Editor

ಹೆದ್ದೆರೆಗಳ ಹೊಡೆತಕ್ಕೆ ಇಬ್ಬಾಗವಾದ ಐತಿಹಾಸಿಕ ವಲಿಯತುರಾ ಸಮುದ್ರ ಸೇತುವೆ

ಸಮಗ್ರ ನ್ಯೂಸ್: ಹೆದ್ದೆರೆಗಳ ಹೊಡೆತಕ್ಕೆ ಕೇರಳದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ತಿರುವನಂತಪುರಂನ ಐತಿಹಾಸಿಕ ವಲಿಯತುರಾ ಸಮುದ್ರ ಸೇತುವೆ ನಲುಗಿ ಇಬ್ಬಾಗವಾಗಿದೆ. 2017ರಲ್ಲಿ ಅಪ್ಪಳಿಸಿದ್ದ ಓಖಿ ಚಂಡಮಾರುತ, 2021ರಲ್ಲಿ ಕಾಣಿಸಿಕೊಂಡಿದ್ದ ಟೌಕ್ಷೆ ಚಂಡಮಾರುತದ ಸಂದರ್ಭವೂ ಈ ಸೇತುವೆ ಹಾನಿಗೊಳಗಾಗಿತ್ತು. ಇದೀಗ ಸೇತುವೆಯ ಒಂದು ಭಾಗ ಸಂಪೂರ್ಣ ಕುಸಿದಿದೆ ಎಂದು ಆಡಳಿತ ಮೂಲಗಳು ತಿಳಿಸಿವೆ. 1825 ರಲ್ಲಿ ಮೊದಲು ಉಕ್ಕಿನಲ್ಲಿ ನಿರ್ಮಾಣವಾಗಿದ್ದ ಈ ಸೇತುವೆ 1987ರಲ್ಲಿ ಎಂ.ವಿ. ಪಂಡಿತ್ ಹೆಸರಿನ ಹಡಗು ಡಿಕ್ಕಿಯಾಗಿ ಹಾನಿಗೊಳಗಾಗಿತ್ತು. ಬಳಿಕ 1957ರಲ್ಲಿ ಪುನರ್ ನಿರ್ಮಾಣಗೊಂಡು

ಹೆದ್ದೆರೆಗಳ ಹೊಡೆತಕ್ಕೆ ಇಬ್ಬಾಗವಾದ ಐತಿಹಾಸಿಕ ವಲಿಯತುರಾ ಸಮುದ್ರ ಸೇತುವೆ Read More »

ಕೇಂದ್ರ ಸರಕಾರ ಜನರನ್ನು ಭಯಭೀತರನ್ನಾಗಿಸುತ್ತಿದೆ- ಮುಹಮ್ಮದ್ ಶಾಫಿ

ಸಮಗ್ರ ನ್ಯೂಸ್ : ಕೇಂದ್ರ ಸರಕಾರ ಜನರನ್ನು ಭಯಭೀತರನ್ನಾಗಿಸುತ್ತಿದೆ. ಭಾರತದಲ್ಲಿನ ಪ್ರಸ್ತುತ ಪರಿಸ್ಥಿತಿಯ ಕುರಿತು ನಮಗೆ ಅರಿವಿದೆ. ಹೊರದೇಶಗಳಲ್ಲಿ ಸಮಾನತೆ, ವಸುದೈವ ಕುಟುಂಬಕಂ ಎಂಬ ಆಶಯದೊಂದಿಗೆ ಮಾತನಾಡುವ ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ ಅದನ್ನು ಪಾಲಿಸುವಲ್ಲಿ ವಿಫಲವಾಗಿದ್ದಾರೆ ಎಂದು ಎಸ್‌ಡಿಪಿಐ ರಾಷ್ಟ್ರೀಯ ಉಪಾಧ್ಯಕ್ಷ ಮುಹಮ್ಮದ್ ಶಾಫಿ ಆರೋಪಿಸಿದ್ದಾರೆ. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷ ವತಿಯಿಂದ ಉಡುಪಿ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಭವನ ಆವರಣದಲ್ಲಿ ಆಯೋಜಿಸಲಾದ ಪ್ರಜಾಪ್ರಭುತ್ವ ಸಂರಕ್ಷಣಾ ಸಮಾವೇಶವನ್ನು

ಕೇಂದ್ರ ಸರಕಾರ ಜನರನ್ನು ಭಯಭೀತರನ್ನಾಗಿಸುತ್ತಿದೆ- ಮುಹಮ್ಮದ್ ಶಾಫಿ Read More »

