ಕರಾವಳಿ

ಬೈಂದೂರು: ಮೀನಿಗೆ ಗಾಳ ಹಾಕುತ್ತಿದ್ದ ವೇಳೆ ಕಾಲು ಜಾರಿ ವ್ಯಕ್ತಿ ಸಮುದ್ರಪಾಲು

ಸಮಗ್ರ ನ್ಯೂಸ್ : ಅರಬ್ಬಿ ಸಮುದ್ರದಲ್ಲಿ ಮೀನು ಹಿಡಿಯಲು ಗಾಳ ಹಾಕುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ನೇಜಿ ಮೊಹಮ್ಮದ್ ರಿಜ್ವಾನ್ (33) ಮೃತಪಟ್ಟರು. ಇವರು ನಿನ್ನೆ ರಾತ್ರಿಯಿಂದ ಇಂದು ಬೆಳಿಗ್ಗಿನ ಅವಧಿಯಲ್ಲಿ ಬೈಂದೂರಿನ ಶಿರೂರು ಗ್ರಾಮದ ಶಿರೂರು ಅಳಿವೆಗದ್ದೆ ಬಂದರಿನ ಸಮೀಪ ಅರಬ್ಬಿ ಸಮುದ್ರದಲ್ಲಿ ಮೀನು ಹಿಡಿಯಲು ಗಾಳ ಹಾಕುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರದ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂಬುದಾಗಿ ಮೃತರ ಸಂಬಂಧಿ ನೀಡಿದ

ಬೈಂದೂರು: ಮೀನಿಗೆ ಗಾಳ ಹಾಕುತ್ತಿದ್ದ ವೇಳೆ ಕಾಲು ಜಾರಿ ವ್ಯಕ್ತಿ ಸಮುದ್ರಪಾಲು Read More »

ಮಣಿಪಾಲ: ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದ ಯುವಕ ನಾಪತ್ತೆ..!

ಸಮಗ್ರ ನ್ಯೂಸ್: ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದ ಯುವಕ ನಾಪತ್ತೆಯಾಗಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ. ನಾಪತ್ತೆಯಾದ ಯುವಕ ಮಾರುತಿ ತಳವಾರ (27) ಎಂದು ಗುರುತಿಸಲಾಗಿದೆ. ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದ ಇವರು ಮಾ.8ರಂದು ಮಧ್ಯಾಹ್ನ ತಾನು ವಾಸವಿದ್ದ ಬಾಡಿಗೆ ಮನೆಯಿಂದ ಹೋದವರು ಫೋನ್ ಸಂಪರ್ಕಕ್ಕೆ ಸಿಗದೇ, ಸಂಬಂಧಿಕರ ಮನೆಗೂ ಹೋಗದೇ, ಬೇರೆ ಕಡೆ ಕೆಲಸಕ್ಕೂ ಹೋಗದೇ ನಾಪತ್ತೆಯಾಗಿದ್ದಾರೆ. ಇವರು ಮಣಿಪಾಲದಲ್ಲಿ ಸೆಕ್ಯುರಿಟಿ ಕಲೆಸ ಮಾಡಿಕೊಂಡಿದ್ದು, ಕೆಲಸ ಕಷ್ಟ ಆಗುತ್ತಿದೆ. ಕೆಲಸ ಬಿಟ್ಟು ಬೇರೆ ಕಡೆ ಕೆಲಸ ಮಾಡುವುದಾಗಿಯೂ ಹೇಳುತ್ತಿದ್ದರು ಎನ್ನಲಾಗಿದೆ.

ಮಣಿಪಾಲ: ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದ ಯುವಕ ನಾಪತ್ತೆ..! Read More »

ಮಂಗಳೂರು: ಚುನಾವಣಾ ಯಶಸ್ಸಿನಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದು-ಡಿಸಿ ಮುಲ್ಲೈ ಮುಗಿಲನ್

