ರಾಜಕೀಯ

ಬಂಟ್ವಾಳ: ನಾವೂರಲ್ಲಿ ಶಂಕಿತ ಉಗ್ರರ ಮಹಜರು-ಸದನದಲ್ಲಿ ರಾಜೇಶ್ ನಾಯ್ಕ್ ಪ್ರಸ್ತಾಪ

ಸಮಗ್ರ ನ್ಯೂಸ್: ಶಾಸಕ ರಾಜೇಶ್ ನಾಯ್ಕ್ ಅವರು ಅಧಿವೇಶನದಲ್ಲಿ ನಾವೂರ ದಲ್ಲಿ ಶಿವಮೊಗ್ಗ ದ ಆರೋಪಿಯನ್ನು ಮಹಜರು ಮಾಡಿದ ವಿಚಾರವಾಗಿ ಶೂನ್ಯ ವೇಳೆಯಲ್ಲಿ ಪ್ರಶ್ನೆ ಎತ್ತಿದ್ದಾರೆ. ಶೂನ್ಯ ವೇಳೆಯಲ್ಲಿ ವಿಚಾರ ಪ್ರಸ್ತಾಪಿಸಿದ ಅವರು, ಈ ಪ್ರಕರಣಕ್ಕೆ ಆತನಿಗೆ ಸ್ಥಳೀಯರು ಯಾರು ಸಹಕಾರ ನೀಡಿದ್ದಾರೆ ಎಂಬುವುದನ್ನು ಸಮರ್ಪಕ ಮಾಹಿತಿ ವಿಚಾರಣೆ ನಡೆಸಿ ಬಹಿರಂಗಗೊಳಿಸಬೇಕು. ಮತ್ತು ಆರೋಪಿಗಳಿಗೆ ಸ್ಥಳಾವಕಾಶ ನೀಡಿದ್ದಾರೆಯೇ ಎಂಬುದರ ಕುರಿತು ಕೂಲಂಕಷವಾಗಿ ಪರಿಶೀಲಿಸಿ ತನಿಖೆ ನಡೆಸುವಂತೆ ಒತ್ತಾಯ ಸದನದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮನವಿ ಮಾಡಿದ್ದಾರೆ. […]

ಬಂಟ್ವಾಳ: ನಾವೂರಲ್ಲಿ ಶಂಕಿತ ಉಗ್ರರ ಮಹಜರು-ಸದನದಲ್ಲಿ ರಾಜೇಶ್ ನಾಯ್ಕ್ ಪ್ರಸ್ತಾಪ Read More »

ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ ವಿಧಾನಸೌಧದಲ್ಲಿ ಮುಖಾಮುಖಿ/ವಯಸ್ಸಿನ ಕುರಿತು ಲಘು ಸಂಭಾಷಣೆ

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ವಿಧಾನಸೌಧದಲ್ಲಿ ಮುಖಾಮುಖಿಯಾದರು. ಈ ವೇಳೆ ಇಬ್ಬರು ನಾಯಕರು ವಯಸ್ಸಿನ ಕುರಿತು ಲಘು ಸಂಭಾಷಣೆ ನಡೆಸಿದರು. ಮಾಜಿ ಸಿಎಂ ಯಡಿಯೂರಪ್ಪ ಬರುವಾಗ ಎದುರಿಗೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸಿಕ್ಕಿದ್ದಾರೆ. ಆ ವೇಳೆ ಬಿಎಸ್‍ವೈ ಬಳಿ ಸಿಎಂ, ಸರ್ ಕೌನ್ಸಿಲ್‍ಗೆ ಹೋಗ್ತಾ ಇದ್ದೇನೆ ಎಂದು ಹೇಳಿ ಅಲ್ಲಿಂದ ಹೊರಟಿದ್ದಾರೆ. ಬಳಿಕ ವಿಧಾನ ಸಭೆಯ ಆಡಳಿತ ಪಕ್ಷದ ಮೊಗಸಾಲೆಗೆ ಹೋಗುವ ದಾರಿಯಲ್ಲಿ ಎದುರಿಗೆ ಸಿಕ್ಕ

ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ ವಿಧಾನಸೌಧದಲ್ಲಿ ಮುಖಾಮುಖಿ/ವಯಸ್ಸಿನ ಕುರಿತು ಲಘು ಸಂಭಾಷಣೆ Read More »

