Editor

ದೇಶದಲ್ಲಿ ‌ಮತ್ತೊಂದು ಮರ್ಯಾದಾ‌ ಹತ್ಯೆ| ಪ್ರೀತಿಸಿ ಮದುವೆಯಾದ ಹುಡುಗ‌ ಒಂದೇ ತಿಂಗಳಲ್ಲಿ ಮಸಣಕ್ಕೆ

ಸಮಗ್ರ ನ್ಯೂಸ್: ದೇಶದಲ್ಲಿ ಮತ್ತೊಂದು ಮರ್ಯಾದೆ ಹತ್ಯೆ ನಡೆದಿದೆ. ಮಹಾರಾಷ್ಟ್ರದ ಛತ್ರಪತಿ ಶಂಭಾಜಿ ನಗರದಲ್ಲಿ ವಾಸವಾಗಿರುವ ವಿದ್ಯಾ, ಪತಿ ಅಮಿತ್ ಸಾಳುಂಕೆ ನಿಧನದಿಂದ ಕಣ್ಣೀರು ಹಾಕುತ್ತಿದ್ದಾಳೆ. ವಿದ್ಯಾ ಕೀರ್ತಿ ಶಾಹಿ ಮತ್ತು ಅಮಿತ್ ಸಾಳುಂಕೆ ಕೆಲವು ಸಮಯದಿಂದ ಲವ್​ ಮಾಡುತ್ತಿದ್ದರು. ಆದರೆ, ಅಮಿತ್​ನನ್ನು ಮದುವೆಯಾಗುವುದಕ್ಕೆ ವಿದ್ಯಾಳ ಪಾಲಕರು ಮತ್ತು ಸಂಬಂಧಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ವಿರೋಧವನ್ನು ಲೆಕ್ಕಿಸದೆ 2024ರ ಮೇ 2ರಂದು ಪುಣೆಗೆ ಹೋಗಿ ದೇವಸ್ಥಾನವೊಂದರಲ್ಲಿ ಇಬ್ಬರು ಮದುವೆಯಾದರು. ಈ ಬಗ್ಗೆ ಮಾತನಾಡಿರುವ ವಿದ್ಯಾ, ಮದುವೆಯಾದ […]

ದೇಶದಲ್ಲಿ ‌ಮತ್ತೊಂದು ಮರ್ಯಾದಾ‌ ಹತ್ಯೆ| ಪ್ರೀತಿಸಿ ಮದುವೆಯಾದ ಹುಡುಗ‌ ಒಂದೇ ತಿಂಗಳಲ್ಲಿ ಮಸಣಕ್ಕೆ Read More »

ಉಡುಪಿ: ನಾಲ್ಕು ತಾಲೂಕಿನ ಶಾಲೆ, ಪಿಯು ಕಾಲೇಜುಗಳಿಗೆ ಇಂದು ರಜೆ ಘೋಷಣೆ

ಸಮಗ್ರ ನ್ಯೂಸ್: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಉಡುಪಿ, ಕಾಪು,ಕಾರ್ಕಳ, ಹೆಬ್ರಿ ತಾಲೂಕುಗಳ ಅಂಗನವಾಡಿ ಪ್ರಾಥಮಿಕ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಜು.31ರಂದು ರಜೆ ಘೋಷಿಸಿ ಆಯಾ ತಾಲೂಕಿನ ತಹಶೀಲ್ದಾರ್ ಗಳು ಆದೇಶ ನೀಡಿದ್ದಾರೆ. ಜಿಲ್ಲಾಧಿಕಾರಿ ಆದೇಶ ನೀಡದೇ ಇದ್ದರೂ ಆಯಾ ತಾಲೂಕಿನ ತಹಶೀಲ್ದಾರರಿಗೆ ಶಾಲೆಗೆ ರಜೆ ನೀಡುವ ವಿವೇಚನೆಗೆ ಬಿಡಲಾಗಿತ್ತು. ಅದರಂತೆ ನಾಲ್ಕು ತಾಲೂಕುಗಳ ತಹಶೀಲ್ದಾರರು ರಜೆ ಘೋಷಿಸಿದ್ದಾರೆ.

