Editor

ಪ್ಯಾರಿಸ್ ಒಲಿಂಪಿಕ್ಸ್ 2024| ಜಾವೆಲಿನ್ ನಲ್ಲಿ ನೀರಜ್‌ಗೆ ಬೆಳ್ಳಿ; ಪಾಕಿಸ್ತಾನದ ನದೀಂಗೆ ಚಿನ್ನ

ಸಮಗ್ರ ನ್ಯೂಸ್: ಭಾರತದ ನೀರಜ್ ಚೋಪ್ರಾ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪುರುಷರ ಜಾವೆಲಿನ್ ಥ್ರೋನಲ್ಲಿ ಬೆಳ್ಳಿ ಪದಕ ಜಯಿಸಿದರು. ಪಾಕಿಸ್ತಾನ ಅರ್ಷದ್ ನದೀಂ ಅವರು ಚಿನ್ನದ ಪದಕ ಗೆದ್ದರು. ಒಲಿಂಪಿಕ್ ಕೂಟದಲ್ಲಿ ಎರಡು ಪದಕಗಳನ್ನು ಗೆದ್ದ ಭಾರತದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ನೀರಜ್ ಪಾತ್ರರಾದರು. ಈ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಒಲಿದ ಒಟ್ಟಾರೆ ಐದನೇ ಪದಕವಾಗಿದೆ. ಅಲ್ಲದೇ ಇದು ಮೊದಲ ಬೆಳ್ಳಿಯಾಗಿದ್ದು, ಉಳಿದ ನಾಲ್ಕು ಕಂಚಿನ ಪದಕಗಳಾಗಿವೆ. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ನೀರಜ್ ಇಲ್ಲಿಯೂ […]

ಪ್ಯಾರಿಸ್ ಒಲಿಂಪಿಕ್ಸ್ 2024| ಜಾವೆಲಿನ್ ನಲ್ಲಿ ನೀರಜ್‌ಗೆ ಬೆಳ್ಳಿ; ಪಾಕಿಸ್ತಾನದ ನದೀಂಗೆ ಚಿನ್ನ Read More »

ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ ಭಾರತ| ಸ್ಪೇನ್ ವಿರುದ್ಧ ಭರ್ಜರಿ ಗೆಲುವು

ಸಮಗ್ರ ನ್ಯೂಸ್: ಒಲಿಂಪಿಕ್ಸ್ ನಲ್ಲಿ ಗುರುವಾರ ನಡೆದ ಪ್ಲೇ ಆಫ್ ಪಂದ್ಯದಲ್ಲಿ ಸ್ಪೇನ್ ತಂಡವನ್ನು 2-1 ಅಂಕಗಳಿಂದ ಸೋಲಿಸಿ ಭಾರತ ಹಾಕಿ ತಂಡವು ಕಂಚಿನ ಪದಕಕ್ಕೆ ಕೊರಳೊಡ್ಡಿತು. ಸ್ಪೇನ್ ನಾಯಕ ಮಾರ್ಕ್ ಮಿರಾಲ್ಲೆಸ್ ಅವರು ಮೊದಲು ಗೋಲ್ ಬಾರಿಸುವ ಮೂಲಕ ಸ್ಪೇನ್ ಗೆ ಮುನ್ನಡೆ ತಂದು ಕೊಟ್ಟರು. ಆ ಬಳಿಕ ಭಾರತದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಎರಡು ಗೋಲುಗಳನ್ನು ಬಾರಿಸಿ ಭಾರತಕ್ಕೆ ಮತ್ತೊಂದು ಕಂಚಿನ ಪದಕವನ್ನು ತಂದುಕೊಟ್ಟರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವು ಕಂಚಿನ ಪದಕ ಜಯಿಸಿತ್ತು.

ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ ಭಾರತ| ಸ್ಪೇನ್ ವಿರುದ್ಧ ಭರ್ಜರಿ ಗೆಲುವು Read More »

ಕರಾವಳಿಯನ್ನು ಬೆಚ್ಚಿಬೀಳಿಸಿದ ಸೌಮ್ಯ ಭಟ್ ಕೊಲೆಗೆ 27 ವರ್ಷ| ಇನ್ನೂ ಪತ್ತೆಯಾಗಿಲ್ಲ ಮಿಲಿಟ್ರಿ ಅಶ್ರಫ್

ಸಮಗ್ರ ನ್ಯೂಸ್: ಕರಾವಳಿಯನ್ನು ಬೆಚ್ಚಿ ಬೀಳಿಸಿದ್ದ ಪುತ್ತೂರಿನ ವಿದ್ಯಾರ್ಥಿನಿ ಸೌಮ್ಯಾ ಭಟ್‌ ಕೊಲೆ ಪ್ರಕರಣ ನಡೆದು 27 ವರ್ಷ ತುಂಬಿದೆ ಆದರೆ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದ ಆರೋಪಿ ಮಿಲಿಟ್ರಿ ಅಶ್ರಫ್ ಸುಳಿವು ಇನ್ನೂ ಪತ್ತೆಯಾಗಿಲ್ಲ. ದಕ್ಷಿಣ ಕನ್ನಡದ ಪುತ್ತೂರು ವಿವೇಕಾನಂದ ಕಾಲೇಜಿನ ಬಿಎಸ್‌ಸಿ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದ ಸೌಮ್ಯಾ ಭಟ್‌ ಅವರನ್ನು ಹಿಂಬಾಲಿಸಿ ಕುದಂಬ್ಲಾಜೆಯ ಮಿಲಿಟ್ರಿ ಅಶ್ರಫ್‌ ಬರ್ಬರವಾಗಿ ಕೊಲೆಗೈದಿದ್ದ ಆ ಘಟನೆ ಇಡೀ ಪುತ್ತೂರು ಕೆರಳಿ ಕೆಂಡದಂತೆ ಮಾಡಿತ್ತು. ಅದು 1997ರ ಆಗಸ್ಟ್‌ 7 ರಂದು

ಕರಾವಳಿಯನ್ನು ಬೆಚ್ಚಿಬೀಳಿಸಿದ ಸೌಮ್ಯ ಭಟ್ ಕೊಲೆಗೆ 27 ವರ್ಷ| ಇನ್ನೂ ಪತ್ತೆಯಾಗಿಲ್ಲ ಮಿಲಿಟ್ರಿ ಅಶ್ರಫ್ Read More »

ಪ್ಯಾರೀಸ್ ಒಲಿಂಪಿಕ್ಸ್| ಪದಕದ ಭರವಸೆ ಮೂಡಿಸಿದ ಅಮನ್ ಸೆಹ್ರಾವತ್

ಸಮಗ್ರ ನ್ಯೂಸ್: ಪ್ಯಾರಿಸ್‌ ಒಲಿಂಪಿಕ್ಸ್​ನಲ್ಲಿ 57 ಕೆಜಿ ಕುಸ್ತಿ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿದ ಅಮನ್ ಸೆಹ್ರಾವತ್ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದು, ಭಾರತಕ್ಕೆ ಮತ್ತೊಂದು ಪದಕದ ಭರವಸೆ ಮೂಡಿದೆ. ಅಮನ್ ಸೆಹ್ರಾವತ್ ಕ್ವಾರ್ಟರ್​ ಫೈನಲ್ ಪಂದ್ಯದಲ್ಲಿ ಅಲ್ಬೇನಿಯನ್ ಕುಸ್ತಿಪಟುವನ್ನು 12-0 ಅಂತರದಿಂದ ಸೋಲಿಸಿದರು. ಇಂದು ರಾತ್ರಿ 9.45ಕ್ಕೆ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಅಮನ್ ಸೆಹ್ರಾವತ್ ಗೆದ್ದು, ಫೈನಲ್ ತಲುಪಿದರೆ ಅವರಿಗೆ ಬೆಳ್ಳಿ ಪದಕ ಖಚಿತವಾಗಲಿದೆ. ಒಂದು ವೇಳೆ ಫೈನಲ್‌ನಲ್ಲಿ ಗೆದ್ದರೆ ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಭಾರತದ ಪರ ಚಿನ್ನದ

