Editor

ಸುಳ್ಯ: ಕೆವಿಜಿ ಆಯುರ್ವೇದಿಕ್ ಆಸ್ಪತ್ರೆಯ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಯ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು(ಫೆ.7) ಬೆಳಿಗ್ಗೆ ಸಂಭವಿಸಿದೆ. ಸುಳ್ಯ ಕೆವಿಜಿ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಪುತ್ತೂರು ತಾಲೂಕಿನ ತಿಂಗಳಾಡಿಯ ವಸಂತ ಎಂಬವರು ಚಿಕಿತ್ಸೆಗಾಗಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ ಆರು ಗಂಟೆ ಸುಮಾರಿಗೆ ಆಸ್ಪತ್ರೆಯ ಕಟ್ಟಡದ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಲಿಕಾರರಾಗಿದ್ದ ಇವರು ಪಿಟ್ಸ್ ಕಾಯಿಲೆಗೆ ಒಳಗಾಗಿದ್ದರು. ಇದಕ್ಕಾಗಿ ಚಿಕಿತ್ಸೆ ನೀಡಲಾಗುತ್ತಿತ್ತು‌ ಎಂದು ತಿಳಿದುಬಂದಿದೆ. ಮೃತರು ಪತ್ನಿ

ಸುಳ್ಯ: ಕೆವಿಜಿ ಆಯುರ್ವೇದಿಕ್ ಆಸ್ಪತ್ರೆಯ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ Read More »

ಕುಮಾರ ಪರ್ವತ ಚಾರಣಕ್ಕೆ ನಿಷೇಧ ಯಾಕೆ? ಸಚಿವ ಈಶ್ವರ ಖಂಡ್ರೆ ಸ್ಪಷ್ಟನೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಡಗು ಜಿಲ್ಲೆಯ ಸೋಮವಾರಪೇಟೆಯಿಂದ ಚಾರಣ ಮಾಡಬಹುದಾದ ಪ್ರಸಿದ್ಧ ಸ್ಥಳ ಕುಮಾರ ಪರ್ವತ ಚಾರಣಕ್ಕೆ ನಿರ್ಬಂಧ ಹೇರಿದ್ದೇಕೆ ಎಂಬ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸ್ಪಷ್ಟನೆ ನೀಡಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಮಾರ ಪರ್ವತ ಚಾರಣಪಥದಲ್ಲಿ ಜನಜಂಗುಳಿಯಿಂದ ಪರಿಸರ ಹಾನಿ ಭೀತಿ ಎದುರಾಗಿದೆ. ಹೀಗಾಗಿ ಚಾರಣ ನಿಯಂತ್ರಣ ಸಂಬಂಧ ವರದಿ ಸಲ್ಲಿಸಲು ಸೂಚಿಸಿದ್ದೇನೆ. ಅದರ ಜೊತೆಗೆ ಚಾರಣಕ್ಕೆ ಆನ್ ಲೈನ್ ದಾಖಲಾತಿ ಕ್ರಮ

ಕುಮಾರ ಪರ್ವತ ಚಾರಣಕ್ಕೆ ನಿಷೇಧ ಯಾಕೆ? ಸಚಿವ ಈಶ್ವರ ಖಂಡ್ರೆ ಸ್ಪಷ್ಟನೆ Read More »

ಜೀವಂತ ಮೀನು ನುಂಗಿದ್ದ ಹನ್ನೊಂದು ತಿಂಗಳ ಮಗು

ಸಮಗ್ರ ನ್ಯೂಸ್: ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ನ್ಯಾಮತಿ ಹತ್ತಿರದ ಗಂಜೇನಹಳ್ಳಿಯ ಯೋಗೀಶ್‌ ಅವರ 11 ತಿಂಗಳ ಮಗು ಪ್ರತೀಕ್‌ ಜೀವಂತ ಮೀನು ನುಂಗಿ ಗಂಟಲಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ಆಟವಾಡುತ್ತಾ ಮಗು ಕೈಯಲ್ಲಿದ್ದ ಮೀನು ನುಂಗಿದ್ದು, ಗಂಟಲಲ್ಲಿ ಸಿಕ್ಕಿಕೊಂಡಿತ್ತು. ತಕ್ಷಣ ಮೀನನ್ನು ಹೊರ ತೆಗೆಯಲು ಪೋಷಕರು ಪ್ರಯತ್ನ ನಡೆಸಿದ್ದರಾದರೂ ಯಶಸ್ವಿ ಆಗಿರಲಿಲ್ಲ. ಅಷ್ಟೊತ್ತಿಗಾಗಲೇ ಮಗುವಿನ ಸ್ಥಿತಿ ಗಂಭೀರವಾಗಿದ್ದು, ಬಳಿಕ ಪೋಷಕರು ಮಗುವನ್ನು ಸರ್ಜಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಕೂಡಲೇ ತಪಾಸಣೆ ನಡೆಸಿದ ತಜ್ಞ ವೈದ್ಯರು, ತೀವ್ರ

