರಡು ವರ್ಷಗಳ ಕಾಲ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ಡಾ.ಗಾನಾ ಪಿ.ಕುಮಾರ್ ಅವರನ್ನು ಸರಕಾರ ಸಿಐಡಿಗೆ ವರ್ಗಾವಣೆಗೊಳಿಸಿತ್ತು. ಆ ಬಳಿಕ ಅವರ ವರ್ಗಾವಣೆ ರದ್ದುಗೊಳಿಸಿ ಎಸ್ಪಿ ಕಚೇರಿಯ ಡಿಸಿಆರ್‌ಬಿ ಡಿವೈಎಸ್ಪಿಯಾಗಿ ನಿಯೋಜಿಸಲಾಗಿತ್ತು. ಪುತ್ತೂರಿನಲ್ಲಿ ನಡೆದ ಬ್ಯಾನರ್ ಪ್ರಕರಣವೊಂದಕ್ಕೆ ಸಂಬಂಧಿಸಿ

ಪುತ್ತೂರು ಡಿವೈಎಸ್ಪಿ ಡಾ. ಗಾನಾ ಪಿ. ಕುಮಾರ್ ವರ್ಗಾವಣೆ Read More »

ಬೆಳ್ತಂಗಡಿ: ಗರ್ಭವತಿಯಾದ ಖಾಸಗಿ ಕಾಲೇಜು ವಿದ್ಯಾರ್ಥಿನಿ| ಪ್ರಭಾವಕ್ಕೆ ಒಳಗಾಗಿ ಪೋಕ್ಸೋ ದಾಖಲಿಸದ ಪೊಲೀಸರು – ಗಿರೀಶ್ ಮಟ್ಟಣ್ಣನವರ್

ಸಮಗ್ರ ನ್ಯೂಸ್: ‘ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ (ಪೊಕ್ಸೊ) ಜಿಲ್ಲೆಯ ಠಾಣೆಯೊಂದರಲ್ಲಿ ದಾಖಲಾದ ಪ್ರಕರಣದಲ್ಲಿ ಸಂತ್ರಸ್ತೆಯು ತನ್ನ ಮೊದಲ ಹೇಳಿಕೆ ನೀಡಿದಾಗ ಹೆಸರಿಸಿದ ಆರೋಪಿ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿಲ್ಲ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಈ ಪ್ರಕರಣದ ತನಿಖೆಯನ್ನು ದಾರಿತಪ್ಪಿಸಲಾಗುತ್ತಿದೆ’ ಎಂದು ಗಿರೀಶ್‌ ಮಟ್ಟಣ್ಣನವರ್‌ ಆರೋಪಿಸಿದರು. ‘ಬಾಲಕಿಯನ್ನು ಆರೋಗ್ಯ ತಪಾಸಣೆಗಾಗಿ ಇಲ್ಲಿನ ಲೇಡಿಗೋಷನ್‌ ಆಸ್ಪತ್ರೆಗೆ ಕರೆತಂದಾಗ ಆಕೆ ಮೇಲೆ ನಡೆದ ಲೈಂಗಿಕ ದೌರ್ಜನ್ಯದಿಂದ ಗರ್ಭಿಣಿಯಾಗಿರುವುದು ಗೊತ್ತಾಗಿದೆ. ಆಸ್ಪತ್ರೆಯ ವೈದ್ಯರು ನೀಡಿದ ಮಾಹಿತಿ ಆಧಾರದಲ್ಲಿ ಜಿಲ್ಲೆಯ ಮಹಿಳಾ

ಬೆಳ್ತಂಗಡಿ: ಗರ್ಭವತಿಯಾದ ಖಾಸಗಿ ಕಾಲೇಜು ವಿದ್ಯಾರ್ಥಿನಿ| ಪ್ರಭಾವಕ್ಕೆ ಒಳಗಾಗಿ ಪೋಕ್ಸೋ ದಾಖಲಿಸದ ಪೊಲೀಸರು – ಗಿರೀಶ್ ಮಟ್ಟಣ್ಣನವರ್ Read More »

