Editor

ಬಿಜೆಪಿಗೆ ಕಗ್ಗಂಟಾಗಿದೆ ಕೆಲವು ಕ್ಷೇತ್ರ… ಹಾಲಿ ಸಂಸದರಿಗೆ ಟಿಕೆಟ್ ಡೌಟ್..?

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಗೆ ಈಗಾಗಲೆ ತಯಾರಿ ನಡೆದಿದು, ಬಿಜೆಪಿ ಮೊದಲ ಪಟ್ಟಿಯು ಬಿಡುಗಡೆಯಾಗಿದೆ. ಆದರೆ ಈಗ ಕೆಲ ಕ್ಷೇತ್ರಗಳು ಕಗ್ಗಂಟಾಗಿದ್ದು, ಅಸಮಾಧಾನ ಬೆಂಕಿಯಿಂದ ಬೇಯುತ್ತಿರೋ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಫೈನಲ್ ಮಾಡಲು ಮಹತ್ವದ ಸಭೆ ನಡೆಸಲಾಗಿದೆ. ನಿನ್ನೆ ದೆಹಲಿಯಲ್ಲಿ ನಡೆದ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಸಭೆಯಲ್ಲಿ ಕರ್ನಾಟಕವೂ ಸೇರಿ ವಿವಿಧ ರಾಜ್ಯಗಳ 150 ಅಭ್ಯರ್ಥಿಗಳ ಎರಡನೇ ಪಟ್ಟಿ ಬಗ್ಗೆ ಚರ್ಚಿಸಲಾಗಿದೆ. ಅದರಲ್ಲೂ ರಾಜ್ಯದಲ್ಲಿ ಕಗ್ಗಂಟಾಗಿರುವ ಕೆಲ ಕ್ಷೇತ್ರಗಳನ್ನ ಬಿಟ್ಟು ಸಿಂಗಲ್ ಹೆಸರು ಇರುವ ಕ್ಷೇತ್ರಗಳನ್ನ ಫೈನಲ್

ಬಿಜೆಪಿಗೆ ಕಗ್ಗಂಟಾಗಿದೆ ಕೆಲವು ಕ್ಷೇತ್ರ… ಹಾಲಿ ಸಂಸದರಿಗೆ ಟಿಕೆಟ್ ಡೌಟ್..? Read More »

ಬಸ್​ ಮೇಲೆ ಬಿದ್ದ ಹೈ ಟೆನ್ಷನ್ ತಂತಿ: 6 ಮಂದಿ ಸಜೀವ ದಹನ

ಸಮಗ್ರ ನ್ಯೂಸ್: ಉತ್ತರ ಪ್ರದೇಶದ ಗಾಜಿಪುರದಲ್ಲಿ ಬಸ್​ ಮೇಲೆ ಹೈ ಟೆನ್ಷನ್ ತಂತಿ ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, 6 ಮಂದಿ ಸಜೀವ ದಹನವಾಗಿದ್ದಾರೆ. ಬೆಂಕಿ ಭೀಕರ ಸ್ವರೂಪ ಪಡೆದುಕೊಂಡಿದ್ದು, ಬಸ್ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಮಾಹಿತಿ ಪ್ರಕಾರ ಬೆಂಕಿಯಲ್ಲಿ ಆರು ಮಂದಿ ಸಜೀವ ದಹನವಾಗಿದ್ದು ಹೆಚ್ಚಿನ ಸಾವು ನೋವು ಸಂಭವಿಸುವ ಸಾಧ್ಯತೆ ಇದೆ ಮದುವೆ ಸಮಾರಂಭ ಮುಗಿಸಿ ಹಿಂದಿರುಗುತ್ತಿದ್ದರು, ಬಸ್​ನಲ್ಲಿ 35ಕ್ಕೂ ಹೆಚ್ಚು ಮಂದಿ ಇದ್ದರು. ಅದೇ ಸಂಧರ್ಭದಲ್ಲಿ ಮರ್ದಾದಲ್ಲಿ ಅಪಘಾತ ಸಂಭವಿಸಿದೆ. ಡಿಎಂ, ಎಸ್​ಪಿ

ಬಸ್​ ಮೇಲೆ ಬಿದ್ದ ಹೈ ಟೆನ್ಷನ್ ತಂತಿ: 6 ಮಂದಿ ಸಜೀವ ದಹನ Read More »

