Editor

ಭರ್ಜರಿಯಾಗಿ ಸಾಗುತ್ತಿರುವ ಐಪಿಎಲ್/ ಎರಡು ಪಂದ್ಯಗಳ ದಿನಾಂಕ ಬದಲು

ಸಮಗ್ರ ನ್ಯೂಸ್: ಐಪಿಎಲ್ 2024 ಭರ್ಜರಿ ಆರಂಭವನ್ನು ಪಡೆದುಕೊಂಡಿದ್ದು, ಈಗಾಗಲೇ 14 ಪಂದ್ಯಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಆದರೆ ನಡುವೆ ರಾಜಸ್ಥಾನ ರಾಯಲ್ಸ್-ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಗುಜರಾತ್ ಟೈಟಾನ್ಸ್- ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಬದಲಾವಣೆ ಮಾಡಲಾಗಿದೆ. ಕೋಲ್ಕತಾ ನೈಟ್ ರೈಡರ್ಸ್ ತಂಡವು ತನ್ನ ತವರಿನ ಪಂದ್ಯವನ್ನು ರಾಜಸ್ಥಾನ ರಾಯಲ್ಸ್ ಎದುರು ಏಪ್ರಿಲ್ 17ರಂದು ಆಡಬೇಕಿತ್ತು. ಇದೀಗ ಆ ಪಂದ್ಯ ಒಂದು ದಿನ ಮುಂಚಿತವಾಗಿ ಅಂದರೆ ಏಪ್ರಿಲ್ 16ರ ಮಂಗಳವಾರ ಆಡಲಿದೆ. ಇನ್ನೊಂದೆಡೆ ಗುಜರಾತ್ ಟೈಟಾನ್ಸ್ ಹಾಗೂ

ಭರ್ಜರಿಯಾಗಿ ಸಾಗುತ್ತಿರುವ ಐಪಿಎಲ್/ ಎರಡು ಪಂದ್ಯಗಳ ದಿನಾಂಕ ಬದಲು Read More »

ಸೀನಿಯರ್ ರಿಸರ್ಚ್​ ಫೆಲೋ ಹುದ್ದೆ ಖಾಲಿ ಇದೆ, 42,000 ಸಂಬಳ!

ಸಮಗ್ರ ಉದ್ಯೋಗ: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಸೀನಿಯರ್ ರಿಸರ್ಚ್​ ಫೆಲೋ (SRF) ಹುದ್ದೆ ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಏಪ್ರಿಲ್ 12, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಇ-ಮೇಲ್ ಮಾಡುವ ಮೂಲಕ ಅಪ್ಲೈ ಮಾಡಿ. ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಶೈಕ್ಷಣಿಕ

ಸೀನಿಯರ್ ರಿಸರ್ಚ್​ ಫೆಲೋ ಹುದ್ದೆ ಖಾಲಿ ಇದೆ, 42,000 ಸಂಬಳ! Read More »

ಹಿರಿಯ ನಾಗರಿಕರ ವಿನಾಯ್ತಿ ರದ್ದು/ 5,875 ಕೋಟಿ ಹೆಚ್ಚಿನ ಆದಾಯ ಗಳಿಸಿದ ರೈಲ್ವೆ

ಸಮಗ್ರ ನ್ಯೂಸ್: ಹಿರಿಯ ನಾಗರಿಕರಿಗೆ ರೈಲುಗಳಲ್ಲಿ ನೀಡಲಾಗುತ್ತಿದ್ದ ವಿನಾಯ್ತಿ ದರದ ಟಿಕೆಟ್ ರದ್ದು ಮಾಡಿದ ಬಳಿಕ ಇಲಾಖೆಗೆ ರೂ. 5,875 ಕೋಟಿ ಹೆಚ್ಚಿನ ಆದಾಯ ಹರಿದುಬಂದಿದೆ ಎಂದು ಮಧ್ಯಪ್ರದೇಶದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮಾಹಿತಿ ಹಕ್ಕು ಕಾಯ್ದೆ ಅರ್ಜಿಗೆ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಕೋವಿಡ್ ಲಾಕ್‍ಡೌನ್‍ನಿಂದಾಗಿ 2020ರ ಮಾ.20ರಂದು ರೈಲುಗಳಲ್ಲಿ ಹಿರಿಯ ನಾಗರಿಕರ ಟಿಕೆಟ್ ವಿನಾಯ್ತಿಯನ್ನು ರದ್ದುಗೊಳಿಸಿದ ನಂತರ, ಈ ವರ್ಷದ ಜ.31ರವರೆಗೆ 13 ಕೋಟಿ ಪುರುಷ, 9 ಕೋಟಿ ಮಹಿಳೆ ಹಾಗೂ 33,700 ತೃತೀಯ ಲಿಂಗದ