ಸಮಗ್ರ ನ್ಯೂಸ್ : ಮುಂಬರುವ ಲೋಕಸಭೆಯ ಚುನಾವಣೆಯ ವಿವಿಧ ಕಾರ್ಯಗಳಿಗೆ ನಿಯೋಜನೆಗೊಂಡ ಹಲವು ತಂಡಗಳ ಅಧಿಕಾರಿ ಹಾಗೂ ಸಿಬ್ಬಂದಿಗಳು ಶ್ರಮವಹಿಸಿ ತಮ್ಮ ಕರ್ತವ್ಯವನ್ನು ನಿಭಾಯಿಸಿದಲ್ಲಿ ಚುನಾವಣೆ ಸುಸೂತ್ರವಾಗಿ ಜರುಗಲಿದೆ. ಸಮಸ್ಯೆ ಬಂದ ನಂತರ ಎಚ್ಚೆತ್ತುಕೊಳ್ಳುವುದಕ್ಕಿಂತ ಆ ಬಗ್ಗೆ ಮೊದಲೇ ಜಾಗೃತರಾಗಿರಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಅಧಿಕಾರಿಗಳಿಗೆ ಹೇಳಿದರು. ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿಗಳ ಸಭಾಂಗಣದಲ್ಲಿ ಮಾ.12ರ ಮಂಗಳವಾರ ಚುನಾವಣಾ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚುನಾವಣಾ

ಮಂಗಳೂರು: ಚುನಾವಣಾ ಯಶಸ್ಸಿನಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದು-ಡಿಸಿ ಮುಲ್ಲೈ ಮುಗಿಲನ್ Read More »

ಬೆಳ್ತಂಗಡಿ : ತುರ್ತು ಸೇವೆಯಲ್ಲಿ ತೆರಲುತ್ತಿದ್ದ ಆಂಬ್ಯುಲೆನ್ಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಕಾರು ಚಾಲಕ

ಸಮಗ್ರ ನ್ಯೂಸ್ : ತುರ್ತು ಸೇವೆಯಲ್ಲಿ ಹೋಗುತ್ತಿದ್ದ ಪಶು ಇಲಾಖೆಯ ವಾಹನದ ಚಾಲಕನ ಮೇಲೆ ಕ್ಷುಲ್ಲಕ ವಿಚಾರದಲ್ಲಿ ಆಂಬ್ಯುಲೆನ್ಸ್ ಬಾಗಿಲು ತೆಗೆದು ಕೈಯಿಂದ ಮತ್ತು ಕಾಲಿನಿಂದ ಹಲ್ಲೆ ಮಾಡಿದ ಘಟನೆ ಇಂದು ಬೆಳ್ತಂಗಡಿಯಲ್ಲಿ ನಡೆದಿದೆ. ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ. ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನದ 1962 ಗೆ ಕಾಲ್ ಸೆಂಟರ್ ಗೆ ದನದ ಚಿಕಿತ್ಸೆಗಾಗಿ ಬೆಳ್ತಂಗಡಿ ತಾಲೂಕಿನ ನೆರಿಯಕ್ಕೆ ತುರ್ತು ಸೇವೆಯಲ್ಲಿ

ಬೆಳ್ತಂಗಡಿ : ತುರ್ತು ಸೇವೆಯಲ್ಲಿ ತೆರಲುತ್ತಿದ್ದ ಆಂಬ್ಯುಲೆನ್ಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಕಾರು ಚಾಲಕ Read More »

ಉಪ್ಪಿನಂಗಡಿ: ಸುದೆಪಿಲ ಸಮೀಪದ ನೇತ್ರಾವತಿಯಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷ

ಸಮಗ್ರ ನ್ಯೂಸ್ : ಉಪ್ಪಿನಂಗಡಿಯ ನಾಳ ಸಮೀಪದ ಪಾಂಡಿಬೆಟ್ಟು ಗ್ರಾಮಸ್ಥರ ಕೃಷಿ ತೋಟಕ್ಕೆ ನುಗ್ಗಿದ ಕಾಡಾನೆ ಕರಂಬಾರು ಸುದೆಪಿಲ ಸಮೀಪದ ನೇತ್ರಾವತಿಯಲ್ಲಿ ಮತ್ತೆ ಕಂಡು ಬಂದಿದೆ. ನೇತ್ರಾವತಿಯಲ್ಲಿ ಹಾಯಾಗಿ ತಿರುಗಾಡುತ್ತಿರುವ ಆನೆಯ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದ್ದಾರೆ. ಈ ಆನೆ ಕೊಯ್ಯೂರು, ಕಣಿಯೂರು ದಾಟಿ ಮಲೆಂಗಲ್ಲು, ಪದ್ಮುಂಜ ಪೊಯ್ಯ ಮೂಲಕ ಮೊಗ್ರು ಗ್ರಾಮದ ಬುಳೇರಿಗೆ ಬಂದು ಕರಂಬಾರು ಸುದೆಪಿಲ ಸಮೀಪ ನೇತ್ರಾವತಿಯಲ್ಲಿ ಜಳಕ ಮಾಡಿ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಡೆಗೆ ಸಂಚರಿಸಿದೆ. ಆದರೆ ಮತ್ತೆ