ಅಡ್ಯನಡ್ಕ ಬ್ಯಾಂಕ್ ಕಳವು ಪ್ರಕರಣ- ಆರೋಪಿ ಸಹಿತ ಕೇರಳ ಮೂಲದ ಮೂವರು ಪೊಲೀಸರ ವಶ

ಸಮಗ್ರ ನ್ಯೂಸ್: ಅಡ್ಯನಡ್ಕದಲ್ಲಿ ನಡೆದ ಕರ್ಣಾಟಕ ಬ್ಯಾಂಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡವು ಆರೋಪಿಗಳ ಬಗೆಗಿನ ಕೆಲವೊಂದು ಮಹತ್ತರವಾದ ಮಾಹಿತಿಯನ್ನು ಕಲೆ ಹಾಕಿ ಪ್ರಕರಣದ ಪ್ರಮುಖ ಸೂತ್ರದಾರನ ಸಹಿತ ಮೂವರನ್ನು ವಶಕ್ಕೆ ಪಡೆದಿರುವುದಾಗಿ ಮಾಹಿತಿ ತಿಳಿದು ಬಂದಿದೆ. ಕಾಸರಗೋಡು ಮೂಲದ ಖಲಂದರ್, ರಫೀಕ್, ಬಾಯಾರು ಮೂಲದ ದಯಾನಂದ ಪೊಲೀಸ್ ವಶಕ್ಕೆ ತೆಗೆದುಕೊಂಡ ಆರೋಪಿಗಳೆಂದು ತಿಳಿದು ಬಂದಿದೆ. ಬಂಟ್ವಾಳ ತಾಲೂಕಿನ ವಿಟ್ಲ ಠಾಣಾ ವ್ಯಾಪ್ತಿಯ ಅಡ್ಯನಡ್ಕದಲ್ಲಿರುವ ಕರ್ಣಾಟಕ ಬ್ಯಾಂಕಿನ ಹಿಂಭಾಗದ ಕಿಟಕಿಯ ಸರಳುಗಳನ್ನು ತುಂಡರಿಸಿ ಒಳನುಗ್ಗಿದ ಕಳ್ಳರು

ಅಡ್ಯನಡ್ಕ ಬ್ಯಾಂಕ್ ಕಳವು ಪ್ರಕರಣ- ಆರೋಪಿ ಸಹಿತ ಕೇರಳ ಮೂಲದ ಮೂವರು ಪೊಲೀಸರ ವಶ Read More »

ಪುತ್ತೂರು : ಅಕ್ರಮ ಪ್ರವೇಶ -ಜೆಸಿಬಿಯಿಂದ ಮನೆ ಕೆಡವಿದ ಘಟನೆ

ಸಮಗ್ರ ನ್ಯೂಸ್ : ಯಾರು ಇಲ್ಲದ ಸಮಯ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಜೆಸಿಬಿಯಿಂದ ಮನೆಯೊಂದನ್ನು ಕೆಡವಿದ ಘಟನೆ ಮಾ.9ರ ಮಧ್ಯಾಹ್ನ ನಡೆದಿರುವುದಾಗಿ ವರದಿಯಾಗಿದೆ. ಘಟನೆ ಕುರಿತು ಮನೆಯಲ್ಲಿ ವಾಸ್ತವ್ಯ ಇದ್ದ ವಸಂತ ಪೂಜಾರಿ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಪುತ್ತೂರು : ಅಕ್ರಮ ಪ್ರವೇಶ -ಜೆಸಿಬಿಯಿಂದ ಮನೆ ಕೆಡವಿದ ಘಟನೆ Read More »

ಮಾಣಿ -ಕೋಡಾಜೆಯಲ್ಲಿ ಆ್ಯಕ್ಟೀವಾ – ಕಾರು ಢಿಕ್ಕಿ: ಇಬ್ಬರಿಗೆ ಗಾಯ

ಸಮಗ್ರ ನ್ಯೂಸ್ : ಕಾರು ಮತ್ತು ಆ್ಯಕ್ಟೀವಾ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಜಾಲ್ಸೂರು ಸಮೀಪದ ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿಯ ಇಬ್ಬರು ಮಹಿಳೆಯರು ಗಾಯಗೊಂಡು, ಮಂಗಳೂರಿನ ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳ ತಾಲೂಕಿನ ಮಾಣಿ-ಕೊಡಾಜೆ ಎಂಬಲ್ಲಿ ಇಂದು ನಡೆದಿದೆ. ಹುಕ್ರಪ್ಪ ಪೂಜಾರಿ ಅವರ ಪುತ್ರ ಕಿಶೋರ್, ಇಬ್ಬರು ಪುತ್ರಿಯರಾದ ವಿದ್ಯಾ ಮತ್ತು ಚೈತ್ರ ಸೇರಿದಂತೆ ಮೂವರು ಕಾರಿನಲ್ಲಿ ಮಂಗಳೂರಿಗೆ ಹೋಗಿ ಮದುವೆ ಬಟ್ಟೆ ಖರೀದಿಸಿ, ಹಿಂತಿರುಗುತ್ತಿದ್ದ ವೇಳೆ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ –

