Editor

ಅಂತರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ಉಪ್ಪಿನಂಗಡಿ ಶಾಲಾ ವಿದ್ಯಾರ್ಥಿಯ ಮಾದರಿ ಪ್ರದರ್ಶನ

ಸಮಗ್ರ ನ್ಯೂಸ್: ಉಪ್ಪಿನಂಗಡಿ ಸರ್ಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಅಬ್ದುಲ್ ಬಾಶಿತ್ ಜಪಾನ್‌ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದು, ಈ ಮೂಲಕ ಗ್ರಾಮೀಣ ವಿದ್ಯಾರ್ಥಿಯೊಬ್ಬರು ರಾಷ್ಟ್ರವನ್ನು ಪ್ರತಿನಿಧಿಸಿದ್ದಾರೆ. ಬೆಳ್ತಂಗಡಿ ತಾಲ್ಲೂಕಿನ ಕಡವಿನಬಾಗಿಲು ನಿವಾಸಿ ಇಲಿಯಾಸ್ ಪಾಷ ಹಾಗೂ ಸಬಿಯಾ ಎಂಬುವರ ಪುತ್ರ ನಿವಾಸಿ ಅಬ್ದುಲ್ ಬಾಸಿತ್ ತಾನು ಅನ್ವೇಷಿಸಿದ ‘ಸೀವಿಂಗ್ ಚಯರ್ ಫಾರ್ ಹ್ಯಾಂಡಿಕ್ಯಾಪ್ಸ್’ ಎಂಬ ವಿಜ್ಞಾನ ಮಾದರಿಯನ್ನು ಜಪಾನ್‌ನಲ್ಲಿ ಜೂನ್ 15ರಿಂದ 21ರವರೆಗೆ ನಡೆಯಲಿರುವ ಅಂತರರಾಷ್ಟ್ರೀಯ ವಿಜ್ಞಾನ ಸಮ್ಮೇಳನ ‘ಸುಕುರಾ’ದಲ್ಲಿ […]

ಅಂತರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ಉಪ್ಪಿನಂಗಡಿ ಶಾಲಾ ವಿದ್ಯಾರ್ಥಿಯ ಮಾದರಿ ಪ್ರದರ್ಶನ Read More »

ಪಾಸ್ಟ್ ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಘೋಷಣೆ| ಕಡಿಮೆಯಾಯ್ತು ಟೋಲ್ ದರ

ಸಮಗ್ರ ನ್ಯೂಸ್: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಬುಧವಾರ ಹೆದ್ದಾರಿಯಲ್ಲಿ ತೊಂದರೆಯಿಲ್ಲದ ಪ್ರಯಾಣಕ್ಕೆ ಅನುಕೂಲವಾಗುವಂತೆ ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಅನ್ನು ಪರಿಚಯಿಸುತ್ತಿರುವುದಾಗಿ ಘೋಷಿಸಿದೆ. X ನಲ್ಲಿ ಈ ಬಗ್ಗೆ ಘೋಷಣೆ ಮಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಆಗಸ್ಟ್ 15, 2025 ರಿಂದ ಜಾರಿಗೆ ಬರುವಂತೆ ಒಂದು ವರ್ಷಕ್ಕೆ ಈ ಪಾಸ್ನ ಬೆಲೆ 3,000 ರೂ.ಗಳಾಗಿರುತ್ತದೆ ಎಂದು ಹೇಳಿದರು. ಇತ್ತೀಚಿನ ಫಾಸ್ಟ್ಟ್ಯಾಗ್ ಪಾಸ್ ಕಾರುಗಳು, ಜೀಪ್ಗಳು ಮತ್ತು ವ್ಯಾನ್ಗಳಂತಹ ವಾಣಿಜ್ಯೇತರ ಖಾಸಗಿ ವಾಹನಗಳಿಗೆ ಮತ್ತು

ಪಾಸ್ಟ್ ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಘೋಷಣೆ| ಕಡಿಮೆಯಾಯ್ತು ಟೋಲ್ ದರ Read More »

