Editor

ಲಂಚ ಸ್ವೀಕರಿಸುವ ವೇಳೆ ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿ ಮೇಲೆ ಲೋಕಾಯುಕ್ತ ದಾಳಿ

ಸಮಗ್ರ ನ್ಯೂಸ್: ತುಮಕೂರಿನ ಕಚೇರಿಯಲ್ಲಿ ಲಂಚ ಸ್ವೀಕರಿಸುವ ವೇಳೆ ಮಂಜುನಾಥ್.ವಿ ಕೆ ಎಂಬ ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದೆ. 40 ಸಾವಿರ ಹಣ ತೆಗೆದುಕೊಳ್ಳುವಾಗ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ಇವರು ಮಂಜುನಾಥ್ ರೆಡ್ಡಿ ಎಂಬುವವರ ಬಳಿ 50 ಸಾವಿರ ಲಂಚಕ್ಕೆ ಹಣಕ್ಕೆ ಬೇಡಿಕೆಯಿಟ್ಟಿದ್ದ‌ರು. ಈ ಕುರಿತು ಜಿ.ಮಂಜುನಾಥ್ ರೆಡ್ಡಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇವರ ದೂರಿನ ಮೇಲೆ ಲೋಕಾಯುಕ್ತ ಡಿವೈಎಸ್ ಪಿ ಉಮಾಶಂಕರ್ ನೇತೃತ್ವದಲ್ಲಿ ದಾಳಿ ನಡೆಸಿ, ಭ್ರಷ್ಟ ಅಧಿಕಾರಿಯನ್ನು ಅರೆಸ್ಟ್​ ಮಾಡಿದ್ದಾರೆ.

ಲಂಚ ಸ್ವೀಕರಿಸುವ ವೇಳೆ ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿ ಮೇಲೆ ಲೋಕಾಯುಕ್ತ ದಾಳಿ Read More »

ಆಸ್ತಿಗಳ ನೋಂದಣಿಗೆ ಆಧಾರ್ ಲಿಂಕ್..!ಭಾನುವಾರವೂ ತೆರೆಯಲಿದೆ ಸಬ್ ರಿಜಿಸ್ಟ್ರಾರ್ ಕಚೇರಿ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ

ಸಮಗ್ರ ನ್ಯೂಸ್: ನಕಲಿ ದಾಖಲೆ ಸೃಷ್ಟಿಸಿ ಇತರರ ಆಸ್ತಿಯನ್ನು ಕಬಳಿಕೆ ಮಾಡುವ ಪ್ರಕರಣವನ್ನು ತಡೆಗಟ್ಟಲು ಆಸ್ತಿಗಳ ನೋಂದಣಿಗೆ ಆಧಾರ್ ಲಿಂಕ್ ಮಾಡಲು ರಾಜ್ಯ ಸರ್ಕಾರ ಇದೀಗ ಮುಂದಾಗಿದೆ. ನನ್ನ ಆಸ್ತಿ ಎಂಬ ಯೋಜನೆಯನ್ನ ನನ್ನ ಭೂಮಿ, ನನ್ನ ಗುರುತು ಎಂಬ ಶೀರ್ಷಿಕೆಯಡಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಆಸ್ತಿ ನೋಂದಣಿ ವೇಳೆ ಆಧಾರ್ ಪಡೆಯುವ ಸೇವೆ ಆರಂಭ ಮಾಡುತ್ತೇವೆ ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಕಡ್ಡಾಯ ಮಾಡುವುದಕ್ಕೆ ಆಗುವುದಿಲ್ಲ, ಆದರೆ ನೋಂದಣಿ ಮಾಡಬೇಕಾಗುತ್ತದೆ. ನೋಂದಣಿ

ಆಸ್ತಿಗಳ ನೋಂದಣಿಗೆ ಆಧಾರ್ ಲಿಂಕ್..!ಭಾನುವಾರವೂ ತೆರೆಯಲಿದೆ ಸಬ್ ರಿಜಿಸ್ಟ್ರಾರ್ ಕಚೇರಿ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ Read More »

