Editor

ಸುಬ್ರಹ್ಮಣ್ಯ: ಸಂಪೂರ್ಣ ಹದೆಗೆಟ್ಟ ಹೆದ್ದಾರಿಯಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟನೆ

ಸಮಗ್ರ ನ್ಯೂಸ್: ಸಂಪೂರ್ಣ ಹದೆಗೆಟ್ಟ ಕೈಕಂಬ – ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಬಾಳೆಗಿಡ, ಕೆಸು ನೆಟ್ಟು ರಿಕ್ಷಾ ಚಾಲಕರು ಪ್ರತಿಭಟನೆ ನಡೆಸಿದ್ದಾರೆ. ಕೈಕಂಬದಲ್ಲಿ‌ ಸುಬ್ರಹ್ಮಣ್ಯದವರೆಗೆ ಸುಮಾರು ಮೂರು ಕಿ.ಮೀ ಉದ್ದದ ಹೆದ್ದಾರಿ ಸಂಪೂರ್ಣ ‌ಹದೆಗೆಟ್ಟಿದ್ದು, ವಾಹನ ಓಡಾಟ ದುಸ್ತರವಾಗಿದೆ. ಹಲವು ವಾಹನಗಳು ಅಪಘಾತಕ್ಕೆ ಒಳಗಾಗಿದ್ದು, ಇದರಿಂದ ರೋಸಿಹೋದ ಸ್ಥಳೀಯ ರಿಕ್ಷಾ ಚಾಲಕರು ಇಂದು ರಸ್ತೆಯಲ್ಲಿ ಗಿಡಗಳನ್ನು ನೆಟ್ಟು ಪ್ರತಿಭಟನೆ ನಡೆಸಿದ್ದಾರೆ.

ಸುಬ್ರಹ್ಮಣ್ಯ: ಸಂಪೂರ್ಣ ಹದೆಗೆಟ್ಟ ಹೆದ್ದಾರಿಯಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟನೆ Read More »

ಮಂಗಳೂರು: ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಮುಸ್ಲಿಂ ಯುವಕನೊಂದಿಗೆ ದಾಂಪತ್ಯಕ್ಕೆ!!

ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಹಿಂದೂ ಧರ್ಮದ ವಿದ್ಯಾರ್ಥಿನಿಯೊಬ್ಬಳು ಕೇರಳದಲ್ಲಿ ಅನ್ಯ ಧರ್ಮದ ಯುವಕನೊಂದಿಗೆ ವಿವಾಹವಾದ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಘಟನೆ ಏನು?: ವಿದ್ಯಾರ್ಥಿನಿ ವಿಸ್ಮಯಳನ್ನು ಜೂ.30ರಂದು ಉಳ್ಳಾಲದಿಂದ ಕಾಸರಗೋಡು ವಿದ್ಯಾನಗರ ನಿವಾಸಿ ಮುಹಮ್ಮದ್‌ ಅಶ್ಫಕ್ ಅಪಹರಿಸಿದ್ದ ಬಗ್ಗೆ ವಿದ್ಯಾರ್ಥಿನಿಯ ತಂದೆ ವಿನೋದ್‌ ಅವರು ಮಂಗಳೂರಿನ ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದರು. ‌ಮಗಳನ್ನು ಮತಾಂತರಗೊಳಿಸುವುದಕ್ಕಾಗಿ ಅಶ್ಪಕ್‌ ಮತ್ತು ಆತನ ತಂಡ ಅಪಹರಣ ನಡೆಸಿದೆ ಎಂದು ದೂರಿನಲ್ಲಿ ಹೇಳಿದ್ದರು. ಅಶ್ಫಕ್ ಈಗಾಗಲೇ ಒಂದು ವಿವಾಹವಾಗಿದ್ದು ಈತನ ಮೇಲೆ

ಮಂಗಳೂರು: ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಮುಸ್ಲಿಂ ಯುವಕನೊಂದಿಗೆ ದಾಂಪತ್ಯಕ್ಕೆ!! Read More »

