Editor

ಮಧ್ಯಪ್ರದೇಶ: ಕಾಂಗ್ರೆಸ್ ಅನೇಕ ಮುಸ್ಲಿಮರನ್ನು ಅಕ್ರಮವಾಗಿ ಒಬಿಸಿ ಪಟ್ಟಿಗೆ ಸೇರಿಸಿದೆ- ಮೋದಿ

ಸಮಗ್ರ ನ್ಯೂಸ್ : ಕರ್ನಾಟಕದಲ್ಲಿ ಕಾಂಗ್ರೆಸ್ ಅನೇಕ ಮುಸ್ಲಿಮರನ್ನು ಅಕ್ರಮವಾಗಿ ಒಬಿಸಿ ಪಟ್ಟಿಗೆ ಸೇರಿಸಿತ್ತು ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷವು ದೇಶದಲ್ಲಿ ಪಿತ್ರಾರ್ಜಿತ ಆಸ್ತಿ ಮೇಲೆ ತೆರಿಗೆ ಹೇರಲು ಹೊರಟಿದೆ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ. ಮುಸ್ಲಿಂ ಎಂಬ ಕಾರಣಕ್ಕೆ ಮಾತ್ರ ಉಚಿತ ರೇಷನ್ ಪಡೆಯುತ್ತಾರೆ ಎಂಬುದನ್ನು ನೀವು ಎಂದಾದರೂ ಕೇಳಿದ್ದೀರಾ? ದೇಶದ ಸಂಪತ್ತಿನ ಮೇಲೆ ಮುಸ್ಲಿಮರಿಗೆ ಮೊದಲ […]

ಮಧ್ಯಪ್ರದೇಶ: ಕಾಂಗ್ರೆಸ್ ಅನೇಕ ಮುಸ್ಲಿಮರನ್ನು ಅಕ್ರಮವಾಗಿ ಒಬಿಸಿ ಪಟ್ಟಿಗೆ ಸೇರಿಸಿದೆ- ಮೋದಿ Read More »

ಬೀದರ್: ಈ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ ಗೆಲ್ಲಲು ಪ್ರಯತ್ನ- ಬಿ.ಎಸ್. ಯಡಿಯೂರಪ್ಪ

ಸಮಗ್ರ ನ್ಯೂಸ್ : ವಾತಾವರಣ ನಮಗೆ ಪೂರಕವಾಗಿದೆ. ನೂರಕ್ಕೆ ನೂರು 28 ಕ್ಷೇತ್ರಗಳಲ್ಲಿ ಗೆಲ್ಲಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದರು. ಜಿಲ್ಲೆಯ ಔರಾದ್ನಲ್ಲಿ ಏರ್ಪಡಿಸಿರುವ ಬಿಜೆಪಿ ಬಹಿರಂಗ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲು ನಗರದ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಗುರುವಾರ ಬಂದಿಳಿದ ಅವರು ಅಲ್ಲಿಗೆ ತೆರಳುವುದಕ್ಕೂ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿದರು. ಎಲ್ಲಿಯೇ ಹೋದರೂ ಮೋದಿ ಮೋದಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೇಂದ್ರ ಸಚಿವ ಭಗವಂತ ಖೂಬಾ ಕೂಡ

ಬೀದರ್: ಈ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ ಗೆಲ್ಲಲು ಪ್ರಯತ್ನ- ಬಿ.ಎಸ್. ಯಡಿಯೂರಪ್ಪ Read More »

