Editor

ಫಲಾನುಭವಿಗಳ ಸಮಾವೇಶ| ಮಜ್ಜಿಗೆ ಚೀಲಗಳನ್ನು ಹೊತ್ತೊಯ್ದ ಸಾರ್ವಜನಿಕರು

ಸಮಗ್ರ ನ್ಯೂಸ್: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ಗ್ಯಾರಂಟಿ ಯೋಜನೆ ಫಲನುಭವಿಗಳಿಗೆ ಸಮಾವೇಶ ನಡೆದಿತ್ತು. ಆದರೆ ಸಮಾವೇಶಕ್ಕೆ ಬಂದ ಜನ ಮಜ್ಜಿಗೆ ಪ್ಯಾಕೆಟ್ ಚೀಲಗಳನ್ನು ಹೊತ್ತೊಯ್ದಿದ್ದಾರೆ. ಕಾರ್ಯಕ್ರಮದಲ್ಲಿ ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. ಸ್ಟೇಜ್ ಹಿಂಭಾಗದಲ್ಲಿ ಮಜ್ಜಿಗೆ ಇರಿಸಲಾಗಿದ್ದು, ಜನ ಚೀಲಗಳನ್ನು ಎತ್ತಿಕೊಂಡು ಹೋಗಿದ್ದಾರೆ.

ಫಲಾನುಭವಿಗಳ ಸಮಾವೇಶ| ಮಜ್ಜಿಗೆ ಚೀಲಗಳನ್ನು ಹೊತ್ತೊಯ್ದ ಸಾರ್ವಜನಿಕರು Read More »

ಕಡಬ: ನೈತಿಕ ಪೊಲೀಸ್ ಗಿರಿ| ನಾಲ್ವರು ಆರೋಪಿಗಳ ಬಂಧನ

ಸಮಗ್ರ ನ್ಯೂಸ್: ಮನೆಯ ಬಳಿ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ನಡೆಸಿರುವ ಆರೋಪದ ಮೇಲೆ ಕಡಬ ಪೊಲೀಸರು ನಾಲ್ವರನ್ನು ಫೆ.22ರಂದು ರಾತ್ರಿ ಬಂಧಿಸಿದ್ದಾರೆ. ಮರ್ದಾಳ ಶಿವಾಜಿನಗರ ನಿವಾಸಿ ದಿ| ಇಲ್ಯಾಸ್‌ ಅವರ ಪುತ್ರ ಫಯಾಜ್‌ ಅವರು ಗುರುವಾರ ಸಂಜೆ ನನ್ನ ತಾಯಿ ಮತ್ತು ಸಹೋದರರೊಂದಿಗೆ ಮನೆಯಲ್ಲಿದ್ದಾಗ ಅಪರಿಚಿತ ಮಹಿಳೆಯೊಬ್ಬಳು ಚಿಕ್ಕ ಮಗುವನ್ನು ಎತ್ತಿಕೊಂಡು ಬಂದಿದ್ದು, ರಿಯಾಝ್ನ ಮನೆ ಯಾವುದು ಎಂದು ಕೇಳಿದರು. ಅವರು ಇದು ರಿಯಾಝ್ನ ಮನೆ ಅಲ್ಲ ಎಂದರು ಮಹಿಳೆ ಅಳುತ್ತಾ ನಿಂತಾಗ ಅವರ ತಾಯಿ

ಕಡಬ: ನೈತಿಕ ಪೊಲೀಸ್ ಗಿರಿ| ನಾಲ್ವರು ಆರೋಪಿಗಳ ಬಂಧನ Read More »

ಮಧ್ಯದ ಅಮಲಿನಲ್ಲಿ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಕೊಲೆ| ಆರೋಪಿಗಳ ಬಂಧನ