ಮಂಗಳೂರು: ಡಿವೈಡರ್ ಗೆ ಕಾರು ಡಿಕ್ಕಿ ಹೊಡೆದು ಯುವಕರಿಬ್ಬರು ಸಾವು

ಸಮಗ್ರ ನ್ಯೂಸ್: ಕಾರೊಂದು ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸಾವನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಮಂಗಳೂರು ಹೊರವಲಯದ ಜಪ್ಪಿನಮೊಗರು ಬಳಿ ನಡೆದಿದೆ. ಮೃತರನ್ನು ಕೊಂಚಾಡಿಯ ಓಂಶ್ರೀ (24) ಮತ್ತು ಮಲ್ಲಿಕಟ್ಟೆಯ ಅಮನ್ ರಾವ್ (23) ಎಂದು ಗುರುತಿಸಲಾಗಿದೆ ಓಂಶ್ರೀ ಅವರು ದ.ಕ. ಜಿಲ್ಲಾ ಎನ್‌ಎಸ್‌ಯುಐ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಪಘಾತವಾದ ಕಾರಿನಲ್ಲಿ ನಾಲ್ಕೈದು ಮಂದಿ ಪ್ರಯಾಣಿಸುತ್ತಿದ್ದು, ಕಾರನ್ನು ಅಮನ್ ರಾವ್ ಚಲಾಯಿಸುತ್ತಿದ್ದರು ಎನ್ನಲಾಗಿದೆ. ತಲಪಾಡಿ ಕಡೆಯಿಂದ ಪಂಪ್‌ವೆಲ್ ಕಡೆಗೆ ಬರುತ್ತಿದ್ದ

ಮಂಗಳೂರು: ಡಿವೈಡರ್ ಗೆ ಕಾರು ಡಿಕ್ಕಿ ಹೊಡೆದು ಯುವಕರಿಬ್ಬರು ಸಾವು Read More »

ಮಂಗಲ ಸೂತ್ರ ಉಚಿತವಾಗಿ ನೀಡಿದ ಚಿನ್ನದ ವ್ಯಾಪಾರಿ| ಕಣ್ಣೀರಾದ ವೃದ್ಧ‌ ದಂಪತಿ

ಸಮಗ್ರ ನ್ಯೂಸ್: ತಮ್ಮ ಪತ್ನಿಗಾಗಿ ಚಿನ್ನದ ಮಂಗಳಸೂತ್ರ ಖರೀದಿಸಲು ಆಭರಣದ ಅಂಗಡಿಗೆ ಬಂದಿದ್ದ ವೃದ್ಧರೊಬ್ಬರು, ತಮ್ಮಲ್ಲಿನ ಸಂಪೂರ್ಣ ಉಳಿತಾಯವನ್ನು ಅಂಗಡಿ ಮಾಲೀಕರಿಗೆ ನೀಡಿದ್ದಾರೆ. ಆದರೆ, ಆ ಹಣ ಮಂಗಳಸೂತ್ರದ ಬೆಲೆಗೆ ಸಾಕಾಗಲಿಲ್ಲ. ಆಗ ಆಭರಣ ವ್ಯಾಪಾರಿ ಮಾಡಿದ ಕೆಲಸ ಎಲ್ಲರ ಹೃದಯವನ್ನು ತಟ್ಟಿದೆ. ವೃದ್ಧ ಮಹಿಳೆಗೆ ಬಹಳ ದಿನಗಳಿಂದ ಚಿನ್ನದ ಮಂಗಳಸೂತ್ರ ಖರೀದಿಸುವ ಆಸೆಯಿತ್ತು. ಪತ್ನಿಯ ಈ ಆಸೆಯನ್ನು ಈಡೇರಿಸಲು, ವೃದ್ಧ ವ್ಯಕ್ತಿ ಪಂಢರಪುರಕ್ಕೆ ತೀರ್ಥಯಾತ್ರೆಗೆ ಬಂದಿದ್ದಾಗ ಆಭರಣ ಅಂಗಡಿಯೊಂದಕ್ಕೆ ಭೇಟಿ ನೀಡಿದ್ದರು. ಮಂಗಳಸೂತ್ರ ಖರೀದಿಸಲು ತಮ್ಮಲ್ಲಿದ್ದ

ಮಂಗಲ ಸೂತ್ರ ಉಚಿತವಾಗಿ ನೀಡಿದ ಚಿನ್ನದ ವ್ಯಾಪಾರಿ| ಕಣ್ಣೀರಾದ ವೃದ್ಧ‌ ದಂಪತಿ Read More »

ಉಡುಪಿ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿ.ಕೆ ನೇಮಕ

ಸಮಗ್ರ ನ್ಯೂಸ್: ಆರ್‌ಡಿಪಿಆರ್ ಇ-ಗವರ್ನೆನ್ಸ್ ನಿರ್ದೇಶಕಿಯಾಗಿದ್ದ ಸ್ವರೂಪ ಟಿ.ಕೆ. ಅವರನ್ನು ಉಡುಪಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಉಡುಪಿ ಡಿಸಿಯಾಗಿದ್ದ ವಿದ್ಯಾಕುಮಾರಿ ಕೆ. ಅವರನ್ನು ಸ್ಥಳ ನಿಯುಕ್ತಿಗೊಳಿಸದೇ ವರ್ಗಾವಣೆ ಮಾಡಲಾಗಿದೆ.