ದೆಹಲಿ: ಅಕ್ರಮವಾಗಿ 30 ಮೇಕೆ ಸಾಗಾಟ| ಆರೋಪಿಗಳಿಬ್ಬರ ಬಂಧನ

ಸಮಗ್ರ ನ್ಯೂಸ್ : ಮಾರುತಿ ಸ್ವಿಫ್ಟ್ ಕಾರಿನಲ್ಲಿ 30 ಅಕ್ರಮವಾಗಿ ಮೇಕೆ ಸಾಗಾಟ ನಡೆಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ನಡೆದಿದೆ. ಮಾರುತಿ ಸುಜುಕಿ ಸ್ವಿಫ್ಟ್ ಕಾರಿನೊಳಗೆ ಮೇಕೆಗಳು ಮತ್ತು ಕುರಿಗಳನ್ನು ತುಂಬಿಸಲಾಗಿತ್ತು. ಕಾರಿನೊಳಗೆ ಮೇಕೆ, ಕುರಿಗಳನ್ನು ತುಂಬಿ ಬಚ್ಚಿಟ್ಟಿರುವ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೇಕೆ, ಕುರಿಗಳನ್ನು ಕಾರಿನಿಂದ ರಕ್ಷಿಸಿದ್ದಾರೆ. ವರದಿಗಳ ಪ್ರಕಾರ, ಪೊಲೀಸರು ಪಿಸಿಆರ್ ಕರೆಯನ್ನು ಸ್ವೀಕರಿಸಿದರು, ಸಿವಿಲ್ ಲೈನ್ಸ್

ದೆಹಲಿ: ಅಕ್ರಮವಾಗಿ 30 ಮೇಕೆ ಸಾಗಾಟ| ಆರೋಪಿಗಳಿಬ್ಬರ ಬಂಧನ Read More »

ಬೀದರ್:ನೀರಿಗಾಗಿ ವನ್ಯಪ್ರಾಣಿಗಳ ಪರದಾಟ

ಸಮಗ್ರ ನ್ಯೂಸ್‌ : ಮಳೆ ಕೊರತೆ ಹಾಗೂ ಈ ಬೇಸಿಗೆಯಲ್ಲಿ ಹೆಚ್ಚುತ್ತಿರುವ ತಾಪಮಾನದಿಂದ ತಾಲ್ಲೂಕಿನ ಗಡಿ ಭಾಗದ ಜನ, ಜಾನುವಾರು ಜತೆಗೆ ವನ್ಯಪ್ರಾಣಿಗಳು ಕುಡಿಯುವ ನೀರಿಗಾಗಿ ಪರದಾಡಬೇಕಿದೆ. ಮಳೆ ಕೊರತೆ ಹಾಗೂ ಈ ಬೇಸಿಗೆಯಲ್ಲಿ ಹೆಚ್ಚುತ್ತಿರುವ ತಾಪಮಾನದಿಂದ ತಾಲ್ಲೂಕಿನ ಗಡಿ ಭಾಗದ ಜನ, ಜಾನುವಾರು ಜತೆಗೆ ವನ್ಯಪ್ರಾಣಿಗಳು ಕುಡಿಯುವ ನೀರಿಗಾಗಿ ಪರದಾಡಬೇಕಿದೆ. ಇಲ್ಲಿ ಕೃಷ್ಣಮೃಗ, ನವಿಲು, ನರಿ, ಮೊಲ, ತೋಳ, ಕಾಡು ಹಂದಿ, ಮುಳ್ಳು ಹಂದಿ ಸೇರಿದಂತೆ 10 ರಿಂದ 12 ಪ್ರಭೇದದ ವನ್ಯವೀವಿಗಳಿವೆ. ಆದರೆ ಈ

ಬೀದರ್:ನೀರಿಗಾಗಿ ವನ್ಯಪ್ರಾಣಿಗಳ ಪರದಾಟ Read More »

