ಕರಾವಳಿ

ಸುಳ್ಯ: ಪಾದಾಚಾರಿ‌ ಮಹಿಳೆ ಮೇಲೆ ಹರಿದ ಲಾರಿ| ಗಾಯಾಳು ಸ್ಥಳದಲ್ಲೇ ಸಾವು

ಸಮಗ್ರ ನ್ಯೂಸ್: ಪಾದಚಾರಿ ಮಹಿಳೆಯೊಬ್ಬರಿಗೆ ಯಮಸ್ವರೂಪಿ ಲಾರಿ ಗುದ್ದಿದ್ದು ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ಸುಳ್ಯ ನಗರದ ಬಸ್ ನಿಲ್ದಾಣ ಬಳಿ ಮಂಗಳವಾರ ತಡರಾತ್ರಿ ನಡೆದಿದೆ. ಮಾಣಿ‌-ಮೈಸೂರು ರಾ. ಹೆದ್ದಾರಿಯಲ್ಲಿ ಮಂಗಳೂರು ಕಡೆಗೆ ಹೋಗುತ್ತಿದ್ದ ತಮಿಳು ನಾಡು ನೋಂದಣಿ ಲಾರಿಯೊಂದು ಮಹಿಳೆಗೆ ಗುದ್ದಿದ್ದು, ಗಂಭೀರ ಗಾಯಗೊಂಡ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುಮಾರು 40 ವರ್ಷ ಪ್ರಾಯವಿರಬಹುದೆಂದು ಅಂದಾಜಿಸಲಾಗಿದೆ ಮೃತದೇಹವನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರ ಗುರುತು ಪತ್ತೆಯಾಗಿರುವುದಿಲ್ಲ. ಸುಳ್ಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಯ: ಪಾದಾಚಾರಿ‌ ಮಹಿಳೆ ಮೇಲೆ ಹರಿದ ಲಾರಿ| ಗಾಯಾಳು ಸ್ಥಳದಲ್ಲೇ ಸಾವು Read More »

ಸುಳ್ಯ: ಕೆವಿಜಿ ಆಯುರ್ವೇದಿಕ್ ಆಸ್ಪತ್ರೆಯ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಯ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು(ಫೆ.7) ಬೆಳಿಗ್ಗೆ ಸಂಭವಿಸಿದೆ. ಸುಳ್ಯ ಕೆವಿಜಿ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಪುತ್ತೂರು ತಾಲೂಕಿನ ತಿಂಗಳಾಡಿಯ ವಸಂತ ಎಂಬವರು ಚಿಕಿತ್ಸೆಗಾಗಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ ಆರು ಗಂಟೆ ಸುಮಾರಿಗೆ ಆಸ್ಪತ್ರೆಯ ಕಟ್ಟಡದ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಲಿಕಾರರಾಗಿದ್ದ ಇವರು ಪಿಟ್ಸ್ ಕಾಯಿಲೆಗೆ ಒಳಗಾಗಿದ್ದರು. ಇದಕ್ಕಾಗಿ ಚಿಕಿತ್ಸೆ ನೀಡಲಾಗುತ್ತಿತ್ತು‌ ಎಂದು ತಿಳಿದುಬಂದಿದೆ. ಮೃತರು ಪತ್ನಿ

ಸುಳ್ಯ: ಕೆವಿಜಿ ಆಯುರ್ವೇದಿಕ್ ಆಸ್ಪತ್ರೆಯ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ Read More »

ಕುಮಾರ ಪರ್ವತ ಚಾರಣಕ್ಕೆ ನಿಷೇಧ ಯಾಕೆ? ಸಚಿವ ಈಶ್ವರ ಖಂಡ್ರೆ ಸ್ಪಷ್ಟನೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಡಗು ಜಿಲ್ಲೆಯ ಸೋಮವಾರಪೇಟೆಯಿಂದ ಚಾರಣ ಮಾಡಬಹುದಾದ ಪ್ರಸಿದ್ಧ ಸ್ಥಳ ಕುಮಾರ ಪರ್ವತ ಚಾರಣಕ್ಕೆ ನಿರ್ಬಂಧ ಹೇರಿದ್ದೇಕೆ ಎಂಬ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸ್ಪಷ್ಟನೆ ನೀಡಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಮಾರ ಪರ್ವತ ಚಾರಣಪಥದಲ್ಲಿ ಜನಜಂಗುಳಿಯಿಂದ ಪರಿಸರ ಹಾನಿ ಭೀತಿ ಎದುರಾಗಿದೆ. ಹೀಗಾಗಿ ಚಾರಣ ನಿಯಂತ್ರಣ ಸಂಬಂಧ ವರದಿ ಸಲ್ಲಿಸಲು ಸೂಚಿಸಿದ್ದೇನೆ. ಅದರ ಜೊತೆಗೆ ಚಾರಣಕ್ಕೆ ಆನ್ ಲೈನ್ ದಾಖಲಾತಿ ಕ್ರಮ

