ರಾಜಕೀಯ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರಿಗೆ ಬೆದರಿಕೆ ಒಡ್ಡಿದ ಆರೋಪಿ ಅರೆಸ್ಟ್

ಸಮಗ್ರ ನ್ಯೂಸ್: ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾರವರ ಮೇಲೆ ನಡೆದಿದೆ ಎನ್ನಲಾದ ತಲವಾರ್‌ ದಾಳಿ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಟ್ವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆದರೆ ಆತನ ಬಳಿ ಯಾವುದೇ ಆಯುಧ ಪತ್ತೆಯಾಗಿಲ್ಲದಿರುವುದು ವಿಶೇಷವಾಗಿದೆ. ಮಂಗಳೂರು ಪಳ್ನೀರ್‌ ನಿವಾಸಿ ಅಬ್ದುಲ್‌ ಖಾದರ್‌ ಎಂಬವರ ಪುತ್ರ ರಿಯಾಝ್‌ (38) ಬಂಧಿತ ಆರೋಪಿ. ಈತನಿಗೆ ಯಾವುದೇ ಪೂರ್ವ ಕ್ರಿಮಿನಲ್‌ ಹಿನ್ನಲೆ ಇಲ್ಲ .ಈ ಪ್ರಕರಣ ಹೊರತು ಪಡಿಸಿ ಈತನ ವಿರುದ್ದ ಇವರೆಗೆ ಯಾವುದೇ […]

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರಿಗೆ ಬೆದರಿಕೆ ಒಡ್ಡಿದ ಆರೋಪಿ ಅರೆಸ್ಟ್ Read More »

”ಜಿಹಾದಿಗಳ ಬೆದರಿಕೆಗೆ ಪಲಾಯನ ಮಾಡುವವ ನಾನಲ್ಲ” | ಕೊಲೆ ಬೆದರಿಕೆ ಬಗ್ಗೆ ಶಾಸಕ ಹರೀಶ್ ಪೂಂಜಾ ಪ್ರತಿಕ್ರಿಯೆ

ಸಮಗ್ರ ನ್ಯೂಸ್: ಶಾಸಕ ಹರೀಶ್ ಪೂಂಜಾ ಕಾರಿನ ಮೇಲೆ ಹಲ್ಲೆ ಪ್ರಕರಣ ಘಟನೆಯ ಬಗ್ಗೆ ಶಾಸಕ ಹರೀಶ್ ಪೂಂಜಾ ಮಾಹಿತಿ ನೀಡಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಹರೀಶ್ ಪೂಂಜಾ ರಾತ್ರಿ ಬೆಂಗಳೂರಿನಿಂದ ಬಂದು ಬೆಳ್ತಂಗಡಿ ಹೋಗುತ್ತಿರುವಾಗ ಸುಮಾರು 11 ಗಂಟೆ ವೇಳೆ ದಾಳಿ ನಡೆದಿದೆ. ಈ ಸಂದರ್ಭದಲ್ಲಿ ನಾನು ನನ್ನ ಸ್ನೇಹಿತನ ಕಾರಿನಲ್ಲಿದ್ದೆ, ದಾಳಿ ನಡೆಸಲು ಬಂದಿದ್ದ ಕಾರು ಚಾಲಕ ಮೊದಲು ನನ್ನ ಇನ್ನೋವಾ ಕಾರಿಗೆ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಆ ಕಾರಿನಲ್ಲಿ ನಾನು ಇಲ್ಲದ

”ಜಿಹಾದಿಗಳ ಬೆದರಿಕೆಗೆ ಪಲಾಯನ ಮಾಡುವವ ನಾನಲ್ಲ” | ಕೊಲೆ ಬೆದರಿಕೆ ಬಗ್ಗೆ ಶಾಸಕ ಹರೀಶ್ ಪೂಂಜಾ ಪ್ರತಿಕ್ರಿಯೆ Read More »