ಪ್ಯಾರೀಸ್ ಒಲಿಂಪಿಕ್ಸ್| ಪದಕದ ಭರವಸೆ ಮೂಡಿಸಿದ ಅಮನ್ ಸೆಹ್ರಾವತ್ Read More »

ಜಪಾನ್ ನಲ್ಲಿ 7.1 ತೀವ್ರತೆಯ ಭೂಕಂಪನ| ಸುನಾಮಿ ಅಪ್ಪಳಿಸುವ ಸಾಧ್ಯತೆ

ಸಮಗ್ರ ನ್ಯೂಸ್: ಜಪಾನ್‌ ನ ದಕ್ಷಿಣ ಕರಾವಳಿ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 7.1ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ್ದು, ಇದರ ಪರಿಣಾಮ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ವರದಿ ತಿಳಿಸಿದೆ. ಜಪಾನ್‌ ನ ದಕ್ಷಿಣದ ಮುಖ್ಯ ದ್ವೀಪವಾದ ಕ್ಯೂಶುವಿನ ಪೂರ್ವ ಕರಾವಳಿಯಲ್ಲಿ ಸುಮಾರು 30 ಕಿಲೋ ಮೀಟರ್‌ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಇರುವುದನ್ನು ಗುರುತಿಸಲಾಗಿದೆ ಎಂದು ವರದಿ ವಿವರಿಸಿದೆ. ಪ್ರಬಲ ಭೂಕಂಪದಲ್ಲಿ ಸಂಭವಿಸಿರುವ ಸಾವು-ನೋವಿನ ಬಗ್ಗೆ ಈವರೆಗೆ ಯಾವ ಮಾಹಿತಿಯೂ ಬಂದಿಲ್ಲ. ಭೂಕಂಪದ

ಜಪಾನ್ ನಲ್ಲಿ 7.1 ತೀವ್ರತೆಯ ಭೂಕಂಪನ| ಸುನಾಮಿ ಅಪ್ಪಳಿಸುವ ಸಾಧ್ಯತೆ Read More »

ವಿನೇಶ್ ಪೋಗಟ್ ಗೆ ಮತ್ತೊಂದು ಅವಕಾಶ| ಬೆಳ್ಳಿ ಪದಕ ಗೆಲ್ಲುವ ಸಾಧ್ಯತೆ

ಸಮಗ್ರ ನ್ಯೂಸ್: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ 50 ಕೆಜಿ ವಿಭಾಗದ ಅಂತಿಮ ಪಂದ್ಯದಿಂದ ಅನರ್ಹಗೊಂಡ ನಂತರ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ (CAS) ಮೇಲ್ಮನವಿ ಸಲ್ಲಿಸಿದ್ದರು. ಅವರು ನ್ಯಾಯಾಲಯಕ್ಕೆ ಎರಡು ಮನವಿಗಳನ್ನ ಬರೆದಿದ್ದರು. ಒಂದು, ಫೋಗಟ್’ರನ್ನ ಮತ್ತೆ ತೂಕ ಮಾಡಿ ಆಡಲು ಅವಕಾಶ ನೀಡುವುದು. ಇದನ್ನ ನ್ಯಾಯಾಲಯವು ತಿರಸ್ಕರಿಸಿತು ಮತ್ತು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಮತ್ತು ಅಂತಿಮ ಚಿನ್ನದ ಪದಕದ ಪಂದ್ಯವನ್ನ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಮತ್ತು ಯುಎಸ್‌ಎಯ ಸಾರಾ ಆನ್ ಹಿಲ್ಡೆಬ್ರಾಂಟ್

ವಿನೇಶ್ ಪೋಗಟ್ ಗೆ ಮತ್ತೊಂದು ಅವಕಾಶ| ಬೆಳ್ಳಿ ಪದಕ ಗೆಲ್ಲುವ ಸಾಧ್ಯತೆ Read More »