ಯದುವೀರ್‌ ಚುನಾವಣೆಗೆ ಸ್ಪರ್ಧಿಸದಂತೆ ಪೋಸ್ಟರ್‌ ಅಭಿಯಾನ

ಸಮಗ್ರ ನ್ಯೂಸ್: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಚಾರ ಭಾರೀ ಕುತೂಹಲ ಮೂಡಿಸಿದೆ. ಸಂಸದ ಪ್ರತಾಪ್‌ ಸಿಂಹ ಬದಲಿಗೆ ರಾಜವಂಶಸ್ಥ ಯದುವೀರ್‌ ಒಡೆಯರ್‌ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ. ರಾಜವಂಶಸ್ಥ ಯದುವೀರ್‌ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ರಾಜಕೀಯಕ್ಕೆ ಎಂಟ್ರಿಕೊಡುವ ಕುರಿತಂತೆ ಸಾರ್ವಜನಿಕ ವಲಯದಲ್ಲಿ ದೊಡ್ಡಮಟ್ಟದ ಚರ್ಚೆ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ದಯವಿಟ್ಟು ರಾಜಕೀಯಕ್ಕೆ ಬರಬೇಡಿ. ರಾಜರಾಗಿರಿ ಕೇವಲ ಮಂತ್ರಿಯಾಗಬೇಡಿ ಎನ್ನುವ ಪೋಸ್ಟರ್ ಅಭಿಯಾನ ಆರಂಭವಾಗಿದೆ. ಯುವರಾಜರೇ ನಿಮಗೆ ನಿಮ್ಮದೇ ಘನತೆ ಇದೆ,

ಯದುವೀರ್‌ ಚುನಾವಣೆಗೆ ಸ್ಪರ್ಧಿಸದಂತೆ ಪೋಸ್ಟರ್‌ ಅಭಿಯಾನ Read More »

ಮಣಿಪಾಲ: ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದ ಯುವಕ ನಾಪತ್ತೆ..!

ಸಮಗ್ರ ನ್ಯೂಸ್: ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದ ಯುವಕ ನಾಪತ್ತೆಯಾಗಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ. ನಾಪತ್ತೆಯಾದ ಯುವಕ ಮಾರುತಿ ತಳವಾರ (27) ಎಂದು ಗುರುತಿಸಲಾಗಿದೆ. ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದ ಇವರು ಮಾ.8ರಂದು ಮಧ್ಯಾಹ್ನ ತಾನು ವಾಸವಿದ್ದ ಬಾಡಿಗೆ ಮನೆಯಿಂದ ಹೋದವರು ಫೋನ್ ಸಂಪರ್ಕಕ್ಕೆ ಸಿಗದೇ, ಸಂಬಂಧಿಕರ ಮನೆಗೂ ಹೋಗದೇ, ಬೇರೆ ಕಡೆ ಕೆಲಸಕ್ಕೂ ಹೋಗದೇ ನಾಪತ್ತೆಯಾಗಿದ್ದಾರೆ. ಇವರು ಮಣಿಪಾಲದಲ್ಲಿ ಸೆಕ್ಯುರಿಟಿ ಕಲೆಸ ಮಾಡಿಕೊಂಡಿದ್ದು, ಕೆಲಸ ಕಷ್ಟ ಆಗುತ್ತಿದೆ. ಕೆಲಸ ಬಿಟ್ಟು ಬೇರೆ ಕಡೆ ಕೆಲಸ ಮಾಡುವುದಾಗಿಯೂ ಹೇಳುತ್ತಿದ್ದರು ಎನ್ನಲಾಗಿದೆ.

ಮಣಿಪಾಲ: ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದ ಯುವಕ ನಾಪತ್ತೆ..! Read More »

ಮಂಗಳೂರು: ಚುನಾವಣಾ ಯಶಸ್ಸಿನಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದು-ಡಿಸಿ ಮುಲ್ಲೈ ಮುಗಿಲನ್

ಸಮಗ್ರ ನ್ಯೂಸ್ : ಮುಂಬರುವ ಲೋಕಸಭೆಯ ಚುನಾವಣೆಯ ವಿವಿಧ ಕಾರ್ಯಗಳಿಗೆ ನಿಯೋಜನೆಗೊಂಡ ಹಲವು ತಂಡಗಳ ಅಧಿಕಾರಿ ಹಾಗೂ ಸಿಬ್ಬಂದಿಗಳು ಶ್ರಮವಹಿಸಿ ತಮ್ಮ ಕರ್ತವ್ಯವನ್ನು ನಿಭಾಯಿಸಿದಲ್ಲಿ ಚುನಾವಣೆ ಸುಸೂತ್ರವಾಗಿ ಜರುಗಲಿದೆ. ಸಮಸ್ಯೆ ಬಂದ ನಂತರ ಎಚ್ಚೆತ್ತುಕೊಳ್ಳುವುದಕ್ಕಿಂತ ಆ ಬಗ್ಗೆ ಮೊದಲೇ ಜಾಗೃತರಾಗಿರಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಅಧಿಕಾರಿಗಳಿಗೆ ಹೇಳಿದರು. ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿಗಳ ಸಭಾಂಗಣದಲ್ಲಿ ಮಾ.12ರ ಮಂಗಳವಾರ ಚುನಾವಣಾ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚುನಾವಣಾ

ಮಂಗಳೂರು: ಚುನಾವಣಾ ಯಶಸ್ಸಿನಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದು-ಡಿಸಿ ಮುಲ್ಲೈ ಮುಗಿಲನ್ Read More »

SSLC ಪಾಸ್ ಆಗಿದ್ರೆ ಸಾಕು, ರೈಲ್ವೆ ಇಲಾಖೆ ಜಾಬ್ ಗೆ ಟ್ರೈ ಮಾಡಬಹುದು

ಸಮಗ್ರ ಉದ್ಯೋಗ: ರೈಲ್ವೆ ನೇಮಕಾತಿ ಮಂಡಳಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 9144 ಟೆಕ್ನಿಷಿಯನ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಏಪ್ರಿಲ್ 8, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​​ಲೈನ್ ಮೂಲಕ ಅಪ್ಲೈ ಮಾಡಬೇಕು. ಶೈಕ್ಷಣಿಕ ಅರ್ಹತೆ:ರೈಲ್ವೆ ನೇಮಕಾತಿ ಮಂಡಳಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ10ನೇ ತರಗತಿ, 12ನೇ ತರಗತಿ, ಡಿಪ್ಲೊಮಾ, ಬಿ.ಎಸ್ಸಿ, ಬಿಇ/ಬಿ.ಟೆಕ್​​ ಪೂರ್ಣಗೊಳಿಸಿರಬೇಕು.

SSLC ಪಾಸ್ ಆಗಿದ್ರೆ ಸಾಕು, ರೈಲ್ವೆ ಇಲಾಖೆ ಜಾಬ್ ಗೆ ಟ್ರೈ ಮಾಡಬಹುದು Read More »

ನಿಮ್ಹಾನ್ಸ್​​ನಲ್ಲಿ ಉದ್ಯೋಗಕ್ಕೆ ಆಹ್ವಾನ, ಬೇಗ ಅರ್ಜಿ ಹಾಕಿ

ಸಮಗ್ರ ಉದ್ಯೋಗ: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಪ್ರಾಜೆಕ್ಟ್ ರಿಸರ್ಚ್​ ಸೈಂಟಿಸ್ಟ್-II (ನಾನ್​-ಮೆಡಿಕಲ್) ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾರ್ಚ್​ 13, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​​ಲೈನ್ ಮೂಲಕ ಅಪ್ಲೈ ಮಾಡಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಶೈಕ್ಷಣಿಕ ಅರ್ಹತೆ:ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ

ನಿಮ್ಹಾನ್ಸ್​​ನಲ್ಲಿ ಉದ್ಯೋಗಕ್ಕೆ ಆಹ್ವಾನ, ಬೇಗ ಅರ್ಜಿ ಹಾಕಿ Read More »

ಲೋಕಸಭೆಗೆ ಯದುವೀರ್/ ಅಪ್ಪಣೆ ನೀಡಿದರಾ ರಾಜಮಾತೆ?

ಸಮಗ್ರ ನ್ಯೂಸ್: ಬಿಜೆಪಿ ಹೈಕಮಾಂಡ್ ಸಂಸದ ಪ್ರತಾಪ್ ಸಿಂಹ ಅವರ ಬದಲಿಗೆ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಅಖಾಡಕ್ಕಿಳಿಸಲು ಮುಂದಾಗಿದ್ದು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ. ಮೈಸೂರು ಮಹಾರಾಜರಿಗೆ ಬಿಜೆಪಿ ಹೈಕಮಾಂಡ್ ಆಹ್ವಾನ ನೀಡಿದೆ ಎಂಬ ಸುದ್ದಿಯ ನಡುವೆಯೇ ಯದುವೀರ್ ಚುನಾವಣಾ ರಾಜಕೀಯಕ್ಕೆ ಬರಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಹೈಕಮಾಂಡ್ ಒಪ್ಪಿಗೆ ನೀಡಿದ ಬಳಿಕ ರಾಜಮಾತೆ ಪ್ರಮೋದಾದೇವಿ ಇದೀಗ ಮಹತ್ವದ ಸೂಚನೆ ನೀಡಿದ್ದಾರೆ. ರಾಜಮಾತೆ