ಚುನಾವಣಾ ಬಾಂಡ್ ವಹಿವಾಟು/ ಸುಪ್ರೀಂ ಕೋರ್ಟ್‍ನಲ್ಲಿ ಮಾ.11ಕ್ಕೆ ಎಸ್‍ಬಿಐ ಮನವಿಯ ವಿಚಾರಣೆ

ಸಮಗ್ರ ನ್ಯೂಸ್: ಚುನಾವಣಾ ಬಾಂಡ್‍ಗಳಲ್ಲಿ ನಡೆಸಿದ ವಹಿವಾಟುಗಳನ್ನು ಬಹಿರಂಗಗೊಳಿಸುವ ಕುರಿತು ಮತ್ತಷ್ಟು ಕಾಲಾವಕೋಶ ಕೋರಿದ್ದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‍ಬಿಐ) ಮನವಿಯನ್ನು ಸುಪ್ರೀಂ ಕೋರ್ಟ್ ಮಾ.11ಕ್ಕೆ ವಿಚಾರಣೆ ನಡೆಸಲಿದೆ. ಜೊತೆಗೆ ಸುಪ್ರೀಂ ಕೋರ್ಟ್ ಆದೇಶದಂತೆ ಮಾ.6ರೊಳಗೆ ಎಸ್‍ಬಿಐ ಚುನಾವಣಾ ಬಾಂಡ್ ಕುರಿತ ವಹಿವಾಟುಗಳನ್ನು ಬಹಿರಂಗ ಮಾಡಿಲ್ಲ ಎಂದು ಎಡಿಆರ್ ಎಂಬ ಎನ್‍ಜಿಒ ಸಲ್ಲಿಸಿರುವ ನ್ಯಾಯಾಂಗ ನಿಂದನಾ ಅರ್ಜಿಯನ್ನೂ ಆಲಿಸಲಿದೆ. ಸುಪ್ರೀಂ ಕೋರ್ಟ್ ನೀಡಿದ ಆದೇಶದಲ್ಲಿ ಎಸ್‍ಬಿಐ ಮಾ.6ರೊಳಗೆ ಚುನಾವಣಾ ಬಾಂಡ್‍ಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಬಹಿರಂಗ ಮಾಡಬೇಕು

ಚುನಾವಣಾ ಬಾಂಡ್ ವಹಿವಾಟು/ ಸುಪ್ರೀಂ ಕೋರ್ಟ್‍ನಲ್ಲಿ ಮಾ.11ಕ್ಕೆ ಎಸ್‍ಬಿಐ ಮನವಿಯ ವಿಚಾರಣೆ Read More »

ಟೈಮ್ಸ್ ನೌ ಮತ್ತು ಇಟಿಜಿಯ ಚುನಾವಣಾ ಪೂರ್ವ ಸಮೀಕ್ಷೆ/ 400 ರ ಸಮೀಪ ತಲುಪಲಿದೆ ಎನ್‍ಡಿಎ

ಸಮಗ್ರ ನ್ಯೂಸ್: ಟೈಮ್ಸ್ ನೌ ಸುದ್ದಿವಾಹಿನಿ ಇಟಿಜಿ ಜೊತೆಗೂಡಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದು, ಇದರ ಅನ್ವಯ ಬಿಜೆಪಿ 358-398 ಸ್ಥಾನ ಮತ್ತು ಕಾಂಗ್ರೆಸ್ 28-48 ಸ್ಥಾನ ಗೆಲ್ಲಲಿದೆ ಎಂಬ ವರದಿ ಪ್ರಕಟಗೊಂಡಿದೆ. ಲೋಕಸಭಾ ಚುನಾವಣೆಗೆ ಯಾವುದೇ ಸಮಯದಲ್ಲಿ ದಿನಾಂಕ ಘೋಷಣೆಯಾಗಬಹುದು ಎಂಬ ಹೊತ್ತಿನಲ್ಲೇ ಈ ವರದಿ ಪ್ರಕಟವಾಗಿದ್ದು, ಇದು ಬಿಜೆಪಿಯ ಈ ಬಾರಿಯ ಕನಸಾದ 400 ಸ್ಥಾನಕ್ಕೆ ಬಹುತೇಕ ಸಮೀಪವಿದೆ. ವರದಿ ಅನ್ವಯ ಪಶ್ಚಿಮ ಬಂಗಾಳದಲ್ಲಿ ಎನ್‍ಡಿಎ 20-24, ಟಿಎಂಸಿ 17-21, ಇಂಡಿಯಾ 0-2;ತಮಿಳುನಾಡು: ಇಂಡಿಯಾ

ಟೈಮ್ಸ್ ನೌ ಮತ್ತು ಇಟಿಜಿಯ ಚುನಾವಣಾ ಪೂರ್ವ ಸಮೀಕ್ಷೆ/ 400 ರ ಸಮೀಪ ತಲುಪಲಿದೆ ಎನ್‍ಡಿಎ Read More »

