ಸಮಗ್ರ ಸಮಾಚಾರ

ಉತ್ತರಕಾಶಿಯಲ್ಲಿ ಮೇಘ ಸ್ಪೋಟ| 60ಕ್ಕೂ ಹೆಚ್ಚು ಮಂದಿ ಕಣ್ಮರೆ

ಸಮಗ್ರ ನ್ಯೂಸ್: ಉತ್ತರಾಖಂಡದ ಉತ್ತರ ಕಾಶಿಯಲ್ಲಿ ಭೀಕರ ಮೇಘಸ್ಪೋಟ ಉಂಟಾಗಿದೆ. ಉತ್ತರ ಕಾಶಿ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಭೀಕರ ಮೇಘಸ್ಪೋಟ ಸಂಭವಿಸಿದೆ. ಉತ್ತರಾಖಂಡದ ಉತ್ತರಕಾಶಿಯ ಹರ್ಸಿಲ್ ಬಳಿಯ ಧರಾಲಿ ಪ್ರದೇಶದಲ್ಲಿ ಮಂಗಳವಾರ ಸಂಭವಿಸಿದ ಭಾರಿ ಮೇಘಸ್ಫೋಟದಲ್ಲಿ ಒಂದು ಹಳ್ಳಿ ಕೊಚ್ಚಿಹೋಗಿದ್ದು, ಹಲವಾರು ಜನರು ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಉತ್ತರಾಖಾಂಡ್ ನ ಉತ್ತರ ಕಾಶಿಯ ಗ್ರಾಮವೊಂದರಲ್ಲಿ ಇಂದು ಭೀಕರ ಮೇಘಸ್ಪೋಟ ಸಂಭವಿಸಿದೆ. ಈ ಭೀಕರ ಮೇಘಸ್ಪೋಟದಿಂದಾಗಿ ಗುಡ್ಡ ಕುಸಿತದಲ್ಲಿ ಹಲವು ಮನೆಗಳು ಕೊಚ್ಚಿ ಹೋಗಿದ್ದಾವೆ. ಗಂಗೋತ್ರಿ ವ್ಯಾಪ್ಯಿ ಜನವಸತಿ […]

ಉತ್ತರಕಾಶಿಯಲ್ಲಿ ಮೇಘ ಸ್ಪೋಟ| 60ಕ್ಕೂ ಹೆಚ್ಚು ಮಂದಿ ಕಣ್ಮರೆ Read More »

ಗಣಪ,‌ ಕರಿಯ 2 ಖ್ಯಾತಿಯ ನಟ‌ ಸಂತೋಷ್ ಬಾಲರಾಜ್ ನಿಧನ

ಸಮಗ್ರ ನ್ಯೂಸ್: ಸ್ಯಾಂಡಲ್‌ವುಡ್‌ ಯುವ ನಟ ಸಂತೋಷ್ ಬಾಲರಾಜ (38)ಮಂಗಳವಾರ ನಿಧನ ಹೊಂದಿದ್ದಾರೆ. ‘ಕರಿಯ 2’, ‘ಗಣಪ’ ಸೇರಿದಂತೆ ಇನ್ನೂ ಕೆಲ ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಸಂತೋಷ್‌ ಅವರು ಜಾಂಡೀಸ್‌ ಕಾಯಿಲೆಯಿಂದ ಬಳಲುತ್ತಿದ್ದರು ಇತ್ತೀಚೆಗೆ ಬನಶಂಕರಿಯ ಸಾಗರ್ ಅಪೋಲೊ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದಿದ್ದರು. ಆದಾಗ್ಯೂ, ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಸೋಮವಾರ ರಾತ್ರಿ ಚಿಕಿತ್ಸೆಗೆ ಸ್ಪಂದಿಸದೆ ಸಂತೋಷ್ ಬಾಲರಾಜ್ ನಿಧನ ಹೊಂದಿದ್ದಾರೆ. ʼಕೆಂಪ’

ಗಣಪ,‌ ಕರಿಯ 2 ಖ್ಯಾತಿಯ ನಟ‌ ಸಂತೋಷ್ ಬಾಲರಾಜ್ ನಿಧನ Read More »

