Editor

ಸಂಪಾಜೆ: ಮೋರಿಗೆ ಬೈಕ್ ಗುದ್ದಿ ಸವಾರರು ಸಾವನ್ನಪ್ಪಿದ ಪ್ರಕರಣ| ಧರ್ಮಸ್ಥಳಕ್ಕೆ ಹೊರಟವರು ಮಸಣಕ್ಕೆ

ಸಮಗ್ರ ನ್ಯೂಸ್: ಬೈಕ್ ಸವಾರನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸಾವನಪ್ಪಿದ ಘಟನೆ ಸಂಪಾಜೆ ಅರಣ್ಯ ಇಲಾಖಾ ಕಚೇರಿ ಬಳಿ ರವಿವಾರ ತಡರಾತ್ರಿ ನಡೆದಿರುವುದು ವರದಿಯಾಗಿದೆ. ಮೃತರನ್ನು ಮೈಸೂರು ಮೂಲದ ಯುವಕರಾದ ಪವನ್ ಹಾಗೂ ಮನೋಜ್ ಎಂದು ಗುರುತಿಸಲಾಗಿದೆ. ಮೈಸೂರಿನಿಂದ ಧರ್ಮಸ್ಥಳಕ್ಕೆ ಬುಲೆಟ್ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಕಳೆದ ರಾತ್ರಿ ವೇಳೆ ಕೊಯ್ನಾಡಿನ ಫಾರೆಸ್ಟ್ ಐಬಿ ಬಳಿ ಮುಖ್ಯರಸ್ತೆಯಲ್ಲಿ ತಲುಪಿದಾಗ ನಿಯಂತ್ರಣ ತಪ್ಪಿದ […]

ಸಂಪಾಜೆ: ಮೋರಿಗೆ ಬೈಕ್ ಗುದ್ದಿ ಸವಾರರು ಸಾವನ್ನಪ್ಪಿದ ಪ್ರಕರಣ| ಧರ್ಮಸ್ಥಳಕ್ಕೆ ಹೊರಟವರು ಮಸಣಕ್ಕೆ Read More »

ಸಕಲೇಶಪುರ: ಕಂಟೈನರ್ ನೊಳಗೆ ಅಕ್ರಮವಾಗಿ ಗೋಸಾಗಾಟ| ಭಜರಂಗದಳ ಕಾರ್ಯಕರ್ತರಿಂದ 26 ಗೋವುಗಳ ರಕ್ಷಣೆ

ಸಮಗ್ರ ನ್ಯೂಸ್: ಸಕಲೇಶಪುರ – ಕೇರಳ ಹಾಗೂ ಮಂಗಳೂರು ಭಾಗಕ್ಕೆ ನಿತ್ಯ ನಿರಂತರ ಅಕ್ರಮವಾಗಿ ಗೋಸಾಗಾಟ ನಡೆಯುತ್ತಿದೆ ಎಂಬುದಕ್ಕೆ ಪುಷ್ಟಿ ನೀಡುವಂತಹ ಘಟನೆ ಆ.4ರ ರಾತ್ರಿ ಸಕಲೇಶಪುರ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಭಾನುವಾರ ರಾತ್ರಿ ಕಾರ್ಯಾಚರಣೆಯಲ್ಲಿದ್ದ ಬಜರಂಗದಳ ಕಾರ್ಯಕರ್ತರಿಗೆ ಹಾಸನ ಭಾಗದಿಂದ ಬೈಪಾಸ್ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ವೇಗವಾಗಿ ಬಂದ ಕಂಟೈನರ್ ವಾಹನವನ್ನು ಬೆನ್ನಟ್ಟಿರುವ ಬಜರಂಗದಳ ಕಾರ್ಯಕರ್ತರು ನಗರದ ಬೈಪಾಸ್ ರಸ್ತೆ ಟೊಲ್ ಗೇಟ್ ಬಳಿ ಪೋಲಿಸರು ಸಹಯೋಗದಲ್ಲಿ KA 06 C 6919 ಕಂಟೈನರ್ ವಾಹನವನ್ನು ತಡೆದಿದ್ದಾರೆ.