ಸಮಗ್ರ ನ್ಯೂಸ್: ಕುಡಿದ ಮತ್ತಿನಲ್ಲಿ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ಇಬ್ಬರನ್ನು ಬಂಧಿಸಿದ ಘಟನೆ ದೇವರಚಿಕ್ಕನಹಳ್ಳಿಯಲ್ಲಿ ನಡೆದಿದೆ. ಮೃತ ಆನಂದ್‌ (32) ಹತ್ಯೆ ಸಂಬಂಧ ಮೃತನ ಮನೆ ಮಾಲಿಕ ಮಹೇಂದ್ರ ಹಾಗೂ ಆತನ ಸ್ನೇಹಿತ ಹರ್ಷಿತ್‌ನನ್ನು ಬಂಧಿಸಲಾಗಿದೆ. ಬೇಗೂರು ಸಮೀಪದ ಬಾರ್‌ನಲ್ಲಿ ಫೆ 22ರಂದು ಬೆಳಗ್ಗೆ ಮದ್ಯ ಸೇವಿಸಿದ ಬಳಿಕ ಮಹೇಂದ್ರ ಹಾಗೂ ಆನಂದ್ ಮಧ್ಯೆ ಜಗಳವಾಗಿದೆ. ಇದರಿಂದ ಕೋಪಗೊಂಡ ಮಹೇಂದ್ರ, ತನ್ನ ಸ್ನೇಹಿತ ಹರ್ಷಿತ್ ಜತೆ ಸೇರಿಕೊಂಡು ಆನಂದ್‌ ಮೇಲೆ ಹಲ್ಲೆ ನಡೆಸಿ

ಮಧ್ಯದ ಅಮಲಿನಲ್ಲಿ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಕೊಲೆ| ಆರೋಪಿಗಳ ಬಂಧನ Read More »

ನಾಲ್ಕನೇ ಮಹಡಿಯಿಂದ ಬಿದ್ದು ಯುವತಿ ಸಾವು

ಸಮಗ್ರ ನ್ಯೂಸ್: ಯುವತಿಯೊಬ್ಬರು ರಾತ್ರಿ ಅಪಾರ್ಟ್ಮೆಂಟ್ ನ ನಾಲ್ಕನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಬೆಳಗಾವಿಯ ಸದಾಶಿವ ನಗರದಲ್ಲಿ ನಡೆದಿದೆ. ಸದಾಶಿವ ನಗರದ ನಿವಾಸಿ ಓಶಾನಾ ರೊನಾಲ್ದೊ ಪಚೆಕೊ (21) ತಮ್ಮ ಸಾಕು ನಾಯಿಯನ್ನು ತೆಗೆದುಕೊಂಡು ಟೆರೆಸ್ ಮೇಲೆ ಹೋಗಿದ್ದಾಗ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರು, ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ. ಓಶಾನಾ ಪಾಲಕರು ಎಪಿಎಂಸಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ನಾಲ್ಕನೇ ಮಹಡಿಯಿಂದ ಬಿದ್ದು ಯುವತಿ ಸಾವು Read More »

ಬೆಂಗಳೂರಿನಲ್ಲಿ ಜಾಬ್ ಹುಡುಕುತ್ತಾ ಇದ್ದೀರಾ? ಹಾಗಾದ್ರೆ ನಿಮ್ಗೆ ಒಂದು ಗುಡ್ ನ್ಯೂಸ್! ಮುಂದೆ ಓದಿ

ಸಮಗ್ರ ಉದ್ಯೋಗ: ಜವಾಹರ್​ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಖಾಲಿ ಇರುವ 1 ರಿಸರ್ಚ್​​ ಅಸೋಸಿಯೇಟ್-I ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುವುದು. ಸಿಲಿಕಾನ್ ಸಿಟಿಯಲ್ಲಿ ಉದ್ಯೋಗ ಮಾಡಲು ಬಯಸುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆಸಕ್ತರು ಫೆಬ್ರವರಿ 24, 2024 ಅಂದರೆ ಇವತ್ತೇ ಇ-ಮೇಲ್ ಮಾಡುವ ಮೂಲಕ ಅರ್ಜಿ ಹಾಕಿ. ಶೈಕ್ಷಣಿಕ ಅರ್ಹತೆ:ಜವಾಹರ್​ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ನೇಮಕಾತಿ ಅಧಿಸೂಚನೆ ಪ್ರಕಾರ,