ನಿರ್ಮಾಣ ಹಂತದ ಕಟ್ಟಡ ಕುಸಿತ : ಇಬ್ಬರು ಸಾವು ಓರ್ವ ಗಂಭೀರ

ಸಮಗ್ರ ನ್ಯೂಸ್: ಕಟ್ಟಡ ನಿರ್ಮಾಣ ವೇಳೆ ಸೆಂಟ್ರಿಂಗ್ ಕುಸಿದು ಮೂವರು ಕಾರ್ಮಿಕರ ಪೈಕಿ ಇಬ್ಬರು ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರಿನ ಪೀಣ್ಯದ ಎನ್ಟಿಟಿಎಫ್ ರಸ್ತೆಯಲ್ಲಿ ನಡೆದಿದೆ. ದುರಂತದಲ್ಲಿ ಕಾರ್ಮಿಕ ಹಿಮಾಂಶು (28), ಆಸ್ಪತ್ರೆಗೆ ಸಾಗಿಸುವಾಗ ಪ್ರಕಾಶ್ ಮೃತಪಟ್ಟಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ. ಸ್ಥಳೀಯ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಪೀಣ್ಯ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕಾರ್ಮಿಕರು ಏಷಿಯನ್ ಪೈಂಟ್ಸ್ ಕಟ್ಟಡ ನಿರ್ಮಾಣ ಮಾಡುತ್ತಿದ್ದರು. ಕಟ್ಟಡದ ನಾಲ್ಕನೇ ಮಹಡಿಗೆ ಕಾಂಕ್ರೀಟ್ ಹಾಕುತ್ತಿದ್ದಾಗ, ಏಕಾಏಕಿ ಸೆಂಟ್ರಿಂಗ್

ನಿರ್ಮಾಣ ಹಂತದ ಕಟ್ಟಡ ಕುಸಿತ : ಇಬ್ಬರು ಸಾವು ಓರ್ವ ಗಂಭೀರ Read More »

ಮಾಜಿ ವಿದೇಶಾಂಗ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ನಟ್ವರ್ ಸಿಂಗ್ ಇನ್ನಿಲ್ಲ

ಸಮಗ್ರ ನ್ಯೂಸ್: ಕೇಂದ್ರದ ಮಾಜಿ ವಿದೇಶಾಂಗ ಸಚಿವ, ಕಾಂಗ್ರೆಸ್‌ ಹಿರಿಯ ನಾಯಕ ಕೆ. ನಟ್ವರ್‌ ಸಿಂಗ್‌ (95) ಅವರು ನಿಧನರಾಗಿದ್ದಾರೆ. ಸುದೀರ್ಘ ಅವಧಿಯಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಭಾರತೀಯ ವಿದೇಶಾಂಗ ಸೇವೆಗಳ ಅಧಿಕಾರಿಯಾಗಿ ಭಾರತದ ರಾಜತಾಂತ್ರಿಕತೆಗೆ ಅಪಾರ ಕೊಡುಗೆ ನೀಡಿದ ಅವರು ವಿದೇಶಾಂಗ ವ್ಯವಹಾರಗಳ ಸಚಿವರಾಗಿಯೂ ಹೆಚ್ಚಿನ ಸೇವೆ ಸಲ್ಲಿಸಿದ್ದಾರೆ. ನಟ್ವರ್‌ ಸಿಂಗ್‌ ಅವರು ಭಾರತ ಹಾಗೂ ಪಾಕಿಸ್ತಾನದ ನಡುವೆ ಸ್ನೇಹ, ಸಂಬಂಧ ಮೂಡಲು ಎರಡೂ ದೇಶಗಳು

ಮಾಜಿ ವಿದೇಶಾಂಗ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ನಟ್ವರ್ ಸಿಂಗ್ ಇನ್ನಿಲ್ಲ Read More »

ಶಿರಾಡಿ ಘಾಟ್: ವಾಂತಿ ಸಮಸ್ಯೆಯಿಂದ ಕಾರಿನಿಂದ ಕೆಳಗಿಳಿದ ಮಂದಿ| ಯಮಸ್ವರೂಪಿ ಕಂಟೇನರ್ ನಿಂದ ಐವರು ಅದೃಷ್ಟವಶಾತ್ ಬಚಾವ್