ಮಾಣಿ -ಕೋಡಾಜೆಯಲ್ಲಿ ಆ್ಯಕ್ಟೀವಾ – ಕಾರು ಢಿಕ್ಕಿ: ಇಬ್ಬರಿಗೆ ಗಾಯ Read More »

ಸಂಪಾಜೆ: ಗೂನಡ್ಕದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್‍ಗೆ ಕಾರು ಢಿಕ್ಕಿ

ಸಮಗ್ರ ನ್ಯೂಸ್ : ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ಹೋಟೆಲ್‍ಗೆ ಢಿಕ್ಕಿ ಹೊಡೆದು ಪಲ್ಟಿಯಾದ ಘಟನೆ ದ.ಕ. ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ಮಾ.11ರಂದು ಸಂಭವಿಸಿದೆ. ಸುಳ್ಯದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಸಂಪಾಜೆ ಮಸೀದಿಯ ಜಮಾಲುದ್ದೀನ್ ಎಂಬವರ ಕಾರು ಗೂನಡ್ಕದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹನೀಫ್ ಎಂಬವರ ಹೋಟೆಲ್‍ಗೆ ಢಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಕಾರಿನಲ್ಲಿದ್ದ ನಾಲ್ಕು ಜನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

ಸಂಪಾಜೆ: ಗೂನಡ್ಕದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್‍ಗೆ ಕಾರು ಢಿಕ್ಕಿ Read More »

ಗೋಳಿತ್ತಡಿ: ಮನೆಯಿಂದ ನಗದು, ಚಿನ್ನಾಭರಣ ಕಳವು

ಸಮಗ್ರ ನ್ಯೂಸ್: ಇಲ್ಲಿನ ಗೋಳಿತ್ತಡಿಯ ನೆಬಿಸಾ ಎಂಬವರ ಮನೆಯಿಂದ ಕಳೆದ ರಾತ್ರಿ ಚಿನ್ನ ಹಾಗೂ ನಗದು ಕಳವುಗೊಂಡಿರುವ ಘಟನೆ ನಡೆದಿದೆ. ನೆಬಿಸಾ ಅವರ ಪುತ್ರಿ ಹೆರಿಗೆ ಹಿನ್ನೆಲೆಯಲ್ಲಿ ಪುತ್ರಿಯೊಂದಿಗೆ ನೆಬಿಸಾ ಹಾಗೂ ಅವರ ಅಳಿಯ ಮಂಗಳೂರಿನ ಆಸ್ಪತ್ರೆಗೆ ತೆರಳಿದ್ದರು. ಕಳೆದ ನಾಲ್ಕೈದು ದಿನಗಳಿಂದ ಮನೆಯಲ್ಲಿ ಯಾರೂ ಇರಲಿಲ್ಲ. ಮಾ.11ರಂದು ಸಂಜೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಲಕ್ಷಾಂತರ ರೂ ಮೌಲ್ಯ ದ ಚಿನ್ನ ಹಾಗೂ ನಗದು ಕಳವುಗೊಂಡಿರುವುದಾಗಿ ವರದಿಯಾಗಿದೆ. ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ

ಗೋಳಿತ್ತಡಿ: ಮನೆಯಿಂದ ನಗದು, ಚಿನ್ನಾಭರಣ ಕಳವು Read More »

ರಾಜಕೀಯದಲ್ಲಿ ಅಸಮಾಧಾನಗಳು ಸಹಜ – ಶೋಭಾ ಕರಂದ್ಲಾಜೆ

ಸಮಗ್ರ ನ್ಯೂಸ್ : “ರಾಜಕೀಯ ಎಂದರೆ ಅಸಮಾಧಾನಗಳು ಇರುತ್ತದೆ. ಗೆಲ್ಲುವ ಸೀಟನ್ನು ಎಲ್ಲರೂ ಕೇಳುತ್ತಾರೆ. ಸೀಟು ಕೇಳುವಾಗ ಗೊಂದಲಗಳು ಆಗಿಯೇ ಆಗುತ್ತದೆ. ಇದಕ್ಕೂ ಚುನಾವಣೆಗೂ ಯಾವುದೇ ಸಂಬಂಧ ಇರುವುದಿಲ್ಲ” ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಅವರು ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ನೆಟ್ಟಣ ಕಿದು ಸಿಪಿಐಆರ್ ಕಾರ್ಯಕ್ರಮದಲ್ಲಿ ಭಾಗಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ನಮ್ಮ ಕೇಂದ್ರದ ಚುನಾವಣಾ ಮಂಡಳಿ ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಅದಕ್ಕೆ ಬದ್ಧರಾಗಿದ್ದೇವೆ ಎಂದರು. ನೀವು ಸ್ಪರ್ಧೆ ಮಾಡುತ್ತೀರಾ ಎಂಬ

