ಸಮಗ್ರ ಸಮಾಚಾರ

ನಾನೇ ಈ ರೀತಿ ಪರದಾಡಬೇಕಾದ್ರೆ ಜನಸಾಮಾನ್ಯರ ಕಥೆಯೇನು…?: ಸಿದ್ದರಾಮಯ್ಯ

ಬೆಂಗಳೂರು: ಕೊರೊನಾ ಸೋಂಕಿಗೆ ಲಸಿಕೆ ನೀಡಲು ಸರಕಾರ ಖಾಸಗಿಯವರಿಗೆ ಅವಕಾಶ ನೀಡಿದೆ. ಆದರೆ ಇದನ್ನೇ ಬಂಡವಾಳವಾಗಿ ಬಳಸಿಕೊಂಡಿರುವ ಖಾಸಗಿ ಆಸ್ಪತ್ರೆಗಳು ಜನರಿಂದ ಹಣ ಲೂಟಿ ಹೊಡೆಯುತ್ತಿವೆ. ಒಂದೊಂದು ಆಸ್ಪತ್ರೆಯಲ್ಲೂ ಲಸಿಕೆಗೆ ಒಂದೊಂದು ದರವಿದೆ ಎಂದು ಆರೋಪಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಲಸಿಕೆಗಳಿಗೆ ಏಕರೂಪದ ದರ ನಿಗದಿ ಮಾಡಲೇಬೇಕು ಎಂದು ಆಗ್ರಹಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಮಾತನಾಡಿದ ಸಿದ್ದರಾಮಯ್ಯ, “ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಸಿಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಒಂದೊಂದು ರೀತಿ ದರವಿದೆ. ೯೦೦ರೂ ಇಂದ ೧೨೫೦ರೂವರೆಗೆ ದರ ನಿಗದಿ […]

ನಾನೇ ಈ ರೀತಿ ಪರದಾಡಬೇಕಾದ್ರೆ ಜನಸಾಮಾನ್ಯರ ಕಥೆಯೇನು…?: ಸಿದ್ದರಾಮಯ್ಯ Read More »

ಕಾಪು: ಟಿಪ್ಪರ್ ಢಿಕ್ಕಿ ರಿಕ್ಷಾ ಚಾಲಕ ಮೃತ್ಯು

ಕಾಪು: ಆಟೋಗೆ ಟಿಪ್ಪರ್ ಢಿಕ್ಕಿಯಾಗಿ ಆಟೋ ಚಾಲಕ ಮೃತಪಟ್ಟ ಘಟನೆ ಇಂದು ಇಲ್ಲಿನ ಶಿರ್ವ ರಸ್ತೆಯ ಮಲ್ಲಾರು ಗ್ರಾಮದ ಸ್ವಾಗತನಗರ ಬಳಿ ನಡೆದಿದೆ.ಉಡುಪಿಯ ಮಧ್ವನಗರ ಕೊಡುವೂರು ನಿವಾಸಿ ಶಾವೂರು (೪೦) ಮೃತಪಟ್ಟವರು. ಇವರು ಶಾವೂರು ಫಕೀರಣ ಕಟ್ಟೆಗೆ ಆಗಮಿಸಿ ತಮ್ಮ ಆಟೋರಿಕ್ಷಾದಲ್ಲಿ ಹಿಂತಿರುಗುತ್ತಿದ್ದ ವೇಳೆ ಟಿಪ್ಪರ್ ಢಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಪು: ಟಿಪ್ಪರ್ ಢಿಕ್ಕಿ ರಿಕ್ಷಾ ಚಾಲಕ ಮೃತ್ಯು Read More »