ಸಕಲೇಶಪುರ: ಕಂಟೈನರ್ ನೊಳಗೆ ಅಕ್ರಮವಾಗಿ ಗೋಸಾಗಾಟ| ಭಜರಂಗದಳ ಕಾರ್ಯಕರ್ತರಿಂದ 26 ಗೋವುಗಳ ರಕ್ಷಣೆ Read More »

ಉಡುಪಿ: ಮತ್ತೊಮ್ಮೆ ಮಾನವೀಯತೆ ಮೆರೆದ ಕರಾವಳಿ ಬಸ್ ಡ್ರೈವರ್| ಅಸೌಖ್ಯಕ್ಕೊಳಗಾದ ಯುವತಿಯ ಚಿಕಿತ್ಸೆಗೆ ಆಸ್ಪತ್ರೆಯೊಳಗೆ ಬಸ್ ಚಲಾಯಿಸಿದ ಚಾಲಕ

ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ಯುವತಿಯೋರ್ವಳು ಬಸ್ಸಿನಲ್ಲಿಯೇ ಅಸ್ವಸ್ಥಗೊಂಡಿದ್ದಾಗ ಬಸ್ಸನ್ನೇ ಅಂಬುಲೆನ್ಸ್‌ ಮಾದರಿಯಲ್ಲಿ ಚಾಲಕ, ನಿರ್ವಾಹಕರು ಆಸ್ಪತ್ರೆಗೆ ಸಾಗಿಸುವಲ್ಲಿ ಮಾನವೀಯತೆ ಮೆರೆದ ಘಟನೆ ಮಾಸುವ ಮೊದಲೇ ಉಡುಪಿಯಲ್ಲಿಯೂ ಇಂತಹುದೇ ಘಟನೆ (ಇಂದು 5 ಆಗಸ್ಟ್)‌ ಸೋಮವಾರ ಬೆಳಿಗ್ಗೆ ಘಟಿಸಿದೆ. ಶಿರ್ವ ದಿಂದ ಉಡುಪಿಗೆ ಬರುತ್ತಿದ್ದ ನವೀನ್ ಎಂಬ ಬಸ್‌ನಲ್ಲಿ ಯುವತಿಯೋರ್ವಳು ವಾಂತಿ ಮಾಡಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾಳೆ. ತುರ್ತಾಗಿ ಸ್ಪಂಧಿಸಿದ ನವೀನ್ ಬಸ್ ನ ಚಾಲಕ ಶಶಿಕಾಂತ್, ನಿರ್ವಾಹಕ ಸಲೀಂರವರು ಅಸ್ವಸ್ಥ ಗೊಂಡ ಯುವತಿಯ ಚಿಕಿತ್ಸೆಗಾಗಿ ತಕ್ಷಣವೇ ಬಸ್ಸನ್ನು

ಉಡುಪಿ: ಮತ್ತೊಮ್ಮೆ ಮಾನವೀಯತೆ ಮೆರೆದ ಕರಾವಳಿ ಬಸ್ ಡ್ರೈವರ್| ಅಸೌಖ್ಯಕ್ಕೊಳಗಾದ ಯುವತಿಯ ಚಿಕಿತ್ಸೆಗೆ ಆಸ್ಪತ್ರೆಯೊಳಗೆ ಬಸ್ ಚಲಾಯಿಸಿದ ಚಾಲಕ Read More »

