Editor

ಶ್ರೀರಾಮ ನವಮಿ ದಿನದಂದು ಈ ಕೆಲಸಗಳನ್ನು ಮಾಡಿ, ಕಷ್ಟಗಳೆಲ್ಲ ಮಾಯವಾಗುತ್ತೆ!

ಶ್ರೀರಾಮ ಯುಗಪುರುಷ. ಅವರ ಜೀವನ ಪ್ರಾಯೋಗಿಕವಾಗಿತ್ತು. ಅವರು ಏಕಪತ್ನಿಯಾಗಿ ಖ್ಯಾತಿಯನ್ನು ಪಡೆದರು. ಅದಕ್ಕಾಗಿಯೇ ಜನರು ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಮಂಗಳಕರವಾದ ಶ್ರೀ ರಾಮನವಮಿಯನ್ನು ಆಚರಿಸುತ್ತಾರೆ. ಈ ವರ್ಷ ಏಪ್ರಿಲ್ 17ರ ಬುಧವಾರದಂದು ನವಮಿ ಆಚರಣೆ ನಡೆಯಲಿದೆ. ಈ ಸಂದರ್ಭದಲ್ಲಿ ನಾಡಿನಾದ್ಯಂತ ಶ್ರೀರಾಮ ಶೋಭಾಯಾತ್ರೆಗಳನ್ನು ಆಯೋಜಿಸಲಾಗಿದೆ. ಆದರೆ ಈ ಹಬ್ಬವು ಜೀವನದಲ್ಲಿ ಅನೇಕ ಸವಾಲುಗಳು, ಸಮಸ್ಯೆಗಳು, ಕಷ್ಟಗಳು ಮತ್ತು ಸಂಕಟಗಳಿಂದ ಹೊರಬರಲು ಹಲವು ಮಾರ್ಗಗಳನ್ನು ತೋರಿಸುತ್ತದೆ. ನವಮಿಯಂದು ನೀವು ಕೆಲವು ಕೆಲಸಗಳನ್ನು

ಶ್ರೀರಾಮ ನವಮಿ ದಿನದಂದು ಈ ಕೆಲಸಗಳನ್ನು ಮಾಡಿ, ಕಷ್ಟಗಳೆಲ್ಲ ಮಾಯವಾಗುತ್ತೆ! Read More »

ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರದಲ್ಲಿ ಜಾಬ್ ಖಾಲಿ ಇದೆ, ತಿಂಗಳಿಗೆ 35,000 ಸಂಬಳ!

ಸಮಗ್ರ ಉದ್ಯೋಗ: ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್​-ಬಿ ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಏಪ್ರಿಲ್ 30, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್ & ಆಫ್​​ಲೈನ್​ ಮೂಲಕ ಅರ್ಜಿ ಹಾಕಬೇಕು. ಶೈಕ್ಷಣಿಕ ಅರ್ಹತೆ:ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ

ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರದಲ್ಲಿ ಜಾಬ್ ಖಾಲಿ ಇದೆ, ತಿಂಗಳಿಗೆ 35,000 ಸಂಬಳ! Read More »

ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಚಿನ್ನದ ಬೆಲೆ/ 10 ಗ್ರಾಂ ಚಿನ್ನದ ಬೆಲೆ ರೂ. 74,000

ಸಮಗ್ರ ನ್ಯೂಸ್: ಚಿನ್ನ ಮತ್ತು ಬೆಳ್ಳಿ ಬೆಲೆ ದರ ಏರಿಕೆ ಮುಂದುವರೆದಿದ್ದು, ಎರಡೂ ಲೋಹಗಳ ಬೆಲೆ ಬುಧವಾರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಬೆಂಗಳೂರು ಚಿನಿವಾರ ಪೇಟೆಯಲ್ಲಿ 99.5 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 74060 ರು.ಗೆ ತಲುಪಿದೆ. ಇನ್ನು ಬೆಳ್ಳಿ ಬೆಲೆ ಕೆಜಿಗೆ 84600 ರು. ತಲುಪಿದೆ. ಇನ್ನು ಮುಂಬೈನಲ್ಲಿ 99.5 ಕ್ಯಾರೆಟ್ ಶುದ್ಧತೆಯ ಚಿನ್ನದ ಬೆಲೆ 10 ಗ್ರಾಂಗೆ 71535 ರು. ತಲುಪಿದ್ದರೆ, 99.9 ಶುದ್ಧತೆಯ ಚಿನ್ನದ ಬೆಲೆ 71823 ರು.ಗೆ ತಲುಪಿದೆ.

ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಚಿನ್ನದ ಬೆಲೆ/ 10 ಗ್ರಾಂ ಚಿನ್ನದ ಬೆಲೆ ರೂ. 74,000 Read More »

ಪತಂಜಲಿ ಉತ್ಪನ್ನಗಳ ಗುಣಮಟ್ಟ ಪರಿಶೀಲನೆ/ ಸಚಿವ ದಿನೇಶ್ ಗುಂಡೂರಾವ್ ಆದೇಶ

ಸಮಗ್ರ ನ್ಯೂಸ್: ಪತಂಜಲಿ ಆಯುರ್ವೇದದ ಜಾಹೀರಾತುಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾದ ಉತ್ತರಾಖಂಡದ ಔಷದ ಪರವಾನಗಿ ಮತ್ತು ನಿಯಂತ್ರಣ ಪ್ರಾಧಿಕಾರವನ್ನು ಸುಪ್ರೀಕೋರ್ಟ್ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ರಾಜ್ಯದಲ್ಲಿ ಪತಂಜಲಿಯ ಎಲ್ಲ ಉತ್ಪನ್ನಗಳ ಪರಿಶೀಲನೆ ಮಾಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಆದೇಶಿಸಿದ್ದಾರೆ. ರಾಜ್ಯದಲ್ಲಿ ಪತಂಜಲಿ ಆಯುರ್ವೇದ ಲಿಮಿಟೆಡ್‌ನಿಂದ ಬರುವ ಎಲ್ಲ ಉತ್ಪನ್ನಗಳ ಗುಣಮಟ್ಟ ಪರಿಶೀಲನೆ ನಡೆಸಲಾಗುತ್ತದೆ. ಎಲ್ಲ ಪತಂಜಲಿ ಉತ್ಪನ್ನಗಳ ಗುಣಮಟ್ಟ ಪರೀಕ್ಷಿಸಲು ಔಷದ ನಿಯಂತ್ರಣ ಇಲಾಖೆ ಮತ್ತು ಆಯುಷ್ ಆಯುಕ್ತರಿಗೆ

ಪತಂಜಲಿ ಉತ್ಪನ್ನಗಳ ಗುಣಮಟ್ಟ ಪರಿಶೀಲನೆ/ ಸಚಿವ ದಿನೇಶ್ ಗುಂಡೂರಾವ್ ಆದೇಶ Read More »

ಹವಾಮಾನ ವರದಿ|ಆರು ದಿನಗಳ ಕಾಲ ರಾಜ್ಯದ ವಿವಿದೆಡೆ ಮಳೆ| ಹವಾಮಾನ ಇಲಾಖೆ ಮುನ್ಸೂಚನೆ

ಸಮಗ್ರ ನ್ಯೂಸ್: ಬೀದರ್, ಕಲಬುರಗಿ, ವಿಜಯಪುರ, ಬೆಳಗಾವಿ, ಬಾಗಲಕೋಟೆ, ಧಾರವಾಡ, ಯಾದಗಿರಿ, ರಾಯಚೂರು, ಗದಗ, ಹಾವೇರಿ, ಕೊಡಗು, ಚಿಕ್ಕಮಗಳೂರು, ಮೈಸೂರು, ಮಂಡ್ಯ ಮತ್ತು ಹಾಸನ ಜಿಲ್ಲೆಯ ಒಂದೆರಡು ಕಡೆ ಗುರುವಾರ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೋಲಾರ ಹೊರತುಪಡಿಸಿ ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಶುಕ್ರವಾರ ಮಳೆಯಾಗುವ ಸಂಭವವಿದೆ. ಕರಾವಳಿಯ ಜಿಲ್ಲೆಗಳಲ್ಲಿ ಶನಿವಾರದಿಂದ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿಯೂ

ಹವಾಮಾನ ವರದಿ|ಆರು ದಿನಗಳ ಕಾಲ ರಾಜ್ಯದ ವಿವಿದೆಡೆ ಮಳೆ| ಹವಾಮಾನ ಇಲಾಖೆ ಮುನ್ಸೂಚನೆ Read More »

