ಆಟೋಮೋಟಿವ್ ಸಾಫ್ಟ್‌ವೇರ್ ಹಾಗೂ ಐಟಿ ಅಭಿವೃದ್ಧಿ ಕೇಂದ್ರ ಸ್ಥಾಪನೆ/ ಜೊತೆಯಾದ ಬಿಎಂಡಬ್ಲ್ಯೂ ಹಾಗೂ ಟಾಟಾ ಟೆಕ್ನಾಲಜೀಸ್
ಸಮಗ್ರ ನ್ಯೂಸ್: ಭಾರತದಲ್ಲಿ ಜಂಟಿಯಾಗಿ ಆಟೋಮೋಟಿವ್ ಸಾಫ್ಟ್‌ವೇರ್ ಹಾಗೂ ಐಟಿ ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ಆಟೋ ಮೊಬೈಲ್ ಕ್ಷೇತ್ರದ ಜಾಗತಿಕ ದೈತ್ಯ ಬಿಎಂಡಬ್ಲ್ಯೂ ಹಾಗೂ ಟಾಟಾ ಟೆಕ್ನಾಲಜೀಸ್ ಪರಸ್ಪರ ಕೈ ಜೋಡಿಸಿದ್ದಾರೆ. ಭಾರತದ ಪುಣೆ, ಬೆಂಗಳೂರು ಹಾಗೂ ಚೆನ್ನೈನಲ್ಲಿ ಐಟಿ ಹಬ್‌ಗಳನ್ನು ಪ್ರಾರಂಭಿಸಲಾಗುತ್ತಿದೆ. ಈ ಪೈಕಿ ಜಂಟಿ ಉದ್ಯಮದ ಮುಖ್ಯ ಕೇಂದ್ರ ಬೆಂಗಳೂರು ಮತ್ತು ಪುಣೆಯಲ್ಲಿ, ಐಟಿ ಚೆನ್ನೈನಲ್ಲಿ ಸ್ಥಾಪನೆಯಾಗಲಿವೆ ಎಂದು ಕಂಪನಿಗಳು ಹೇಳಿವೆ. ಈ ಬಗ್ಗೆ ಪರಸ್ಪರ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಒಪ್ಪಂದವು ಸಾಫ್ಟ್‌ವೇರ್-ಡಿಫೈನ್ಸ್ ವೆಹಿಕಲ್, ಬಿಎಂಡಬ್ಲ್ಯು