ಇಂದಿನಿಂದ(ಆ.5) ಪಶ್ಚಿಮ ಘಟ್ಟ ಒತ್ತುವರಿ ತೆರವು| ಕಾರ್ಯಪಡೆ ರಚಿಸಿ‌ ರಾಜ್ಯ ಸರ್ಕಾರ ಆದೇಶ

ಸಮಗ್ರ ನ್ಯೂಸ್: ವಯನಾಡ್ ಸೇರಿದಂತೆ ವಿವಿಧೆಡೆ ಸಂಭವಿಸಿದ ಭೂಕುಸಿತ ದುರಂತಗಳಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಅರಣ್ಯ ಒತ್ತುವರಿ ತೆರವು ಮತ್ತು ಅನಧಿಕೃತ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಿದೆ. ಇಂದಿನಿಂದ (ಆ.5) ರಾಜ್ಯದ ಪಶ್ಚಿಮಘಟ್ಟ ಪ್ರದೇಶಗಳ ಅರಣ್ಯ ಒತ್ತುವರಿ, ಅಕ್ರಮ ತೋಟಗಳು, ಅನಧಿಕೃತ ರೆಸಾರ್ಟ್‌ಗಳು ಮತ್ತು ಇತರ ನಿರ್ಮಾಣಗಳ ತೆರವು ಕಾರ್ಯ ಆರಂಭಿಸಲಿದೆ. ಇದಕ್ಕಾಗಿ ಕಾರ್ಯಪಡೆ ರಚಿಸಿದೆ. ಪಶ್ಚಿಮಘಟ್ಟ ಪ್ರದೇಶಗಳ ಅರಣ್ಯ ಒತ್ತುವರಿ ಮತ್ತು ಅನಧಿಕೃತ ನಿರ್ಮಾಣಗಳ ತೆರವಿಗೆ 2023ರಲ್ಲೇ ಅರಣ್ಯ ಇಲಾಖೆ ಟಿಪ್ಪಣಿ ಹೊರಡಿಸಿತ್ತು.

ಇಂದಿನಿಂದ(ಆ.5) ಪಶ್ಚಿಮ ಘಟ್ಟ ಒತ್ತುವರಿ ತೆರವು| ಕಾರ್ಯಪಡೆ ರಚಿಸಿ‌ ರಾಜ್ಯ ಸರ್ಕಾರ ಆದೇಶ Read More »

ಶಿರಾಡಿ ಘಾಟ್: ವಾಹನ ಸಂಚಾರ ಪುನರಾರಂಭ

ಸಮಗ್ರ ನ್ಯೂಸ್: ಸತತವಾಗಿ ಸುರಿಯುತ್ತಿದ್ದ ಮಳೆಗೆ ನಿರಂತರ ಭೂ ಕುಸಿತ ಕಂಡಿದ್ದ ಶಿರಾಡಿ ಘಾಟ್‌ ಪ್ರದೇಶದ ಸಕಲೇಶಪುರ ತಾಲೂಕಿನ ಮಾರ್ನಳ್ಳಿ ದೊಡ್ಡತಪ್ಪುಲಿನಲ್ಲಿ ಪರಿಸ್ಥಿತಿ ಸುಧಾರಿಸಿದ್ದು, ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಹೆದ್ದಾರಿ ಅಗಲಗೊಳಿಸುವ ಕಾಮಗಾರಿ ಕಾರಣಕ್ಕೆ ಕತ್ತರಿಸಲ್ಪಟ್ಟ ಗುಡ್ಡಗಳ ಭಾಗದಲ್ಲಿ ಭಾರೀ ಮಳೆಗೆ ಕೆಲವು ದಿನಗಳಿಂದ ಭಾರೀ ಭೂ ಕುಸಿತವಾಗಿತ್ತು. ಸರಕಾರಿ ಬಸ್‌ಗಳು ಮಾತ್ರ ಪರ್ಯಾಯ ರಸ್ತೆಯಲ್ಲಿಯೇ ಸಂಚರಿಸುತ್ತಿದ್ದು, ಮಂಗಳೂರು – ಬೆಂಗಳೂರು ನಡುವೆ ನೇರ ರಸ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕಾಗಿದೆ.