ಉಡುಪಿ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿ.ಕೆ ನೇಮಕ Read More »

ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ವರ್ಗಾವಣೆ| ನೂತನ ಡಿಸಿಯಾಗಿ ದರ್ಶನ್ ಎಚ್.ವಿ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಮುಲ್ಲೈ ಮುಗಿಲನ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ವಾಣಿಜ್ಯ ತೆರಿಗೆಗಳ ಹೆಚ್ಚುವರಿ ಆಯುಕ್ತ ದರ್ಶನ್ ಎಚ್ ವಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ. ಮುಲ್ಲೈ ಮುಗಿಲನ್ ಅವರನ್ನು ಇನ್ಸ್‌ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ ಆಂಡ್ ಸ್ಟಾಂಪ್ಸ್ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿರುವ ದರ್ಶನ್ ಎಚ್‌ವಿ ವಾಣಿಜ್ಯ ತೆರಿಗೆಗಳ ಹೆಚ್ಚುವರಿ ಆಯುಕ್ತರಾಗಿದ್ದರು.

ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ವರ್ಗಾವಣೆ| ನೂತನ ಡಿಸಿಯಾಗಿ ದರ್ಶನ್ ಎಚ್.ವಿ Read More »

ಮಂಗಳೂರು: ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಯುವವೈದ್ಯ ಸಾವು

ಸಮಗ್ರ ನ್ಯೂಸ್: ಮಂಗಳೂರು ನಗರದ ನಂತೂರಿನ ತಾರೆತೋಟ ಬಳಿ ಸೋಮವಾರ ರಾತ್ರಿ ಕಾರೊಂದು ಭಾರೀ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ, ಸ್ಕಿಡ್ ಆಗಿ ಡಿವೈಡರ್ ಬಡಿದು ಸಂಭವಿಸಿದ ಅಪಘಾತದಲ್ಲಿ ಕಾರು ಚಲಾಯಿಸುತ್ತಿದ್ದ ಫಿಸಿಯೋಥೆರಪಿ ವೈದ್ಯರೊಬ್ಬರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಮೂಲತಃ ಕೇರಳದ ಆಲಪ್ಪುಝ ನಿವಾಸಿ ಡಾ.ಮುಹಮ್ಮದ್ ಅಮಲ್ (29) ಮೃತಪಟ್ಟವರು ಎಂದು ತಿಳಿದು ಬಂದಿದೆ. ದೇರಳಕಟ್ಟೆ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಮುಗಿಸಿ ಅಲ್ಲಿಯೇ ಡ್ಯೂಟಿಗೆ ಸೇರಿದ್ದ ಡಾ.ಮುಹಮ್ಮದ್ ಅಮಲ್ ನಿನ್ನೆ ರಾತ್ರಿ 11:45ರ ಸುಮಾರಿಗೆ

ಮಂಗಳೂರು: ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಯುವವೈದ್ಯ ಸಾವು Read More »

ಮಂಗಳೂರು: ಮಗುವನ್ನು ಬಲಿಪಡೆದ ಸೇದಿ ಬಿಸಾಡಿದ ಬೀಡಿ

ಸಮಗ್ರ ನ್ಯೂಸ್: : ತಂದೆ ಸೇದಿ ಬಿಸಾಡಿದ್ದ ಬೀಡಿ ತುಂಡು ನುಂಗಿದ ಮಗು ದಾರುಣ ಸಾವಿಗೀಡಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಅಡ್ಯಾರ್‌ನಲ್ಲಿ ವಾಸಿಸುತ್ತಿದ್ದ ಬಿಹಾರ ಮೂಲದ ದಂಪತಿ ಪುತ್ರ ಅನೀಶ್‌ ಎಂಬ ಮಗು ಮೃತಪಟ್ಟಿದೆ. ಬೀಡಿ ತುಂಡು ಗಂಟಲಲ್ಲಿ ಸಿಲುಕಿಕೊಂಡು ಅಸ್ವಸ್ಥಗೊಂಡಿದ್ದ ಮಗು ಚಿಕಿತ್ಸೆ ಫಲಿಸದೇ ವೆನ್ಲಾಕ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಮನೆಯ ನೆಲದಲ್ಲಿ ಬಿದ್ದಿದ್ದ ಬೀಡಿ ತುಂಡನ್ನು ಮಗು ನುಂಗಿತ್ತು. ಸ್ವಲ್ಪ ಹೊತ್ತಲ್ಲೇ ಅಸ್ವಸ್ಥಗೊಂಡ ಮಗುವನ್ನು ಮನೆಯವರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಗು ಕೊನೆಯುಸಿರೆಳೆದಿದೆ.ಘಟನೆಗೆ