ಕನ್ನಡ ಸ್ವಾಭಿಮಾನದ ಕಿಚ್ಚು ಹತ್ತಿಸಿದ ರಾಹುಲ್ ಗಾಂಧಿ| ಕನ್ನಡಕ್ಕೆ ಕನ್ನಡವೇ ಉಸಿರಾಗಲಿ ಎಂದ ರಾಗಾ

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮತ್ವ. ಇಲ್ಲಿ ಕನ್ನಡವೇ ಉಸಿರು, ಕನ್ನಡವೇ ಬದುಕು, ಕನ್ನಡವೇ ಉದ್ಯೋಗವಾಗಿರಬೇಕು. ಕನ್ನಡವೆಂದರೆ ಸಂಸ್ಕೃತಿ, ಇತಿಹಾಸ ಭಾರತ್‌ ಜೋಡೋ ಅಂಗವಾಗಿ ಗುರುವಾರ ಸಂಜೆ ಮೊಳಕಾಲ್ಮೂರಿನಲ್ಲಿ ನಡೆದ ಬಹಿರಂಗ ಅಧಿವೇಶನದಲ್ಲಿ ರಾಹುಲ್‌ ಗಾಂಧಿ ಕನ್ನಡದ ಬಗ್ಗೆ ಸ್ವಾಭಿಮಾನಿ ಕಿಚ್ಚು ಹೊತ್ತಿಸಿದ ಬಗೆಯಿದು. ರಾಜಕೀಯದ ಜೊತೆಗೆ ಪಕ್ಕಾ ಮಾತೃಭಾಷಾ ಹೋರಾಟಗಾರನಂತೆ ಕನ್ನಡಪರ ವಿಷಯ ಮಂಡಿಸಿದ ಅವರು ಕೇಂದ್ರ ಸರ್ಕಾರದ ಹಿಂದಿ ಹೇರಿಕೆಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದರು. ಪಾದಯಾತ್ರೆ ವೇಳೆ ಅನೇಕ ನಿರುದ್ಯೋಗಿ ಯುವಕರು ಬಂದು ಉದ್ಯೋಗ

ಕನ್ನಡ ಸ್ವಾಭಿಮಾನದ ಕಿಚ್ಚು ಹತ್ತಿಸಿದ ರಾಹುಲ್ ಗಾಂಧಿ| ಕನ್ನಡಕ್ಕೆ ಕನ್ನಡವೇ ಉಸಿರಾಗಲಿ ಎಂದ ರಾಗಾ Read More »

ಟಿಪ್ಪು ಸುಲ್ತಾನ್ ಕೊಡುಗೆ ಮುಂದೆ, ಸಂಸದ ಪ್ರತಾಪ್​ ಸಿಂಹರ ಕೊಡುಗೆ ಶೂನ್ಯ – ತನ್ವೀರ್ ಸೇಠ್

ಸಮಗ್ರ ನ್ಯೂಸ್: ಟಿಪ್ಪು ಸುಲ್ತಾನ್ ಕೊಡುಗೆ ಮುಂದೆ, ಸಂಸದ ಪ್ರತಾಪ ಸಿಂಹರ ಕೊಡುಗೆ ಶೂನ್ಯ, ಇತಿಹಾಸ ತಿಳಿದು ಮಾತನಾಡಲಿ‌ ಎಂದು ಶಾಸಕ ತನ್ವೀರ್ ಸೇಠ್ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದರು. ಟಿಪ್ಪು ಎಕ್ಸ್​ಪ್ರೆಸ್​ ಹೆಸರನ್ನು ಒಡೆಯರ್ ಎಕ್ಸ್​ಪ್ರೆಸ್ ಎಂದು ನಾನು ಉದ್ದೇಶ ಪೂರ್ವಕವಾಗಿಯೇ ಬದಲಾಯಿಸಿದ್ದೇನೆ ಎಂಬ ಸಂಸದ ಪ್ರತಾಪಸಿಂಹ ಹೇಳಿಕೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ತನ್ವೀರ್ ಸೇಠ್, ಯಾರು ಕೊಡುಗೆ ಏನಿದೆ ಅಂತ ನಾನು ಚರ್ಚೆಗೆ ಹೋಗಲ್ಲ. ಟಿಪ್ಪು ಸುಲ್ತಾನ್ ಮೈಸೂರು ಸಾಮ್ರಾಜ್ಯಕ್ಕೆ ರಕ್ಷಣೆ ಕೊಟ್ಟಿದ್ದಾರೆ