ಸಮಗ್ರ ನ್ಯೂಸ್: ಕಂಟೈನರ್‌ ಲಾರಿಯೊಂದು ಶನಿವಾರ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಬರ್ಚಿನಹಳ್ಳದಲ್ಲಿ ದಾವಣಗೆರೆ ಮೂಲದವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಬಿದ್ದಿದ್ದು, ಕಾರು ಸಂಪೂರ್ಣ ಅಪ್ಪಚ್ಚಿಯಾಗಿದೆ. ಆದರೆ ಈ ಹೊತ್ತಿನಲ್ಲಿ ಕಾರಿನಲ್ಲಿ ಯಾರೂ ಇರಲಿಲ್ಲ. ಅದರಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ವಾಂತಿ ಬಂದ ಕಾರಣ ಎಲ್ಲರೂ ಕೆಳಗಿಳಿದಿದ್ದರು. ಆದ್ದರಿಂದಲೇ ಇವರೆಲ್ಲರೂ ಜೀವ ಉಳಿಸಿಕೊಂಡರು. ದಾವಣಗೆರೆಯ ನಿವಾಸಿಗರಾದ ಗಣೇಶ, ಶಿವು, ಕಾವ್ಯಾ, ದಂಡ್ಯಮ್ಮ ಅವರು ಚಾಲಕ ಅಬ್ದುಲ್‌ ರಹಿಮಾನ್‌ ಮುಲ್ಲಾ ಅವರೊಂದಿಗೆ ಶುಕ್ರವಾರ ಧರ್ಮಸ್ಥಳ ಕ್ಷೇತ್ರಕ್ಕೆ ಬಂದವರು ಶನಿವಾರ

ಶಿರಾಡಿ ಘಾಟ್: ವಾಂತಿ ಸಮಸ್ಯೆಯಿಂದ ಕಾರಿನಿಂದ ಕೆಳಗಿಳಿದ ಮಂದಿ| ಯಮಸ್ವರೂಪಿ ಕಂಟೇನರ್ ನಿಂದ ಐವರು ಅದೃಷ್ಟವಶಾತ್ ಬಚಾವ್ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಆಗಸ್ಟ್‌ ತಿಂಗಳ ಎರಡನೇ ವಾರ 11-08- 2024ರಿಂದ 17-08-2024ರವರೆಗೆ ಇರಲಿದೆ. ಸೂರ್ಯನು ಸಿಂಹರಾಶಿಯನ್ನು ಪ್ರವೇಶ ಮಾಡುವನು. ಅದು ಸ್ವರಾಶಿಯೂ ಆಗಿದ್ದು, ಅನೇಕ ಶುಭಫಲಗಳನ್ನು ಕೆಲವು ರಾಶಿಯವರಿಗೆ ನೀಡುವನು. ವಿಶೇಷವಾಗಿ ಆರೋಗ್ಯವನ್ನು ನೀಡೆಂದು ಸೂರ್ಯನಲ್ಲಿ ಬೇಡುವುದು ಸೂಕ್ತ. ಆರೋಗ್ಯವೇ ಎಲ್ಲ ಸಂಪತ್ತಿನ್ನು ಪಡೆಯಲು ಮೂಲ ಕಾರಣವಾಗಿದೆ. ಜಗತ್ತಿನ ಆತ್ಮನಾದ ಸೂರ್ಯನ ಅನುಗ್ರಹ ಎಲ್ಲಿಗೂ ಲಭಿಸಲಿ. ಮೇಷ ರಾಶಿ:ಇದು ಆಗಷ್ಟ್ ತಿಂಗಳ ಎರಡನೇ ವಾರವಾಗಿದ್ದು, ಸೂರ್ಯನು ಪಂಚಮ ರಾಶಿಯನ್ನು ಪ್ರವೇಶಿಸುವನು. ವಿದ್ಯಾಭ್ಯಾಸದಲ್ಲಿ ಪ್ರಗತಿ ಸಾಧಿಸಲು ಉತ್ತಮ ಕಾಲವಾಗಿದೆ.