ಸುಳ್ಯ: ಗ್ರಾಹಕರ ಜೊತೆಗೆ ಉದ್ದಟತನ ಮೆರೆದ ಮೆಸ್ಕಾ ಎಇ ಸುಪ್ರೀತ್ ಸಸ್ಪೆಂಡ್

ಸಮಗ್ರ ನ್ಯೂಸ್: ಗ್ರಾಹಕರ ಜೊತೆಗೆ ದೂರವಾಣಿಯಲ್ಲಿ ಅನುಚಿತವಾಗಿ ಮಾತನಾಡಿದ ಸುಳ್ಯ ಮೆಸ್ಕಾಂ ಎಇ ಸುಪ್ರೀತ್ ರನ್ನು ಸಸ್ಪೆಂಡ್ ಮಾಡಲಾಗಿದೆ. ವಿದ್ಯುತ್ ಸಪ್ಲೈ ಬಗ್ಗೆ ಗ್ರಾಹಕರೊಬ್ಬರು ಸಮಸ್ಯೆ ಹೇಳಿಕೊಂಡಿದ್ದು ಈ ವೇಳೆ ಗ್ರಾಹಕರ ಜೊತೆಗೆ ಸುಪ್ರೀತ್ ಅವಾಚ್ಯವಾಗಿ ನಿಂದಿಸಿ ಮಾತನಾಡಿದ್ದರು. ಈ ಆಡಿಯೋ ವೈರಲ್ ಆಗಿದ್ದು, ಸುಪ್ರೀತ್ ಕುಮಾರ್ ರವರ ಮೇಲೆ ಆಕ್ರೋಶ ವ್ಯಕ್ತವಾಗಿತ್ತು. ಅನುಚಿತ ಮಾತುಗಳ ಆಡಿಯೋ ವೈರಲ್ ಆಗಿರುವುದರಿಂದ ಮೆಸ್ಕಾಂನ ಘನತೆಗೆ ಕುಂದುಂಟಾಗಿರುವುದರಿಂದ ಸುಪ್ರೀತ್ ರನ್ನು ಅಮಾನತುಗೊಳಿಸಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.

ಸುಳ್ಯ: ಗ್ರಾಹಕರ ಜೊತೆಗೆ ಉದ್ದಟತನ ಮೆರೆದ ಮೆಸ್ಕಾ ಎಇ ಸುಪ್ರೀತ್ ಸಸ್ಪೆಂಡ್ Read More »

ಸುಳ್ಯದಲ್ಲಿ `ಶೋ’ ತೋರಿಸಿ ಗುಜುರಿ ಪಾಲಾಯಿತೇ ‘ಮತ್ಸ್ಯವಾಹಿನಿ’| ಏಕಾಏಕಿ ತ್ರಿಚಕ್ರ ವಾಹನಗಳನ್ನು ಹೊತ್ತೊಯ್ದದ್ದೆಲ್ಲಿಗೆ?

ಸಮಗ್ರ ನ್ಯೂಸ್: ಸ್ವ ಉದ್ಯೋಗಕ್ಕಾಗಿ ಕಳೆದ 8 ತಿಂಗಳ ಹಿಂದೆ ಸುಳ್ಯಕ್ಕೆ ಬಂದಿದ್ದ ಮೀನುಗಾರಿಕಾ ಇಲಾಖೆಯ ಮತ್ಸ್ಯವಾಹಿನಿ ರಿಕ್ಷಾವನ್ನು ಅನಾಮಿಕು ಹೊತ್ತೊಯ್ದಿದ್ದು, ಈ ಬಗ್ಗೆ ಹಲವು ಅನುಮಾನಗಳು ಮೂಡಿವೆ. ಈ ಸಮಾಜದಲ್ಲಿ ದುಡಿದು ತಿನ್ನುವರಿಗಿಂತ ಬಡಿದು ತಿನ್ನುವವರೇ ಹೆಚ್ಚು. ಆದರೆ ಸುಳ್ಯದಲ್ಲಿ ಜನತೆ ತಮ್ಮ ಪಾಲಿನ ರೊಟ್ಟಿಯನ್ನು ತಾವೇ ದುಡಿದು ತಿನ್ನುವವರೇ ಹೆಚ್ಚಾಗಿ ಇರುವುದು. ಅಂತಃ ಮನಸ್ಥಿತಿ ಇರುವ ಜನರಿಗೆ ಬಡಿದು ತಿನ್ನುವ ಅಯೋಗ್ಯರು ಅನ್ಯಾಯ ಮಾಡಿಬಿಟ್ಟಿದ್ದಾರೆ. ಕಳೆದ ಮಾ. 26ರಂದು ಕೇಂದ್ರ ಸರಕಾರದ ಪ್ರಧಾನ ಮಂತ್ರಿ