ಉಪ್ಪಿನಂಗಡಿ: ಸುದೆಪಿಲ ಸಮೀಪದ ನೇತ್ರಾವತಿಯಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷ Read More »

ಪುತ್ತೂರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ನಟ್ಟೋಜ ಶಿವಾನಂದ ರಾವ್ ನಿಧನ

ಸಮಗ್ರ ನ್ಯೂಸ್ : ಅಂಬಿಕಾ ವಿದ್ಯಾಸಂಸ್ಥೆಗಳ ಮಾತೃಸಂಸ್ಥೆಯಾಗಿರುವ ನಟ್ಟೋಜ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಶಿವಾನಂದ್ ರಾವ್ (93) ಅವರು ಇಂದು ಬೆಳಿಗ್ಗೆ ಪುತ್ತೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನಟ್ಟೋಜ ಶಿವಾನಂದ ರಾವ್ ಅವರು ಪುತ್ತೂರಿನ ಅತ್ಯಂತ ಹಿರಿಯ ಕರಸೇವಕರು. ಸಾಮಾಜಿಕ ಹಾಗೂ ರಾಜಕೀಯವಾರಿ ಸಕ್ರಿಯರಾಗಿದ್ದು, ಪ್ರಗತಿಪರ ಕೃಷಿಕರಾಗಿದ್ದರು. ಅಯೋಧ್ಯೆಯ ರಾಮ ಮಂದಿರ ಹೋರಾಟದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಮೃತರು ಪುತ್ರ ಅಂಬಿಕಾ ವಿದ್ಯಾಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

ಪುತ್ತೂರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ನಟ್ಟೋಜ ಶಿವಾನಂದ ರಾವ್ ನಿಧನ Read More »

ವಿಟ್ಲ :ಇಸ್ಪೀಟ್ ಆಟ- ಪೊಲೀಸರ ದಾಳಿ, ನಾಲ್ವರ ವಶ

ಸಮಗ್ರ ನ್ಯೂಸ್ : ಜೂಜಾಟ ಆಡುತ್ತಿದ್ದ ನಾಲ್ವರನ್ನು ವಿಟ್ಲ ಠಾಣೆ ಪೊಲೀಸರು ಬಂಧಿಸಿರುವ ಘಟನೆಯೊಂದು ಇತ್ತೀಚೆಗೆ ನಡೆದಿದೆ. ಇಸ್ಪೀಟ್ ಎಲೆಗಳನ್ನು ಬಳಸಿ ಆಡುತ್ತಿದ್ದ, ಧರ್ಮರಾಜ್, ಗೋಪಾಲ ಯಾನೆ ಚಂದ್ರಶೇಖರ, ವಲಿತ್ ಕೆ ಮತ್ತು ಖಲಂದರ್ ಶಾಫಿ ಬಂಧಿತ ಆರೋಪಿಗಳು. ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ, ನೆಕ್ಕರೆ ಕಾಡು ಎಂಬಲ್ಲಿರುವ ಕಲ್ಲಿನಕೋರೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಈ ಜೂಜಾಟ ಆಡುತ್ತಿದ್ದಾಗ ವಿಟ್ಲ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಅಂದರ್-ಬಾಹರ್ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದರೆಂದು ವರದಿಯಾಗಿದೆ. ದಾಳಿ

ವಿಟ್ಲ :ಇಸ್ಪೀಟ್ ಆಟ- ಪೊಲೀಸರ ದಾಳಿ, ನಾಲ್ವರ ವಶ Read More »