ಕೊರೋನಾದಿಂದ ಅನಾಥರಾದ ಮಕ್ಕಳಿಗಾಗಿ “ಬಾಲಸೇವಾ ಯೋಜನೆ” ಜಾರಿ: ಬಿಎಸ್ ವೈ

ಬೆಂಗಳೂರು: ಕೊರೊನಾಗೆ ತುತ್ತಾಗಿ ಮೃತ್ತಪಟ್ಟವರ ಮಕ್ಕಳಿಗೆ ಬಾಲ ಸೇವಾ ಯೋಜನೆಯಡಿ ಮಾಸಿಕ 3,500 ರೂ. ಹಾಗು ಹಲವು ಸೌಲಭ್ಯಗಳನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ತಂದೆ-ತಾಯಿ ಕಳೆದುಕೊಂಡು ತಬ್ಬಲಿಯಾದ ಮಕ್ಕಳ ಕಲ್ಯಾಣಕ್ಕಾಗಿ ಈ ಯೋಜನೆ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಮಕ್ಕಳ ಪಾಲನೆ, ಪೋಷಣೆ ಮಾಡುವ ನಿಟ್ಟಿನಲ್ಲಿ ಸರ್ಕಾರದಿಂದ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಯೋಜನೆಯ ಪ್ರಕಾರ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ತಿಂಗಳಿಗೆ 3500 ರೂ. ಸಹಾಯಧನ ನೀಡಲಾಗುವುದುಪೋಷಕರಿಲ್ಲದ ಮಕ್ಕಳಿಗೆ ನೋಂದಾಯಿತ ಪಾಲನ ಸಮಿತಿಯಲ್ಲಿ

ಕೊರೋನಾದಿಂದ ಅನಾಥರಾದ ಮಕ್ಕಳಿಗಾಗಿ “ಬಾಲಸೇವಾ ಯೋಜನೆ” ಜಾರಿ: ಬಿಎಸ್ ವೈ Read More »

ಆಕೆಯ ಸಹವಾಸವೇ ಆತನಿಗೆ ಮುಳುವಾಯ್ತು: ಪಾಶವಾದ ಪರಸ್ತ್ರೀ ಪ್ರೇಮ!

ಮುಂಬೈ: ಕೆಲವೊಮ್ಮೆ ನಮ್ಮ ಆಸೆಗಳೇ ನಮಗೆ ತಿರುಗುಬಾಣವಾಗುತ್ತವೆ ಎನ್ನುವುದಕ್ಕೆ ಈ ಸ್ಟೋರಿ ಬೆಸ್ಟ್ ಎಕ್ಸಾಂಪಲ್. ಇಲ್ಲೊಬ್ಬನ ಅಕ್ರಮ ಸಂಬಂಧವೇ ಆತನ ಸಾವಿಗೆ ಕಾರಣವಾದ ಘಟನೆ ನಡೆದಿದೆ. ಪ್ರೇಮಪಾಶಕ್ಕೆ ತಾನೇ ಬಲಿಯಾದ ಘಟನೆ ನಡೆದಿರುವುದು ಇಲ್ಲಿನ ಖುಮ್ ಗಾಂವ್ ಎಂಬಲ್ಲಿ. ಮಹಾರಾಷ್ಟ್ರದ ಖಮ್‌ಗಾಂವ್ ತಾಲೂಕಿನ ಪಹುರ್ಜಿರಾ ನಿವಾಸಿ ಪ್ರಭುದಾಸ್ ಬೋಲೆಗೆ ಮದುವೆಯಾಗಿತ್ತು. ಆದರೆ ಹೆಂಡತಿಯೊಂದಿಗಿನ ಸಂಬಂಧ ಸಾಕಾಗದ ಆತ ವಿಧವೆ ಶಿಕ್ಷಕರಿಯೊಬ್ಬರ ಅಕ್ರಮ ಸಂಬಂಧದ ಬಲೆಗೆ ಬಿದ್ದಿದ್ದಾನೆ. ಮೊದ ಮೊದಲು ಸ್ನೇಹದ ರೂಪದಲ್ಲಿ ಆರಂಭವಾದ ಅವರ ಸಂಬಂಧ ಕೊನೆಗೆ

ಆಕೆಯ ಸಹವಾಸವೇ ಆತನಿಗೆ ಮುಳುವಾಯ್ತು: ಪಾಶವಾದ ಪರಸ್ತ್ರೀ ಪ್ರೇಮ! Read More »

