Editor

ರೈಲು‌‌ ಹಳಿಗಳ ಮೇಲೆ ಗುಡ್ಡ ಕುಸಿತದ ಮಣ್ಣು ತೆರವು| ಮಂಗಳೂರು – ಸಕಲೇಶಪುರ ರೈಲು ಸಂಚಾರ ಪುನರಾರಂಭ

ಸಮಗ್ರ ನ್ಯೂಸ್: ಸಕಲೇಶಪುರ ಟು ಬಾಳ್ಳುಪೇಟೆ ಮಾರ್ಗಮಧ್ಯದ ರೈಲು ಹಳಿಗಳ ಮೇಲೆ ಭೂ ಕುಸಿತ ಉಂಟಾಗಿ ಸಂಚಾರಕ್ಕೆ ಅಡ್ಡಿಯಾಗಿತ್ತು. ಭೂ ಕುಸಿತದ ಮಣ್ಣನ್ನು ತೆರವುಗೊಳಿಸಲಾಗಿದ್ದು, ಸಂಚಾರ ಸುರಕ್ಷತೆಯ ಪರೀಕ್ಷೆಯನ್ನು ನಡೆಸಲಾಗಿದೆ. ಹೀಗಾಗಿ ನಾಳೆ(ಆ.14)ರಿಂದ ಈ ಮಾರ್ಗದಲ್ಲಿ ರೈಲುಗಳ ಸಂಚಾರ ಪುನರಾರಂಭಗೊಳಿಸಲಾಗುತ್ತಿದೆ. ಈ ಕುರಿತಂತೆ ನೈರುತ್ಯ ರೈಲ್ವೆಯ ಮೈಸೂರು ವಿಭಾಗವು ಮಾಹಿತಿ ನೀಡಿದ್ದು, ಸಕಲೇಶಪುರ-ಬಳ್ಳುಪೇಟೆ ನಿಲ್ದಾಣಗಳ ನಡುವೆ ಭೂಕುಸಿತಕ್ಕೆ ಸಂಬಂಧಿಸಿದಂತೆ, ಹಳಿಯನ್ನು ಪುನಃಸ್ಥಾಪಿಸಲಾಗಿದೆ ಮತ್ತು ರೈಲು ಕಾರ್ಯಾಚರಣೆಗೆ ಯೋಗ್ಯವಾಗಿದೆ ಎಂದು ಪ್ರಮಾಣೀಕರಿಸಲಾಗಿದೆ ಎಂದು ತಿಳಿಸಿದೆ. ದಿನಾಂಕ 11.08.2024ರ ನೈರುತ್ಯ […]

ರೈಲು‌‌ ಹಳಿಗಳ ಮೇಲೆ ಗುಡ್ಡ ಕುಸಿತದ ಮಣ್ಣು ತೆರವು| ಮಂಗಳೂರು – ಸಕಲೇಶಪುರ ರೈಲು ಸಂಚಾರ ಪುನರಾರಂಭ Read More »

ಶಿರೂರು ಗುಡ್ಡ ಕುಸಿತ ಪ್ರಕರಣ| ನಾಪತ್ತೆಯಾಗಿದ್ದ ಲಾರಿಯ ಅವಶೇಷಗಳು ಪತ್ತೆ

ಸಮಗ್ರ ನ್ಯೂಸ್: ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭೂಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವಳಿ ನದಿಯಲ್ಲಿ ಸ್ಕೂಬಾ ಡ್ರೈವಿಂಗ್ ವೇಳೆ ನಾಪತ್ತೆಯಾದ ಲಾರಿಯ ಜಾಕ್ ಪತ್ತೆಯಾಗಿದ್ದು, ಇದು ನಮ್ಮದೇ ಲಾರಿಯ ಬಿಡಿಭಾಗ ಎಂದು ಲಾರಿ ಮಾಲೀಕರು ಖಚಿತಪಡಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜುಲೈ 16ರಂದು ಗುಡ್ಡ ಕುಸಿತ ಸಂಭವಿಸಿತ್ತು. ಘಟನೆಯಲ್ಲಿ 12 ಜನರು ನಾಪತ್ತೆಯಾಗಿದ್ದು, ಅವರಲ್ಲಿ 8 ಜನರ ಮೃತದೇಹ ಪತ್ತೆಯಾಗಿದೆ. ಆದರೆ ಉಳಿದ ಮೂವರ ಸುಳಿವು

ಶಿರೂರು ಗುಡ್ಡ ಕುಸಿತ ಪ್ರಕರಣ| ನಾಪತ್ತೆಯಾಗಿದ್ದ ಲಾರಿಯ ಅವಶೇಷಗಳು ಪತ್ತೆ Read More »