ಸುಳ್ಯದಲ್ಲಿ `ಶೋ’ ತೋರಿಸಿ ಗುಜುರಿ ಪಾಲಾಯಿತೇ ‘ಮತ್ಸ್ಯವಾಹಿನಿ’| ಏಕಾಏಕಿ ತ್ರಿಚಕ್ರ ವಾಹನಗಳನ್ನು ಹೊತ್ತೊಯ್ದದ್ದೆಲ್ಲಿಗೆ? Read More »

ಮಂಗಳೂರು: ಗಡಿಪಾರು ಅಸ್ತ್ರದ ವಿರುದ್ದ ಸಂಸದ ನಳಿನ್ ವಾಗ್ದಾಳಿ

ಸಮಗ್ರ ನ್ಯೂಸ್: ಪುತ್ತೂರಿನ ಭಜರಂಗದಳ ಕಾರ್ಯಕರ್ತರ ವಿರುದ್ದ ಗಡಿಪಾರು ಅಸ್ತ್ರ ವಿಚಾರವಾಗಿ ಪುತ್ತೂರಿನಲ್ಲಿ ರಾಜ್ಯ ಸರ್ಕಾರದ ವಿರುದ್ದ ಸಂಸದ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ‌ಮಾಡುತ್ತಿದೆ. ಸುಳ್ಳು ಪ್ರಕರಣ ದಾಖಲಿಸಿ ಅಪರಾಧಿ ಅಲ್ಲದಿದ್ದರೂ ಗಡೀಪಾರು ಮಾಡ್ತಿದಾರೆ. ಪುತ್ತೂರಿನಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ಇಂಥ ದ್ವೇಷದ ರಾಜಕಾರಣ ಸರಿಯಲ್ಲ, ಇದನ್ನ ಖಂಡಿಸುತ್ತೇನೆ ಎಂದು ನಳಿನ್ ಕುಮಾರ್ ಹೇಳಿದ್ದಾರೆ. ಗಡಿಪಾರು ವಿಚಾರವಾಗಿ ಅಧಿಕಾರಿಗಳ ತರಾಟೆಗೆ ತೆಗೊಂಡಿದೇನೆ, ಒಂದು ಕೇಸ್

ಮಂಗಳೂರು: ಗಡಿಪಾರು ಅಸ್ತ್ರದ ವಿರುದ್ದ ಸಂಸದ ನಳಿನ್ ವಾಗ್ದಾಳಿ Read More »

ಪುತ್ತೂರು: ಮಾಜಿ ಶಾಸಕ ಸಂಜೀವ ಮಠಂದೂರುಗೆ ಹಾವು ಕಡಿತ

ಸಮಗ್ರ ನ್ಯೂಸ್: ಪುತ್ತೂರು ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು ಅವರಿಗೆ ಗುರುವಾರ ರಾತ್ರಿ ವಿಷಪೂರಿತ ಹಾವು ಕಡಿದಿದ್ದು, ಅವರು ಇಲ್ಲಿನ ಆಸ್ಪತ್ರೆಯೊಂದಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮ್ಮ ಹಿರೇಬಂಡಾಡಿಯಲ್ಲಿ ಮನೆ ಬಳಿಯ ತೋಟಕ್ಕೆ ಹೋದ ವೇಳೆ ಅವರಿಗೆ ವಿಷಪೂರಿತ ಕಟ್ಟು ಹಾವು (ಕ್ರೈಟ್‌) ಕಡಿದಿತ್ತು. ಅವರಿಗೆ ಪ್ರಥಮ ಚಿಕಿತ್ಸೆ ಕೊಡಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪುತ್ತೂರು: ಮಾಜಿ ಶಾಸಕ ಸಂಜೀವ ಮಠಂದೂರುಗೆ ಹಾವು ಕಡಿತ Read More »