ಕೋಟ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ

ಸಮಗ್ರ ನ್ಯೂಸ್ : ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರ ಲಕ್ಷಾಂತರ ರೂ. ಮೋಸ ಮಾಡಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಕಡ ಗ್ರಾಮದ ಅಮಿತ್(23) ಎಂಬವರಿಗೆ ಸೂರಜ್ ಶೇಖರ್ ಎಂಬಾತನನ್ನು ನ.10ರಂದು ಪರಿಚಯವಾಗಿದ್ದು, ಅವರು ಅಮಿತ್‌ಗೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನ.10ರಿಂದ ಮಾ.5ರ ಮಧ್ಯಾವಧಿಯಲ್ಲಿ ಒಟ್ಟು 5,81,300ರೂ. ಹಣವನ್ನು ಹಂತ ಹಂತವಾಗಿ ಆನ್‌ಲೈನ್ ಮೂಲಕ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದನು. ಆದರೆ ಆತ ಅಮಿತ್‌ಗೆ ಕೆಲಸವನ್ನು ಕೊಡಿಸದೇ ಹಣವನ್ನು ವಾಪಾಸು ನೀಡದೆ ಮೋಸ

ಕೋಟ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ Read More »

ಒಂದು ದೇಶ ಒಂದು ಚುನಾವಣೆ/ ಶೀಘ್ರದಲ್ಲಿ ವರದಿ ಸಲ್ಲಿಸಲಿರುವ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ

ಸಮಗ್ರ ನ್ಯೂಸ್: ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ಒಂದು ದೇಶ ಒಂದು ಚುನಾವಣೆ ಯೋಜನೆ ಜಾರಿಗೆ ಸಂಬಂಧಿಸಿದಂತೆ ತನ್ನ ವರದಿಯನ್ನು ತಯಾರಿಸಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಸಲಿದೆ ಎಂಬ ಮಾಹಿತಿ ಲಭ್ಯವಿದೆ. ಪ್ರಮುಖವಾಗಿ ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಚುನಾವಣೆಗಳಿಗೆ ಒಂದೇ ಮತದಾರರ ಪಟ್ಟಿಯನ್ನು ತಯಾರಿಸುವುದು, ಸರ್ಕಾರ ಅಲ್ಪಮತಕ್ಕೆ ಕುಸಿದಾಗ ಏಕತಾ ಸರ್ಕಾರವನ್ನು ರಚಿಸುವುದು, ರಾಷ್ಟ್ರಪತಿ ಆಡಳಿತಕ್ಕೆ ಸಂಬಂಧಿಸಿದಂತೆ ಸಂವಿಧಾನದ ಐದು ವಿಧಿಗಳನ್ನು ತಿದ್ದುಪಡಿ ಮಾಡಬೇಕೆಂದು ವರದಿಯಲ್ಲಿ ಉಲ್ಲೇಖಿಸಿದೆ ಎಂಬುದಾಗಿ ತಿಳಿದುಬಂದಿದೆ. ಕೇಂದ್ರ ಕಾನೂನು ಆಯೋಗ

ಒಂದು ದೇಶ ಒಂದು ಚುನಾವಣೆ/ ಶೀಘ್ರದಲ್ಲಿ ವರದಿ ಸಲ್ಲಿಸಲಿರುವ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ Read More »

ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನ: ಯತ್ನಾಳ

ಸಮಗ್ರ ನ್ಯೂಸ್ : ಲೋಕಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುತ್ತದೆ. ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ತೆಗೆದು ಎಸ್‌ಇಪಿ ಮಾಡುತ್ತಿದ್ದಾರೆ. ಹಾಗಾಗಿ ಮಧು ಬಂಗಾರಪ್ಪ ಅವರಿಗೆ ನಾನು ಹೇಳೋದು ಇಷ್ಟೇ, ನಿಮ್ಮ ಸರ್ಕಾರ ಬಹಳ ದಿನ ಇರಲ್ಲ. ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಬೀಳುವುದು ಖಚಿತ. ಬಳಿಕ ಮತ್ತೆ ರಾಜ್ಯದಲ್ಲಿ ನಾವು ರಾಷ್ಟ್ರೀಯ ಶಿಕ್ಷಣ

ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನ: ಯತ್ನಾಳ Read More »