ಕುಮಾರ ಪರ್ವತ ಚಾರಣಕ್ಕೆ ನಿಷೇಧ ಯಾಕೆ? ಸಚಿವ ಈಶ್ವರ ಖಂಡ್ರೆ ಸ್ಪಷ್ಟನೆ Read More »

ಕರಾವಳಿಯಲ್ಲಿ ಮತ್ತೆ ಕೆಂಪು ಉಗ್ರರ ಕರಿನೆರಳು| ಉಡುಪಿ ಜಿಲ್ಲೆಯಲ್ಲಿ ಶಸ್ತ್ರಸಜ್ಜಿತ ನಕ್ಸಲರ ಓಡಾಟ!!

ಸಮಗ್ರ ನ್ಯೂಸ್: ದಶಕದಿಂದ ತಣ್ಣಗಾಗಿದ್ದ ನಕ್ಸಲ್ ಚಟುವಟಿಕೆ ಮತ್ತೆ ರಾಜ್ಯದ ಕರಾವಳಿ ಜಿಲ್ಲೆಯಲ್ಲಿ ಆಯಕ್ಟೀವ್ ಆಗಿದ್ದು ಉಡುಪಿಯ ಬೈಂದೂರು ಭಾಗದಲ್ಲಿ ಓಡಾಟ ಆರಂಭವಾಗಿದೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಲ್ಲೂರು ಪೊಲೀಸ್​ ಠಾಣಾ ವ್ಯಾಪ್ತಿಯ ಹಲವೆಡೆ ನಕ್ಸಲರ ಓಡಾಟದ ಸುಳಿವು ಸಿಕ್ಕಿದೆ. ಬೈಂದೂರು ತಾಲೂಕಿನ ಕೊಲ್ಲೂರು, ಮುದೂರು, ಜಡ್ಕಲ್‌, ಬೆಳ್ಕಲ್‌ ಗ್ರಾಮಗಳ ಹಲವು ಮನೆಗಳಿಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಶಸ್ತ್ರ ಸಜ್ಜಿತ ನಕ್ಸಲರು ಹಸಿರು ಬಣ್ಣದ ಬಟ್ಟೆ ತೊಟ್ಟಿದ್ದರ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಕರಾವಳಿಯಲ್ಲಿ ಮತ್ತೆ ಕೆಂಪು ಉಗ್ರರ ಕರಿನೆರಳು| ಉಡುಪಿ ಜಿಲ್ಲೆಯಲ್ಲಿ ಶಸ್ತ್ರಸಜ್ಜಿತ ನಕ್ಸಲರ ಓಡಾಟ!! Read More »

ಕಡಬ: ಮೊಬೈಲ್ ಶಾಪ್ ಬೀಗ ಮುರಿದು ಮೊಬೈಲ್, ಹಣ ಕಳ್ಳತನ| ಸಿಸಿಟಿವಿ ಯಲ್ಲಿ ದೃಶ್ಯ ಸೆರೆ

ಸಮಗ್ರ ನ್ಯೂಸ್: ಆಲಂಕಾರು ಶ್ರೀ ದುರ್ಗಾಟವರ್ ನಲ್ಲಿ ಕಾರ್ಯಚರಿಸುತ್ತಿದ್ದ ಸಾನಿಧ್ಯ ಮೊಬೈಲ್ ಅಂಗಡಿಯ ಎರಡು ಬೀಗಗಳನ್ನು ಏಕೋ ಬ್ಲಡ್ ಮೂಲಕ ಕತ್ತರಿಸಿ ಮೊಬೈಲ್ ಹಾಗೂ ಹಣ ಕಳ್ಳತನ ಮಾಡಿದ ಘಟನೆ ಫೆ.5 ರಂದು ರಾತ್ರಿ ಅಂದಾಜು 1:30 ಗಂಟೆಯ ಸಮಯಕ್ಕೆ ನಡೆದಿದೆ. ಸಿ.ಸಿ ಟಿವಿ ವೀಡಿಯೋ ಮೂಲಕ ಕಡಬ ಪೋಲಿಸರು ಪರೀಶಿಲನೆ ನಡೆಸಿದಾಗ ಆತ ಹೊರ ರಾಜ್ಯದಿಂದ ಬಂದಿದ್ದು ನೆಕ್ಕರೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಹತ್ತಿರ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಒಂದು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದಾನೆ

ಕಡಬ: ಮೊಬೈಲ್ ಶಾಪ್ ಬೀಗ ಮುರಿದು ಮೊಬೈಲ್, ಹಣ ಕಳ್ಳತನ| ಸಿಸಿಟಿವಿ ಯಲ್ಲಿ ದೃಶ್ಯ ಸೆರೆ Read More »

ಸುಳ್ಯ: ಯೋಗಪಟು ಅಕ್ಷಯ ಬಾಬ್ಲುಬೆಟ್ಟು ಅವರಿಗೆ ಪ್ರಶಸ್ತಿ ಪ್ರದಾನ

ಸಮಗ್ರ ನ್ಯೂಸ್: ಅಕ್ಷಯ ಬಾಬ್ಲು ಬೆಟ್ಟು ಹನುಮಾನಾಸನದಲ್ಲಿ 50 ನಿಮಿಷ 20 ಸೆಕೆಂಡ್ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ಮತ್ತು ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ. ಇದರ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಫೆ. 5ರಂದು ಸಂತೃಪ್ತಿ ಸಭಾಭವನ ಏನೇಕಲ್ಲಿನಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸುಂದರ ಗೌಡ ನೆರವೇರಿಸಿದರು. ಶಾಲಾ ಗುರುಗಳಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪ್ರಗತಿ ಪರ ಕೃಷಿಕ ರೇಗಪ್ಪ ಗೌಡ, ಸುಬ್ರಹ್ಮಣ್ಯ ಗ್ರಾಮ

ಸುಳ್ಯ: ಯೋಗಪಟು ಅಕ್ಷಯ ಬಾಬ್ಲುಬೆಟ್ಟು ಅವರಿಗೆ ಪ್ರಶಸ್ತಿ ಪ್ರದಾನ Read More »

ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಹೊಸ ಮುಖ| ನಳಿನ್ ಕುಮಾರ್ ಗೆ ಸಿಗಲ್ವಂತೆ ಟಿಕೆಟ್!! ಕಾಂಗ್ರೆಸ್ ನಿಂದ ಎಚ್ಚರಿಕೆಯ ನಡೆ

ಸಮಗ್ರ ನ್ಯೂಸ್: ಕರ್ನಾಟಕದ ಕರಾವಳಿ ಬಿಜೆಪಿಯ ಭದ್ರಕೋಟೆ. ಕರಾವಳಿ ಭಾಗದ ಪ್ರಮುಖ ಲೋಕಸಭಾ ಕ್ಷೇತ್ರವಾದ ದಕ್ಷಿಣ ಕನ್ನಡದಲ್ಲಿ ಈ ಬಾರಿ ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ.‌ ಕಮಲ ಪಕ್ಷದ ಈ ನಡೆ ಅಚ್ಚರಿ ಮೂಡಿಸಿದೆ. ಕರ್ನಾಟಕ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬದಲು ಬೇರೆ ಅಭ್ಯರ್ಥಿ ಆಯ್ಕೆಯಾದರೂ ಅಚ್ಚರಿ ಇಲ್ಲ. ರಾಷ್ಟ್ರೀಯತೆ ಹಾಗೂ ಸಾಮಾಜಿಕ, ಹಿಂದೂ ಪರ ಕೆಲಸ ಮಾಡುತ್ತಿರುವ ಮುಖಂಡರಿಗೆ ಟಿಕೆಟ್ ನೀಡುವಂತೆ ಬಿಜೆಪಿ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಹೊಸ ಮುಖ| ನಳಿನ್ ಕುಮಾರ್ ಗೆ ಸಿಗಲ್ವಂತೆ ಟಿಕೆಟ್!! ಕಾಂಗ್ರೆಸ್ ನಿಂದ ಎಚ್ಚರಿಕೆಯ ನಡೆ Read More »