ಉಡುಪಿ: ನಾಲ್ಕು ತಾಲೂಕಿನ ಶಾಲೆ, ಪಿಯು ಕಾಲೇಜುಗಳಿಗೆ ಇಂದು ರಜೆ ಘೋಷಣೆ Read More »

ಭಾರೀ ಮಳೆ ಹಿನ್ನೆಲೆ| ದ.ಕ ಜಿಲ್ಲೆಯಾದ್ಯಂತ ಶಾಲೆ, ಪಿಯು ಕಾಲೇಜುಗಳಿಗೆ ಜು.31ರಂದು ರಜೆ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯಲ್ಲಿ ರಣಭೀಕರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಸರ್ಕಾರಿ, ಅನುದಾನಿತ, ಹಾಗೂ ಖಾಸಗಿ ಶಾಲೆ ಮತ್ತು ಪಿಯುಸಿ ‌ಕಾಲೇಜುಗಳಿಗೆ ಜು.31ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ. ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು ಹಲವೆಡೆ ಭೂಕುಸಿತ, ಪ್ರವಾಹ ಉಂಟಾಗಿದೆ. ನೇತ್ರಾವತಿ, ಕುಮಾರಧಾರ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತಗ್ಗುಪ್ರದೇಶಗಳಲ್ಲಿ ನೆರೆ ನೀರು ಆವರಿಸಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಹಾಗೂ ಪ್ರಾಕೃತಿಕ ವಿಕೋಪ ತಂಡಗಳು ಸನ್ನದ್ದವಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.

ಭಾರೀ ಮಳೆ ಹಿನ್ನೆಲೆ| ದ.ಕ ಜಿಲ್ಲೆಯಾದ್ಯಂತ ಶಾಲೆ, ಪಿಯು ಕಾಲೇಜುಗಳಿಗೆ ಜು.31ರಂದು ರಜೆ Read More »

ಕೊಡಗಿನಲ್ಲಿ ಮುಂದುವರಿದ ಮಳೆ| ಜು.31 ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಜು.31ರ ಬುಧವಾರ ಕೊಡಗು ಜಿಲ್ಲೆಯ ಎಲ್ಲ ತಾಲೂಕುಗಳ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ವೆಂಕಟರಾಜ ಆದೇಶಿಸಿದ್ದಾರೆ. ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಅಲ್ಲದೇ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವ ಕಾರಣ ಜನರು ಜಾಗರೂಕತೆಯಿಂದ ಇರಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.

ಕೊಡಗಿನಲ್ಲಿ ಮುಂದುವರಿದ ಮಳೆ| ಜು.31 ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ Read More »

ಭಯಾನಕ ಭೂಕುಸಿತಕ್ಕೆ ತತ್ತರಿಸಿದ ದೇವರನಾಡು| ನದಿಗಳಲ್ಲಿ ತೇಲಿ ಬರುತ್ತಿವೆ ಹೆಣಗಳು| 100ರ ಸನಿಹದಲ್ಲಿ ಸಾವಿನ ಸಂಖ್ಯೆ