ಹಿರಿಯ ನಾಗರಿಕರ ವಿನಾಯ್ತಿ ರದ್ದು/ 5,875 ಕೋಟಿ ಹೆಚ್ಚಿನ ಆದಾಯ ಗಳಿಸಿದ ರೈಲ್ವೆ Read More »

ಬಿಸಿಯೂಟ ಸೇವಿಸಿ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಸಮಗ್ರ ನ್ಯೂಸ್‌ : ಬಿಸಿಯೂಟ ಸೇವಿಸಿ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ನಡೆದಿದೆ. ಅಸ್ವಸ್ಥಗೊಂಡಿದ್ದ ಮಕ್ಕಳನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯಾಹ್ನದ ಬಿಸಿಯೂಟ ಸೇವಿಸಿದ 1 ರಿಂದ 5 ತರಗತಿಯ 32 ಮಕ್ಕಳಲ್ಲಿ ವಾಂತಿ, ತಲೆನೋವು ಕಾಣಿಸಿಕೊಂಡಿದೆ. ಒಬ್ಬರ ನಂತರ ಒಬ್ಬರು ಅಸ್ವಸ್ಥಗೊಂಡಿದ್ದು, ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆಸ್ಪತ್ರೆಗೆ ಡಿಎಚ್ಓ ಡಾ. ಲಿಂಗರಾಜ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಸೀಲ್ದಾರ ನಾಗರಾಜ ಭೇಟಿ

ಬಿಸಿಯೂಟ ಸೇವಿಸಿ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ Read More »

ನವದೆಹಲಿ: ಸೂಕ್ತ ದಾಖಲೆ ಒದಗಿಸಿ, ಇಲ್ಲದಿದ್ದರೆ ಕಾನೂನು ಕ್ರಮಕ್ಕೆ ಸಿದ್ಧರಾಗಿ ಎಂದು ಬಿಜೆಪಿ ಪಕ್ಷ ದೆಹಲಿ ಸಚಿವೆ ಆತಿಶಿಗೆ ಸವಾಲು

ಸಮಗ್ರ ನ್ಯೂಸ್‌ : ಬಿಜೆಪಿ ಪಕ್ಷಕ್ಕೆ ಸೇರುವಂತೆ ಆಪ್ತ ಸಹಾಯಕರೊಬ್ಬರ ಮೂಲಕ ನನ್ನನ್ನು ಸಂಪರ್ಕಿಸಲಾಗಿದೆ ಎಂಬ ದೆಹಲಿ ಸಚಿವೆ ಆತಿಶಿ ಹೇಳಿಕೆಗೆ ಬಿಜೆಪಿ ಪ್ರತಿಕ್ರಿಯೆ ನೀಡಿದ್ದು, ಸೂಕ್ತ ದಾಖಲೆ ಒದಗಿಸಿ, ಇಲ್ಲದಿದ್ದರೆ ಕಾನೂನು ಕ್ರಮಕ್ಕೆ ಸಿದ್ಧರಾಗಿ ಎಂದು ಹೇಳಿದೆ. ಬಿಜೆಪಿ ಮುಖಂಡ ವೀರೇಂದ್ರ ಸಚ್‌ದೇವ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಗೆ ಸೇರಲು ಆತಿಶಿಯನ್ನು ಸಂಪರ್ಕಿಸಲಾಗಿದೆ ಎಂಬ ಹೇಳಿಕೆಗೆ ಇಂದು ಸಂಜೆಯೊಳಗೆ ದಾಖಲೆಗಳನ್ನು ಒದಗಿಸಲು ವಿಫಲರಾದರೆ ಕಾನೂನು ಕ್ರಮಕ್ಕೆ ಸಿದ್ಧರಾಗಿ ಎಂದು ಸವಾಲು ಹಾಕಿದ್ದಾರೆ. ಆಧಾರರಹಿತ ಆರೋಪಗಳು ಮಾಡಿ, ಆದರಿಂದ

ನವದೆಹಲಿ: ಸೂಕ್ತ ದಾಖಲೆ ಒದಗಿಸಿ, ಇಲ್ಲದಿದ್ದರೆ ಕಾನೂನು ಕ್ರಮಕ್ಕೆ ಸಿದ್ಧರಾಗಿ ಎಂದು ಬಿಜೆಪಿ ಪಕ್ಷ ದೆಹಲಿ ಸಚಿವೆ ಆತಿಶಿಗೆ ಸವಾಲು Read More »