ದ್ವಾದಶ ರಾಶಿಗಳ ವಾರಭವಿಷ್ಯ Read More »

SDPI ಬೆಳ್ಳಾರೆ ಬ್ಲಾಕ್ ಪ್ರತಿನಿಧಿ ಸಭೆ,ಆಂತರಿಕ ಚುನಾವಣೆ

ಸಮಗ್ರ ನ್ಯೂಸ್: ಬೆಳ್ಳಾರೆ ಬ್ಲಾಕ್ ನ 2024-27 ನೇಯ ಸಾಲಿಗೆ ಪದಾಧಿಕಾರಿಗಳನ್ನು ಚುನಾವಣೆಯ ಮೂಲಕ ಆ.10 ರಂದು ಆಯ್ಕೆ ಮಾಡಲಾಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ ರಫೀಕ್ ಎಂ ಎ ಕಾರ್ಯದರ್ಶಿಯಾಗಿ ಹಮೀದ್ ಮರಕ್ಕಡ, ಕೋಶಾಧಿಕಾರಿಯಾಗಿ, ಇರ್ಷಾದ್ ಸರ್ವೆ, ಉಪಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ತಂಬಿನಮಕ್ಕಿ, ಜೊತೆ ಕಾರ್ಯದರ್ಶಿಯಾಗಿ ಅಝೀಝ್ ಅಯ್ಯನಕಟ್ಟೆ,ಸಮಿತಿ ಸದಸ್ಯರಾಗಿ ಮೊಯ್ದೀನ್ ಬೆಳ್ಳಾರೆ ಹಾಗೂ ಯೂಸಫ್ ಹಾಜಿ ಬೇರಿಕೆ ಯವರು ಆಯ್ಕೆಯಾದರು. ಚುನಾವಣೆ ಪ್ರಕ್ರಿಯೆಯ ಆರ್. ಓ ಆಗಿ,ಎಸ್‌ಡಿಪಿಐ ದ.ಕ ಜಿಲ್ಲಾ ಸಮಿತಿ ಸದಸ್ಯರಾದ ಅಶ್ರಫ್ ತಲಪಾಡಿ

SDPI ಬೆಳ್ಳಾರೆ ಬ್ಲಾಕ್ ಪ್ರತಿನಿಧಿ ಸಭೆ,ಆಂತರಿಕ ಚುನಾವಣೆ Read More »

ಹಾಸನ ರೈಲ್ವೆ ಹಳಿ ಮೇಲೆ ಮತ್ತೆ ಮಣ್ಣು ಕುಸಿತ… ರೈಲು ಸಂಚಾರ ಸ್ಥಗಿತ

ಸಮಗ್ರ ನ್ಯೂಸ್: ಹಾಸನ ಜಿಲ್ಲೆಯ ಸಕಲೇಶಪುರ-ಬಾಳ್ಳುಪೇಟೆ ನಡುವೆ ರೈಲು ಹಳಿಗಳ ಮೇಲೆ ಗುಡ್ಡ ಕುಸಿದಿದೆ. ಹಾಸನ-ಮಂಗಳೂರು ನಡುವಿನ ಕಿಲೋಮೀಟರ್ ಸಂಖ್ಯೆ 42/43 ರ ಮಧ್ಯೆ ಭೂ ಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ ಮಧ್ಯರಾತ್ರಿಯಿಂದ ರೈಲುಗಳ ಸಂಚಾರ ಬಂದ್ ಆಗಿದೆ. ರೈಲ್ವೆ ಇಲಾಖೆ ಕಾರ್ಮಿಕರು ಮಣ್ಣು ತೆರವು ಮಾಡುತ್ತಿದ್ದಾರೆ. ವಾರಗಳ ಹಿಂದಷ್ಟೇ ಇಂತಹ ಅವಘಡ ಸಂಭವಿಸಿದೆ. ಈಗ ಮತ್ತೊಮ್ಮೆ ಮರಗಳ ಸಮೇತ ಭಾರೀ ಪ್ರಮಾಣದ ಮಣ್ಣು ಕುಸಿದಿದೆ. ಇದರಿಂದ ಬೆಂಗಳೂರು-ಮಂಗಳೂರು ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಬೆಂಗಳೂರು-ಕಣ್ಣೂರು, ಬೆಂಗಳೂರು-ಮುರುಡೇಶ್ವರ