ಜೀವಂತ ಮೀನು ನುಂಗಿದ್ದ ಹನ್ನೊಂದು ತಿಂಗಳ ಮಗು Read More »

ಕರಾವಳಿಯಲ್ಲಿ ಮತ್ತೆ ಕೆಂಪು ಉಗ್ರರ ಕರಿನೆರಳು| ಉಡುಪಿ ಜಿಲ್ಲೆಯಲ್ಲಿ ಶಸ್ತ್ರಸಜ್ಜಿತ ನಕ್ಸಲರ ಓಡಾಟ!!

ಸಮಗ್ರ ನ್ಯೂಸ್: ದಶಕದಿಂದ ತಣ್ಣಗಾಗಿದ್ದ ನಕ್ಸಲ್ ಚಟುವಟಿಕೆ ಮತ್ತೆ ರಾಜ್ಯದ ಕರಾವಳಿ ಜಿಲ್ಲೆಯಲ್ಲಿ ಆಯಕ್ಟೀವ್ ಆಗಿದ್ದು ಉಡುಪಿಯ ಬೈಂದೂರು ಭಾಗದಲ್ಲಿ ಓಡಾಟ ಆರಂಭವಾಗಿದೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಲ್ಲೂರು ಪೊಲೀಸ್​ ಠಾಣಾ ವ್ಯಾಪ್ತಿಯ ಹಲವೆಡೆ ನಕ್ಸಲರ ಓಡಾಟದ ಸುಳಿವು ಸಿಕ್ಕಿದೆ. ಬೈಂದೂರು ತಾಲೂಕಿನ ಕೊಲ್ಲೂರು, ಮುದೂರು, ಜಡ್ಕಲ್‌, ಬೆಳ್ಕಲ್‌ ಗ್ರಾಮಗಳ ಹಲವು ಮನೆಗಳಿಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಶಸ್ತ್ರ ಸಜ್ಜಿತ ನಕ್ಸಲರು ಹಸಿರು ಬಣ್ಣದ ಬಟ್ಟೆ ತೊಟ್ಟಿದ್ದರ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಕರಾವಳಿಯಲ್ಲಿ ಮತ್ತೆ ಕೆಂಪು ಉಗ್ರರ ಕರಿನೆರಳು| ಉಡುಪಿ ಜಿಲ್ಲೆಯಲ್ಲಿ ಶಸ್ತ್ರಸಜ್ಜಿತ ನಕ್ಸಲರ ಓಡಾಟ!! Read More »

ಮಡಿಕೇರಿ: ಪ್ರಕೃತಿ ವಿಕೋಪದಡಿ ಮನೆ ಪಡೆದುಕೊಂಡವರ ಹಳೆಯ ಮನೆಯನ್ನು ತೆರವು ಮಾಡುವಂತೆ ಆದೇಶವಿದ್ದರೂ ಕೆಲವರ ಮನೆಯನ್ನು ತೆರೆವು ಮಾಡದೆ ಕಣ್ಮುಚ್ಚಿ ಕುಳಿತ ನಗರಸಭೆ, ಜಿಲ್ಲಾಡಳಿತ