ಸಮಗ್ರ ನ್ಯೂಸ್: ಭಯಾನಕ ಭೂಕುಸಿತಕ್ಕೆ ಕೇರಳ ಅಕ್ಷರಶಃ ತತ್ತರಿಸಿ ಹೋಗಿದೆ. ಮಂಗಳವಾರ ಮುಂಜಾನೆ ಮುಂಡಕ್ಕೈ, ಚೂರಲ್ಮಲಾ, ಅಟ್ಟಮಾಲಾ ಮತ್ತು ನೂಲ್ಪುಝಾ ಗ್ರಾಮದಲ್ಲಿ ಭೂಕುಸಿತ ಆಗಿದೆ. ಒಟ್ಟು ಮೂರು ಕಡೆಗಳಲ್ಲಿ ಭೂಕುಸಿತ ಸಂಭವಿಸಿದ್ದು, ಭಾರೀ ಸಾವು ನೋವು ಸಂಭವಿಸಿದೆ. ಮುಂಡಕ್ಕೈ ಮತ್ತು ಚೂರಲ್ಮಲಾ ಪ್ರದೇಶವು ಅಕ್ಷರಶಃ ಗುರುತೇ ಸಿಗದಂತಾಗಿದೆ. ಉಕ್ಕಿ ಹರಿಯುತ್ತಿರುವ ನೀರಿನಲ್ಲಿ ಹೆಣಗಳು ತೇಲಿ ಬರುತ್ತಿವೆ. ದೇವರ ನಾಡು ರಕ್ಕಸ ಮಳೆಯಾರ್ಭಟಕ್ಕೆ ಸ್ಮಶಾನವಾಗಿದೆ. ಭೂಕುಸಿತದ ಪರಿಣಾಮ ಮರಗಳು, ಮಣ್ಣು, ಮನೆಗಳನ್ನು ತೊಯ್ದುಬಿಟ್ಟಿವೆ. ಸ್ಥಳದಲ್ಲಿ ರಕ್ಷಣಾ ತಂಡಗಳು ಕಾರ್ಯ

ಭಯಾನಕ ಭೂಕುಸಿತಕ್ಕೆ ತತ್ತರಿಸಿದ ದೇವರನಾಡು| ನದಿಗಳಲ್ಲಿ ತೇಲಿ ಬರುತ್ತಿವೆ ಹೆಣಗಳು| 100ರ ಸನಿಹದಲ್ಲಿ ಸಾವಿನ ಸಂಖ್ಯೆ Read More »

ಚಿಕ್ಕಮಗಳೂರು ಜಿಲ್ಲೆಯಲ್ಲಿ ‌ರೆಡ್ ಅಲರ್ಟ್ ‌ಹಿನ್ನಲೆ| ಜು.31ರಂದು ಜಿಲ್ಲೆಯ 6 ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: ಮಲೆನಾಡು ಭಾಗದಲ್ಲಿ ಧಾರಾಕಾರ ಮ‌ಳೆ‌ ಹಿನ್ನೆಲೆಯಲ್ಲಿ ನಾಳೆ ಮಲೆನಾಡಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಭಾರೀ ಮಳೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಮಲೆನಾಡು ಭಾಗದ ಆರು ತಾಲೂಕಿನ ಅಂಗನವಾಡಿ, ಶಾಲಾ ಕಾಲೇಜು, ಪದವಿ ಕಾಲೇಜಿಗಳಿಗೆ ಜು.31ರಂದು ರಜೆ ಘೋಷಣೆ ಮಾಡಲಾಗಿದೆ. ಧಾರಾಕಾರ ಮಳೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ರಜೆ‌‌ ಘೋಷಣೆ ಮಾಡಲಾಗಿದೆ. ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಚಿಕ್ಕಮಗಳೂರು, ತಾಲೂಕಿನ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ‌ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ರಜೆ ನೀಡಿ ಆದೇಶಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ‌ರೆಡ್ ಅಲರ್ಟ್ ‌ಹಿನ್ನಲೆ| ಜು.31ರಂದು ಜಿಲ್ಲೆಯ 6 ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ Read More »