ವಿಜಯಪುರ: ಅನುಭವಿ ಆಲಗೂರ್ ಜಯದಿಂದ ಜಿಲ್ಲೆ ಅಭಿವೃದ್ಧಿ;ಯಶವಂತರಾಯಗೌಡ ಪಾಟೀಲ

ಸಮಗ್ರ ನ್ಯೂಸ್‌ : ಸಜ್ಜನ ಹಾಗೂ ಅನುಭವಿಯಾದ ಕಾಂಗ್ರೆಸ್‌ನ ಲೋಕಸಭೆ ಅಭ್ಯರ್ಥಿ ರಾಜು ಆಲಗೂರರಿಗೆ ಮತ ನೀಡಿದರೆ ವಿಜಯಪುರ ಜಿಲ್ಲೆಯಲ್ಲಿ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ತಾಲೂಕಿನ ಅಗರಖೇಡ ಹಾಗೂ ಹಿರೇ ಬೇನೂರಲ್ಲಿ ನಡೆದ ಜಿಪಂ ವ್ಯಾಪ್ತಿಯ ಲೋಕಸಭೆ ಚುನಾವಣೆ ಸಭೆಯಲ್ಲಿ ಮಾತನಾಡಿ, ಭೀಮೆಯ ದಡದ ಗ್ರಾಮಗಳಿಗೆ ಹಲವು ಅನುಕೂಲ ಮಾಡಿಕೊಡಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ನೀರಾವರಿ, ಪ್ರವಾಸೋದ್ಯಮ, ಲಿಂಬೆ ಬೆಳೆಗಳಿಗೆ ಪ್ರಾತಿನಿಧ್ಯ ಸೇರಿದಂತೆ ನೂರಾರು ಕೆಲಸಗಳು ತಮಗಾಗಲಿವೆ. ಕೆಲಸ ಮಾಡುವವರಿಗೆ ಮತ

ವಿಜಯಪುರ: ಅನುಭವಿ ಆಲಗೂರ್ ಜಯದಿಂದ ಜಿಲ್ಲೆ ಅಭಿವೃದ್ಧಿ;ಯಶವಂತರಾಯಗೌಡ ಪಾಟೀಲ Read More »

ಬೆಂಗಳೂರಿನಲ್ಲಿ ರೈಲಿಗೆ ಸಿಲುಕಿ ಮೂವರು ಸಾವು

ಸಮಗ್ರ ನ್ಯೂಸ್: ಬೆಂಗಳೂರಿನ ಮಾರತ್ತಹಳ್ಳಿ ರೈಲ್ವೇ ನಿಲ್ದಾಣದ ಬಳಿ ಆಂಧ್ರಪ್ರದೇಶದ ಮೂವರು ಯುವಕರು ರೈಲಿಗೆ ಸಿಲುಕಿ ಮೃತಪಟ್ಟ ಘಟನೆ ವರದಿಯಾಗಿದೆ.. ಇವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯು ವ್ಯಕ್ತವಾಗಿದೆ. ಮೃತದೇಹವನ್ನು ನೋಡಿ ಇಂದು ಬೆಳಗ್ಗೆ ಸ್ಥಳೀಯರು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಯುವಕರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತರನ್ನು ಆಂಧ್ರಪ್ರದೇಶದ ಚಿತ್ತೂರು ಮೂಲದವರೆಂದು ತಿಳಿದು ಬಂದಿದೆ. ಶಶಿಕುಮಾರ್ (23),

ಬೆಂಗಳೂರಿನಲ್ಲಿ ರೈಲಿಗೆ ಸಿಲುಕಿ ಮೂವರು ಸಾವು Read More »

