ಕೆಲವರು ಲಂಚಕ್ಕೆ, ಕೆಲವರು ಮಂಚಕ್ಕೆ ಹೋಗುವ ಸ್ಥಿತಿ ಬಿಜೆಪಿಗೆ ಬಂದಿದೆ: ಡಿ.ಕೆ.ಶಿವಕುಮಾರ್ ವ್ಯಂಗ್ಯ

ಸಮಗ್ರ ನ್ಯೂಸ್: ಕೆಲವು ಶಾಸಕರು ತಮ್ಮ ಚಿತ್ರ ತೋರಿಸಬೇಡಿ ಎಂದು ತಡೆಯಾಜ್ಞೆ ತಂದ ಬೆನ್ನಲ್ಲೇ “ಕೆಲವರು ಲಂಚಕ್ಕೆ, ಕೆಲವರು ಮಂಚಕ್ಕೆ ಹೋಗುವ ಸ್ಥಿತಿ ಬಿಜೆಪಿಗೆ ಬಂದಿದೆ” ಎಂದು ಡಿ.ಕೆ.ಶಿವಕುಮಾರ್ ವ್ಯಂಗ್ಯ ಮಾಡಿದ್ದಾರೆ.

. Ad Widget . Ad Widget

ದಕ್ಷಿಣ ಕನ್ನಡ ಜಿಲ್ಲೆಯವರು ಸಂಭಾವಿತರು, ಸಚ್ಚಾರಿತ್ರ್ಯವಂತರು ಅಂತಾರೆ. ಆದರೆ ಇಲ್ಲಿನ ಕೆಲವು ಶಾಸಕರು ತಮ್ಮ ಚಿತ್ರ ತೋರಿಸಬೇಡಿ ಎಂದು ತಡೆಯಾಜ್ಞೆ ತಂದಿದ್ದಾರೆ. ಬಿಜೆಪಿ ಗರ್ಭಗುಡಿಯಲ್ಲಿ ಎಂಥ ಹುಳುಕು ಇದೆಯೆಂದು ತಿಳಿಯುತ್ತಿದೆ ಎಂದು ಬಿಜೆಪಿ ಶಾಸಕರ ಕೋರ್ಟ್ ಸ್ಟೇ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ರು. ಬೆಳ್ತಂಗಡಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ಬಾಂಬೆ ಬಾಯ್ಸ್ ಸಿಡಿ ವಿಚಾರದಲ್ಲಿ ಸ್ಟೇ ತಂದಿರೋದು ಗೊತ್ತಿದೆ. ಇವರ ಹುಳುಕು ಈಗ ಹೊರಗೆ ಬರ್ತಾ ಇದೆ, ಜನ ಗಮನಿಸುತ್ತಾರೆ ಎಂದರು.

. Ad Widget . . Ad Widget . Ad Widget

ಇನ್ನು ನಳಿನ್ ಬಗ್ಗೆ ಬೇರೇನೂ ಹೇಳಲ್ಲ, ಹತ್ತು ಲಕ್ಷ ಕೋಟಿ ಹೂಡಿಕೆ ಮಾಡಿದ್ದೇವೆಂದು ಹೇಳುತ್ತಾರೆ. ಕರಾವಳಿಯಲ್ಲಿ ಕನಿಷ್ಠ 5 ಸಾವಿರ ಬಂಡವಾಳ ಹೂಡಿಕೆ ಮಾಡಿಲ್ಲ ಏಕೆ? ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಪ್ರತ್ಯೇಕ ಪಾಲಿಸಿ ಮಾಡುತ್ತೇವೆ. ಇಲ್ಲಿನ ಜನರು ದುಬೈ, ಮುಂಬೈಗೆ ಹೋಗುವ ಸ್ಥಿತಿ ಬರಬಾರದು. ಕೆಲವರು ಲಂಚಕ್ಕೆ ಹೋದಲ್ಲಿ, ಕೆಲವರು ಮಂಚಕ್ಕೆ ಹೋಗುವ ಸ್ಥಿತಿ ಬಿಜೆಪಿಗೆ ಬಂದಿದೆ ಎಂದರು.

Leave a Comment

Your email address will not be published. Required fields are marked *