ಲೋಕಸಭೆಗೆ ಯದುವೀರ್/ ಅಪ್ಪಣೆ ನೀಡಿದರಾ ರಾಜಮಾತೆ? Read More »

ಬೆಳ್ತಂಗಡಿ : ತುರ್ತು ಸೇವೆಯಲ್ಲಿ ತೆರಲುತ್ತಿದ್ದ ಆಂಬ್ಯುಲೆನ್ಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಕಾರು ಚಾಲಕ

ಸಮಗ್ರ ನ್ಯೂಸ್ : ತುರ್ತು ಸೇವೆಯಲ್ಲಿ ಹೋಗುತ್ತಿದ್ದ ಪಶು ಇಲಾಖೆಯ ವಾಹನದ ಚಾಲಕನ ಮೇಲೆ ಕ್ಷುಲ್ಲಕ ವಿಚಾರದಲ್ಲಿ ಆಂಬ್ಯುಲೆನ್ಸ್ ಬಾಗಿಲು ತೆಗೆದು ಕೈಯಿಂದ ಮತ್ತು ಕಾಲಿನಿಂದ ಹಲ್ಲೆ ಮಾಡಿದ ಘಟನೆ ಇಂದು ಬೆಳ್ತಂಗಡಿಯಲ್ಲಿ ನಡೆದಿದೆ. ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ. ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನದ 1962 ಗೆ ಕಾಲ್ ಸೆಂಟರ್ ಗೆ ದನದ ಚಿಕಿತ್ಸೆಗಾಗಿ ಬೆಳ್ತಂಗಡಿ ತಾಲೂಕಿನ ನೆರಿಯಕ್ಕೆ ತುರ್ತು ಸೇವೆಯಲ್ಲಿ

ಬೆಳ್ತಂಗಡಿ : ತುರ್ತು ಸೇವೆಯಲ್ಲಿ ತೆರಲುತ್ತಿದ್ದ ಆಂಬ್ಯುಲೆನ್ಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಕಾರು ಚಾಲಕ Read More »

ಲೋಕಸಭಾ ಚುನಾವಣೆ: ಬಿಜೆಪಿಯೊಂದಿಗೆ ವಿಲೀನಗೊಂಡ ಎಐಎಸ್‍ಎಂಕೆ ಪಕ್ಷ

ಸಮಗ್ರ ನ್ಯೂಸ್: ತಮಿಳುನಾಡಿನ ನಟ ಆರ್ ಶರತ್ ಕುಮಾರ್ ನೇತೃತ್ವದ ಎಐಎಸ್‍ಎಂಕೆ ಪಕ್ಷ ಮುಂಬರುವ ಲೋಕಸಭಾ ಚುನಾವಣೆಗೆ ತಮಿಳುನಾಡಿನಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ದೊಂದಿಗೆ ವಿಲೀನಗೊಂಡಿದೆ. ಈ ಕುರಿತು ಮಾತನಾಡಿದ ನಟ ಆರ್ ಶರತ್ ಕುಮಾರ್, “ಇದು ಜನರಿಗಾಗಿ. ಇದು ರಾಷ್ಟ್ರಕ್ಕಾಗಿ. ನಾವು ರಾಷ್ಟ್ರದ ಹಿತದೃಷ್ಟಿಯಿಂದ ಮಾತ್ರ ಕೆಲಸ ಮಾಡಬೇಕಾಗಿದೆ ಮತ್ತು ಈ ನಿರ್ಧಾರದ ಬಗ್ಗೆ ನಮಗೆ ತುಂಬಾ ಸಂತೋಷ ಮತ್ತು ಹೆಮ್ಮೆ ಇದೆ” ಎಂದು ಹೇಳಿದರು. ಕೇಂದ್ರ ಸಚಿವ ಎಲ್ ಮುರುಗನ್, ರಾಷ್ಟ್ರೀಯ ಕಾರ್ಯದರ್ಶಿ

ಲೋಕಸಭಾ ಚುನಾವಣೆ: ಬಿಜೆಪಿಯೊಂದಿಗೆ ವಿಲೀನಗೊಂಡ ಎಐಎಸ್‍ಎಂಕೆ ಪಕ್ಷ Read More »