ಕಡಬ: ಮನೆಯಿಂದ ಲಕ್ಷಾಂತರ ರೂ. ಚಿನ್ನ, ನಗದು ಕಳವು

ಸಮಗ್ರ ನ್ಯೂಸ್ : ರಾಮಕುಂಜ ಗ್ರಾಮದ ಗೋಳಿತ್ತಡಿಯ ಮನೆಯಿಂದ ಲಕ್ಷಾಂತರ ರೂ. ಚಿನ್ನಾಭರಣ ಹಾಗೂ ನಗದು ಕಳವುಗೊಂಡಿರುವ ಘಟನೆ ಮಾ. 11ರಂದು ಸಂಜೆ ವೇಳೆ ಬೆಳಕಿಗೆ ಬಂದಿದೆ. ಉಪ್ಪಿನಂಗಡಿ ‘ವಿವಾ’ ವಸ್ತರ ಮಳಿಗೆ ಮಾಲಕ ಇಮ್ತಿಯಾಜ್ ಅವರ ತಾಯಿ ನೆಬಿಸಾ ವಾಸ್ತವ್ಯವಿದ್ದ ರಾಮಕುಂಜ ಗ್ರಾಮದ ಗೋಳಿತ್ತಡಿಯಲ್ಲಿನ ಮನೆಯಲ್ಲಿ ಈ ಕಳ್ಳತನ ನಡೆದಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಮನೆಯಲ್ಲಿ ನೆಬಿಸಾ, ಅವರ ಪುತ್ರಿ ನಸೀಮಾ, ಅಳಿಯ ನಾಸೀರ್, ನಸೀಮಾ-ನಾಸೀರ್ ದಂಪತಿಯ ಮಕ್ಕಳು ಹಾಗೂ ಸಂಬಂಧಿಕೆ ಯುವತಿ ಪಾಯಿಜಾ

ಕಡಬ: ಮನೆಯಿಂದ ಲಕ್ಷಾಂತರ ರೂ. ಚಿನ್ನ, ನಗದು ಕಳವು Read More »

ನೇರಳಕಟ್ಟೆ: ಚಿನ್ನದ ಸರ ಅಪಹರಣ-ಇಬ್ಬರ ಬಂಧನ

ಸಮಗ್ರ ನ್ಯೂಸ್: ದ್ವಿಚಕ್ರ ವಾಹನದಲ್ಲಿ ಬಂದು ನೀರು ಕೇಳಿ ಮಹಿಳೆಯ ಚಿನ್ನದ ಸರ ಅಪಹರಿಸಿದ ಇಬ್ಬರನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮಾ. 5ರಂದು ಕಕುರ್ಂಜೆ ಗ್ರಾಮದ ನೇರಳಕಟ್ಟೆಯ ಗುಡ್ರಿಯಲ್ಲಿ ಅಪರಿಚಿತರು 75 ವರ್ಷ ಪ್ರಾಯದ ಬಾಬಿ ದಾಸ್ ಬಳಿ ನೀರು ಕೇಳುವ ನೆಪದಲ್ಲಿ ಮಾತನಾಡಿಸಿ 8 ಗ್ರಾಂ ತೂಕದ ಚಿನ್ನದ ಸರ ಅಪಹರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಲುಬುರಗಿ ಅಫಜಲ್‍ಪುರ ಹಾಗರಗಿ ಮೂಲದ ಪ್ರಸ್ತುತ ಬೆಂಗಳೂರಿನ ನಿವಾಸಿ ವಿಜಯ ಕುಮಾರ್ (23), ಕುಂದಾಪುರ ನೇರಳಕಟ್ಟೆ ಹಿಲ್ಕೋಡು ಮೂಲದ

ನೇರಳಕಟ್ಟೆ: ಚಿನ್ನದ ಸರ ಅಪಹರಣ-ಇಬ್ಬರ ಬಂಧನ Read More »

ಬಂಟ್ವಾಳ: ಮರಕ್ಕೆ ಬೈಕ್ ಢಿಕ್ಕಿ- ಸವಾರ ಸಾವು

ಸಮಗ್ರ ನ್ಯೂಸ್ :ಬೈಕ್ ಸವಾರನೋರ್ವ ಮರಕ್ಕೆ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಇಂದು ಮುಂಜಾನೆ ವೇಳೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಧ್ಯೆ ಮಾರಿಪಳ್ಳದಲ್ಲಿ ನಡೆದಿದೆ. ಅಮ್ಟಾಡಿ ನಿವಾಸಿ ಅಕ್ಷಿತ್ (25) ಮೃತಪಟ್ಟ ಅವಿವಾಹಿತ ಯುವಕ. ಅಕ್ಷಿತ್ ಅವರು ಮಂಗಳೂರು ಖಾಸಗಿ ಕಂಪೆನಿಯಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದು, ರಾತ್ರಿ ಪಾಳಿಯ ಕೆಲಸ ಮುಗಿಸಿ ಸುಮಾರು 4 ಗಂಟೆಗೆ ಹೊರಟಿದ್ದನು. ಅಂದಾಜು 4.30 ಗಂಟೆಗೆ ಮಾರಿಪಳ್ಳ ಹೆದ್ದಾರಿ ಬದಿಯ ಮರಕ್ಕೆ

ಬಂಟ್ವಾಳ: ಮರಕ್ಕೆ ಬೈಕ್ ಢಿಕ್ಕಿ- ಸವಾರ ಸಾವು Read More »