ಬೆಳಗಾವಿ:ಹಾವು ಕಚ್ಚಿ ಎರಡೂವರೆ ವರ್ಷದ ಬಾಲಕಿ ಸಾವು

ಸಮಗ್ರ ನ್ಯೂಸ್‌ : ಹಾವು ಕಚ್ಚಿ ಎರಡೂವರೆ ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ನಡೆದಿದೆ. ಬಾಲಕಿ ಮನೆ ಹೊರಗೆ ಆಟ ಆಡುತ್ತಿದ್ದಾಗ ಹಾವು ಕಚ್ಚಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜವಾಗದೆ 2.6 ವರ್ಷದ ತ್ರಿವೇಣಿ ಮೃತಪಟ್ಟಿದ್ದಾಳೆ. ಮನೆ ಹೊರಗೆ ಆಟವಾಡುತ್ತಿದ್ದಾಗ ಬಾಲಕಿಗೆ ಎರಡು ಬಾರಿ ಹಾವು ಕಚ್ಚಿದೆ. ಇದರಿಂದ ಅಸ್ವಸ್ಥಳಾಗಿದ್ದ ಬಾಲಕಿಯನ್ನು ಚಿಕ್ಕೋಡಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ತ್ರಿವೇಣಿ ಕೊನೆಯುಸಿರೆಳೆದಿದ್ದಾಳೆ.

ಬೆಳಗಾವಿ:ಹಾವು ಕಚ್ಚಿ ಎರಡೂವರೆ ವರ್ಷದ ಬಾಲಕಿ ಸಾವು Read More »

ಅಕ್ರಮ ಆಸ್ತಿ ಗಳಿಕೆ/ ಡಿ ಕೆ ಶಿವಕುಮಾರ್‌ಗೆ ಲೋಕಾಯುಕ್ತ ನೋಟೀಸ್

ಸಮಗ್ರ ನ್ಯೂಸ್: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ, 2013ರ ಏಪ್ರಿಲ್ 1ರಿಂದ 2014ರರ ಏಪ್ರಿಲ್ 30ರ ಅವಧಿಯಲ್ಲಿನ ಅಕ್ರಮವಾಗಿ 74.93 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳಿಸಿರುವ ಆರೋಪದ ಮೇಲೆ ಲೋಕಾಯುಕ್ತ ದೂರು ದಾಖಲಿಸಿಕೊಂಡಿದ್ದು, ಇದೀಗ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬoಧಿಸಿ ದಾಖಲೆ ಒದಗಿಸುವಂತೆ ನೊಟೀಸ್ ಜಾರಿ ಮಾಡಿದೆ. ಅಕ್ರಮ ಆಸ್ತಿ ಪ್ರಕರಣದಲ್ಲಿ ಸಿಬಿಐ ತನಿಖೆ ರದ್ದು ಮಾಡಿ ರಾಜ್ಯ ಸರ್ಕಾರ, ಲೋಕಾಯುಕ್ತ ತನಿಖೆಗೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸ್, ಕಳೆದ ಪ್ರೆಬ್ರವರಿ ತಿಂಗಳಲ್ಲಿ ಡಿಕೆ

ಅಕ್ರಮ ಆಸ್ತಿ ಗಳಿಕೆ/ ಡಿ ಕೆ ಶಿವಕುಮಾರ್‌ಗೆ ಲೋಕಾಯುಕ್ತ ನೋಟೀಸ್ Read More »

ತಿರುಮಲದಲ್ಲಿ ಏಪ್ರಿಲ್ 21ರಿಂದ ಹಲವು ಸೇವೆಗಳು ರದ್ದು

ಸಮಗ್ರ ನ್ಯೂಸ್‌ : ತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ ನಡೆಯುವ ವಸಂತೋತ್ಸವ ಈ ಬಾರಿ ಏ. 21ರಿಂದ 23ರವರೆಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ದೇವಾಲಯದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದರಿಂದ ಯಾವುದೇ ನಿಯಮಿತ ಸೇವೆಗಳನ್ನು ನಡೆಸಲಾಗುವುದಿಲ್ಲ. ತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಬರುವ ಚೈತ್ರ ಮಾಸದ ತ್ರಯೋದಶಿ, ಚತುರ್ದಶಿ ಮತ್ತು ಪೌರ್ಣಮಿಯ ಶುಭ ದಿನಗಳಲ್ಲಿ ವಾರ್ಷಿಕ ಸಲಕಟ್ಲ ವಸಂತೋತ್ಸವವನ್ನು ನಡೆಸಲಾಗುತ್ತದೆ. ಈ ಬಾರಿ ಮೂರು ದಿನಗಳ ಸಲಕಟ್ಲ ವಸಂತೋತ್ಸವವು ಏಪ್ರಿಲ್ 21ರಿಂದ 23ರವರೆಗೆ ವೈಭವದಿಂದ