ಉಜಿರೆ: ಎಸ್.ಡಿ‌.ಎಂ ಆಸ್ಪತ್ರೆಯ ಪಾರ್ಕಿಂಗ್ ಏರಿಯಾ ಕುಸಿತ| ಹಲವು ವಾಹನಗಳು ಜಖಂ

ಸಮಗ್ರ ನ್ಯೂಸ್: ಮಹಾಮಳೆಗೆ ಕ್ಷಣಕ್ಕೊಂದು ದುರಂತ ನಡೆಯುತ್ತಿದ್ದು ಉಜಿರೆಯ ಎಸ್.ಡಿ.ಎಂ ಆಸ್ಪತ್ರೆಯ ಪಾರ್ಕಿಂಗ್ ನಲ್ಲಿ ತಡೆಗೋಡೆ ಕುಸಿತವಾಗಿ ಹಲವು ವಾಹನಗಳು ಜಖಂ ಆಗಿದೆ. ಭಾರಿ ಮಳೆ ಸುರಿಯುತ್ತಿರುವುದರಿಂದ ತಡೆಗೋಡೆ ಕುಸಿತವಾಗಿದೆ. ಅಂದಾಜು 25ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಆಸ್ಪತ್ರೆ ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗಿತ್ತು.ತಡೆಗೋಡೆ ದ್ವಿಚಕ್ರ ವಾಹನಗಳ ಮೇಲೆ ಕುಸಿದು ಬಿದ್ದಿದ್ದು, ತಡೆಗೋಡೆ ಅಡಿ ನಿಲ್ಲಿಸಲಾಗಿದ್ದ ಎಲ್ಲಾ ವಾಹನಗಳು ಜಖಂ ಆಗಿದೆ.

ಉಜಿರೆ: ಎಸ್.ಡಿ‌.ಎಂ ಆಸ್ಪತ್ರೆಯ ಪಾರ್ಕಿಂಗ್ ಏರಿಯಾ ಕುಸಿತ| ಹಲವು ವಾಹನಗಳು ಜಖಂ Read More »

ಪ್ಯಾರಿಸ್‌ ಒಲಿಂಪಿಕ್ಸ್‌ ೨೦೨೪/ ಎರಡು ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಮನು ಭಾಕರ್

ಸಮಗ್ರ ನ್ಯೂಸ್‌: ಭಾರತೀಯ ಶೂಟರ್‌ ಮನು ಭಾಕರ್ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದು ಐತಿಹಾಸಿಕ ಸಾಧನೆಯನ್ನು ಮಾಡಿದ್ದಾರೆ. 10 ಮೀಟರ್ ಮಹಿಳಾ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದ ಶೂಟರ್ ಮನು ಭಾಕರ್ ಇದೀಗ ಮತ್ತೊಂದು ಕಂಚಿನ ಪದಕ ಗೆದ್ದು ಐತಿಹಾಸಿಕ ಸಾಧನೆಯೊಂದನ್ನು ಮಾಡಿದ್ದಾರೆ. 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದ ಸ್ಪರ್ಧೆಯಲ್ಲಿ ಸರಬೋತ್ ಸಿಂಗ್ ಜತೆಗೂಡಿ ಮನು ಭಾಕರ್ ಕಂಚಿನ ಪದಕ ಗೆಲ್ಲುವ ಮೂಲಕ ಒಂದೇ ಒಲಿಂಪಿಕ್ಸ್‌ನಲ್ಲಿ

ಪ್ಯಾರಿಸ್‌ ಒಲಿಂಪಿಕ್ಸ್‌ ೨೦೨೪/ ಎರಡು ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಮನು ಭಾಕರ್ Read More »