ಒಂದು ಲೀಟರ್ ಹಾಲಿಗೆ 40ml ಹಾಲು ಫ್ರೀ: ದ.ಕ ಹಾಲು ಒಕ್ಕೂಟ

ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲೆಯ ಹಾಲು ಗ್ರಾಹಕರಿಗೆ ದ.ಕ. ಹಾಲು ಒಕ್ಕೂಟ ಸಿಹಿ ಸುದ್ದಿ ನೀಡಿದ್ದು, ನಂದಿನಿ ಪ್ಯಾಕೆಟ್ ಜೊತೆ ಹೆಚ್ಚುವರಿ ಹಾಲು ನೀಡಲು ನಿರ್ಧರಿಸಿದೆ. ಕೋವಿಡ್‌ ಸಂಕಷ್ಟದ ನಡುವೆಯೂ ಹೈನುಗಾರರಿಗೆ ನೆರವಾಗಲು, ಮತ್ತು ಅಧಿಕ ಶೇಕರಣೆ ತಗ್ಗಿಸಲು ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟ ನಿರ್ಧರಿಸಿದ್ದು, ಜೂನ್‌ 1ರಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹಾಲು ಖರೀದಿಸುವವರಿಗೆ ಲೀಟರ್‌ಗೆ ಹೆಚ್ಚುವರಿ ಹಾಲನ್ನು ಕೊಡುಗೆಯಾಗಿ ನೀಡಲಿದೆ. ಅರ್ಧ ಲೀಟರ್‌ ಹಾಲಿಗೆ 20 ಎಂ.ಎಲ್‌. 1

ಒಂದು ಲೀಟರ್ ಹಾಲಿಗೆ 40ml ಹಾಲು ಫ್ರೀ: ದ.ಕ ಹಾಲು ಒಕ್ಕೂಟ Read More »

ಕೋವಿಡ್ ರೋಗಿಗಳಲ್ಲಿ ಅಲ್ಲ ಸೋಂಕಿತರಿಗೆ ನೀಡಿದ ಚಪಾತಿಯಲ್ಲಿ ವೈಟ್ ಫಂಗಸ್…..!

ಬೆಂಗಳೂರು: ಈವರೆಗೆ ಕೊರೋನಾ ಸೋಂಕಿತರಲ್ಲಿ ಪತ್ತೆಯಾಗಿದ್ದ ವೈಟ್ ಫಂಗಸ್ ಇಂದು ಕೋವಿಡ್​ ಕೇರ್​ ಸೆಂಟರ್​ನ ಚಪಾತಿಯಲ್ಲಿಯೇ ಕಾಣಿಸಿಕೊಂಡಿದೆ. ಈ ಫಂಗಸ್ ನೋಡಿ ಕ್ವಾರಂಟೈನ್ ನಲ್ಲಿದ್ದವರು ಶಾಕ್ ಆಗಿದ್ದಾರೆ. ಹೌದು ಈಗಾಗಲೇ ಕೊರೋನಾ ರೋಗಿಗಳನ್ನು ಹಿಂಡಿ ಹಿಪ್ಪೆ ಮಾಡಿರುವ ಫಂಗಸ್​ ನಿನ್ನೆ ರಾತ್ರಿ ಕೋರಮಂಗಲದ ಕೋವಿಡ್ ಕೇರ್ ಸೆಂಟರ್ ನಲ್ಲಿದ್ದ ಸೋಂಕಿತರಿಗೆ ನೀಡಲಾದ ಚಪಾತಿಯಲ್ಲಿ ಕಂಡುಬಂದಿದೆ. ಇದು ಕೋವಿಡ್ ನಿಗ್ರಹ ವಿಚಾರದಲ್ಲಿ ಬಿಬಿಎಂಪಿ ಬೇಜವಾಬ್ದಾರಿತನವನ್ನು ಮತ್ತೆ ಎತ್ತಿ ತೋರಿಸಿದೆ. ಈ ಘಟನೆ, ಇಂತಹ ಊಟವನ್ನು ಸೇವಿಸ ಬೇಕಾ ಅಥವಾ

ಕೋವಿಡ್ ರೋಗಿಗಳಲ್ಲಿ ಅಲ್ಲ ಸೋಂಕಿತರಿಗೆ ನೀಡಿದ ಚಪಾತಿಯಲ್ಲಿ ವೈಟ್ ಫಂಗಸ್…..! Read More »

“ಪಂಪ್ವೆಲ್ ಡ್ಯಾಮ್ | ಇದು ನಳಿನಣ್ಣನ ಕೊಡುಗೆ” | ಫ್ಲೈ ಓವರ್ ಜಲಾವೃತ ಬೆನ್ನಲ್ಲೆ ನೆಟ್ಟಿಗರ ಆಕ್ರೋಶ