ದೇಶದಲ್ಲಿ ಟೆರರಿಸ್ಟ್‌ಗಳನ್ನ ಹುಟ್ಟುಹಾಕಿದ್ದೇ ಕಾಂಗ್ರೆಸ್ – ಆರಗ ಜ್ಞಾನೇಂದ್ರ

ಬೆಂಗಳೂರು: ದೇಶದಲ್ಲಿ ಟೆರರಿಸ್ಟ್‌ಗಳನ್ನ ಹುಟ್ಟುಹಾಕಿದ್ದೇ ಕಾಂಗ್ರೆಸ್ , ಟೆರಸ್ಸ್‌ಗಳು ತಪ್ಪಿಸಿಕೊಳ್ಳಲು ಅವಕಾಶ ಕೊಟ್ಟಿದ್ದೇ ಕಾಂಗ್ರೆಸ್ ಅವರು ದೇಶದ ದೃಷ್ಟಿಯಿಂದ ಯೋಚನೆ ಮಾಡಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ. ಕರ್ನಾಟಕದ ವಿವಿಧ ಜಿಲ್ಲೆಗಳು ಸೇರಿದಂತೆ ದೇಶಾದ್ಯಂತ ರಾಷ್ಟ್ರೀಯ ತನಿಖಾ ದಳ ತನ್ನ ದಾಳಿ ಮುಂದುವರಿಸಿವೆ. ದೇಶಾದ್ಯಂತ ಇಂದು ಬೆಳ್ಳಂಬೆಳಿಗ್ಗೆಯಿಂದಲೇ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಎನ್‌ಐಎ, ಇಡಿ ದಾಳಿ ಮುಂದುವರಿಸಿದ್ದು ರಾಜ್ಯದ ಪೊಲೀಸರ ನೆರವಿನೊಂದಿಗೆ ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆಯ 100ಕ್ಕೂ ಹೆಚ್ಚು

ದೇಶದಲ್ಲಿ ಟೆರರಿಸ್ಟ್‌ಗಳನ್ನ ಹುಟ್ಟುಹಾಕಿದ್ದೇ ಕಾಂಗ್ರೆಸ್ – ಆರಗ ಜ್ಞಾನೇಂದ್ರ Read More »

‘ಎಸ್.‌ಅಂಗಾರ ನೀವು ಯಾವಾಗ ಸರಿ ಆಗ್ತೀರಾ?’ | ವಿಷಾದದಿಂದ ಸಚಿವರ ಕಾಲೆಳೆದ ಆರ್ ಎಸ್.ಎಸ್ ಪ್ರಚಾರಕ

ಸಮಗ್ರ ನ್ಯೂಸ್: ಹೌದು, ಇಂತಹ ಒಂದು ಕಮೆಂಟ್ ಸಚಿವ ಅಂಗಾರರ ಪೇಸ್ ಬುಕ್ ಪೇಜ್ ನಲ್ಲಿ ಬಿದ್ದಿದ್ದು, ಆರ್.ಎಸ್.ಎಸ್ ನ ಪ್ರಚಾರಕರೋರ್ವರು ಸಚಿವರನ್ನು ಭರ್ಜರಿಯಾಗಿ‌ ಕಾಲೆಳೆದಿದ್ದಾರೆ. ವಿಷಾದದಿಂದಲೇ ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಆರ್‌ಎಸ್‌ಎಸ್‌ ಪ್ರಚಾರಕರೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಕರೊಬ್ಬರು ಬಹಿರಂಗವಾಗಿಯೇ ತರಾಟೆಗೆ ತೆಗೆದುಕೊಂಡಿರುವುದು ಈಗ ಚರ್ಚೆಯ ವಿಷಯವಾಗಿದೆ. ಭಾರತ ಸರ್ಕಾರದ ಭೂವಿಜ್ಞಾನ ಮಂತ್ರಾಲಯ ಹಾಗೂ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ

‘ಎಸ್.‌ಅಂಗಾರ ನೀವು ಯಾವಾಗ ಸರಿ ಆಗ್ತೀರಾ?’ | ವಿಷಾದದಿಂದ ಸಚಿವರ ಕಾಲೆಳೆದ ಆರ್ ಎಸ್.ಎಸ್ ಪ್ರಚಾರಕ Read More »