ಬೆಂಗಳೂರಿನಲ್ಲಿ ಜಾಬ್ ಹುಡುಕುತ್ತಾ ಇದ್ದೀರಾ? ಹಾಗಾದ್ರೆ ನಿಮ್ಗೆ ಒಂದು ಗುಡ್ ನ್ಯೂಸ್! ಮುಂದೆ ಓದಿ Read More »

ರಾಜ್ಯದಲ್ಲಿ ‌ಕಾಟನ್ ಕ್ಯಾಂಡಿ ನಿಷೇಧ| ಕ್ಯಾಂಡಿ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲು ಸೂಚನೆ

ಸಮಗ್ರ ನ್ಯೂಸ್: ತಮಿಳುನಾಡು ಮತ್ತು ಪುದುಚೇರಿಯಲ್ಲಿ ರೋಡಮೈನ್-ಬಿ ಕ್ಯಾನ್ಸರ್ ಅಂಶವಿರುವ ಕಾರಣ ಬಾಂಬೆ ಮಿಠಾಯಿಗಳ ಮೇಲೆ ನಿಷೇಧ ಹೇರಿದ ನಂತರ ಪ್ರತಿ ಜಿಲ್ಲೆಯಿಂದ ಹತ್ತಿ ಕ್ಯಾಂಡಿ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸುವಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಕರ್ನಾಟಕ ವಿಭಾಗ ಅಧಿಕಾರಿಗಳಿಗೆ ಸೂಚಿಸಿದೆ. ಕೆಲವು ಜಿಲ್ಲೆಗಳಿಂದ ಹತ್ತಿ ಕ್ಯಾಂಡಿ ಮಾದರಿಗಳನ್ನು ಸಂಗ್ರಹಿಸಲಾಗಿದೆ. “ಕೆಲವು ನಗರಗಳಲ್ಲಿ, ಅವು ಪ್ಯಾಕ್‌ಗಳಲ್ಲಿಯೂ ಲಭ್ಯವಿದೆ. ನಾವು ಅವುಗಳನ್ನು ಸಂಗ್ರಹಿಸುತ್ತಿದ್ದೇವೆ. ಆದರೆ ಕೆಲವು ಜಿಲ್ಲೆಗಳಲ್ಲಿ, ಇದನ್ನು ಜಾತ್ರೆಗಳು ಮತ್ತು ಕೂಟಗಳ

ರಾಜ್ಯದಲ್ಲಿ ‌ಕಾಟನ್ ಕ್ಯಾಂಡಿ ನಿಷೇಧ| ಕ್ಯಾಂಡಿ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲು ಸೂಚನೆ Read More »

ಮಹಿಳಾ ಸಬಲೀಕರಣ ಮತ್ತು ಸ್ವಾವಲಂಬನೆಗೊಳಿಸುವ ಉದ್ದೇಶ/ ಫೆ. 29ರಿಂದ ಮಾ.9ರವರೆಗೆ ರಾಷ್ಟ್ರೀಯ ಸಾರಸ್ ಮೇಳ