ಮಂಗಳೂರು: ನಿರ್ಮಾಣವಾಗಲು ಬರೋಬ್ಬರಿ ಹತ್ತು ವರ್ಷ ತೆಗೆದುಕೊಂಡು ಸ್ಥಳೀಯರ ಆಕ್ರೋಶಕ್ಕೆ ಮಣಿದು ಕೊನೆಗೂ ಉದ್ಘಾಟನೆಗೊಂಡ ಪಂಪಲ್ ಫ್ಲೈಓವರ್ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ರಾತ್ರಿ ಇಡೀ ಸುರಿದ ಭಾರೀ ಮಳೆಗೆ ಇಂದು ಬೆಳಿಗ್ಗೆ ಫ್ಲೈಓವರ್ ಕೆಳಗಿನ ಭಾಗ ಸಂಪೂರ್ಣ ಜಲಾವೃತವಾಗಿತ್ತು. ಸರ್ವಿಸ್ ರೋಡ್ ಮತ್ತು ಜಂಕ್ಷನ್ನಲ್ಲಿ ಕೆಲ ಗಂಟೆಗಳ ಕಾಲ ವಾಹನಗಳು ಅತ್ತಿತ್ತ ಚಲಿಸದಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದು ಸ್ಥಳೀಯರ ಮತ್ತು ವಾಹನ ಸವಾರರ ಆಕ್ರೋಶಕ್ಕೆ ಗುರಿಯಾಗಿದೆ. ಸ್ಥಳದಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ

“ಪಂಪ್ವೆಲ್ ಡ್ಯಾಮ್ | ಇದು ನಳಿನಣ್ಣನ ಕೊಡುಗೆ” | ಫ್ಲೈ ಓವರ್ ಜಲಾವೃತ ಬೆನ್ನಲ್ಲೆ ನೆಟ್ಟಿಗರ ಆಕ್ರೋಶ Read More »

ಪುತ್ತೂರಿನಲ್ಲಿ ರಿಯಲ್ ಎಸ್ಟೇಟ್ ವಾರ್ | ಪರಸ್ಪರ ಆರೋಪ ಹೊರಿಸಿ ಆಸ್ಪತ್ರೆ ಸೇರಿದ ಉದ್ಯಮಿಗಳು

ಪುತ್ತೂರು: ಹಲ್ಲೆ ನಡೆಸಲಾಗಿದೆ ಎಂದು ಪರಸ್ಪರ ಆರೋಪಿಸಿಕೊಂಡು ರಿಯಲ್ ಎಸ್ಟೇಟ್ ಉದ್ಯಮಿಗಳು ಆಸ್ಪತ್ರೆ ಸೇರಿ, ಪೊಲೀಸ್ ದೂರು ದಾಖಲಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ದಾವೂದ್ ನನ್ನ ಕಾರು ನಿಲ್ಲಿಸಿ ಹಲ್ಲೆ ನಡೆಸಿದ್ದಾಗಿ ಉದ್ಯಮಿ ರೋಶನ್ ರೈ ಆರೋಪಿಸಿದರೆ, ಕಾರಿನಿಂದ ಬೈಕ್‌ಗೆ ಡಿಕ್ಕಿ ಹೊಡೆದು ನನಗೆ ರೋಶನ್ ಹಲ್ಲೆ ನಡೆಸಿದ್ದಾರೆ ಎಂದು ದಾವೂದ್ ದೂರು ನೀಡಿದ್ದಾರೆ.ಇವರಿಬ್ಬರು ಬನ್ನೂರಿನ ರಿಯಲ್ ಎಸ್ಟೇಟ್ ಉದ್ಯಮಿಗಳಾಗಿದ್ದು ಪೊಲೀಸರು ಇವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಂಜಲ್ಪಡುವಿನ ಜಾಗದಲ್ಲಿ ಮಣ್ಣು ತೆಗೆಯುವ ವಿಷಯವಾಗಿ ರೋಶನ್ ರೈ

ಪುತ್ತೂರಿನಲ್ಲಿ ರಿಯಲ್ ಎಸ್ಟೇಟ್ ವಾರ್ | ಪರಸ್ಪರ ಆರೋಪ ಹೊರಿಸಿ ಆಸ್ಪತ್ರೆ ಸೇರಿದ ಉದ್ಯಮಿಗಳು Read More »

ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಫುಲ್ ಸ್ಟಾಪ್..! | ಸಾಹುಕಾರನಿಗೆ ಕ್ಲೀನ್ ಚಿಟ್ ನೀಡುತ್ತಾ ಎಸ್ ಐ ಟಿ.?