ಬೆಳ್ಳಂಬೆಳಗ್ಗೆ ಪೊನ್ನಂಪೇಟೆ ಪಟ್ಟಣಕ್ಕೆ ಎಂಟ್ರಿ ಕೊಟ್ಟ ಕಾಡಾನೆ

ಸಮಗ್ರ ನ್ಯೂಸ್: ಬೆಳ್ಳಂಬೆಳಗ್ಗೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ಪಟ್ಟಣಕ್ಕೆ ಕಾಡಾನೆ ಎಂಟ್ರಿ ಕೊಟ್ಟಿದೆ. ಇದರಿಂದ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಪೊನ್ನಂಪೇಟೆ ಪಟ್ಟಣದ ಕೋರ್ಟ್ ಆವರಣ, ತಾಲೂಕು ಕಚೇರಿ, ಅರಣ್ಯ ಕಾಲೇಜು ಸಮೀಪ ಕಾಡಾನೆ ಓಡಾಡಿದೆ. ಕಾಡಾನೆ ಓಡಾಡಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ವಿಷಯ ತಿಳಿದ ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಬೆಳ್ಳಂಬೆಳಗ್ಗೆ ಪೊನ್ನಂಪೇಟೆ ಪಟ್ಟಣಕ್ಕೆ ಎಂಟ್ರಿ ಕೊಟ್ಟ ಕಾಡಾನೆ Read More »

ಅಡಿಕೆ ಬೆಳೆಗಾರರಿಗೆ ಶಾಕಿಂಗ್ ನ್ಯೂಸ್/ ಶ್ರೀಲಂಕಾದಿಂದ ಅಡಕೆ ಆಮದು ಮಾಡಿಕೊಳ್ಳಲು ಮುಂದಾದ ಕಂಪನಿ

ಸಮಗ್ರ ನ್ಯೂಸ್: ಶ್ರೀಲಂಕಾದಿಂದ ಭರ್ಜರಿ 5 ಲಕ್ಷ ಟನ್ ಅಡಕೆಯನ್ನು ಆಮದು ಮಾಡಿಕೊಳ್ಳಲು ಕಂಪನಿಯೊಂದು ಮುಂದಾಗಿದ್ದು, ಅಡಕೆ ಮಾರಾಟ ಹಂಗಾಮು ಆರಂಭವಾಗಿರುವ ಸಂದರ್ಭದಲ್ಲೇ ಬೆಳೆಗಾರರಿಗೆ ದರ ಕುಸಿತದ ಆತಂಕ ಎದುರಾಗಿದೆ. ಅಡಕೆ ಆಮದು ಸಂಬಂಧ ಬ್ರಿಟನ್ ಮೂಲದ ಎಸ್‍ರಾಂ ಅಂಡ್ ಎಂರಾಂ ಗ್ರೂಪ್ ಶ್ರೀಲಂಕಾ ಮೂಲದ ವ್ಯಾಪಾರಿ ಸಂಸ್ಥೆ ಪ್ರೈಮ್ ಸ್ಟಾರ್ ಪ್ರೈವೇಟ್ ಲಿಮಿಟೆಡ್ ಜತೆ ಒಪ್ಪಂದ ಮಾಡಿಕೊಂಡಿದೆ. 2022ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಭಾರತ 53.71 ಕೋಟಿ ರು. ಮೌಲ್ಯದ ಅಡಕೆ ಆಮದು ಮಾಡಿಕೊಂಡಿತ್ತು. ಆದರೆ 2023ರ

ಅಡಿಕೆ ಬೆಳೆಗಾರರಿಗೆ ಶಾಕಿಂಗ್ ನ್ಯೂಸ್/ ಶ್ರೀಲಂಕಾದಿಂದ ಅಡಕೆ ಆಮದು ಮಾಡಿಕೊಳ್ಳಲು ಮುಂದಾದ ಕಂಪನಿ Read More »

ಉಡುಪಿ: ಕಾರು-ಸ್ಕೂಟರ್ ನಡುವೆ ಅಪಘಾತ

ಸಮಗ್ರ ನ್ಯೂಸ್ : ಕಾರು ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಗಾಯಗೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಆರೂರಿನ ರಾಕೇಶ್ ಅವರು ಸ್ಕೂಟರ್‌ನಲ್ಲಿ ಜೋಡುಕಟ್ಟೆಯಿಂದ ಬ್ರಹ್ಮಗಿರಿ ಕಡೆಗೆ ತೆರಳುತ್ತಿದ್ದಾಗ ಕಾರಿನ ಚಾಲಕಿ ರಮಿತಾ ಅವರು ತನ್ನ ಕಾರನ್ನು ಬ್ರಹ್ಮಗಿರಿ ಕಡೆಯಿಂದ ಚಲಾಯಿಸಿಕೊಂಡು ಬಂದು ಹುತಾತ್ಮರ ಸ್ಮಾರಕದ ಬಳಿ ಹಠಾತ್ ಯು ಟರ್ನ್ ಮಾಡಿದ ಪರಿಣಾಮ ಸ್ಕೂಟರ್ ಸವಾರ ಬಿದ್ದು ಗಾಯಗೊಂಡರು. ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಚಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಉಡುಪಿ: ಕಾರು-ಸ್ಕೂಟರ್ ನಡುವೆ ಅಪಘಾತ Read More »