ಟಿಪ್ಪು ಸುಲ್ತಾನ್ ಕೊಡುಗೆ ಮುಂದೆ, ಸಂಸದ ಪ್ರತಾಪ್​ ಸಿಂಹರ ಕೊಡುಗೆ ಶೂನ್ಯ – ತನ್ವೀರ್ ಸೇಠ್ Read More »

“ನಿಮ್ಮ ಮುಂದೆ ಮೋದಿ, ಶಾ ಕೂಡಾ ಬಚ್ಚಾ ಅಲ್ಲವೇ”| ಯಡಿಯೂರಪ್ಪ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ‌ನೀಡಿದ ಕೆಪಿಸಿಸಿ

ಸಮಗ್ರ ನ್ಯೂಸ್: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯನ್ನು ಬಚ್ಚಾ ಎಂದು ಕರೆದಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ವಿರುದ್ಧ ಕೆಪಿಸಿಸಿ ವಾಗ್ದಾಳಿ ನಡೆಸಿದೆ. ಪ್ರಧಾನಿ ಮೋದಿ ಬಿಜೆಪಿಗೆ ಪ್ರಶ್ನಾತೀತರು, ಟೀಕಾತೀತರು ಇರಬಹುದು. ಆದರೆ, ಭಾರತ ಪ್ರಜಾಪ್ರಭುತ್ವದ ದೇಶ ಎಂಬುದನ್ನು ಮರೆಯದಿರಿ’ ಎಂದು ಹೇಳಿದೆ. ‘ಅಂದ ಹಾಗೆ, ನಿಮ್ಮ ಮುಂದಿನ ಬಚ್ಚಾ ಅಮಿತ್ ಶಾ ಎದುರು ನೀವು ಕೈಕಟ್ಟಿ ನಿಲ್ಲುವುದು ಸರಿಯೇ? ಮೋದಿಯೂ ನಿಮ್ಮ ಮುಂದೆ ಬಚ್ಚಾ ಅಲ್ಲವೇ’ ಎಂದು ಪ್ರಶ್ನಿಸಿದೆ. ಪ್ರಧಾನಿ ಮೋದಿ ವಿರುದ್ಧ ಬಚ್ಚಾ ರಾಹುಲ್

“ನಿಮ್ಮ ಮುಂದೆ ಮೋದಿ, ಶಾ ಕೂಡಾ ಬಚ್ಚಾ ಅಲ್ಲವೇ”| ಯಡಿಯೂರಪ್ಪ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ‌ನೀಡಿದ ಕೆಪಿಸಿಸಿ Read More »

ಸಿಎಂ ಬೊಮ್ಮಾಯಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಸಂಡೂರು ತಾಲೂಕಿನ ತೋರಣಗಲ್ ಬಳಿಯ ಜಿಂದಾಲ್​ ಏರ್​​ಪೋರ್ಟ್​ನಲ್ಲಿ ತುರ್ತು ಭೂಸ್ಪರ್ಶವಾಗಿದೆ. ಸಿಎಂ ಬೊಮ್ಮಾಯಿ ರಾಯಚೂರಿನಿಂದ ಹೊಸಪೇಟೆಗೆ ಆಗಮಿಸುತ್ತಿದ್ದರು. ಹೆಲಿಕಾಪ್ಟರ್ ಬಳ್ಳಾರಿಯ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಲ್ಯಾಂಡಿಂಗ್ ಆಗಬೇಕಿತ್ತು. ​ಆದರೆ ಹವಾಮಾನ ವೈಪರೀತ್ಯ ಹಿನ್ನೆಲೆ ಹೆಲಿಕಾಪ್ಟರ್ ತುರ್ತುಭೂಸ್ಪರ್ಶ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಸಿಎಂ ಬೊಮ್ಮಾಯಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ Read More »