ಲೈಂಗಿಕ ಕ್ರಿಯೆ ನಡೆಸಲು ‘ಶುಲ್ಕ’ ವಿಧಿಸುತ್ತಿದ್ದ ಪತ್ನಿ!! ಕೋರ್ಟ್‌ನಿಂದ ವಿಚ್ಛೇದನ ಮಂಜೂರು

ಸಮಗ್ರ ನ್ಯೂಸ್: ಪತ್ನಿಯೊಬ್ಬಳು ತನ್ನ ಪತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಶುಲ್ಕ ವಿಧಿಸುತ್ತಿದ್ದ ವಿಲಕ್ಷಣ ಪ್ರಕರಣ ಬೆಳಕಿಗೆ ಬಂದಿದೆ. ತೈವಾನ್ ನಲ್ಲಿ ಈ ಘಟನೆ ನಡೆದಿದ್ದು, ಪತ್ನಿಯ ಈ ನಡೆಯಿಂದ ಬೇಸತ್ತ ಪತಿ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಅದಕ್ಕೆ ಈಗ ನ್ಯಾಯಾಲಯ ಒಪ್ಪಿಗೆ ಸೂಚಿಸಿದೆ. 2014ರಲ್ಲಿ ಈ ಜೋಡಿ ವಿವಾಹವಾಗಿದ್ದು ಇಬ್ಬರು ಮಕ್ಕಳು ಸಹ ಇದ್ದಾರೆ. ಮೂರು ವರ್ಷಗಳ ಕಾಲ ಎಲ್ಲವೂ ಸರಿ ಇದ್ದು 2017 ರಲ್ಲಿ ಆತನ ಪತ್ನಿ ತಿಂಗಳಿಗೆ ಒಮ್ಮೆ ಮಾತ್ರ ಲೈಂಗಿಕ

ಲೈಂಗಿಕ ಕ್ರಿಯೆ ನಡೆಸಲು ‘ಶುಲ್ಕ’ ವಿಧಿಸುತ್ತಿದ್ದ ಪತ್ನಿ!! ಕೋರ್ಟ್‌ನಿಂದ ವಿಚ್ಛೇದನ ಮಂಜೂರು Read More »

ಸಪ್ತಪದಿ ತುಳಿದ ಕೆಲವೇ ಹೊತ್ತಿನಲ್ಲಿ ನವದಂಪತಿ ಹೊಡೆದಾಟ; ವಧು ಸಾವು!

ಸಮಗ್ರ ನ್ಯೂಸ್: ಮದುವೆಯಾದ ಹಲವು ತಿಂಗಳು, ವರ್ಷಗಳ ಬಳಿಕ ದಂಪತಿ ನಡುವೆ ಭಿನ್ನಾಭಿಪ್ರಾಯ ಮೂಡುವುದು ಸಾಮಾನ್ಯ. ಆದರೆ, ಇಲ್ಲೊಂದು ಜೋಡಿ ಸಪ್ತಪದಿ ತುಳಿದ ಕೆಲವೇ ಹೊತ್ತಿನಲ್ಲಿ ಹೊಡೆದಾಡಿಕೊಂಡಿದ್ದು , ಇವರಿಬ್ಬರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಮದುವೆಯಾದ ಕೆಲವೇ ಗಂಟೆಗಳಲ್ಲಿ ವಧು-ವರ ಹೊಡೆದಾಡಿಕೊಂಡು, ವಧು ಸಾವಿಗೀಡಾಗಿ, ವರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ತ್ಯಂಬರಸನಹಳ್ಳಿಯಲ್ಲಿ ನಡೆದಿದೆ. ಲಿಖಿತಶ್ರೀ ಮೃತ ವಧು, ನವೀನ್ ಗಾಯಾಳು ವರ. ಅದ್ಧೂರಿಯಾಗಿ ಲಿಖಿತಶ್ರೀ ಹಾಗೂ ನವೀನ್ ಮದುವೆಯಾಗಿತ್ತು. ಆದರೆ

ಸಪ್ತಪದಿ ತುಳಿದ ಕೆಲವೇ ಹೊತ್ತಿನಲ್ಲಿ ನವದಂಪತಿ ಹೊಡೆದಾಟ; ವಧು ಸಾವು! Read More »