ಸಮಗ್ರ ನ್ಯೂಸ್: ಫೆ. 29ರಿಂದ ಮಾ.9ರವರೆಗೆ ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ, ಮಹಿಳಾ ಸಬಲೀಕರಣ ಮತ್ತು ಸ್ವಾವಲಂಬನೆಗೊಳಿಸುವ ಉದ್ದೇಶದಿಂದ ರಾಷ್ಟ್ರೀಯ ಸಾರಸ್ ಮೇಳ ಮತ್ತು ಬೃಹತ್ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗಿದೆ ಎಂದು ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶುಕ್ರವಾರ ವಿಕಾಸಸೌಧದಲ್ಲಿ ಸಾರಸ್ ಮೇಳ 2024 ಮತ್ತು ಅಕ್ಕ ಕೆಫೆ ಲೋಗೋ ಅನಾವರಣಗೊಳಿಸಿದರು. ಬ್ರಾಂಡ್ ಬೆಂಗಳೂರು ಅಭಿಯಾನದಡಿಯಲ್ಲಿ ಕೌಶಲ್ಯಾಭಿವೃದ್ಧಿ ಮತ್ತು

ಮಹಿಳಾ ಸಬಲೀಕರಣ ಮತ್ತು ಸ್ವಾವಲಂಬನೆಗೊಳಿಸುವ ಉದ್ದೇಶ/ ಫೆ. 29ರಿಂದ ಮಾ.9ರವರೆಗೆ ರಾಷ್ಟ್ರೀಯ ಸಾರಸ್ ಮೇಳ Read More »

ಬೈಕ್ ಚಾಲನೆ ಮಾಡಿದ ಅಪ್ರಾಪ್ತ ಪುತ್ರ| ದಂಡ ತೆತ್ತು ಸಜೆ ಅನುಭವಿಸಿದ ತಾಯಿ

ಸಮಗ್ರ ನ್ಯೂಸ್: ಅಪ್ರಾಪ್ತ ಮಕ್ಕಳಿಗೆ ಚಾಲನೆ ಮಾಡಲು ವಾಹನ ಕೊಡಬೇಡಿ ಎಂದು ಪೊಲೀಸ್ ಇಲಾಖೆ ಎಚ್ಚರಿಸುತ್ತಲೇ ಇರುತ್ತದೆ. ಪೊಲೀಸರ ಕಳಕಳಿಯನ್ನು ಲೆಕ್ಕಿಸದೇ ಪೋಷಕರು ತಮ್ನ ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆಗೆ ಕೊಟ್ಟು ಅನಾಹುತ ಸೃಷ್ಠಿಕೊಂಡಿರುವ ಪ್ರಕರಣಗಳು ಕೂಡ ಘಟಿಸಿವೆ. ಆದರೂ ಎಚ್ಚೆತ್ತುಕೊಳ್ಳದ ಇಲ್ಲೊಬ್ಬರು ತನ್ನ ಅಪ್ರಾಪ್ತ ವಯಸ್ಸಿನ ಮಗನಿಗೆ ಬೈಕ್ ಚಾಲನೆ ಮಾಡಲು ಕೊಟ್ಟು ಪೋಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ. ಈ ಪ್ರಮಾದಕ್ಕಾಗಿ ಇವರಿಗೆ ಹಾಸನ ಜಿಲ್ಲೆ ಬೇಲೂರು ಸಿವಿಲ್ ಜಡ್ಜ್ ಕಿರಿಯ ಶ್ರೇಣಿ ನ್ಯಾಯಾಲಯವು ರೂ.16,000 ದಂಡವನ್ನು

ಬೈಕ್ ಚಾಲನೆ ಮಾಡಿದ ಅಪ್ರಾಪ್ತ ಪುತ್ರ| ದಂಡ ತೆತ್ತು ಸಜೆ ಅನುಭವಿಸಿದ ತಾಯಿ Read More »