ಬೀದರ್‌ : ʼನೇಹಾ ಹತ್ಯೆ ಕೇಸ್‌ನಲ್ಲಿ ಬಿಜೆಪಿಯವರಿಗೆ ಮಾತಾಡೋದಕ್ಕೆ ಯಾವುದೇ ನೈತಿಕ ಹಕ್ಕಿಲ್ಲʼ

ಸಮಗ್ರ ನ್ಯೂಸ್‌ : ನೇಹಾ ಹತ್ಯೆಯನ್ನ ಈಗಾಗಲೇ ಖಂಡಿಸಿದ್ದೇನೆ, ಈಗಲೂ ಖಂಡಿಸುತ್ತೇನೆ ಎಂದು ನಗರದಲ್ಲಿಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ. ಪ್ರಕರಣದ ತನಿಖೆಯನ್ನ ಸಿಐಡಿಗೆ ಕೊಟ್ಟಿದ್ದೇವೆ, ವಿಶೇಷ ನ್ಯಾಯಲಯ ಮಾಡಬೇಕು ಅಂತ ಹೇಳಿದ್ದೇನೆ. ಅಪರಾಧಿಗೆ ಕಠಿಣ ಶಿಕ್ಷೆಯಾಗಬೇಕು, ಘೋರ ಶಿಕ್ಷ ಕೊಡಲು ಪ್ರಯತ್ನ ಮಾಡಬೇಕೆಂದು ಮಾತಾಡಿದ್ದೇನೆ. ಅವರ ತಂದೆ ಜೊತೆಗೂ ಮಾತಾಡಿ, ಆರೋಪಿಗೆ ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದೆವೆಂದು ಹೇಳಿದ್ದೇನೆ. ಬಿಜೆಪಿಯವರು ಒಂದಾದರೂ ಪ್ರಕರಣ ಸಿಬಿಐಗೆ ಕೊಟ್ಟಿದ್ದಾರಾ..? ನೇಹಾ ಪ್ರಕರಣವನ್ನ ಸಿಐಡಿ ತನಿಖೆ ನಡೆಸುತ್ತಿದೆ, ಬಿಜೆಪಿಯವರಿಗೆ

ಬೀದರ್‌ : ʼನೇಹಾ ಹತ್ಯೆ ಕೇಸ್‌ನಲ್ಲಿ ಬಿಜೆಪಿಯವರಿಗೆ ಮಾತಾಡೋದಕ್ಕೆ ಯಾವುದೇ ನೈತಿಕ ಹಕ್ಕಿಲ್ಲʼ Read More »

ಪುತ್ತೂರು: ಬಿಸಿಲಿನ ತಾಪಕ್ಕೆ ಮತಗಟ್ಟೆ ಸಿಬ್ಬಂದಿಗಳು ಹೈರಾಣಾ

ಸಮಗ್ರ ನ್ಯೂಸ್‌ : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಉರಿ ಬಿಸಿಲು ಹೆಚ್ಚಾಗಿದೆ. ಇಂದು ನಗರದ ತೆಂಕಿಲದ ವಿವೇಕಾನಂದ ಶಾಲೆಯಲ್ಲಿ ಮಸ್ಟರಿಂಗ್ ಕೇಂದ್ರ ಕಾರ್ಯಾಚರಿಸುತ್ತಿದೆ. ಇದೀಗ ಮಸ್ಟರಿಂಗ್ ಕೇಂದ್ರದಿಂದ ತಮ್ಮ ತಮ್ಮ ಮತಗಟ್ಟೆಗಳಿಗೆ ಚುನಾವಣಾ ಕರ್ತವ್ಯ ಸಿಬ್ಬಂದಿಗಳು ತೆರಳಿದ್ದಾರೆ. ಇನ್ನು ಬಿಸಿಲಿನ ತಾಪಕ್ಕೆ ಮತಗಟ್ಟೆ ಸಿಬ್ಬಂದಿಗಳು ಹೈರಾಣಾಗಿದ್ದಾರೆ. ಬಿಸಿಲಿನ ಝಳವನ್ನು ತಪ್ಪಿಸಲು ಮತದಾನದ ಪರಿಕರಗಳನ್ನೇ ತಡೆಯಾಗಿ ಸಿಬ್ಬಂದಿಗಳು ಬಳಸಿಕೊಂಡದ್ದು ಕಂಡು ಬಂತು. ಕೆಲವರು ಇವಿ ಪ್ಯಾಟ್ ಪೆಟ್ಟಿಗೆಯನ್ನು ತಲೆಯಲ್ಲಿಟ್ಟು ಬಿಸಿಲಿನ ಪ್ರಕರತೆ ತಪ್ಪಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಮತಯಂತ್ರ ಮರೆಯಾಗಿ ಇಡುವ