ತಿರುಮಲದಲ್ಲಿ ಏಪ್ರಿಲ್ 21ರಿಂದ ಹಲವು ಸೇವೆಗಳು ರದ್ದು Read More »

ಅಪಾಯಕಾರಿ ನಾಯಿಗಳ ನಿಷೇಧ/ ಕೇಂದ್ರದ ಆದೇಶ ರದ್ದುಗೊಳಿಸಿದ ಹೈಕೋರ್ಟ್

ಸಮಗ್ರ ನ್ಯೂಸ್: ಪಿಟ್‌ಬುಲ್ ಟೆರಿಯರ್, ಅಮೇರಿಕನ್ ಬುಲ್‌ಡಾಗ್ಸ್, ರೊಟ್‌ವೀಲರ್ಸ್ ಮತ್ತು ಮ್ಯಾಸ್ಟಿಫ್ಟ್ ಸೇರಿದಂತೆ ೨೩ ತಳಿಗಳ ಅಪಾಯಕಾರಿ ನಾಯಿಗಳ ಮಾರಾಟ, ಸಾಕಾಣಿಕೆ ಹಾಗೂ ಅವುಗಳ ಸಂತಾನೋತ್ಪತ್ತಿಗೆ ನಿಷೇಧ ಹೇರಿ ಕೇಂದ್ರ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಇಂದು ಕರ್ನಾಟಕ ಹೈಕೋರ್ಟ್ ಕೇಂದ್ರದ ಸುತ್ತೋಲೆಯನ್ನು ರದ್ದುಗೊಳಿಸಿದ್ದು, ಈ ರೀತಿಯ ಕ್ರಮಕ್ಕೂ ಮುನ್ನ ಶ್ವಾನ ತಳಿ ಸಂವರ್ಧನಾ ಸಂಘಟನೆಯೊAದಿಗೆ ಸಮಾಲೋಚಿಸಬೇಕು ಎಂದು ಅಭಿಪ್ರಾಯಪಟ್ಟಿದೆ. ಕೇಂದ್ರ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಪ್ರಶ್ನಿಸಿ, ಕಿಂಗ್ ಸಾಲೊಮನ್ ಡೇವಿಡ್ ಮತ್ತಿತರರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ

ಅಪಾಯಕಾರಿ ನಾಯಿಗಳ ನಿಷೇಧ/ ಕೇಂದ್ರದ ಆದೇಶ ರದ್ದುಗೊಳಿಸಿದ ಹೈಕೋರ್ಟ್ Read More »

ಲಕ್ನೋ:ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 500 ರೂ. ಮೊಬೈಲ್ ಡೇಟಾ ಉಚಿತ; ಅಖಿಲೇಶ್‌

ಸಮಗ್ರ ನ್ಯೂಸ್‌ : ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮೊಬೈಲ್ ಡೇಟಾಗೆ ಉಚಿತವಾಗಿ 500 ರೂ. ಹಣವನ್ನು ಎಲ್ಲಾ ಬಿಪಿಎಲ್‌ ಪಡಿತರ ಕಾರ್ಡ್‌ ಹೊಂದಿದ ಗ್ರಾಹಕರಿಗೆ ನೀಡಲಾಗುವುದು ಎಂದು ಸಮಾಜವಾದಿ ಪಕ್ಷ ಹೇಳಿದೆ. ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ಪಕ್ಷದ ಕಚೇರಿಯಲ್ಲಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು ಉಚಿತ ಲ್ಯಾಪ್‌ಟಾಪ್ ನೀಡಿದ ನಂತರ ಸಮಾಜದಲ್ಲಿ ದೊಡ್ಡ ಬದಲಾವಣೆಯಾಗಿದೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಏರಿದರೆ ಮೊಬೈಲ್‌ ಡೇಟಾಗೆ 500 ರೂ. ನೀಡಲಾಗುವುದು ಎಂದು

ಲಕ್ನೋ:ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 500 ರೂ. ಮೊಬೈಲ್ ಡೇಟಾ ಉಚಿತ; ಅಖಿಲೇಶ್‌ Read More »