‘ಕೋರ್ಟ್ ಗೆ ಹೋದರೆ ನ್ಯಾಯ ಸಿಗುತ್ತೆ ಎಂದು ಹೇಳಕಾಗಲ್ಲ, ಧರ್ಮಸ್ಥಳಕ್ಕೆ ಹೋದ್ರೆ ಖಂಡಿತಾ ನ್ಯಾಯ ಸಿಗುತ್ತೆ’| ಅಚ್ಚರಿಯ ಮಾತುಗಳನ್ನಾಡಿದ ಬಿ.ಎಲ್ ಸಂತೋಷ್

ಸಮಗ್ರ ನ್ಯೂಸ್: ‘ಕೋರ್ಟ್ ಗೆ ಹೋದರೆ ನ್ಯಾಯ ಸಿಗುತ್ತೆ ಎಂದು ಹೇಳುವುದಕ್ಕೆ ಆಗಲ್ಲ, ಪೊಲೀಸ್ ಠಾಣೆಗೆ ಹೋದರೆ ನ‍್ಯಾಯ ಸಿಗುತ್ತೆ ಎಂದು ಹೇಳುವುದಕ್ಕೆ ಆಗಲ್ಲ. ಆದರೆ ಧರ್ಮಸ್ಥಳಕ್ಕೆ ಹೋದರೆ ಖಂಡಿತ ನ್ಯಾಯ ಸಿಗುತ್ತದೆ ಎಂದು ನೂರಾರು ವರ್ಷಗಳ ಪರಂಪರೆ ಹೇಳುತ್ತದೆ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದ್ದಾಗಿ ವರದಿಯಾಗಿದೆ. ಕೊಲ್ಲಾಪುರದ ಕನ್ನೇರಿ ಸಿದ್ಧಗಿರಿ ಮಠದಲ್ಲಿ ಸಂತ ಸಮಾವೇಶದಲ್ಲಿ ಅವರು ಮಾತನಾಡಿದ್ದು, ‘ತರಳಬಾಳು ಪೀಠಕ್ಕೆ ದೂರು ನೀಡದರೆ ನ್ಯಾಯ ಸಿಗುತ್ತೆ ಎಂದು ಚಿತ್ರದುರ್ಗ ಜನರು

‘ಕೋರ್ಟ್ ಗೆ ಹೋದರೆ ನ್ಯಾಯ ಸಿಗುತ್ತೆ ಎಂದು ಹೇಳಕಾಗಲ್ಲ, ಧರ್ಮಸ್ಥಳಕ್ಕೆ ಹೋದ್ರೆ ಖಂಡಿತಾ ನ್ಯಾಯ ಸಿಗುತ್ತೆ’| ಅಚ್ಚರಿಯ ಮಾತುಗಳನ್ನಾಡಿದ ಬಿ.ಎಲ್ ಸಂತೋಷ್ Read More »

ಸಮಾಜವಾದಿ ಪಕ್ಷ ಸಂಸ್ಥಾಪಕ, ಉ.ಪ್ರದೇಶದ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ವಿಧಿವಶ

ಸಮಗ್ರ ನ್ಯೂಸ್: ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರು ತಮ್ಮ 82 ನೇ ವಯಸ್ಸಿನಲ್ಲಿ ಸೋಮವಾರ(ಅ10) ಬೆಳಿಗ್ಗೆ ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮುಲಾಯಂ ಸಿಂಗ್ ಯಾದವ್ ಸಮಾಜವಾದಿ ಪಕ್ಷದ ಸ್ಥಾಪಕ-ಪೋಷಕರಾಗಿದ್ದರು. ಸತತ ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಅವರು ಭಾರತ ಸರ್ಕಾರದ ರಕ್ಷಣಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

