ಮಂಗಳೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆ| ಸಾಯಲು ಹೊರಟಿದ್ದ ಕುಟುಂಬ ಬಚಾವ್| ವೈರಲ್ ಆಗಿತ್ತು ‘ಸಾಯೋದು ಬೇಡಪ್ಪಾ’ ಎಂದ ಮಗುವಿನ ಮಾತು!!
ಸಮಗ್ರ ನ್ಯೂಸ್: ಸಂಸಾರದಲ್ಲಿನ ಕಲಹಕ್ಕೆ ಬೇಸತ್ತ ಯುವಕನೊಬ್ಬ ತನ್ನ ನಾಲ್ಕು ವರ್ಷದ ಮಗಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದು, ಪಣಂಬೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ಕಾವೂರಿನಲ್ಲಿ ಈ ಘಟನೆ ನಡೆದಿದೆ. ಕಾವೂರು ಅಂಬಿಕಾ ನಗರ ನಿವಾಸಿ ರಾಜೇಶ್ (35) ಸಾಯಲು ಹೋಗಿ ಪೊಲೀಸರಿಂದ ರಕ್ಷಿಸಲ್ಪಟ್ಟವನು. ಹೆಂಡತಿ ಜೊತೆ ಜಗಳಕ್ಕೆ ಬೇಸತ್ತ ಪತಿ ರಾಜೇಶ್ ಸೋಮವಾರ ಸಂಜೆ ತನ್ನ ಮಗಳನ್ನು ಕರೆದುಕೊಂಡಿ ತಣ್ಣೀರುಬಾವಿ ಬೀಚ್ ಗೆ ಹೋಗಿದ್ದು ‘ನಾವು ಸಾಯೋಣ ಮಗಳೇ, ಅವಳಿಗೆ ಬೇಕಾದ ರೀತಿ ಇರಲಿ,