ವಿಜಯಪುರ: ಅಕ್ರಮವಾಗಿ ಶಿಕ್ಷಕರ ನೇಮಕ ವಿಚಾರ| ಬಂಧಿತರ ಸಂಖ್ಯೆ ಮೂರಕ್ಕೇರಿಕೆ

ಸಮಗ್ರ ನ್ಯೂಸ್: ಅಕ್ರಮವಾಗಿ ಶಿಕ್ಷಕರ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಅಕ್ರಮ ನೇಮಕಾತಿಯಲ್ಲೂ ವಿಜಯಪುರ ಜಿಲ್ಲೆಗೂ ನಂಟು ಹೊಂದಿದ್ದು,ಅಕ್ರಮವಾಗಿ ನೇಮಕಾತಿಯಾಗಿರೋ ಮತ್ತೋರ್ವ ಶಿಕ್ಷಕನ ಬಂಧನವಾಗಿದೆ. ಬಂಧಿತರ ಸಂಖ್ಯೆ ಇದೀಗ ಮೂರಕ್ಕೇರಿದೆ. ವಿಜಯಪುರ ಜಿಲ್ಲಾ ಮೂಲದ ಅಶೋಕ ಚವ್ಹಾಣ್ ಬಂಧಿತ ಮತ್ತೋರ್ವ ಶಿಕ್ಷಕರಾಗಿದ್ದಾರೆ. ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಭೈರವಾಡಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ಅಶೋಕ ಚವ್ಹಾಣ್ ಇವರ ವಿರುದ್ಧ ಸೂಕ್ತ ಮಾಹಿತಿ ಕಲೆ ಹಾಕಿ ಅಕ್ರಮ ನೇಮಕಾತಿ ಹೊಂದಿದ್ದನ್ನು ಖಚಿತಪಡಿಸಿಕೊಂಡಿರೋ ಸಿಓಡಿ ಅಧಿಕಾರಿಗಳು ಇದೀಗ

ವಿಜಯಪುರ: ಅಕ್ರಮವಾಗಿ ಶಿಕ್ಷಕರ ನೇಮಕ ವಿಚಾರ| ಬಂಧಿತರ ಸಂಖ್ಯೆ ಮೂರಕ್ಕೇರಿಕೆ Read More »

ಕಾಂಗ್ರೆಸ್ ಗೆ ಕೈ ಕೊಡ್ತಾರಾ ಮೋಹಕತಾರೆ ರಮ್ಯಾ? ಮಾಜಿ ಸಂಸದೆಯನ್ನು ಪಕ್ಷಕ್ಕೆ ಕರೆತರಲು ಬಿಜೆಪಿಯಿಂದ ನಡೀತಾ ಇದೆಯಾ ಪ್ಲ್ಯಾನ್?

ಸಮಗ್ರ ನ್ಯೂಸ್: ಮಂಡ್ಯದ ಮಾಜಿ ಸಂಸದೆ ರಮ್ಯಾ ಬಿಜೆಪಿ ಸೇರುತ್ತಾರೆಯೇ, ಈ ರೀತಿಯ ಪ್ರಶ್ನೆ ಇದೀಗ ರಾಜಕೀಯ ಪಡಸಾಲೆಯಲ್ಲಿ ಆರಂಭವಾಗಿದೆ. ಕಾಂಗ್ರೆಸ್ ವರಿಷ್ಟ ನಾಯಕರಿಂದ ಸೂಕ್ತ ಗೌರವ ಸಿಗದ ಕಾರಣ ರಮ್ಯಾ ಬಿಜೆಪಿಗೆ ಸೇರಿ ಅದೃಷ್ಟ ಪರೀಕ್ಷಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸಿನಿಮಾ ಮತ್ತು ರಾಜಕೀಯದಲ್ಲಿ ರಮ್ಯಾ ಗುರುತಿಸಿಕೊಂಡು ಇದೀಗ ರಾಜಕೀಯದಿಂದಲೂ ದೂರವೇ ಇದ್ಧಾರೆ. ಆದರೆ ರಮ್ಯಾ ಕಟ್ಟಾ ಕಾಂಗ್ರೆಸ್ ಬೆಂಬಲಿಗರು ಎನ್ನುವುದು ಗೊತ್ತಿದೆ.. ಬಿಜೆಪಿ , ಮೋದಿ ಅವರನ್ನ ಸದಾ ಕಾಲ ವಿರೋಧಿಸುತ್ತಾ , ರಾಹುಲ್