ಜನಾಕ್ರೋಶಕ್ಕೆ ಬೆದರಿದ ಇಲಾಖೆ|ಎನ್ ಆರ್ ಪುರದಲ್ಲಿ ಕಾಡಾನೆ ಕಾರ್ಯಾಚರಣೆ

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆ ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಮಲೆನಾಡಿಗರ ಆಕ್ರೋಶಕ್ಕೆ ಅರಣ್ಯ ಇಲಾಖೆ ಮತ್ತೊಮ್ಮೆ ಬೆದರಿದ್ದು ನಾಲ್ಕೇ ದಿನಕ್ಕೆ ಮತ್ತೆ ಕುಮ್ಕಿ ಆನೆಗಳನ್ನ ಕರೆಸಿ ಕಾಡಾನೆ ಸೆರೆ ಕಾರ್ಯಾಚರಣೆಗೆ ಮುಂದಾಗಿದೆ. ಕಾಡಾನೆಯು 4 ದಿನದಲ್ಲಿ ಇಬ್ಬರನ್ನ ಬಲಿ ಪಡೆದಿತ್ತು. ಮಲೆನಾಡಿಗರ ತಾಳ್ಮೆಯ ಕಟ್ಟೆ ಸಹ ಒಡೆದಿತ್ತು. ಬಾಳೆಹೊನ್ನೂರು – ಖಾಂಡ್ಯ ಬಂದ್ ಮಾಡಿ ಜನ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಸಂಗಮೇಶ್ವರಪೇಟೆ ಅರಣ್ಯ ಇಲಾಖೆ ಹಾಗೂ ಜಿಲ್ಲಾಧಿಕಾರಿ ಕಾರಿಗೂ ಕೂಡ ಮುತ್ತಿಗೆ ಹಾಕಿದ್ದರು. ಗಂಟೆಗಟ್ಟಲೇ

ಜನಾಕ್ರೋಶಕ್ಕೆ ಬೆದರಿದ ಇಲಾಖೆ|ಎನ್ ಆರ್ ಪುರದಲ್ಲಿ ಕಾಡಾನೆ ಕಾರ್ಯಾಚರಣೆ Read More »

ಬಂಟ್ವಾಳ: ನಾಪತ್ತೆಯಾಗಿದ್ದ ಯುವಕನ ಶವ ನೇತ್ರಾವತಿ ನದಿಯಲ್ಲಿ ಪತ್ತೆ

ಸಮಗ್ರ ನ್ಯೂಸ್: ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಕಡೇಶಿವಾಲಯದ ಹೇಮಂತ್ ಆಚಾರ್ಯ (21) ಅವರ ಮೃತದೇಹ ಬಜಾಲ್ ಮುಗೇರು ಸಮೀಪ ನೇತ್ರಾವತಿ ನದಿ ಮಧ್ಯ ಭಾಗದಲ್ಲಿ ತೇಲಾಡುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಡೇಶಿವಾಲಯದ ಹೇಮಂತ್ ಆಚಾರ್ಯ ಜುಲೈ 27 ರಿಂದ ಕಾಣೆಯಾಗಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.ಜುಲೈ 28ರಂದು ಈತನ ಸ್ಕೂಟರ್​ ಹಾಗೂ ಮೊಬೈಲ್ ಬಂಟ್ವಾಳ ಸಮೀಪದ ಜಕ್ರಿಬೆಟ್ಟು ಕಿಂಡಿ ಅಣೆಕಟ್ಟಿನ ಬಳಿ ಪತ್ತೆಯಾಗಿತ್ತು. ಹೀಗಾಗಿ ಆತ ನದಿಗೆ ಹಾರಿರಬಹುದು ಎಂಬ

ಬಂಟ್ವಾಳ: ನಾಪತ್ತೆಯಾಗಿದ್ದ ಯುವಕನ ಶವ ನೇತ್ರಾವತಿ ನದಿಯಲ್ಲಿ ಪತ್ತೆ Read More »