ಶಿರಾಡಿ‌ ಘಾಟ್ ರಸ್ತೆಯಲ್ಲಿ ಮತ್ತೆ ಭೂಕುಸಿತ| ಹಲವು ವಾಹನಗಳು ಜಖಂ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಸುರಿಯುವ ಭಾರೀ ಮಳೆಗೆ ಅಲ್ಲಲ್ಲಿ ಗುಡ್ಡಗಾಡುಗಳು ಕುಸಿಯುತ್ತಿವೆ. ಶಿರಾಡಿ ಘಾಟ್​ನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚಾರ ಸ್ಥಗಿತವಾಗಿದೆ. ಇದೀಗ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಬಳಿ ಏಕಾಏಕಿ ಗುಡ್ಡ ಕುಸಿದಿದ್ದು, ಮತ್ತೆ ಗಂಟೆಗಟ್ಟಲೆ ಕಿಲೋಮೀಟರ್​ ತನಕ ವಾಹನಗಳು ಸಾಲುಗಟ್ಟಿ ನಿಂತಿದೆ. ಸಕಲೇಶಪುರ ತಾಲೂಕಿನ ದೊಡ್ಡತಪ್ಲು ಬಳಿಯ ಶಿರಾಡಿಘಾಟ್ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಇಂದು ಚಲಿಸುತ್ತಿದ್ದ ಕಾರು ,ಲಾರಿ,ಗ್ಯಾಸ್ ಟ್ಯಾಂಕರ್ ಮೇಲೆ ಗುಡ್ಡ ಕುಸಿದಿದ್ದು ಯಾವುದೇ ಪ್ರಾಣಹಾನಿ ಆಗಿಲ್ಲ ಎಂದು ತಿಳಿದಿದೆ .ಇಂದು ಮತ್ತೊಮ್ಮೆ

ಶಿರಾಡಿ‌ ಘಾಟ್ ರಸ್ತೆಯಲ್ಲಿ ಮತ್ತೆ ಭೂಕುಸಿತ| ಹಲವು ವಾಹನಗಳು ಜಖಂ Read More »

ಉಪ್ಪಿನಂಗಡಿ: ಅಪಾಯದ ಮಟ್ಟ ಮೀರಿ‌ ಹರಿಯುತ್ತಿರುವ ನೇತ್ರಾವತಿ| ಕುಮಾರಧಾರ – ನೇತ್ರಾವತಿ ಸಂಗಮ ಪುಣ್ಯಸ್ನಾನಕ್ಕೆ ಕ್ಷಣಗಣನೆ| ಇತ್ತ‌ ರಾ.ಹೆದ್ದಾರಿಯತ್ತ ಆವರಿಸಿದ ನೆರೆನೀರು

ಸಮಗ್ರ ನ್ಯೂಸ್: ದ.ಕ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ನೇತ್ರಾವತಿ, ಕುಮಾರಧಾರ ನದಿ ಉಕ್ಕಿ ಹರಿಯುತ್ತಿದೆ. ನೇತ್ರಾವತಿ ಮತ್ತು ಕುಮಾರದಾರ ನದಿಗಳ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಸದ್ಯ 29.09 ಮೀಟರ್ ನಷ್ಟು ನದಿ ನೀರಿನ ಹರಿವು ಇದ್ದು ಅಪಾಯದ ಮಟ್ಟ 31.05 ಆಗಿದೆ. ಪಂಜಳ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಗೆ ನೀರು ನುಗ್ಗಿದ್ದು ಹೆದ್ದಾರಿಯ ಒಂದು ಬದಿಯಲ್ಲಿ ಮಾತ್ರ ವಾಹನಗಳು ಸಂಚರಿಸುತ್ತಿದೆ. ಮತ್ತೊಮ್ಮೆ ಪ್ರವಾಹದ ಭೀತಿ ಎದುರಾಗಿದ್ದು, ಸ್ಥಳೀಯ ಜನರಲ್ಲಿ

ಉಪ್ಪಿನಂಗಡಿ: ಅಪಾಯದ ಮಟ್ಟ ಮೀರಿ‌ ಹರಿಯುತ್ತಿರುವ ನೇತ್ರಾವತಿ| ಕುಮಾರಧಾರ – ನೇತ್ರಾವತಿ ಸಂಗಮ ಪುಣ್ಯಸ್ನಾನಕ್ಕೆ ಕ್ಷಣಗಣನೆ| ಇತ್ತ‌ ರಾ.ಹೆದ್ದಾರಿಯತ್ತ ಆವರಿಸಿದ ನೆರೆನೀರು Read More »