ಸಮಗ್ರ ನ್ಯೂಸ್: 2018ರ ಪ್ರಕೃತಿ ವಿಕೋಪದಲ್ಲಿ ಕೊಡಗು ಜಿಲ್ಲೆಯ ಹಲವು ಭಾಗದಲ್ಲಿ ಪ್ರಕೃತಿ ವಿಕೋಪದಲ್ಲಿ ಮನೆಗಳನ್ನು ಕಳೆದುಕೊಂಡವರಿಗೆ ಜಿಲ್ಲಾಡಳಿತದ ವತಿಯಿಂದ ಪುನರ್ ವಸತಿ ಕಲ್ಪಿಸಲಾಗಿತ್ತು. ಆಗಿನ ಜಿಲ್ಲಾಧಿಕಾರಿಯಾಗಿದ್ದ ವಿದ್ಯಾ ಹಾಗೂ ಉಪ ವಿಭಾಗಾಧಿಕಾರಿ ಜವರೇಗೌಡ ಅವರು ಮಡಿಕೇರಿ ನಗರದ ಇಂದಿರಾ ನಗರ, ಚಾಮುಂಡೇಶ್ವರಿ ನಗರ ಹಾಗೂ ತ್ಯಾಗರಾಜ ಕಾಲೋನಿ ಹಾಗೂ ಮಡಿಕೇರಿ ನಗರಕ್ಕೆ ಸಂಬಂಧಪಟ್ಟ ಹಲವು ನಗರಗಳಲ್ಲಿ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡವರು ಹಾಗೂ ಹಾನಿಯಾದವರಿಗೆ ಮನೆಗಳನ್ನು ನೀಡುವ ಸಂದರ್ಭದಲ್ಲಿ ತಮ್ಮ ವಾಸದ ಮನೆಯ ಬದಲಿಗೆ ಪುನರ್ವಸತಿ

ಮಡಿಕೇರಿ: ಪ್ರಕೃತಿ ವಿಕೋಪದಡಿ ಮನೆ ಪಡೆದುಕೊಂಡವರ ಹಳೆಯ ಮನೆಯನ್ನು ತೆರವು ಮಾಡುವಂತೆ ಆದೇಶವಿದ್ದರೂ ಕೆಲವರ ಮನೆಯನ್ನು ತೆರೆವು ಮಾಡದೆ ಕಣ್ಮುಚ್ಚಿ ಕುಳಿತ ನಗರಸಭೆ, ಜಿಲ್ಲಾಡಳಿತ Read More »

ನಿಮ್ಹಾನ್ಸ್​​ನಲ್ಲಿ ಕೆಲಸ ಖಾಲಿ ಇದೆ, ಬೇಗ ಅರ್ಜಿ ಹಾಕಿ

ಸಮಗ್ರ ಉದ್ಯೋಗ: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಬಯೋಇನ್ಫರ್ಮೆಟಿಸಿಯನ್ ಹುದ್ದೆ ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಶೈಕ್ಷಣಿಕ ಅರ್ಹತೆ:ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿಇ/ಬಿ.ಟೆಕ್, ಎಂ.ಟೆಕ್, ಬಯೋಸ್ಟಾಟಿಸ್ಟಿಕ್ಸ್ ಅಥವಾ ಬಯೋಇನ್ಫರ್ಮ್ಯಾಟಿಕ್ಸ್ ಅಥವಾ

ನಿಮ್ಹಾನ್ಸ್​​ನಲ್ಲಿ ಕೆಲಸ ಖಾಲಿ ಇದೆ, ಬೇಗ ಅರ್ಜಿ ಹಾಕಿ Read More »

ಸಿಎಂ ಸಿದ್ದರಾಮಯ್ಯಗೆ 10 ಸಾವಿರ ರೂಪಾಯಿ ದಂಡ ವಿಧಿಸಿದ ಹೈಕೋರ್ಟ್

ಸಮಗ್ರ ನ್ಯೂಸ್: ಪ್ರತಿಭಟನೆ ಸಂಧರ್ಭದಲ್ಲಿ ರಸ್ತೆ ತಡೆದು ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ​​ಹೈಕೋರ್ಟ್ ವಜಾ ಮಾಡಿದ್ದು, 10 ಸಾವಿರ ರೂ. ದಂಡ ವಿಧಿಸಿದೆ. ಹಾಗೆ ಮಾರ್ಚ್ 6 ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದೆ. ಈ ಹಿಂದೆ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ, ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ

ಸಿಎಂ ಸಿದ್ದರಾಮಯ್ಯಗೆ 10 ಸಾವಿರ ರೂಪಾಯಿ ದಂಡ ವಿಧಿಸಿದ ಹೈಕೋರ್ಟ್ Read More »