ಪ್ರಾಣವನ್ನೇ ಪಣಕ್ಕಿಟ್ಟು ಕಳ್ಳನನ್ನು ಹಿಡಿದ ಪೊಲೀಸ್ ಪೇದೆ| ಕರ್ತವ್ಯ ನಿಷ್ಠೆಗೆ ಸಿಕ್ತು ಭಾರೀ ಪ್ರಶಂಸೆ

ಸಮಗ್ರ ನ್ಯೂಸ್: ಪೊಲೀಸ್‌ ಪೇದೆಯೊಬ್ಬರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು, ಸಿನೀಮಿಯ ಶೈಲಿಯಲ್ಲಿ ಕಳ್ಳನೊಬ್ಬನನ್ನು ಹಿಡಿದಿರುವ ಘಟನೆ ನಡೆದಿದ್ದು, ಕಳ್ಳನನ್ನು ಹಿಡಿಯುವ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸ್ ಕಾನ್‌ಸ್ಟೇಬಲ್ ಕರ್ತವ್ಯ ನಿಷ್ಠೆಗೆ ಸಾರ್ವಜನಿಕ ವಲಯದಲ್ಲಿ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಮಂಜೇಶ್@420 ಮಂಜ @ಹೊಟ್ಟೆ ಮಂಜ ಪೊಲೀಸ್ ಕೈಗೆ ಸಿಕ್ಕಿಬಿದ್ದ ಖತರ್ನಾಕ್ ಕಳ್ಳ. ಕೊರಟಗೆರೆ ಪೊಲೀಸ್ ಠಾಣೆಯ ಪೇದೆ ದೊಡ್ಡಲಿಂಗಯ್ಯ ಕಳ್ಳನನ್ನು ಹಿಡಿದವರು. ಸುಮಾರು 10ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ 420 ಮಂಜನನ್ನು ಬೆಂಗಳೂರಿನ ಸದಾಶಿವನಗರ

ಪ್ರಾಣವನ್ನೇ ಪಣಕ್ಕಿಟ್ಟು ಕಳ್ಳನನ್ನು ಹಿಡಿದ ಪೊಲೀಸ್ ಪೇದೆ| ಕರ್ತವ್ಯ ನಿಷ್ಠೆಗೆ ಸಿಕ್ತು ಭಾರೀ ಪ್ರಶಂಸೆ Read More »

ಹೊನ್ನಾವರ ಸಮುದ್ರದಲ್ಲಿ ಕೊಳೆತ ಶವ ಪತ್ತೆ| ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಡ್ರೈವರ್ ಅರ್ಜುನ್ ನ ಶವವೆಂಬ ಶಂಕೆ

ಸಮಗ್ರ ನ್ಯೂಸ್: ಅಂಕೋಲಾ ತಾಲೂಕಿನ ಶಿರೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಈ ನಡುವಲ್ಲೇ ಗುಡ್ಡ ಕುಸಿತಗೊಂಡ ಸ್ಥಳದಿಂದ 25 ಕಿಮೀ ದೂರದಲ್ಲಿನ ಹೊನ್ನಾವರ ಸಮುದ್ರದಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಈ ಶವ ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋದ ಲಾರಿ ಚಾಲಕ ಅರ್ಜುನ್​ (30) ಅವರದ್ದು ಎಂದು ಶಂಕಿಸಲಾಗಿದೆ. ಮೃತದೇಹ ಯಾರದ್ದು ಎಂಬುದು ಇನ್ನೂ ದೃಢವಾಗಿಲ್ಲ. ಸದ್ಯ ಕರಾವಳಿ ಪೊಲೀಸರು ಮೃತದೇಹವನ್ನು ದಡಕ್ಕೆ

ಹೊನ್ನಾವರ ಸಮುದ್ರದಲ್ಲಿ ಕೊಳೆತ ಶವ ಪತ್ತೆ| ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಡ್ರೈವರ್ ಅರ್ಜುನ್ ನ ಶವವೆಂಬ ಶಂಕೆ Read More »