Editor

ಮದ್ಯ ನೀತಿ ಹಗರಣ/ ಆಮ್ ಆದ್ಮಿ ತೊರೆದ ಸಚಿವ ರಾಜ್ ಕುಮಾರ್ ಆನಂದ್

ಹೊಸ ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನದ ಬೆನ್ನಲ್ಲೇ ದೆಹಲಿ ಸಚಿವ ರಾಜ್ ಕುಮಾರ್ ಆನಂದ್ ಸರ್ಕಾರ ಮತ್ತು ಪಕ್ಷವನ್ನು ತೊರೆದಿದ್ದಾರೆ. ಭ್ರಷ್ಟಾಚಾರ ವಿರುದ್ಧ ಹೋರಾಡುವ ಕುರಿತು ಎಎಪಿಯ ಬಲವಾದ ಸಂದೇಶವನ್ನು ನೋಡಿದ ನಂತರ ನಾನು ಎಎಪಿಗೆ ಸೇರಿದ್ದೆ. ಇಂದು ಪಕ್ಷ ಭ್ರಷ್ಟತೆ ಮಧ್ಯೆ ಸಿಲುಕಿದೆ. ಅದಕ್ಕಾಗಿಯೇ ನಾನು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಸಮಾಜ ಕಲ್ಯಾಣ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಚಿವರಾಗಿದ್ದ ಆನಂದ್ ಸ್ಪಷ್ಟಪಡಿಸಿದ್ದಾರೆ. ಮದ್ಯ ನೀತಿಯ ಪ್ರಕರಣದಿಂದ

ಮದ್ಯ ನೀತಿ ಹಗರಣ/ ಆಮ್ ಆದ್ಮಿ ತೊರೆದ ಸಚಿವ ರಾಜ್ ಕುಮಾರ್ ಆನಂದ್ Read More »

ವಿಪರೀತ ತಾಪಮಾನದಿಂದ ಪಂಜಾಬ್‌ನಲ್ಲಿ ಮತಗಟ್ಟೆಗಳಲ್ಲಿ ಏರ್‌ ಕೂಲರ್‌, ಫ್ಯಾನ್‌ ಅಳವಡಿಕೆ

ಸಮಗ್ರ ನ್ಯೂಸ್‌ : ‌ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದ್ದು, ಈ ನಿಟ್ಟಿನಲ್ಲಿ ಪಂಜಾಬ್‌ನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ಮತಗಟ್ಟೆಗಳಲ್ಲಿ ಏರ್‌ ಕೂಲರ್‌, ಫ್ಯಾನ್‌ ಅಳವಡಿಸಲಾಗುತ್ತದೆ. ಜೊತೆಗೆ ಮತದಾರರಿಗೆ ನೀರು, ತಂಪು ಪಾನೀಯ ಹಾಗೂ ಇತರ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಈ ಕುರಿತು ಜಿಲ್ಲಾಧಿಕಾರಿಗಳು ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದಾರೆ ಎಂದು ಪಂಜಾಬ್‌ನ ಮುಖ್ಯ ಚುನಾವಣಾಧಿಕಾರಿ ಸಿಬಿನ್‌ ಸಿ. ಅವರು ಹೇಳಿದ್ದಾರೆ. ಈ ವರ್ಷ ಪಂಜಾಬ್‌ನಲ್ಲಿ ಅಧಿಕ ತಾಪಮಾನ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಮತದಾರರಿಗೆ

ವಿಪರೀತ ತಾಪಮಾನದಿಂದ ಪಂಜಾಬ್‌ನಲ್ಲಿ ಮತಗಟ್ಟೆಗಳಲ್ಲಿ ಏರ್‌ ಕೂಲರ್‌, ಫ್ಯಾನ್‌ ಅಳವಡಿಕೆ Read More »