ಮಂಗಳೂರು: ಮಗುವನ್ನು ಬಲಿಪಡೆದ ಸೇದಿ ಬಿಸಾಡಿದ ಬೀಡಿ Read More »

ವಲಸಿಗರ ಗಡೀಪಾರು ನೀತಿ/ ಟ್ರಂಪ್ ವಿರುದ್ಧ ಅಮೆರಿಕದ 50 ರಾಜ್ಯದಲ್ಲಿ ಪ್ರತಿಭಟನೆ

ಸಮಗ್ರ ನ್ಯೂಸ್‌: ವಲಸಿಗರ ಹೊರದಬ್ಬುವ ವಿರುದ್ಧ ಅಮೆರಿಕದ ಲಾಸ್‌ ಏಂಜೆಲೀಸ್‌ನಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಹಿಂಸಾತ್ಮಕ ಹೋರಾಟ ನಡೆದಿರುವ ನಡುವೆಯೇ, ‘ಟ್ರಂಪ್ ಓರ್ವ ಸವಾಧಿಕಾರಿ. ಅವರು ತೊಲಗಬೇಕು’ ಎಂದು ಆಗ್ರಹಿಸಿ ದೇಶದ 50 ರಾಜ್ಯಗಳಲ್ಲಿ ವಾರಾಂತ್ಯದ ವೇಳೆ ‘ನೋ ಕಿಂಗ್ಸ್’ (ಬೇಡ ಸರ್ವಾಧಿಕಾರ) ಹೆಸರಿನ ಭಾರಿ ಪ್ರತಿಭಟನೆಗಳು ನಡೆದಿವೆ. ನ್ಯೂಯಾರ್ಕ್‌, ಡೆನ್ವರ್‌, ಶಿಕಾಗೋ, ಆಸ್ಟಿನ್, ಮಿನ್ನೆಸೋಟ, ಟೆಕ್ಸಾಸ್‌, ಅಟ್ಲಾಂಟಾ ಮತ್ತು ಲಾಸ್ ಏಂಜಲೀಸ್‌ ಸೇರಿದಂತೆ 50 ರಾಜ್ಯಗಳ ಪ್ರಮುಖ ನಗರಗಳು ಹಾಗೂ ಚಿಕ್ಕಪುಟ್ಟ ಊರುಗಳಲ್ಲೂ ಲಕ್ಷಾಂತರ

ವಲಸಿಗರ ಗಡೀಪಾರು ನೀತಿ/ ಟ್ರಂಪ್ ವಿರುದ್ಧ ಅಮೆರಿಕದ 50 ರಾಜ್ಯದಲ್ಲಿ ಪ್ರತಿಭಟನೆ Read More »

ಪುತ್ತೂರು: ಏಳು ತಿಂಗಳ ಗರ್ಭಿಣಿ ಆತ್ಮಹತ್ಯೆಗೆ ಶರಣು

ಸಮಗ್ರ ನ್ಯೂಸ್: ತುಂಬು ಗರ್ಭಿಣಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಪುತ್ತೂರು ನಗರದ ಚಿಕ್ಕಪುತ್ತೂರಿನಲ್ಲಿ ಜೂ. 15ರ ರಾತ್ರಿ ವರದಿಯಾಗಿದೆ. ಚಿಕ್ಕಪುತ್ತೂರಿನ ನಿವಾಸಿ, ಪುತ್ತಿಲ ಪರಿವಾರದ ಮುಖಂಡ ಚಿಂತನ್ ಅವರ ಪತ್ನಿ ರೇಶ್ಮಾ (28) ಮೃತ ದುರ್ದೈವಿ. ಏಳು ತಿಂಗಳ ಗರ್ಭಿಣಿಯಾಗಿದ್ದ ರೇಶ್ಮಾ ಅವರು, ತಾವು ವಾಸವಿದ್ದ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಸುರತ್ಕಲ್ ಮೂಲದ ರೇಶ್ಮಾ ಅವರನ್ನು ನಾಲ್ಕು ವರ್ಷಗಳ ಹಿಂದೆ ಚಿಕ್ಕಪುತ್ತೂರಿನ ಚಿಂತನ್ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿಗೆ ಓರ್ವ

ಪುತ್ತೂರು: ಏಳು ತಿಂಗಳ ಗರ್ಭಿಣಿ ಆತ್ಮಹತ್ಯೆಗೆ ಶರಣು Read More »