ಶಿರಾಡಿ ಘಾಟ್: ವಾಹನ ಸಂಚಾರ ಪುನರಾರಂಭ Read More »

ಮಂಗಳೂರು- ಬೆಂಗಳೂರು ರೈಲುಮಾರ್ಗ ಪ್ರಾಯೋಗಿಕ ಸಂಚಾರ ಯಶಸ್ವಿ

ಸಮಗ್ರ ನ್ಯೂಸ್: ಮಂಗಳೂರು- ಬೆಂಗಳೂರು ರೈಲು ಮಾರ್ಗದ ಎಡಕುಮೇರಿ- ಕಡಗರವಳ್ಳಿ ನಡುವಿನ ದೋಣಿಹಗಲ್‌ನ ರೈಲು ಮಾರ್ಗದಲ್ಲಿ ಸಂಭವಿಸಿದ ಭೂಕುಸಿತದ ದುರಸ್ತಿ ಕಾರ್ಯ ಅಂತಿಮ ಹಂತಕ್ಕೆ ತಲುಪಿದ್ದು, ಸ್ಥಳದಲ್ಲಿ ರೈಲು ಎಂಜಿನ್‌ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. ರೈಲು ಮಾರ್ಗದಲ್ಲಿ ಭೂಕುಸಿತ ಸಂಭವಿಸಿದ ಕ್ಷಣದಿಂದ ದುರಸ್ತಿ ಕಾರ್ಯಗಳನ್ನು ಆರಂಭಿಸಲಾಗಿದ್ದು, ಶನಿವಾರ ಭೂಕುಸಿತದ ಸ್ಥಳದಲ್ಲಿ ತಡೆಗೋಡೆ ಗೋಡೆ ಕಾಮಗಾರಿ ಪೂರ್ಣಗೊಂಡಿತ್ತು. ಹಳಿ ಮರುಸ್ಥಾಪನೆ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ಹಂತದ ಕಾಮಗಾರಿಗಳು ಭರದಿಂದ ನಡೆಯುತ್ತಿದೆ. ಕೆಳಭಾಗದಿಂದಲೇ ಬಂಡೆಗಳನ್ನು ಜೋಡಿಸಿ, ಕಬ್ಬಿಣದ ನೆಟ್‌

ಮಂಗಳೂರು- ಬೆಂಗಳೂರು ರೈಲುಮಾರ್ಗ ಪ್ರಾಯೋಗಿಕ ಸಂಚಾರ ಯಶಸ್ವಿ Read More »

ಸಂಪಾಜೆ: ಡಿವೈಡರ್ ಗೆ ಗುದ್ದಿ ಬೈಕ್ ಪಲ್ಟಿಯಾಗಿರುವ ಶಂಕೆ| ಬೈಕ್ ಸವಾರರಿಬ್ಬರು ದುರ್ಮರಣ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಸಂಪಾಜೆ ಸಮೀಪದ ಕೊಯನಾಡು ಎಂಬಲ್ಲಿ ಬೈಕ್ ಭೀಕರವಾಗಿ ಅಪಘಾತಗೊಂಡಿದ್ದು, ದುರ್ಘಟನೆಯಲ್ಲಿ ಬೈಕ್ ಸವಾರ‌ರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ. ಭಾನುವಾರ ರಾತ್ರಿ ಘಟನೆ ನಡೆದಿದೆ ಎಂದು ಶಂಕಿಸಲಾಗಿದ್ದು, ಇಂದು (ಜೂ.5) ಮುಂಜಾನೆ ಸ್ಥಳೀಯರ ಗಮನಕ್ಕೆ ಬಂದಿದೆ. ರಾಯಲ್ ಎನ್ ಫೀಲ್ಡ್ ಬೈಕ್ ಮತ್ತು ಇಬ್ಬರ ಮೃತ ದೇಹ ಚರಂಡಿಯಲ್ಲಿ ಪತ್ತೆಯಾಗಿದೆ. ರಾತ್ರಿ ವೇಗದಿಂದ ಬಂದು ಬೈಕ್ ಡಿವೈಡರ್ ಗೆ ಗುದ್ದಿರಬಹುದು ಎಂದು ಶಂಕಿಸಲಾಗಿದೆ.