ನಾಳೆ(ಎ.03) ದ್ವಿತೀಯ ಪಿಯುಸಿ ರಿಸಲ್ಟ್! ನಕಲಿ ಸುತ್ತೋಲೆ ಕುರಿತು ಸ್ಪಷ್ಟನೆ ನೀಡಿದ ಇಲಾಖೆ

ಸಮಗ್ರ ನ್ಯೂಸ್: ನಾಳೆ(ಎ.03) ದ್ವಿತೀಯ ಪಿಯುಸಿ ರಿಸಲ್ಟ್ ಪ್ರಕಟವಾಗಲಿದೆ ಎನ್ನುವ ಪ್ರತಿಯೊಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಇದು ನಕಲಿ ಸುತ್ತೋಲೆ ಎಂದು ಇಲಾಖೆ ಆಯುಕ್ತರು ತಿಳಿಸಿದ್ದಾರೆ. ಸದ್ಯಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ ದ್ವಿತೀಯ ಪಿಯುಸಿ ರಿಸಲ್ಟ್ ಇನ್ನೂ ಹತ್ತರಿಂದ 15 ದಿವಸದಲ್ಲಿ ಬರುವ ಸಾಧ್ಯತೆ ಇದೇ ಎನ್ನಲಾಗುತ್ತಿದೆ, ಅದಾಗ್ಯೂ ಕೂಡ ಆಯುಕ್ತರೇ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾರೆ. ವೈರಲ್ ಆಗಿರುವ ನಕಲಿ ಪತ್ರಿಕಾ ಪ್ರಕಟಣೆಯಲ್ಲಿ ಈ ರೀತಿ ವಿವರಿಸಲಾಗಿದೆ. ‘ 2023- 24ರ ದ್ವಿತೀಯ ಪಿಯುಸಿ

ನಾಳೆ(ಎ.03) ದ್ವಿತೀಯ ಪಿಯುಸಿ ರಿಸಲ್ಟ್! ನಕಲಿ ಸುತ್ತೋಲೆ ಕುರಿತು ಸ್ಪಷ್ಟನೆ ನೀಡಿದ ಇಲಾಖೆ Read More »

ಉಡುಪಿ: ದಲಿತ ವಿರೋಧಿ ಕಾಂಗ್ರೆಸ್ಸನ್ನು ಸೋಲಿಸಿ ಎಂದು ದಿನಕರ ಬಾಬು ಕರೆ

ಸಮಗ್ರ ನ್ಯೂಸ್‌ : ಕಾಂಗ್ರೆಸ್ ಸರಕಾರವು ದಲಿತರ ಸಮಾಧಿ ಮೇಲೆ ಕುಳಿತು ಅಧಿಕಾರ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷವು ಮತಬ್ಯಾಂಕಿಗಾಗಿ ಮಾತ್ರ ದಲಿತರನ್ನು ಓಲೈಸುತ್ತದೆ. ಕಾಂಗ್ರೆಸ್ಸಿಗರು ದಲಿತರಿಗೆ ವಿವರಿಸಲಾಗದಷ್ಟು ಅನ್ಯಾಯವನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಸೋಲಿಸಲು ದಲಿತ ಸಮಾಜ ಸನ್ನದ್ಧರಾಗಬೇಕು ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ದಿನಕರ ಬಾಬು ಕರೆ ನೀಡಿದರು. ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದಲಿತರನ್ನು ತುಳಿದು, ಅವರ ಬೆನ್ನಿಗೆ ಚೂರಿ ಹಾಕಿ ಅವರನ್ನು

ಉಡುಪಿ: ದಲಿತ ವಿರೋಧಿ ಕಾಂಗ್ರೆಸ್ಸನ್ನು ಸೋಲಿಸಿ ಎಂದು ದಿನಕರ ಬಾಬು ಕರೆ Read More »

ಮಧ್ಯಪ್ರದೇಶದಲ್ಲಿ ರೈಲ್ವೆ ಸೇತುವೆ ಕುಸಿತ

ಸಮಗ್ರ ನ್ಯೂಸ್‌ : ಕುವಾರಿ ನದಿ ಮೇಲಿನ ರೈಲ್ವೆ ಸೇತುವೆ ಕುಸಿದ ಘಟನೆ ಇಂದು ಮಧ್ಯಪ್ರದೇಶದ ಮೊರೈನಾದಲ್ಲಿ ನಡೆದಿದೆ. ಘಟನೆಯಲ್ಲಿ ಐದು ಕಾರ್ಮಿಕರು ಗಾಯಗೊಂಡಿದ್ದಾರೆ. ಶತಮಾನದಷ್ಟು ಹಳೆಯದಾದ ರೈಲ್ವೆ ಸೇತುವೆಯನ್ನು ಕಳಚುವ ಪ್ರಕ್ರಿಯೆಯಲ್ಲಿ ಕಾರ್ಮಿಕರು ನಿರತರಾಗಿದ್ದಾಗ ಈ ಅವಘಡ ಸಂಭವಿಸಿದೆ. ರೈಲ್ವೆ ಹಳಿಯನ್ನು ನ್ಯಾರೋ ಗೇಜ್‌ನಿಂದ ಬ್ರಾಡ್‌ ಗೇಜ್‌ಗೆ ಪರಿವರ್ತಿಸಲಾಗುತ್ತಿದ್ದು, ಸೇತುವೆಯನ್ನು ಆ ಸಲುವಾಗಿ ಕಳಚುವ ಕಾಮಗಾರಿ ನಡೆಸಲಾಗುತ್ತಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗ್ಯಾಸ್‌ ಕಟರ್‌ ಬಳಸಿ ಸೇತುವೆಯ ಉಕ್ಕಿನ ಭಾಗವನ್ನು ತುಂಡರಿಸುವ ಕಾರ್ಯದಲ್ಲಿ ಕಾರ್ಮಿಕರು ನಿರತರಾಗಿದ್ದಾಗ