ಧರ್ಮಸ್ಥಳ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್| ಬಾಲಕಿ ಶವ ಹೂತಿದ್ದನ್ನು ನೋಡಿದ್ದೇನೆ ಎಂದ ಮತ್ತೊಬ್ಬ ಸಾಕ್ಷಿದಾರ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಅಪರಿಚಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮತ್ತೊಂದು ಸಿಕ್ಕಿದ್ದು, ಈಗಾಗಲೇ ಒಬ್ಬ ದೂರುದಾರನ ಹೇಳಿಕೆ ಆಧಾರದ ಮೇಲೆ ಎಸ್‌ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು 6ನೇ ಪಾಯಿಂಟ್ ನಲ್ಲಿ ಮನುಷ್ಯ ದೇಹದ ಅಸ್ತಿಪಂಜರದ ಕೆಲವು ಮೂಳೆಗಳು ದೊರೆತಿವೆ. ಇನ್ನು ನಿನ್ನೆ ಎಸ್‌ಐಟಿ ಕಚೇರಿಗೆ ಮತೊಬ್ಬ ದೂರುದಾರ ಆಗಮಿಸಿ 15 ವರ್ಷದ ಬಾಲಕಿಯ ಶವ ಹೂತಿದ್ದನ್ನು ನಾನು ನೋಡಿದ್ದೇನೆ. ಎಂದು ಅದಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿ ಎಂದು ಹೇಳಿಕೆ ನೀಡಿದ್ದು

ಧರ್ಮಸ್ಥಳ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್| ಬಾಲಕಿ ಶವ ಹೂತಿದ್ದನ್ನು ನೋಡಿದ್ದೇನೆ ಎಂದ ಮತ್ತೊಬ್ಬ ಸಾಕ್ಷಿದಾರ Read More »

ವಿಟ್ಲ: ದೇವಸ್ಥಾನದಿಂದ ಹುಂಡಿಹಣ ಕಳ್ಳತನ| ಮೂವರು ಅರೆಸ್ಟ್

ಸಮಗ್ರ ನ್ಯೂಸ್: ಧಾರ್ಮಿಕ ಶೃದ್ದಾ ಕೇಂದ್ರಕ್ಕೆ ಸಂಬಂಧಿಸಿದಂತೆ ರಸ್ತೆ ಬದಿಯಲ್ಲಿ ಇಟ್ಟ ಕಾಣಿಕೆ ಡಬ್ಬದಲ್ಲಿದ್ದ ಹಣವನ್ನು ಕದ್ದ ಕಳ್ಳರನ್ನು ವಿಟ್ಲ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ವಿಟ್ಲ ಕಸಬಾ ಗ್ರಾಮದ ನಿವಾಸಿಗಳಾದ ತ್ವಾಹಿದ್‌ (19), ಉಮ್ಮರ್‌ ಫಾರೂಕ್‌ (18 , ಮೊಹಮ್ಮದ್‌ ನಬೀಲ್‌(18) ಎಂದು ಗುರುತಿಸಲಾಗಿದೆ. ಕನ್ಯಾನ ಗ್ರಾಮದ ದೇಲಂತಬೆಟ್ಟು ನಿವಾಸಿ ಡಿ.ನಾರಾಯಣ ರಾವ್ ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಾರಾಯಣ ಅವರು ಅಧ್ಯಕ್ಷರಾಗಿದ್ದ ಧಾರ್ಮಿಕ ಶ್ರಧ್ದಾ ಕೇಂದ್ರಕ್ಕೆ ಸಂಬಂಧಿಸಿದ ಕಾಣಿಕೆ ಕಟ್ಟೆಯನ್ನು

ವಿಟ್ಲ: ದೇವಸ್ಥಾನದಿಂದ ಹುಂಡಿಹಣ ಕಳ್ಳತನ| ಮೂವರು ಅರೆಸ್ಟ್ Read More »