ಯೋಗೀಶ್ ಹೊಸೋಳಿಕೆ ಸಂಪಾದನೆಯ ಎಲಾಡಿಕೆ ಕೃತಿ ಬಿಡುಗಡೆ

ಸಮಗ್ರ ನ್ಯೂಸ್: ಯೋಗೀಶ್ ಹೊಸೋಳಿಕೆ ಸಂಪಾದನೆಯ ಮದುವೆ ನೆನಪಿನ ಕುರಿತ ಮೊತ್ತ ಮೊದಲ ಅರೆಭಾಷೆಯ ಎಲಾಡಿಕೆ ಕೃತಿಯು ನ. 14ರಂದು ಹೊಸೋಳಿಕೆ ಕಟ್ಟೆಮನೆ ದೈವಸ್ಥಾನದಲ್ಲಿ ದೀಪಾವಳಿ ಆಚರಣೆಯೊಂದಿಗೆ ಕುಟುಂಬಸ್ಥರು ಹಾಗೂ ಬಂಧು ಮಿತ್ರರ ಸಮ್ಮುಖದಲ್ಲಿ ವಿಶಿಷ್ಟ ರೀತಿಯಲ್ಲಿ ಬಿಡುಗಡೆಗೊಂಡಿತು. ಗುತ್ತಿಗಾರು ಕಿರಣ ರಂಗ ಅಧ್ಯಯನ ಸಂಸ್ಥೆ ಪುಸ್ತಕ ಪ್ರಕಟಿಸಿ, ಕುಟುಂಬದ ಹಿರಿಯರಾದ ವಿಶ್ವನಾಥ ಹೊಸೋಳಿಕೆ ಪುಸ್ತಕ ಬಿಡುಗಡೆ ಗೊಳಿಸಿದರು. ಕುಟುಂಬದ ಅಧ್ಯಕ್ಷ ಎಚ್.ಬಿ. ಕೇಶವ ಹೊಸೋಳಿಕೆ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಿರಣ ಸಂಸ್ಥೆ

ಯೋಗೀಶ್ ಹೊಸೋಳಿಕೆ ಸಂಪಾದನೆಯ ಎಲಾಡಿಕೆ ಕೃತಿ ಬಿಡುಗಡೆ Read More »

ಸುಳ್ಯ: ನೈತಿಕ ಪೊಲೀಸ್ ಗಿರಿ ಹಿನ್ನಲೆ| ಐದು ಮಂದಿ ಮೇಲೆ ಗಡಿಪಾರು ಆದೇಶ

ಸಮಗ್ರ ನ್ಯೂಸ್: ಕರ್ನಾಟಕ ಪೋಲಿಸ್ ಅಧಿನಿಯಮ 1953 ರ ಕಲಂ 55 ಪ್ರಕಾರ ಬಳ್ಳಾರಿ ಜಿಲ್ಲೆಗೆ ಲತೀಶ್ ಗುಂಡ್ಯ ಸೇರಿದಂತೆ ಐವರ ಮೇಲೆ ಗಡಿಪಾರು ಆದೇಶ ಹೊರಡಿಸಲಾಗಿದೆ. ನೈತಿಕ ಪೊಲೀಸ್ ಗಿರಿ ಸೇರಿದಂತೆ ಇತರ ಪ್ರಕರಣದಲ್ಲಿ ಭಾಗಿಯಾಗಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಇದೀಗ ಪೊಲೀಸರು ಮತ್ತೆ ಗಡಿಪಾರು ಅಸ್ತ್ರ ಪ್ರಯೋಗ ಮಾಡಿದ್ದು ಜಿಲ್ಲೆಯ ಐದು ಮಂದಿ ಬಜರಂಗದಳ ಸಂಘಟನೆಯ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ. ಬಜರಂಗದಳ ಕಾರ್ಯಕರ್ತ ಲತೀಶ್ ಗುಂಡ್ಯ, ಪ್ರಜ್ವಲ್,

ಸುಳ್ಯ: ನೈತಿಕ ಪೊಲೀಸ್ ಗಿರಿ ಹಿನ್ನಲೆ| ಐದು ಮಂದಿ ಮೇಲೆ ಗಡಿಪಾರು ಆದೇಶ Read More »