“ಪುದುಚೇರಿಯಲ್ಲಿ ಉಗ್ರ ಚಟುವಟಿಕೆಗೆ ಕಡಿವಾಣ, ಪ್ರವಾಸಿಗರ ಸುರಕ್ಷತೆಗೆ ಆದ್ಯತೆ”
-ಪುದುಚೇರಿ ಗೃಹಸಚಿವ ಎ. ನಮಸ್ಸಿವಾಯಂ
ಸುರತ್ಕಲ್: “ಪುದುಚೇರಿ ಸರಕಾರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು ವಿದೇಶಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಉಗ್ರ ಚಟುವಟಿಕೆಗೆ ಮೇಲೆ ಹದ್ದಿನ ಕಣ್ಣಿರಿಸಲಾಗಿದ್ದು ಸುರಕ್ಷತಾ ಕ್ರಮಕ್ಕೆ ಒತ್ತು ,ಕಾನೂನು ಸುವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ” ಎಂದು ಪುದುಚೇರಿ ಗೃಹಸಚಿವ ಎ. ನಮಸ್ಸಿವಾಯಂ ಅವರು ಹೇಳಿದರು. ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಶ್ರೀ ಕಟೀಲೇಶ್ವರಿ ಕಲ್ಲಿದ್ದಲು ನಿರ್ವಹಣಾ ಘಟಕಕ್ಕೆ ಭೇಟಿ ನೀಡಿದ ಅವರು ಕಲ್ಲಿದ್ದಲು ಉದ್ಯಮದ ಕುರಿತು ಮಾಹಿತಿ ಪಡೆದುಕೊಂಡರು.ಪುದುಚೇರಿ ಸಣ್ಣ ರಾಜ್ಯವಾಗಿದ್ದು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಹೆಚ್ಚೆಚ್ಚು ಆಕರ್ಷಿಸುತ್ತಿದೆ. ಕರ್ನಾಟಕದ ಯುವ […]