ಪುತ್ತೂರು: ಬಿಸಿಲಿನ ತಾಪಕ್ಕೆ ಮತಗಟ್ಟೆ ಸಿಬ್ಬಂದಿಗಳು ಹೈರಾಣಾ Read More »

ದಾವಣಗೆರೆ : ತಾಯಿಯ ಸಾವಿಗೆ ತಂದೆಯೇ ಕಾರಣವೆಂದು ಕಲ್ಲು ಎತ್ತಿ ಹಾಕಿ ಕೊಂದ ಮಗ

ಸಮಗ್ರ ನ್ಯೂಸ್‌ : ಕುಡುಕ ಪತಿಯ ಕಿರುಕುಳಕ್ಕೆ ಬೇಸತ್ತು ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಮೃತಪಟ್ಟಿದ್ದರು. ತಾಯಿ ಸಾವಿಗೆ ತಂದೆಯೇ ಕಾರಣವೆಂದು ಸಿಟ್ಟಾದ ಮಗ ಕಲ್ಲು ಎತ್ತಿ ಹಾಕಿ ತಂದೆಯನ್ನೇ ಕೊಂದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ‌ ಲಕ್ಕಿಂಪುರ ಗ್ರಾಮದಲ್ಲಿ ನಡೆದಿದೆ. ತಿಪ್ಪಮ್ಮ (52) ಎಂಬಾಕೆ ಆತ್ಮಹತ್ಯೆಗೆ ಶರಣಾದರೆ, ಅಂಜನಪ್ಪ (60) ಪುತ್ರನಿಂದಲೇ ಕೊಲೆಯಾಗಿದ್ದಾರೆ. ರಮೇಶ್‌ (30) ಕೊಲೆ ಮಾಡಿ ಜೈಲು ಸೇರಿದ್ದಾನೆ. ರಮೇಶ್‌ ತಂದೆ ಅಂಜನಪ್ಪ ಕಟ್ಟಡ ಕೆಲಸ ಮಾಡುತ್ತಿದ್ದರು. ಕುಡಿತದ ದಾಸರಾಗಿದ್ದ ಅಂಜನಪ್ಪ, ನಿತ್ಯ

ದಾವಣಗೆರೆ : ತಾಯಿಯ ಸಾವಿಗೆ ತಂದೆಯೇ ಕಾರಣವೆಂದು ಕಲ್ಲು ಎತ್ತಿ ಹಾಕಿ ಕೊಂದ ಮಗ Read More »

ಜೆಆರ್​ಎಫ್​ ಹುದ್ದೆಗೆ ಅರ್ಜಿ ಆಹ್ವಾನ, ತಿಂಗಳಿಗೆ 31,000 ಸಂಬಳ!

ಸಮಗ್ರ ಉದ್ಯೋಗ: ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಜೂನಿಯರ್ ರಿಸರ್ಚ್ ಫೆಲೋ ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಬಹುದು. ಏಪ್ರಿಲ್ 30, 2024 ಅರ್ಜಿ ಹಾಕಲು ಕೊನೆಯ ದಿನವಾಗಿದೆ. ಆಸಕ್ತರು ಈಗಲೇ ರೆಸ್ಯೂಮ್ ಕಳುಹಿಸಿ. ಸುರತ್ಕಲ್​​ನಲ್ಲಿ ಉದ್ಯೋಗ ಮಾಡಲು ಇಚ್ಛಿಸುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಶೈಕ್ಷಣಿಕ ಅರ್ಹತೆ:ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ನೇಮಕಾತಿ ಅಧಿಸೂಚನೆ ಪ್ರಕಾರ,

ಜೆಆರ್​ಎಫ್​ ಹುದ್ದೆಗೆ ಅರ್ಜಿ ಆಹ್ವಾನ, ತಿಂಗಳಿಗೆ 31,000 ಸಂಬಳ! Read More »