ಹಾಸನ ರೈಲ್ವೆ ಹಳಿ ಮೇಲೆ ಮತ್ತೆ ಮಣ್ಣು ಕುಸಿತ… ರೈಲು ಸಂಚಾರ ಸ್ಥಗಿತ Read More »

ಗುಡ್ಡ ಕುಸಿತದಿಂದ ತತ್ತರವಾದ ಕೇರಳದ ವಯನಾಡಿಗೆ ಇಂದು ಪ್ರಧಾನಿ ಮೋದಿ ಭೇಟಿ

ಸಮಗ್ರ ನ್ಯೂಸ್: ವಯನಾಡಿನಲ್ಲಿ ಭಯಾನಕ ಭೂಕುಸಿತದಿಂದ ನೂರಾರು ಜನ ಮೃತಪಟ್ಟು ಅಪಾರ ಸಾವು-ನೋವು ಸಂಭವಿಸಿದೆ. ಇಂದು ಕೇರಳದ ವಯನಾಡ್ ಜಿಲ್ಲೆಯ ವಿಪತ್ತು ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿದ್ದಾರೆ. ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಭೂಕುಸಿತದಿಂದ ಧ್ವಂಸಗೊಂಡ ಚೂರಲ್‌ಮಲಾ, ಮುಂಡಕ್ಕೈ ಮತ್ತು ಪುಂಚಿರಿಮಟ್ಟಂ ಕುಗ್ರಾಮಗಳ ವೈಮಾನಿಕ ಸಮೀಕ್ಷೆ ನಡೆಸಿದ ಮೋದಿ, ಬೆಳಗ್ಗೆ 11.15 ರ ಸುಮಾರಿಗೆ ಕಣ್ಣೂರು ವಿಮಾನ ನಿಲ್ದಾಣದಿಂದ ವಯನಾಡ್‌ಗೆ ತೆರಳಿದರು. ಪ್ರಧಾನಮಂತ್ರಿಯವರೊಂದಿಗೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ

ಗುಡ್ಡ ಕುಸಿತದಿಂದ ತತ್ತರವಾದ ಕೇರಳದ ವಯನಾಡಿಗೆ ಇಂದು ಪ್ರಧಾನಿ ಮೋದಿ ಭೇಟಿ Read More »

ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ/ ಇಂದಿನಿಂದ 12 ದಿನಗಳವರೆಗೆ ಫ್ಲವರ್ ಶೋ

ಸಮಗ್ರ ನ್ಯೂಸ್‌: ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಪ್ರತೀ ವರ್ಷ ಸದ್ಯೋದ್ಯಾನ ಲಾಲ್‌ಬಾಗ್‌ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನ ಗುರುವಾರದಿಂದ ಆರಂಭವಾಗುತ್ತಿದೆ. ಈ ಬಾರಿಯೂ ಭಾರೀ ಸಂಖ್ಯೆಯಲ್ಲಿ ಜನ ಆಗಮಿಸುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕೆ ಪ್ರಮುಖ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧ ಮಾಡಿ ಸಂಚಾರಿ ಪೊಲೀಸರಿಂದ ಆದೇಶ ಹೊರಡಿಸಲಾಗಿದೆ. ಇಂದಿನಿಂದ 12 ದಿನಗಳವರೆಗೆ ಫ್ಲವರ್ ಶೋ ನಡೆಯಲಿದ್ದು, ಫಲಪುಷ್ಪ ಪ್ರದರ್ಶನಕ್ಕೆ ಬರುವ ಜನರಿಗೆ ವಾಹನ ನಿಲುಗಡೆಗೆ 4 ಕಡೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಪ್ರಮುಖ 9 ರಸ್ತೆಯಲ್ಲಿ ವಾಹನ

ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ/ ಇಂದಿನಿಂದ 12 ದಿನಗಳವರೆಗೆ ಫ್ಲವರ್ ಶೋ Read More »