ಉಡುಪಿ: ‘ಮರಳಿ ಬಂದಿದೆ ಯುಗಾದಿ ಮತ್ತೆ ಬರುವರು ಮೋದಿ’ ಹಾಗೂ ‘ಶಕ್ತಿ ಚೌಪಾಟ್’ ಅಭಿಯಾನ

ಸಮಗ್ರ ನ್ಯೂಸ್‌ : ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಯೋಚನೆ-ಯೋಜನೆಗಳಿಂದ ‘ದೇಶಕ್ಕೆ ಮೋದಿಯೇ ಗ್ಯಾರಂಟಿ’ ಎನ್ನುವುದನ್ನು ಈಗಾಗಲೇ ಮಹಿಳಾ ಮತದಾರರು ಅರ್ಥೈಸಿಕೊಂಡಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಗೆಲುವಿಗೆ ಕ್ಷೇತ್ರದ ನಾರೀ ಶಕ್ತಿ ಮಹತ್ತರ ಕೊಡುಗೆ ನೀಡಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ್ ಶೆಟ್ಟಿ ತಿಳಿಸಿದರು. ಬಿಜೆಪಿ ಉಡುಪಿ ಜಿಲ್ಲಾ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಬಿಜೆಪಿ ಮಹಿಳಾ

ಉಡುಪಿ: ‘ಮರಳಿ ಬಂದಿದೆ ಯುಗಾದಿ ಮತ್ತೆ ಬರುವರು ಮೋದಿ’ ಹಾಗೂ ‘ಶಕ್ತಿ ಚೌಪಾಟ್’ ಅಭಿಯಾನ Read More »

ಕೋಲ್ಕತ್ತಾ: ಮಮತಾ ಬ್ಯಾನರ್ಜಿ ಅವರು ಜನರ ದಾರಿ ತಪ್ಪಿಸುತ್ತಿದ್ದಾರೆ;ಅಮಿತ್ ಶಾ

ಸಮಗ್ರ ನ್ಯೂಸ್‌ : ಪೌರತ್ವ ತಿದ್ದುಪಡಿ ಕಾಯ್ದೆಯನ್ನು ನಾವು ಜಾರಿ ಮಾಡಿದ್ದೇವೆ. ಆದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಲ್ಪ ಸಂಖ್ಯಾತರ ಪೌರತ್ವ ರದ್ದಾಗಲಿದೆ ಎಂದು ಜನರ ದಾರಿ ತಪ್ಪಿಸುತ್ತಿದ್ದಾರೆ. ಅವರು ಏನೇ ಪ್ರಯತ್ನ ಮಾಡಿದರೂ ಸಿಎಎ ತಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸವಾಲು ಹಾಕಿದರು. ಪಶ್ಚಿಮ ಬಂಗಾಳದ ಬಲೂರ್‌ಘಾಟ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ನೀವು ಸಿಎಎಗೆ ಅರ್ಜಿ ಸಲ್ಲಿಸಿದರೆ ನಿಮ್ಮ ಪೌರತ್ವವನ್ನು ಕಳೆದುಕೊಳ್ಳುತ್ತೀರಿ ಎಂದು ದಾರಿ ತಪ್ಪಿಸಲಾಗುತ್ತಿದೆ.

ಕೋಲ್ಕತ್ತಾ: ಮಮತಾ ಬ್ಯಾನರ್ಜಿ ಅವರು ಜನರ ದಾರಿ ತಪ್ಪಿಸುತ್ತಿದ್ದಾರೆ;ಅಮಿತ್ ಶಾ Read More »

ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿಗೆ ದಾಖಲೆಯ ಮೂರನೇ ವರ್ಷವೂ ಶೇ. 100 ಫಲಿತಾಂಶ|ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಸಾನ್ವಿ ರಾವ್ 3ನೇ ರ‍್ಯಾಂಕ್‌

ಸಮಗ್ರ ನ್ಯೂಸ್:2023-24 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿಗೆ ಸತತ ಮೂರನೇ ವರ್ಷವೂ ಶೇ. 100 ಫಲಿತಾಂಶ ದೊರಕಿದೆ. ಪರೀಕ್ಷೆಗೆ ಕುಳಿತ ಎಲ್ಲಾ 582 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲೇ ತೇರ್ಗಡೆ ಹೊಂದುವ ಮೂಲಕ ವಿಶೇಷ ಸಾಧನೆ ಗೈದಿದ್ದಾರೆ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಸಿಂಚನ ಆರ್‌. ಹೆಚ್ 592 ಅಂಕಗಳೊಂದಿಗೆ ರಾಜ್ಯಕ್ಕೆ 7ನೇ ರ‍್ಯಾಂಕ್‌ , ಹಂಸಿನಿ ವಿ 591 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ರ‍್ಯಾಂಕ್‌, ಸುಜಿತ್‌

ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿಗೆ ದಾಖಲೆಯ ಮೂರನೇ ವರ್ಷವೂ ಶೇ. 100 ಫಲಿತಾಂಶ|ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಸಾನ್ವಿ ರಾವ್ 3ನೇ ರ‍್ಯಾಂಕ್‌ Read More »

ಕಾಫಿ ಬೋರ್ಡ್​​ನಲ್ಲಿ ಮಾರ್ಕೆಟಿಂಗ್ ಇಂಟರ್ನ್​ ಜಾಬ್ ಗೆ ಆಹ್ವಾನ, ಈಗಲೇ ಅರ್ಜಿ ಸಲ್ಲಿಸಿ

ಸಮಗ್ರ ಉದ್ಯೋಗ: ಭಾರತೀಯ ಕಾಫಿ ಮಂಡಳಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಮಾರ್ಕೆಟಿಂಗ್ ಇಂಟರ್ನ್ ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಏಪ್ರಿಲ್ 20, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಈಗಲೇ ರೆಸ್ಯೂಮ್ ಕಳುಹಿಸಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತೆ. ವಿದ್ಯಾರ್ಹತೆ:ಭಾರತೀಯ ಕಾಫಿ ಮಂಡಳಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಂಬಿಎ, ಸ್ನಾತಕೋತ್ತರ ಪದವಿ

ಕಾಫಿ ಬೋರ್ಡ್​​ನಲ್ಲಿ ಮಾರ್ಕೆಟಿಂಗ್ ಇಂಟರ್ನ್​ ಜಾಬ್ ಗೆ ಆಹ್ವಾನ, ಈಗಲೇ ಅರ್ಜಿ ಸಲ್ಲಿಸಿ Read More »

ವಿಜಯಪುರದ ವೇದಾಂತ ನಾವಿ ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ

ಸಮಗ್ರ ನ್ಯೂಸ್‌ : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಕಲಾ ವಿಭಾಗದಲ್ಲಿ ವಿಜಯಪುರ ನಗರದ ಎಸ್‌.ಎಸ್‌. ಪಿ.ಯು ಕಾಲೇಜಿನ ವಿದ್ಯಾರ್ಥಿ ವೇದಾಂತ ಜ್ಞಾನೋಬಾ ನಾವಿ 596 ಅಂಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ವೇದಾಂತ ನಾವಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಲಬೀಳಗಿ ಗ್ರಾಮದವನು. ರಾಜ್ಯಕ್ಕೆ ಪ್ರಥಮ ಬರುತ್ತೇನೆ ಎಂಬ ನಿರೀಕ್ಷೆ ಇರಲಿಲ್ಲ, ಖುಷಿಯಾಗಿದೆ. ಓದಿಗಾಗಿ ಹೆಚ್ಚು ಸಮಯ ಮೀಸಲಿಟ್ಟಿರಲಿಲ್ಲ. ಅವಕಾಶ ಸಿಕ್ಕಾಗ ಓದುತ್ತಿದ್ದೆ. ಯಾವುದೇ ಟ್ಯೂಷನ್‌ಗೆ ಹೋಗಿಲ್ಲ, ಪ್ರತಿ ದಿನ ಕಾಲೇಜಿನಲ್ಲಿ ಮಾಡುವ ಪಾಠಗಳನ್ನು

ವಿಜಯಪುರದ ವೇದಾಂತ ನಾವಿ ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ Read More »