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಸಿಡಿ ಪ್ರಕರಣವು ಇಡೀ ರಾಜ್ಯ ರಾಜಕೀಯವನ್ನೇ ತಲ್ಲಣಗೊಳಿಸಿದ ಸುದ್ದಿ. ಇದರ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ ಅಧಿಕಾರಿಗಳು, ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿಯವರಿಗೆ ಕ್ಲೀನ್ ಚಿಟ್ ನೀಡಲು ಮುಂದಾಗಿದ್ದಾರೆಂಬ ಮಾಹಿತಿ ತಿಳಿದುಬಂದಿದೆ. ಪ್ರಕರಣ ಸಂಬಂಧ ಆರಂಭವಾಗಿದ್ದ ತನಿಖೆ ಪೂರ್ಣಗೊಂಡಿದೆ. ಜಾರಕಿಹೊಳಿ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ದೊರೆತಿಲ್ಲ. ಮಹಿಳೆಯೇ ಪದೇ ಪದೇ ಜಾರಕಿಹೊಳಿಯವರನ್ನು ಸಂಪರ್ಕಿಸಿದ್ದಾರೆ. ಸಾಕಷ್ಟು ಬಾರಿ ದೂರವಾಣಿ ಕರೆ ಮಾಡಿ ಪ್ರಚೋದನೆ ನೀಡುವ ರೀತಿಯಲ್ಲಿ

ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಫುಲ್ ಸ್ಟಾಪ್..! | ಸಾಹುಕಾರನಿಗೆ ಕ್ಲೀನ್ ಚಿಟ್ ನೀಡುತ್ತಾ ಎಸ್ ಐ ಟಿ.? Read More »

ಹಾಡುಹಗಲೇ ವೈದ್ಯ ದಂಪತಿಯ ಮೇಲೆ ಗುಂಡಿಕ್ಕಿದ ದುಷ್ಕರ್ಮಿಗಳು | ಇಲ್ಲಿದೆ ಹತ್ಯೆಯ ಭಯಾನಕ ವಿಡಿಯೋ

ರಾಜಸ್ಥಾನ: ಹಾಡುಹಗಲೇ ರಸ್ತೆಯಲ್ಲಿ ಕಾರು ತಡೆದು, ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ವೈದ್ಯ ದಂಪತಿಯನ್ನು ಗುಂಡಿಕ್ಕಿ ಕೊಂದ ಘಟನೆ ರಾಜ್ಯದ ಭರತ್​ಪುರ್​ನಲ್ಲಿ ನಡೆದಿದೆ. ವೈದ್ಯರಾದ ಡಾ. ಸುದೀಪ್ ಗುಪ್ತಾ ಮತ್ತು ಡಾ. ಸೀಮಾ ಗುಪ್ತಾ ದಂಪತಿ ಶುಕ್ರವಾರ ಸಂಜೆ 4.45ರ ವೇಳೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ದುಷ್ಕರ್ಮಿಗಳು ಓವರ್​ಟೇಕ್​ ಮಾಡಿ ಅಡ್ಡಗಟ್ಟಿ, ಗುಂಡಿನ ಸುರಿಮಳೆಗೈದು ಅಲ್ಲಿಂದ ಬೈಕ್​ನಲ್ಲಿ ಪರಾರಿಯಾಗಿದ್ದಾರೆ. ವೈದ್ಯ ದಂಪತಿ ಮೇಲೆ ಎರಡು ವರ್ಷದ ಹಿಂದೆ ಮಹಿಳೆಯೊಬ್ಬರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪವಿದ್ದು, ಕೊಲೆಯಾದ ಮಹಿಳೆ ವೈದ್ಯರೊಂದಿಗೆ ಸಂಬಂಧ

ಹಾಡುಹಗಲೇ ವೈದ್ಯ ದಂಪತಿಯ ಮೇಲೆ ಗುಂಡಿಕ್ಕಿದ ದುಷ್ಕರ್ಮಿಗಳು | ಇಲ್ಲಿದೆ ಹತ್ಯೆಯ ಭಯಾನಕ ವಿಡಿಯೋ Read More »