ಕಾಂಗ್ರೆಸ್ ಗೆ ಕೈ ಕೊಡ್ತಾರಾ ಮೋಹಕತಾರೆ ರಮ್ಯಾ? ಮಾಜಿ ಸಂಸದೆಯನ್ನು ಪಕ್ಷಕ್ಕೆ ಕರೆತರಲು ಬಿಜೆಪಿಯಿಂದ ನಡೀತಾ ಇದೆಯಾ ಪ್ಲ್ಯಾನ್? Read More »

ಶಶಿತರೂರ್ ಗೆ ಒಲಿಯುತ್ತಾ ಕಾಂಗ್ರೆಸ್ ಅಧ್ಯಕ್ಷ ಪಟ್ಟ? ಸ್ಪರ್ಧೆಗೆ ಗ್ರೀನ್ ಸಿಗ್ನಲ್ ನೀಡಿದ್ರಾ ಸೋನಿಯಾ ಗಾಂಧಿ?

ಸಮಗ್ರ ನ್ಯೂಸ್: ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅನುಮತಿ ಪಡೆದಿದ್ದಾರೆ ಎಂದು ಖಾಸಗಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಶಶಿತರೂರ್ ಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಒಲಿಯುವ ಸಾಧ್ಯತೆ ನಿಚ್ಚಳವಾಗಿದೆ. ಶಶಿ ತರೂರ್ ಅವರನ್ನು ಇಂದು ಭೇಟಿಯಾದ ಕೆಲವೇ ಗಂಟೆಗಳಲ್ಲಿ ಸೋನಿಯಾ ಗಾಂಧಿ ಅವರು ಪಕ್ಷದಲ್ಲಿ ಸುಧಾರಣೆಗಳ ಕರೆಯನ್ನು ಸಾರ್ವಜನಿಕವಾಗಿ ಬೆಂಬಲಿಸಿದ ಕೆಲವೇ ಗಂಟೆಗಳಲ್ಲಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಇಂದು

ಶಶಿತರೂರ್ ಗೆ ಒಲಿಯುತ್ತಾ ಕಾಂಗ್ರೆಸ್ ಅಧ್ಯಕ್ಷ ಪಟ್ಟ? ಸ್ಪರ್ಧೆಗೆ ಗ್ರೀನ್ ಸಿಗ್ನಲ್ ನೀಡಿದ್ರಾ ಸೋನಿಯಾ ಗಾಂಧಿ? Read More »

ಮುಂದಿನ ದಿನಗಳಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ ಸಿಎಂ ಆಗ್ತಾರೆ| ಯಾರು ಆಶೀರ್ವಾದಿಸಿದ್ದು ಗೊತ್ತ?

ಬೆಂಗಳೂರು : ರಾಜ್ಯ ಕಾಂಗ್ರೆಸ್ ನಲ್ಲಿ ಈಗಾಗಲೇ ಸಿಎಂ ಹುದ್ದೆಗೆ ಪೈಪೋಟಿ ಶುರುವಾಗಿದ್ದು, ಈ ನಡುವೆ ಚರ್ಚ್ ಫಾದರ್ ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್ ಖಾನ್ ಗೆ ಸಿಎಂ ಆಗುವಂತೆ ಆಶೀರ್ವಾದಿಸಿದ್ದಾರೆ. ಚಾಮರಾಜಪೇಟೆಯಲ್ಲಿ ನಡೆಯುತ್ತಿರುವ ಮದರ್ ಮೇರಿ ಫೆಸ್ಟಿವಲ್‍ನಲ್ಲಿ ಜಮೀರ್ ಭಾಗಿಯಾಗಿ ರಾಯಪುರಂನಲ್ಲಿರುವ ಸಂತ ಪೀಟರ್ ಪೌಲ್ ಚರ್ಚ್‍ನ ಫಾದರ್ ಡೊಮಿನಿಕ್ ಝೇವಿಯರ್ ಪರಿಶ್‍ರನ್ನು ಭೇಟಿಯಾದ ಶಾಸಕ ಜಮೀರ್‌ಗೆ ಮುಂದಿನ ದಿನಗಳಲ್ಲಿ ಸಿಎಂ ಆಗುವಂತೆ ಆಶೀರ್ವಾದಿಸಿದ್ದಾರೆ. ಜಮೀರ್ ಅಹ್ಮದ್ ಖಾನ್ ಅವರು ಚಾಮರಾಜಪೇಟೆಯಲ್ಲಿ 2005ರಿಂದ ಸತತವಾಗಿ ಶಾಸಕರಾಗಿ,