ಪುತ್ತೂರು: ಅಪ್ರಾಪ್ತ ಬಾಲಕಿಯ ಗರ್ಭಿಣಿಯನ್ನಾಗಿಸಿದವನಿಗೆ 10 ವರ್ಷ ಜೈಲು

ಸಮಗ್ರ ನ್ಯೂಸ್: ಏಳು ವರ್ಷಗಳ ಹಿಂದೆ ಮೈಂದನಡ್ಕದ ಎಂಬಲ್ಲಿ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು ಆಕೆ ಗರ್ಭಿಣಿಯಾಗಲು ಕಾರಣನಾಗಿದ್ದ ಆರೋಪಿಗೆ ಪೋಕ್ಸೋ ಪ್ರಕರಣದಲ್ಲಿ 10 ವರ್ಷ ಕಠಿಣ ಜೈಲು ಶಿಕ್ಷೆ ನೀಡಿ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಜೈಲು ಶಿಕ್ಷೆಗೊಳಗಾದ ಆರೋಪಿಯನ್ನು ಗದಗ ಜಿಲ್ಲೆಯ ರೋಣ ತಾಲೂಕಿನ ರಾಜೂರ ದಿಂಡೂರ ನಿವಾಸಿ ಪೀರೇಶ್ ಪೀರಪ್ಪ ಸಂಗಪ್ಪ ಮಾಲೋತ್ತರ ಎಂದು ಗುರುತಿಸಲಾಗಿದೆ. 2017ರ ಆಗಸ್ಟ್‌ನಲ್ಲಿ ಈ ಪ್ರಕರಣ ನಡೆದಿದ್ದು,

ಪುತ್ತೂರು: ಅಪ್ರಾಪ್ತ ಬಾಲಕಿಯ ಗರ್ಭಿಣಿಯನ್ನಾಗಿಸಿದವನಿಗೆ 10 ವರ್ಷ ಜೈಲು Read More »

ಮಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ| 123 ಕೆಜಿ‌ ಗಾಂಜಾ‌ ವಶ, ಮೂವರ ಬಂಧನ

ಸಮಗ್ರ ನ್ಯೂಸ್: ಮಂಗಳೂರು ನಗರ ಅಪರಾಧ ವಿಭಾಗದ ಪೊಲೀಸರು ಮಾದಕ ದ್ರವ್ಯ ಕಳ್ಳಸಾಗಣೆ ತಡೆ ಕಾರ್ಯಾಚರಣೆಯಲ್ಲಿ 123 ಕೆಜಿ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದು, ಆಂಧ್ರಪ್ರದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಮೂವರನ್ನು ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಅಧಿಕಾರಿಗಳು ಗುರುವಾರ ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆ ತಾಲೂಕಿನ ಬೆಳುವಾಯಿ ಗ್ರಾಮದ ಕಾಂತಾವರ ಕ್ರಾಸ್‌ನ ಮಠದಕೆರೆ ಬಳಿ ಎರಡು ಕಾರುಗಳನ್ನು ಅಡ್ಡಗಟ್ಟಿದ್ದಾರೆ. ಈ ಕಾರುಗಳಲ್ಲಿ ನಿಷೇಧ ವಸ್ತುಗಳನ್ನು ರಾಜ್ಯದ ಗಡಿಗಳಲ್ಲಿ ಕಳ್ಳಸಾಗಣೆ ಮಾಡಲಾಗುತಿತ್ತು ಎಂದು ವರದಿಯಾಗಿದೆ. ಬಂಧಿತ

ಮಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ| 123 ಕೆಜಿ‌ ಗಾಂಜಾ‌ ವಶ, ಮೂವರ ಬಂಧನ Read More »

ಧರ್ಮಸ್ಥಳ ಪ್ರಕರಣದ ಸುದ್ದಿ ಪ್ರಸಾರಕ್ಕೆ ಮಾಧ್ಯಮ ನಿರ್ಬಂಧ ತೆರವು| ಪ್ರತಿಬಂಧಕ ಆದೇಶ ರದ್ದುಗೊಳಿಸಿದ ಹೈಕೋರ್ಟ್