ಸುಬ್ರಹ್ಮಣ್ಯ: ಕೆಎಸ್ಎಸ್ ಕಾಲೇಜಿನ ಉಪನ್ಯಾಸಕ ವಿನ್ಯಾಸ್ ಹೊಸೋಳಿಕೆ ಅವರಿಗೆ ಮಂಗಳೂರು ವಿ.ವಿ ಯಿಂದ ಪಿ ಎಚ್ ಡಿ ಪದವಿ

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಕಾಲೇಜಿನ ವಾಣಿಜ್ಯಶಾಸ್ತ್ರ ಮತ್ತು ಉದ್ಯಮ ಆಡಳಿತ ವಿಭಾಗದ ಉಪನ್ಯಾಸಕ ವಿನ್ಯಾಸ್ ಹೊಸೋಳಿಕೆ ಅವರು ಮಂಡಿಸಿದ “ಮಾರ್ಕೆಟಿಂಗ್ ಸ್ಟ್ರಾಟಜಿಸ್ ಆಫ್ ಸೋಷಿಯಲ್ ಎಂಟರ್ಪ್ರೈಸಸ್ – ಎ ಸ್ಟಡಿ ವಿಥ್ ಸೆಲೆಕ್ಟ್ ಸೋಶಿಯಲ್ ಎಂಟರ್ಪ್ರೈಸಸ್” ಎಂಬ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿಯನ್ನು ನೀಡಿದೆ. ಅವರು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಪ್ರಾಂಶುಪಾಲರು ಆದ ಪ್ರೋ. ಡಾ. ಉದಯ್ ಕುಮಾರ್ ಇರ್ವತ್ತೂರು ಇವರ ಮಾರ್ಗದರ್ಶನದಲ್ಲಿ ಮಂಡಿಸಿದ

ಸುಬ್ರಹ್ಮಣ್ಯ: ಕೆಎಸ್ಎಸ್ ಕಾಲೇಜಿನ ಉಪನ್ಯಾಸಕ ವಿನ್ಯಾಸ್ ಹೊಸೋಳಿಕೆ ಅವರಿಗೆ ಮಂಗಳೂರು ವಿ.ವಿ ಯಿಂದ ಪಿ ಎಚ್ ಡಿ ಪದವಿ Read More »

ರಾಯಚೂರು: ಶಿಕ್ಷಕಿಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ಪ್ರಭಾರ ಪ್ರಾಂಶುಪಾಲನಿಗೆ ಧರ್ಮದೇಟು

ಸಮಗ್ರ ನ್ಯೂಸ್: ರಾಯಚೂರು ಸಮೀಪದ ಯರಮರಸ್ ಬಳಿಯ ಆದರ್ಶ ವಿದ್ಯಾಲಯದ ಪ್ರಭಾರಿ ಪ್ರಾಚಾರ್ಯನೊಬ್ಬ ತರಬೇತಿಗೆ ಬಂದಿದ್ದ ಶಿಕ್ಷಕಿ ಜತೆ ಅನುಚಿತವಾಗಿ ವರ್ತಿಸಿದ್ದರಿಂದ ಥಳಿತಕ್ಕೊಳಗಾದ ಘಟನೆ ಸೋಮವಾರ ನಡೆದಿದೆ. ಮೆಹಬೂಬ್ ಅಲಿ ಎಂಬಾತನೇ ಏಟು ತಿಂದ ಪ್ರಭಾರಿ ಪ್ರಾಚಾರ್ಯ. ಈತ ಶಿಕ್ಷಕಿಯ ಮೊಬೈಲ್‌ಗೆ ಅಶ್ಲೀಲ ಮೆಸೇಜ್‌ಗಳನ್ನು ಕಳಿಸುತ್ತಿದ್ದನಲ್ಲದೆ, ರಾತ್ರಿ ಮಲಗಲು ಬಾ ಎಂದೂ ಕರೆದಿದ್ದ. ಇದರಿಂದ ನೊಂದ ಶಿಕ್ಷಕಿ ತಮ್ಮವರಿಗೆ ಮಾಹಿತಿ ತಿಳಿಸಿದ್ದರು. ಶಾಲೆಗೆ ಬಂದ ಶಿಕ್ಷಕಿಯ ಬಂಧುಗಳು, ಸಾರ್ವಜನಿಕರು ಪ್ರಭಾರ ಪ್ರಾಚಾರ್ಯನಿಗೆ ಚೆನ್ನಾಗಿ ಥಳಿಸಿ ಬುದ್ಧಿ ಕಲಿಸಿದ್ದಾರೆ.