ಮೋದಿ ಪೋಟೋ ಬಳಕೆ/ ಈಶ್ವರಪ್ಪ ವಿರುದ್ಧ ದೂರು

ಸಮಗ್ರ ನ್ಯೂಸ್: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಮುಂದಾಗಿರುವ ಕೆಎಸ್ ಈಶ್ವರಪ್ಪ ಅವರು ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪೋಟೋ ಬಳಕೆ ಮಾಡುತ್ತಿದ್ದಾರೆ. ಇದು ರಾಜ್ಯ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದ್ದು, ಈಶ್ವರಪ್ಪ ಅವರು ಚುನಾವಣಾ ನರೇಂದ್ರ ಮೋದಿ ಪೋಟೋ ಮತ್ತು ಹೆಸರು ಬಳಕೆ ಮಾಡದಂತೆ ಬಿಜೆಪಿ, ದೂರು ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಮತ್ತು ವಿಧಾನ ಪರಿಷತ್ ಸದಸ್ಯ

ಮೋದಿ ಪೋಟೋ ಬಳಕೆ/ ಈಶ್ವರಪ್ಪ ವಿರುದ್ಧ ದೂರು Read More »

ಸಾಯಿಬಾಬಾ ಮಂದಿರ ಕಟ್ಟಿ ತಾಯಿಯ ಕನಸು ಈಡೇರಿಸಿದ ನಟ ದಳಪತಿ ವಿಜಯ್

ಸಮಗ್ರ ನ್ಯೂಸ್‌ : ಸಿನಿಮಾಗಳಲ್ಲಿ ನಟಿಸುತ್ತಲೇ ಸದಾ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿರುವವರು ದಳಪತಿ ವಿಜಯ್. ಇವರು, ಇದೀಗ ತಮ್ಮ ತಾಯಿಗಾಗಿ ಸಾಯಿಬಾಬಾ ಮಂದಿರವನ್ನು ಕಟ್ಟಿದ್ದಾರೆ. ಸಾಯಿಬಾಬಾ ಮಂದಿರವನ್ನು ಕಟ್ಟುದರ ಮೂಲಕ ತಮ್ಮ ತಾಯಿ ಕನಸನ್ನು ದಳಪತಿ ವಿಜಯ್ ಈಡೇರಿಸಿದ್ದಾರೆ. ಚೆನೈನಲ್ಲಿ ಅವರದ್ದೊಂದು ಪುಟ್ಟ ನಿವೇಶನವಿತ್ತು. ಅಲ್ಲಿಯೇ ಸುಂದರವಾದ ಸಾಯಿಬಾಬಾ ಮಂದಿರ ಕಟ್ಟಬೇಕು ಎಂಬುದು ತಾಯಿ ಕನಸು. ಆ ನಿವೇಶನವನ್ನು ತಾಯಿ ಹಾಗೇ ಉಳಿಸಿಕೊಂಡು ಬಂದಿದ್ದರು. ಅವರ ತಾಯಿ ಸಾಯಿಬಾಬಾನ ಮಹಾನ್ ಭಕ್ತರೂ ಆಗಿರುವುದರಿಂದ ಈ ಕೆಲಸ ನೆರವೇರಿದೆ.

ಸಾಯಿಬಾಬಾ ಮಂದಿರ ಕಟ್ಟಿ ತಾಯಿಯ ಕನಸು ಈಡೇರಿಸಿದ ನಟ ದಳಪತಿ ವಿಜಯ್ Read More »

ಧಾರವಾಡ: ಶಾಸಕ ಯತ್ನಾಳ್ ಭಾವಚಿತ್ರ ಸುಟ್ಟು ಪ್ರತಿಭಟನೆ

ಸಮಗ್ರ ನ್ಯೂಸ್‌ : ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ಸಮತಾ ಸೇನಾ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಶಾಸಕ ಯತ್ನಾಳ್ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಬೆಂಕಿ ಹಚ್ಚುವ ಮೂಲಕ ಸಮತಾ ಸೇನಾ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾದರೇ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ

ಧಾರವಾಡ: ಶಾಸಕ ಯತ್ನಾಳ್ ಭಾವಚಿತ್ರ ಸುಟ್ಟು ಪ್ರತಿಭಟನೆ Read More »