ಬಿಜೆಪಿಗೆ ಮೂರು ದಿನಗಳ ಗಡುವು ನೀಡಿದ ಪುತ್ತಿಲ ಪರಿವಾರ

ಸಮಗ್ರ ನ್ಯೂಸ್: ಬಿಜೆಪಿಯಿಂದ ಪುತ್ತಿಲ ಪರಿವಾರಕ್ಕೆ ಷರತ್ತು ಬದ್ಧ ಆಹ್ವಾನ ಸಿಕ್ಕಿರುವ ಹಿನ್ನಲೆಯಲ್ಲಿ ಪುತ್ತಿಲ ಪರಿವಾರ ಬಿಜೆಪಿಗೆ ಮೂರು ದಿನಗಳ ಗಡುವು ನೀಡಿದೆ. ಪುತ್ತಿಲ ಪರಿವಾರದ ಬೆಂಬಲಿಗರ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶ್ರೀಕೃಷ್ಣ ಉಪಾದ್ಯಾಯ, ಬಿಜೆಪಿ ನಾಯಕರಿಗೆ ಗಡುವು ವಿಧಿಸಿದ್ದು, ಮೂರು ದಿನಗಳೊಳಗೆ ಎಲ್ಲವೂ ಸರಿಯಾಗುವಂತೆ ನೋಡಿಕೊಳ್ಳಿ. ಎಲ್ಲವೂ ಸರಿಯಾಗುವ ಶಕ್ತಿಯನ್ನು ಈ ತುಳುವ ಮಣ್ಣು ನೀಡಲಿ. ನೀವು ಸತಾಯಿಸುವುದು ಬೇಡ ನಾಲ್ಕು ಜನರನ್ನು ಸರಿ ಮಾಡಿ ಇಲ್ಲವಾದಲ್ಲಿ ಪುತ್ತಿಲ ಪರಿವಾರ ಸಾಮಾಜಿಕ ಸಂಘಟನೆಯಾಗಿ ಹುಟ್ಟಿದ್ದು

ಬಿಜೆಪಿಗೆ ಮೂರು ದಿನಗಳ ಗಡುವು ನೀಡಿದ ಪುತ್ತಿಲ ಪರಿವಾರ Read More »

ಸುಳ್ಯ: ಸೆಲ್ ಹೌಸ್ ಮೊಬೈಲ್‌ಶಾಪ್ ನಲ್ಲಿ ಉಚಿತ ಕೂಪನ್‌ಗಳ ಬಂಪರ್ ಬಹುಮಾನ ಡ್ರಾ

ಸಮಗ್ರ ನ್ಯೂಸ್: ಸೆಲ್ ಹೌಸ್ ಮೊಬೈಲ್ ಶಾಪ್ ನಲ್ಲಿ ದಸರಾ, ದೀಪಾವಳಿ, ಹೊಸ ವರ್ಷದ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಕೂಪನ್ ನ ಬಂಪರ್ ಬಹುಮಾನಗಳ ಡ್ರಾ ಜ.25 ರಂದು ಸಂಜೆ ಸುಳ್ಯದ ಮುಖ್ಯರಸ್ತೆಯ ದ್ವಾರಕ ಹೋಟೆಲ್ ಮುಂಭಾಗದಲ್ಲಿರುವ ಸೆಲ್ ಹೌಸ್ ಮೊಬೈಲ್ ಶಾಪ್ ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಕೆ.ಟಿ.ವಿಶ್ವನಾಥ, ಅರೆಭಾಷೆ ಅಕಾಡೆಮಿಯ ಮಾಜಿ ಸದಸ್ಯ ಸದಾನಂದ ಮಾವಜಿ, ಉದ್ಯಮಿಗಳಾದ ಹಾಜಿ ಜಿ.

ಸುಳ್ಯ: ಸೆಲ್ ಹೌಸ್ ಮೊಬೈಲ್‌ಶಾಪ್ ನಲ್ಲಿ ಉಚಿತ ಕೂಪನ್‌ಗಳ ಬಂಪರ್ ಬಹುಮಾನ ಡ್ರಾ Read More »

ಪುತ್ತೂರು: ನವವಿವಾಹಿತೆ ನೇಣು ಬಿಗಿದು ಆತ್ಯಹತ್ಯೆ

ಸಮಗ್ರ ನ್ಯೂಸ್: ನವವಿವಾಹಿತೆ ನೇಣು ಬಿಗಿದು ಆತ್ಯಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಕುರಿಯ ಗಡಾಜೆ ಎಂಬಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಕುಕ್ಕಾಜೆ ರಾಮ್ಮಣ್ಣ ಗೌಡ ಮತ್ತು ಪುಪ್ಪ ದಂಪತಿ ಪುತ್ರಿ ಶೋಭಾ (26) ಅವರು ಪತಿಯ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಶೋಭಾ ಅವರನ್ನು ಕಳೆದ ಒಂದೂವರೆ ತಿಂಗಳ ಹಿಂದೆ ಪುತ್ತೂರು ಕುರಿಯ ಗಡಾಜೆ ರೋಹಿತ್ ರವರಿಗೆ ಮದುವೆ ಮಾಡಿ ಕೊಡಲಾಗಿತ್ತು. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುತ್ತೂರು ಪೊಲೀಸ್‌ ಠಾಣೆಯಲ್ಲಿ

ಪುತ್ತೂರು: ನವವಿವಾಹಿತೆ ನೇಣು ಬಿಗಿದು ಆತ್ಯಹತ್ಯೆ Read More »