ರಾಜಕೀಯದಲ್ಲಿ ಅಸಮಾಧಾನಗಳು ಸಹಜ – ಶೋಭಾ ಕರಂದ್ಲಾಜೆ Read More »

ಬಂಟ್ವಾಳ: ಕಾನೂನು ಬಾಹಿರ ಆಟೋ ಚಾಲನೆ- ಚಾಲಕನಿಂದ ಆಕ್ರೋಶ

ಸಮಗ್ರ ನ್ಯೂಸ್ : ಕಾನೂನು ಬಾಹಿರವಾಗಿ ಆಟೋರಿಕ್ಷಾ ಓಡಿಸುತ್ತಿದ್ದ ವ್ಯಕ್ತಿಯೋರ್ವನನ್ನು ಟ್ರಾಫಿಕ್ ಪೊಲೀಸರು ತಡೆದು ದಂಡ ಹಾಕಿದ್ದಾರೆ. ಈ ಕಾರಣಕ್ಕೆ ಆವೇಶಕ್ಕೊಳಗಾದ ಚಾಲಕ ಟ್ರಾಫಿಕ್ ಎಸ್.ಐ.ಹಾಗೂ ಸರಕಾರಿ ವಾಹನಕ್ಕೆ ಮತ್ತು ಆಟೋ ರಿಕ್ಷಾಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾದ ಘಟನೆ ಬಂಟ್ವಾಳ ಬಿಸಿರೋಡಿನ ಕೈಕಂಬ ಎಂಬಲ್ಲಿ ಸೋಮವಾರ ನಡೆದಿದೆ. ಗೂಡಿನಬಳಿ ನಿವಾಸಿ ಮಹಮ್ಮದ್ ಅನ್ಸಾರ್ ಪ್ರಕರಣದ ಆರೋಪಿಯಾಗಿದ್ದು, ಸದ್ಯ ತಲೆಮರೆಸಿಕೊಂಡಿರುತ್ತಾನೆ. ಟ್ರಾಫಿಕ್ ಎಸ್‍ಐ. ಸುತೇಶ್ ಅವರು ಕೈಕಂಬದಲ್ಲಿ ವಾಹನಗಳ ತಪಾಸಣಾ ಕಾರ್ಯದಲ್ಲಿ ತೊಡಗಿದ್ದ ವೇಳೆ, ಯೂನಿಫಾರ್ಮ್

ಬಂಟ್ವಾಳ: ಕಾನೂನು ಬಾಹಿರ ಆಟೋ ಚಾಲನೆ- ಚಾಲಕನಿಂದ ಆಕ್ರೋಶ Read More »

ಬಂಟ್ವಾಳ: ಹೃದಯಾಘಾತದಿಂದ ಯುವಕ ಮೃತ್ಯು

ಸಮಗ್ರ ನ್ಯೂಸ್ : ಅವಿವಾಹಿತ ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಾ.11 ರಂದು ಸೋಮವಾರ ಬೆಳಿಗ್ಗೆ ನಡೆದಿದೆ. ಮೆಲ್ಕಾರ್ ನಿವಾಸಿ ಉದಯ (36) ಮೃತಪಟ್ಟ ಯುವಕ. ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನಲ್ಲಿ ಗ್ರಂಥಪಾಲಕನಾಗಿ ಕೆಲಸ ಮಾಡುತ್ತಿದ್ದ ಉದಯೋನ್ಮುಖ ಯುವಕ ಉದಯ ಅವರು ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಜನಸ್ನೇಹಿಯಾಗಿ, ಜನಸೇವಕನಾಗಿದ್ದ ಉದಯ ಅವರು ನಿನ್ನೆ ರಾತ್ರಿ ಊಟ ಮಾಡಿ ಮಲಗಿದ್ದರು. ಇಂದು ಬೆಳಿಗ್ಗೆ ಉದಯ ಎದ್ದಿಲ್ಲಾ ಎಂದು ಮನೆಯವರು ಎಚ್ಚರಿಸಿದಾಗ ಯಾವುದೇ ಪ್ರತಿಕ್ರಿಯೆ ಇಲ್ಲದಿರುವುದು ಗಮನಿಸಿ,

ಬಂಟ್ವಾಳ: ಹೃದಯಾಘಾತದಿಂದ ಯುವಕ ಮೃತ್ಯು Read More »