ಸಂಪಾಜೆ: ಡಿವೈಡರ್ ಗೆ ಗುದ್ದಿ ಬೈಕ್ ಪಲ್ಟಿಯಾಗಿರುವ ಶಂಕೆ| ಬೈಕ್ ಸವಾರರಿಬ್ಬರು ದುರ್ಮರಣ Read More »

ಕರಾವಳಿಯಲ್ಲಿ ಆಟಿ‌ ಅಮಾವಾಸ್ಯೆ ಸಂಭ್ರಮ| ಪುಣ್ಯ‌ ಸ್ನಾನಗೈದು ಪುಳಕಿತರಾದ ಭಕ್ತರು

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಎರಡು ಪ್ರಸಿದ್ಧ ಪರ್ವತ ಪುಣ್ಯ ಕ್ಷೇತ್ರಗಳಾದ ಕಾರಿಂಜ ಕಾರಿಂಜೇಶ್ವರ ಸನ್ನಿಧಿ ಹಾಗೂ ನರಹರಿ ಸದಾಶಿವ ರುದ್ರ ಸನ್ನಿಧಿಯಲ್ಲಿ ಇಂದು (ಆಗಸ್ಟ್ 4) ನಸುಕಿನ ಜಾವ ಭಕ್ತರ ಗಡಣವಿತ್ತು. ವೈದಿಕರು ವೇದಮಂತ್ರಗಳ ಪಠಣವನ್ನು ಮಾಡುತ್ತಿದ್ದರೆ, ಭಕ್ತರು, ತೀರ್ಥಸ್ನಾನ ಮಾಡಿ ಪುನೀತರಾದರು. ಆಟಿಯ ಅಮಾವಾಸ್ಯೆ ಅಥವಾ ಆಟಿ ಅಮಾಸೆ ಎಂಬುದು ದಕ್ಷಿಣ ಕನ್ನಡ ಜಿಲ್ಲೆಯನ್ನು ಒಳಗೊಂಡಿರುವ ತುಳುನಾಡಿನ ಆಚರಣೆ ಈ ಅಮಾವಾಸ್ಯೆ ಆಷಾಡ ಅಮಾವಾಸ್ಯೆ. ಆಟಿ ತಿಂಗಳಿನ ಅಮಾವಾಸ್ಯೆಯ ದಿನ ಕರಾವಳಿಯ ನಾನಾ

ಕರಾವಳಿಯಲ್ಲಿ ಆಟಿ‌ ಅಮಾವಾಸ್ಯೆ ಸಂಭ್ರಮ| ಪುಣ್ಯ‌ ಸ್ನಾನಗೈದು ಪುಳಕಿತರಾದ ಭಕ್ತರು Read More »