ಮುಂದಿನ ದಿನಗಳಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ ಸಿಎಂ ಆಗ್ತಾರೆ| ಯಾರು ಆಶೀರ್ವಾದಿಸಿದ್ದು ಗೊತ್ತ? Read More »

ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಬಿ.ಎಸ್‌.ವೈ

ನವದೆಹಲಿ: ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯಪಾಲರ ಪೂರ್ವಾನುಮತಿ ಇಲ್ಲದಿದ್ದರೂ ತನಿಖೆ ನಡೆಸುವಂತೆ ಕರ್ನಾಟಕ ಹೈಕೋರ್ಟ್‌ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಬಿಜೆಪಿ ಶಾಸಕ ಬಿ.ಎಸ್‌.ಯಡಿಯೂರಪ್ಪ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಹಾಗೂ ಹಿಮಾ ಕೊಹ್ಲಿ ಅವರಿರುವ ನ್ಯಾಯಪೀಠವು ಸೋಮವಾರ ಈ ಅರ್ಜಿಯ ವಿಚಾರಣೆ ನಡೆಸಲಿದೆ. ಯಡಿಯೂರಪ್ಪ ಸೇರಿದಂತೆ ಒಂಬತ್ತು ಮಂದಿ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಕುರಿತು ತನಿಖೆಗೆ ಆದೇಶಿಸುವಂತೆ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ

ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಬಿ.ಎಸ್‌.ವೈ Read More »

ಕೇರಳದ ಪ್ರಸ್ತಾವನೆಗೆ ಕರ್ನಾಟಕ ಎಳ್ಳುನೀರು| ಕಾಂಞಂಗಾಡ್- ಕಾಣಿಯೂರು ರೈಲು ಮಾರ್ಗ‌ ಅಸಾಧ್ಯವೆಂದ ಸಿಎಂ ಬೊಮ್ಮಾಯಿ

ಸಮಗ್ರ ನ್ಯೂಸ್: ರೈಲ್ವೆ ಮಾರ್ಗ, ರಸ್ತೆ ಸಾರಿಗೆ ಸೇರಿ ಮೂರು ವಿಚಾರಗಳಲ್ಲಿ ಕರ್ನಾಟಕ ಸರ್ಕಾರವನ್ನು ಮನವೊಲಿಸಲು ಬಂದಿದ್ದ ನೆರೆ ರಾಜ್ಯ ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರ ಎಲ್ಲ ಮೂರು ಪ್ರಸ್ತಾವನೆಗಳನ್ನೂ ಕರ್ನಾಟಕ ಸರ್ಕಾರ ತಿರಸ್ಕರಿಸಿದೆ. ಕಾಞಂಗಾಡ್- ಕಾಣಿಯೂರು ರೈಲು ಮಾರ್ಗ ಸೇರಿದಂತೆ ವಿವಿಧ ರೈಲ್ವೆ ಮತ್ತು ಹೆದ್ದಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ಸಹಮತಿ ನೀಡುವಂತೆ ಕೇರಳ ಸರ್ಕಾರ ಕೋರಿದೆ. ಪ್ರಸ್ತಾವಿತ ಕಾಞಂಗಾಡ್ – ಕಾಣಿಯೂರು ರೈಲು ಮಾರ್ಗವು ಕೇರಳದಲ್ಲಿ 40 ಕಿ.ಮೀ. ಹಾಗೂ ಕರ್ನಾಟಕದಲ್ಲಿ 31 ಕಿ.ಮೀ.

ಕೇರಳದ ಪ್ರಸ್ತಾವನೆಗೆ ಕರ್ನಾಟಕ ಎಳ್ಳುನೀರು| ಕಾಂಞಂಗಾಡ್- ಕಾಣಿಯೂರು ರೈಲು ಮಾರ್ಗ‌ ಅಸಾಧ್ಯವೆಂದ ಸಿಎಂ ಬೊಮ್ಮಾಯಿ Read More »