ಸಮಗ್ರ ನ್ಯೂಸ್ : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಹರ್ಷೇಂದ್ರ ಕುಮಾರ್ ಅವರ ಬಗ್ಗೆ ಯಾವುದೇ ಸುದ್ದಿ ಪ್ರಸಾರ/ಪ್ರಕಟ ಮಾಡದಂತೆ ಮಾಧ್ಯಮಗಳನ್ನು ನಿರ್ಬಂಧಿಸಿ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಏಕಪಕ್ಷೀಯ ಪ್ರತಿಬಂಧಕಾದೇಶವನ್ನು ಹೈಕೋರ್ಟ್‌ ವಜಾಗೊಳಿಸಿದೆ. ಮಾಧ್ಯಮಗಳನ್ನು ನಿರ್ಬಂಧಿಸಿ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಪ್ರತಿಬಂಧಕಾದೇಶ ಪ್ರಶ್ನಿಸಿ ದಕ್ಷಿಣ ಕನ್ನಡದ ‘ಕುಡ್ಲ ರ‍್ಯಾಂಪೇಜ್‌’ ಯೂಟ್ಯೂಬ್ ಚಾನಲ್‌ನ ಪ್ರಧಾನ ಸಂಪಾದಕ ಅಜಯ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿಯನ್ನು ಭಾಗಶಃ

ಧರ್ಮಸ್ಥಳ ಪ್ರಕರಣದ ಸುದ್ದಿ ಪ್ರಸಾರಕ್ಕೆ ಮಾಧ್ಯಮ ನಿರ್ಬಂಧ ತೆರವು| ಪ್ರತಿಬಂಧಕ ಆದೇಶ ರದ್ದುಗೊಳಿಸಿದ ಹೈಕೋರ್ಟ್ Read More »

ಕೆಸರುಮಯವಾದ ರಸ್ತೆ  ಗ್ರಾಮಸ್ಥರಿಂದ ರಸ್ತೆ ಮಧ್ಯೆ  ಬಾಳೆಗಿಡನೆಟ್ಟು ಆಕ್ರೋಶ

ಕಡಬ: ಮಳೆಯಿಂದಾಗಿ ರಸ್ತೆ ಕೆಸರುಮಯವಾಗಿದ್ದು ರೋಸಿ ಹೋದ ಸ್ಥಳೀಯರು ರಸ್ತೆಯ ಮಧ್ಯೆ ಗುಂಡಿ ತೆಗೆದು ಬಾಳೆಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕಡಬ ತಾಲೂಕಿನ ಏನೇಕಲ್ಲು  ಸಮೀಪದ ದೇವರಹಳ್ಳಿ ಕಲ್ಲಾಜೆ ಎಂಬಲ್ಲಿ ಜು.27 ರಂದು ನಡೆದಿದೆ. ಕಳೆದ 1 ತಿಂಗಳಿನಿಂದ  ಈ ಸಮಸ್ಯೆ ಮತ್ತೆ ಹೆಚ್ಚಾಗಿದ್ದು ಸಂಬಂಧಪಟ್ಟವರಲ್ಲಿ ಹೇಳಿಯೂ ಪರಿಹಾರವಾಗದೇ ಇದ್ದುದಕ್ಕೆ  ಅಧಿಕಾರಿಗಳ ಗಮನ ಸೆಳೆಯುವ ನಿಟ್ಟಿನಲ್ಲಿ ಸುಮಾರು 12 ಮಂದಿ ಬಾಳೆಗಿಟ್ಟು ನೆಟ್ಟು ಅಧಿಕಾರಿಗಳ ನಡೆಯನ್ನು ಟೀಕಿಸಿದ್ದಾರೆ. ಇನ್ನು ಇಲ್ಲಿನ  ಮರಕತ  ದೇವಸ್ಥಾನ ಹತ್ತಿರ ಡ್ಯಾಮ್

ಕೆಸರುಮಯವಾದ ರಸ್ತೆ  ಗ್ರಾಮಸ್ಥರಿಂದ ರಸ್ತೆ ಮಧ್ಯೆ  ಬಾಳೆಗಿಡನೆಟ್ಟು ಆಕ್ರೋಶ Read More »