ದುರಂತ ಸಂಭವಿಸಿದ ವಯನಾಡಿನಲ್ಲಿ ಈಗ ಕಳ್ಳರ ಹಾವಳಿ| ಸಂತ್ರಸ್ತರ ನಗ -ನಗದು ದೋಚುತ್ತಿರುವ ಕಳ್ಳರು

ಸಮಗ್ರ ನ್ಯೂಸ್: ಭಾರೀ ದುರಂತದಿಂದ ನಲುಗಿ ಹೋಗಿರುವ ಕೇರಳದ ವಯನಾಡಿನಲ್ಲಿ ಇದೀಗ ಕಳ್ಳರ ಹಾವಳಿ ಆರಂಭವಾಗಿದೆ ಎಂದು ತಿಳಿದುಬಂದಿದೆ. ಭೂಕುಸಿತದಲ್ಲಿ ನಿರಾಶ್ರಿತವಾಗಿರುವ ಮನೆಗಳಿಗೆ ನುಗ್ಗಿ ಕಳ್ಳತನ ಮಾಡಲಾಗುತ್ತಿದೆ ಎಂದು ಸಂತ್ರಸ್ಥರು ಅಳಲು ತೋಡಿಕೊಂಡಿದ್ದಾರೆ. ಭೂಕುಸಿತದ ಸಂದರ್ಭದಲ್ಲಿ ಪ್ರಾಣ ರಕ್ಷಣೆಗಾಗಿ ಮನೆಗಳನ್ನು ತೊರೆದು ರೆಸಾರ್ಟ್‌ನಲ್ಲಿ ತಂಗಿದ್ದೇವೆ. ಆದರೆ ಪರಿಸ್ಥಿತಿ ಅವಲೋಕನಕ್ಕಾಗಿ ಮನೆಯ ಬಳಿ ತೆರಳಿದ್ದಾಗ ಬಾಗಿಲುಗಳು ಮುರಿದುಕೊಂಡಿತ್ತು, ಬಟ್ಟೆಗಳು ಹಾಗೂ ಕೆಲವು ವಸ್ತುಗಳು ನಾಪತ್ತೆಯಾಗಿವೆ ಎಂದು ಸಂತ್ರಸ್ತರೊಬ್ಬರು ಹೇಳಿದ್ದು ವರದಿಯಾಗಿದೆ. ರಾತ್ರಿ ವೇಳೆ ಕಳ್ಳತನ ಮಾಡುವ ಉದ್ದೇಶದಿಂದ ಈ

ದುರಂತ ಸಂಭವಿಸಿದ ವಯನಾಡಿನಲ್ಲಿ ಈಗ ಕಳ್ಳರ ಹಾವಳಿ| ಸಂತ್ರಸ್ತರ ನಗ -ನಗದು ದೋಚುತ್ತಿರುವ ಕಳ್ಳರು Read More »

ಕುಂದಾಪುರ: ಕುಡಿದ ಮತ್ತಿನಲ್ಲಿ ಪತ್ನಿಯ ಕುತ್ತಿಗೆಗೆ ಕಡಿದು ನರ್ತಿಸಿದ ಪತಿ| ವಿಕೃತಿ ಮೆರೆದಾತನ ಬಂಧಿಸಲು ಅಶ್ರುವಾಯು ಸಿಡಿಸಿದ ಪೊಲೀಸರು

ಸಮಗ್ರ ನ್ಯೂಸ್: ಪತಿಯೊಬ್ಬ ಕುಡಿದ ಮತ್ತಿನಲ್ಲಿ ತನ್ನ ಪತ್ನಿಯ ಕುತ್ತಿಗೆಗೆ ಕಡಿದು ಕೈಯಲ್ಲಿ ಕತ್ತಿ ಹಿಡಿದು ನರ್ತಿಸಿ ವಿಚಿತ್ರವಾಗಿ ವರ್ತಿಸಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ನಡೆದಿದೆ. ಸದ್ಯ ಗಂಭೀರ ಗಾಯಗೊಂಡಿರುವ ಪತ್ನಿಯನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರಣಾಂತಿಕವಾಗಿ ಹಲ್ಲೆಗೊಳಗಾದವರನ್ನು ಅನಿತಾ (38) ಎಂದು ಗುರುತಿಸಲಾಗಿದೆ. ಅವರ ಪತಿ, ಆರೋಪಿ ಲಕ್ಷ್ಮಣ ಯಾನೆ ರಮೇಶ್‌ನನ್ನು ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೊರಬ ತಾಲೂಕು ಮೂಲದ ಲಕ್ಷ್ಮಣ ಮತ್ತು ಅನಿತಾ ದಂಪತಿ ನಾಲ್ಕು ತಿಂಗಳ

ಕುಂದಾಪುರ: ಕುಡಿದ ಮತ್ತಿನಲ್ಲಿ ಪತ್ನಿಯ ಕುತ್ತಿಗೆಗೆ ಕಡಿದು ನರ್ತಿಸಿದ ಪತಿ| ವಿಕೃತಿ ಮೆರೆದಾತನ ಬಂಧಿಸಲು ಅಶ್ರುವಾಯು ಸಿಡಿಸಿದ ಪೊಲೀಸರು Read More »