ಮಧ್ಯಪ್ರದೇಶದಲ್ಲಿ ರೈಲ್ವೆ ಸೇತುವೆ ಕುಸಿತ Read More »

ನವದೆಹಲಿ: ವಿಸ್ತಾರಾ ಏರ್‌ಲೈನ್ಸ್‌ಗೆ ಪೈಲಟ್‌ಗಳ ಕೊರತೆಯಿಂದ 70 ವಿಮಾನಗಳ ಸೇವೆ ರದ್ದು

ಸಮಗ್ರ ನ್ಯೂಸ್‌ : ಟಾಟಾ ಕಂಪನಿ ಒಡೆತನದ ವಿಸ್ತಾರಾ ಏರ್‌ಲೈನ್ಸ್‌ಗೆ ಪೈಲಟ್‌ಗಳ ಕೊರತೆಯಿಂದಾಗಿ ಇಂದು ಕಂಪನಿಯ ಸುಮಾರು 70 ವಿಮಾನಗಳ ಸೇವೆ ರದ್ದಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಕಳೆದ ಒಂದು ವಾರದಿಂದ ಇದೇ ಕಾರಣದಿಂದ ವಿಸ್ತಾರಾದ 100ಕ್ಕೂ ಹೆಚ್ಚು ವಿಮಾನಗಳ ಸೇವೆಯಲ್ಲಿ ವ್ಯತ್ಯಯವಾಗಿದೆ.ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯವು ಡಿಜಿಸಿಎದಿಂದ ವರದಿ ಕೇಳಿದೆ. ವಿಸ್ತಾರ ಟಾಟಾ ಗ್ರೂಪ್ ಸೇರಿದ ನಂತರ ಅದರ ಪೈಲಟ್‌ಗಳು ಸಂಬಳ ಸೇರಿದಂತೆ ಇತರೆ ಅನುಕೂಲಗಳಿಗೆ ಆಗ್ರಹಿಸಿ ಅಘೋಷಿತ ಪ್ರತಿಭಟನೆ ನಡೆಸುತ್ತಿದ್ದಾರೆ. ಅನೇಕರು

ನವದೆಹಲಿ: ವಿಸ್ತಾರಾ ಏರ್‌ಲೈನ್ಸ್‌ಗೆ ಪೈಲಟ್‌ಗಳ ಕೊರತೆಯಿಂದ 70 ವಿಮಾನಗಳ ಸೇವೆ ರದ್ದು Read More »

ದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ಎಎಪಿ ಸಂಸದ ಸಂಜಯ್ ಸಿಂಗ್‌ಗೆ ಜಾಮೀನು

ಸಮಗ್ರ ನ್ಯೂಸ್‌ : ಹೊಸ ಮದ್ಯ ನೀತಿಯಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿದ್ದ ಎಎಪಿ ನಾಯಕ ಹಾಗೂ ಸಂಸದ ಸಂಜಯ್ ಸಿಂಗ್‌ ಅವರಿಗೆ ಸುಪ್ರಿಂ ಕೋರ್ಟ್ ಇಂದು ಜಾಮೀನು ನೀಡಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸಂಜಯ್ ಸಿಂಗ್ ಅವರಿಗೆ ಇನ್ನು ಮುಂದೆ ಕಸ್ಟಡಿಯ ಅಗತ್ಯವಿಲ್ಲ ಎಂದು ಜಾರಿ ನಿರ್ದೇಶನಾಲಯ ಹೇಳಿದ ನಂತರ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ದೀಪಂಕರ್ ದತ್ತಾ ಮತ್ತು ಪ್ರಸನ್ನ ಬಿ ವರಾಲೆ ಅವರಿದ್ದ ತ್ರಿಸದಸ್ಯ ಪೀಠವು

ದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ಎಎಪಿ ಸಂಸದ ಸಂಜಯ್ ಸಿಂಗ್‌ಗೆ ಜಾಮೀನು Read More »