ಕಡಬ: ಮೊಬೈಲ್ ಶಾಪ್ ಬೀಗ ಮುರಿದು ಮೊಬೈಲ್, ಹಣ ಕಳ್ಳತನ| ಸಿಸಿಟಿವಿ ಯಲ್ಲಿ ದೃಶ್ಯ ಸೆರೆ

ಸಮಗ್ರ ನ್ಯೂಸ್: ಆಲಂಕಾರು ಶ್ರೀ ದುರ್ಗಾಟವರ್ ನಲ್ಲಿ ಕಾರ್ಯಚರಿಸುತ್ತಿದ್ದ ಸಾನಿಧ್ಯ ಮೊಬೈಲ್ ಅಂಗಡಿಯ ಎರಡು ಬೀಗಗಳನ್ನು ಏಕೋ ಬ್ಲಡ್ ಮೂಲಕ ಕತ್ತರಿಸಿ ಮೊಬೈಲ್ ಹಾಗೂ ಹಣ ಕಳ್ಳತನ ಮಾಡಿದ ಘಟನೆ ಫೆ.5 ರಂದು ರಾತ್ರಿ ಅಂದಾಜು 1:30 ಗಂಟೆಯ ಸಮಯಕ್ಕೆ ನಡೆದಿದೆ. ಸಿ.ಸಿ ಟಿವಿ ವೀಡಿಯೋ ಮೂಲಕ ಕಡಬ ಪೋಲಿಸರು ಪರೀಶಿಲನೆ ನಡೆಸಿದಾಗ ಆತ ಹೊರ ರಾಜ್ಯದಿಂದ ಬಂದಿದ್ದು ನೆಕ್ಕರೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಹತ್ತಿರ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಒಂದು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದಾನೆ

ಕಡಬ: ಮೊಬೈಲ್ ಶಾಪ್ ಬೀಗ ಮುರಿದು ಮೊಬೈಲ್, ಹಣ ಕಳ್ಳತನ| ಸಿಸಿಟಿವಿ ಯಲ್ಲಿ ದೃಶ್ಯ ಸೆರೆ Read More »

ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ|ಭಾರತೀಯ ಹಾಕಿ ತಂಡದ ಆಟಗಾರನ ವಿರುದ್ಧ ಎಫ್ಐಆರ್

ಸಮಗ್ರ ನ್ಯೂಸ್: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಭಾರತೀಯ ಹಾಕಿ ತಂಡದ ಡಿಫೆಂಡರ್ ಆಗಿರುವ ವರುಣ್ ಕುಮಾರ್ ಅವರ ಮೇಲೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. 2021ನೇ ಸಾಲಿನ ಅರ್ಜುನ ಪ್ರಶಸ್ತಿಗೆ ಭಾಜನರಾಗಿರುವ ವರುಣ್ ಕುಮಾರ್ ವಿರುದ್ಧ ಯುವತಿ ಗಂಭೀರ ಆರೋಪ ಮಾಡಿದ್ದು ಪೋಕ್ಸೋ ಪ್ರಕರಣ ದಾಖಲಾಗಿದೆ. ಯುವತಿ 17ನೇ ವಯಸ್ಸಿನಲ್ಲಿ ಇರುವಾಗಲೇ ಮದುವೆಯಾಗುವುದಾಗಿ ನಂಬಿಸಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿರುವುದಾಗಿ ಯುವತಿ ಆರೋಪ ಮಾಡಿದ್ದಾಳೆ. ದೂರುದಾರ ಯುವತಿ ಜ್ಞಾನಭಾರತಿ

ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ|ಭಾರತೀಯ ಹಾಕಿ ತಂಡದ ಆಟಗಾರನ ವಿರುದ್ಧ ಎಫ್ಐಆರ್ Read More »

ಮದುವೆಯಾಗಿ 21 ದಿನಕ್ಕೆ ಬಿಟ್ಟುಹೋದ ಪತ್ನಿ| ಮನನೊಂದು ಪತಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಮದುವೆಯಾಗಿ 21 ದಿನಕ್ಕೆ ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ವಿನೋದ್(24) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ತೇಗೂರು ಗ್ರಾಮದ ಮನೆಯಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವಿನೋದ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಪ್ರೀತಿಸಿ ಮದುವೆಯಾದ ಮೂರೇ ದಿನಕ್ಕೆ ಹೆಂಡತಿ ಬಿಟ್ಟು ಹೋದಳೆಂದು ಮನನೊಂದು ವಿನೋದ್ ಮನೆಯಲ್ಲಿ ಯಾರು ಇಲ್ಲದ ವೇಳೆ ಸಮಯ ನೋಡಿಕೊಂಡು ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಚಿಕ್ಕಮಗಳೂರಿನ ತೇಗೂರು ಗ್ರಾಮದ ತನುಜಾ ಎಂಬ

ಮದುವೆಯಾಗಿ 21 ದಿನಕ್ಕೆ ಬಿಟ್ಟುಹೋದ ಪತ್ನಿ| ಮನನೊಂದು ಪತಿ ಆತ್ಮಹತ್ಯೆ Read More »