ಸಮಾಜವಾದಿ ಪಕ್ಷ ಸಂಸ್ಥಾಪಕ, ಉ.ಪ್ರದೇಶದ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ವಿಧಿವಶ Read More »

ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದರೆ ಒಂದು ಸೈಡ್ ಮೀಸೆ ಬೋಳಿಸುತ್ತೇನೆ – ಶಿವನಗೌಡ ನಾಯಕ್

ಸಮಗ್ರ ನ್ಯೂಸ್: ‘ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಗೆಲುವು ಸಾಧಿಸಿದರೆ, ನಾನು ನನ್ನ ಒಂದು ಕಡೆಯ ಮೀಸೆ ಬೋಳಿಸಿಕೊಳ್ಳುತ್ತೇನೆ’ ಎಂದು ದೇವದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಶಿವನಗೌಡ ನಾಯಕ್‍ ಸವಾಲು ಹಾಕಿದ್ದಾರೆ. ಜನಸಂಕಲ್ಪ ಯಾತ್ರೆ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ರಾಜ್ಯದಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹಗಲುಗನಸು ಕಾಣುತ್ತಿದ್ದಾರೆ. ಅದೇ ಉತ್ಸಾಹದಲ್ಲಿ ಜಿಲ್ಲೆಯಲ್ಲಿ ಏಳು ಸ್ಥಾನಗಳನ್ನು ನಾವೇ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ಅವರು ಮೂರು

ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದರೆ ಒಂದು ಸೈಡ್ ಮೀಸೆ ಬೋಳಿಸುತ್ತೇನೆ – ಶಿವನಗೌಡ ನಾಯಕ್ Read More »

ವಿಧಾನಸಭಾ ಚುನಾವಣೆ ಹಿನ್ನಲೆ| ಕರಾವಳಿ ಮೇಲೆ ಕಣ್ಣಿಟ್ಟ ಪ್ರಮೋದ್ ಮುತಾಲಿಕ್| ಉಡುಪಿ, ದ.ಕ ದಲ್ಲಿ ಸ್ಪರ್ಧೆ ಸಾಧ್ಯತೆ

ಸಮಗ್ರ ನ್ಯೂಸ್: ಹಿಂದುತ್ವದ ಫೈರ್ ಬ್ರಾಂಡ್ ಎಂದೇ ಹೆಸರಾಗಿರುವ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಉಡುಪಿ ಅಥವಾ ದಕ್ಷಿಣ ಕನ್ನಡ ಜಿಲ್ಲೆಯ ಹದಿಮೂರು ಕ್ಷೇತ್ರಗಳ ಪೈಕಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ಅವರು ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಪ್ರಮೋದ್ ಮುತಾಲಿಕ್ ನವರಾತ್ರಿ ಸಂದರ್ಭದಲ್ಲಿ ಉಡುಪಿ ಪ್ರವಾಸ ಕೈಗೊಂಡಿದ್ದ ವೇಳೆ ಉಡುಪಿ ಜಿಲ್ಲೆಯಿಂದಲೇ ಕಣಕ್ಕಿಳಿಯಬೇಕೆಂದು ಕಾರ್ಯಕರ್ತರು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಇದರ ಮಧ್ಯೆ ದಕ್ಷಿಣ ಕನ್ನಡ

ವಿಧಾನಸಭಾ ಚುನಾವಣೆ ಹಿನ್ನಲೆ| ಕರಾವಳಿ ಮೇಲೆ ಕಣ್ಣಿಟ್ಟ ಪ್ರಮೋದ್ ಮುತಾಲಿಕ್| ಉಡುಪಿ, ದ.ಕ ದಲ್ಲಿ ಸ್ಪರ್ಧೆ ಸಾಧ್ಯತೆ Read More »