ರಾಜ್ಯಸಭಾ ಚುನಾವಣೆ ಎ.ಎಸ್.ಪೊನ್ನಣ್ಣ ರವರಿಂದ ಪೂರ್ವ ಸಿದ್ದತೆ ವೀಕ್ಷಣೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಅತ್ಯಂತ ಕುತೂಹಲ ಮೂಡಿಸಿರುವ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಫೆ. 27ರಂದು ಚುನಾವಣೆ ನಡೆಯಲಿದ್ದು, ವಿಧಾನ ಸೌಧದಲ್ಲಿ ಸಿದ್ದವಾಗುತ್ತಿರುವ ಮತಗಟ್ಟೆಯನ್ನುಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ರವರು ಫೆ. 23 ರಂದು ಸಂಜೆ ವೀಕ್ಷಣೆ ಮಾಡಿದರು. ಒಟ್ಟು ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಐದನೇ ಅಭ್ಯರ್ಥಿ ಕಣದಲ್ಲಿರುವುದರಿಂದ ಅಡ್ಡ ಮತದಾನವಾಗದೇ ಇರಲು ಕಾಂಗ್ರೆಸ್ ಮುಂಜಾಗ್ರತಾ ಕ್ರಮ ವಹಿಸಿದ್ದು ಕಾನೂನಾತ್ಮಕವಾಗಿ ಚುನಾವಣೆ ನಡೆಸುವ ಸಲುವಾಗಿ ಕಾನೂನು ತಜ್ಞರು

ರಾಜ್ಯಸಭಾ ಚುನಾವಣೆ ಎ.ಎಸ್.ಪೊನ್ನಣ್ಣ ರವರಿಂದ ಪೂರ್ವ ಸಿದ್ದತೆ ವೀಕ್ಷಣೆ Read More »

ಅರಂತೋಡು: ಜಮಾಅತ್ ವತಿಯಿಂದ ಉಮ್ರಾ ಯಾತ್ರಿ ಇಬ್ರಾಹಿಂ ಕುಕ್ಕುಂಬಳರವರಿಗೆ ಬೀಳ್ಕೊಡುಗೆ

ಸಮಗ್ರ ನ್ಯೂಸ್: ಅರಂತೋಡು ಜುಮಾ ಮಸೀದಿಯ ದಿಕ್ರ್ ಸ್ವಲಾತ್ ಸಮಿತಿಯ ಉಪಾಧ್ಯಕ್ಷ ಕೆ.ಎಸ್. ಇಬ್ರಾಹಿಂ ಕುಕ್ಕುಂಬಳ ಬಿಳಿಯಾರ್ ರವರು ಪವಿತ್ರ ಉಮ್ರಾ ನಿರ್ವಹಿಸಲು ಪ್ರಯಾಣ ಬೆಳೆಸಿದ್ದು ಅವರನ್ನು ಅರಂತೋಡು ಜಮಾಅತ್ ಸಮಿತಿ ವತಿಯಿಂದ ಬೀಳ್ಕೊಡುಗೆ ಮಾಡಲಾಯಿತು. ಸದರ್ ಬಹು| ನೌಶಾದ್ ಅಝ್ ಹರಿ ದುವಾ ನೆರವೇರಿಸಿದರು. ಬಹು| ಶಾಫಿ ಮುಸ್ಲಿಯಾರ್, ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮ್ಮದ್, ಕೋಶಾಧಿಕಾರಿ ಕೆ.ಎಂ. ಅಬೂಬಕ್ಕರ್ ಪಾರೆಕ್ಕಲ್, ಎ.ಹನೀಫ್, ಕೆ.ಎಂ. ಮೊಯಿದು ಕುಕ್ಕುಂಬಳ, ಅಮೀರ್ ಕುಕ್ಕುಂಬಳ, ಸಂಶುದ್ಧೀನ್ ಪೆಲ್ತಡ್ಕ, ಮುಜೀಬ್ ಅರಂತೋಡು, ಸಂಶುದ್ಧೀನ್

ಅರಂತೋಡು: ಜಮಾಅತ್ ವತಿಯಿಂದ ಉಮ್ರಾ ಯಾತ್ರಿ ಇಬ್ರಾಹಿಂ ಕುಕ್ಕುಂಬಳರವರಿಗೆ ಬೀಳ್ಕೊಡುಗೆ Read More »