ರಾಯಚೂರು: ಶಿಕ್ಷಕಿಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ಪ್ರಭಾರ ಪ್ರಾಂಶುಪಾಲನಿಗೆ ಧರ್ಮದೇಟು Read More »

ಮೂಡುಬಿದಿರೆ: ಪ್ರೇಮವೈಫಲ್ಯ ಹಿನ್ನೆಲೆ| ಕಾಲೇಜು ವಿದ್ಯಾರ್ಥಿನಿಗೆ ಕತ್ತರಿಯಿಂದ ಇರಿದ ಭಗ್ನಪ್ರೇಮಿ

ಸಮಗ್ರ ನ್ಯೂಸ್: ಪ್ರೇಮ ವೈಫಲ್ಯದಿಂದ ಯುವಕನೋರ್ವ ಪಿಯುಸಿ ವಿದ್ಯಾರ್ಥಿನಿಗೆ ಕತ್ತರಿಯಿಂದ ಇರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ನಡೆದಿದೆ. ತುಮಕೂರು ಮೂಲದ ಮಂಜುನಾಥ್ ಎಂಬಾತ ಈ ಕೃತ್ಯ ಎಸಗಿದ್ದಾಗಿ ತಿಳಿದುಬಂದಿದೆ. ಮಂಜುನಾಥ್ ಆಳ್ವಾಸ್ ಕಾಲೇಜಿನಲ್ಲಿ ಓದುತ್ತಿದ್ದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದನು. ಇದಕ್ಕೆ ಆಕೆ ಒಪ್ಪದ ಹಿನ್ನೆಲೆ ಕತ್ತರಿಯಿಂದ ಹೊಟ್ಟೆಗೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಲೆ ಯತ್ನ ಆರೋಪದಡಿ ಮೂಡುಬಿದಿರೆ ಪೊಲೀಸರು ಮಂಜುನಾಥ್ ನನ್ನು ಬಂಧಿಸಿದ್ದಾರೆ ಎಂದು ತಿಳಿದು

ಮೂಡುಬಿದಿರೆ: ಪ್ರೇಮವೈಫಲ್ಯ ಹಿನ್ನೆಲೆ| ಕಾಲೇಜು ವಿದ್ಯಾರ್ಥಿನಿಗೆ ಕತ್ತರಿಯಿಂದ ಇರಿದ ಭಗ್ನಪ್ರೇಮಿ Read More »

ಸುಬ್ರಹ್ಮಣ್ಯ: ಪರಿಸರ ರಕ್ಷಣೆಗಾಗಿ‌ ಯುವಕರ ಮಾದರಿ‌ ಕಾರ್ಯ| ಕಮಿಲದ ಬಾಂಧವ್ಯ ಗೆಳೆಯರ ಬಳಗದಿಂದ ರಸ್ತೆ ಬದಿ ಸ್ವಚ್ಛತೆ| ಕಸ ಹಾಕುವವರ ಪತ್ತೆಗೆ ಸಿಸಿ ಕ್ಯಾಮೆರಾ ಅಳವಡಿಕೆ

ಸಮಗ್ರ ನ್ಯೂಸ್: ಸುಳ್ಯದ ಗುತ್ತಿಗಾರು ಗ್ರಾಮದ ಕಮಿಲದ ಬಾಂಧವ್ಯ ಗೆಳೆಯರ ಬಳಗವು ಭಾನುವಾರ ಬಳ್ಪ-ಕಮಿಲ ರಸ್ತೆಯ ಸುಮಾರು 2 ಕಿಮೀ ಕಾಡಿನ ನಡುವೆ ಹಾದು ಹೋಗುವ ರಸ್ತೆಯ ಇಕ್ಕೆಲೆಗಳಲ್ಲಿ ಸ್ವಚ್ಛತೆಯನ್ನು ಮಾಡಿದರು. ಕಾಡು-ಪರಿಸರ ಸಂರಕ್ಷಣೆ, ಸ್ವಚ್ಛತೆಯ ಉದ್ದೇಶದಿಂದ ಕೆಲಸಕ್ಕೆ ಇಳಿದ ಯುವಕರಿಗೆ ಕಾಡಿನ ದಾರಿಯಲ್ಲಿ ದೊರೆತದ್ದು 2 ಲೋಡ್‌ ಪಿಕ್‌ಅಪ್‌ನಲ್ಲಿ ತುಂಬುವಷ್ಟು ತ್ಯಾಜ್ಯ. ಇನ್ನೂ ಇದೆ. ಇದು ಒಂದು ದಿನ ಕೆಲಸ. ಕಮಿಲದ ಬಾಂಧವ್ಯ ಗೆಳೆಯರ ಬಳಗವು ಅರಣ್ಯದ ಕಾಳಜಿಯ ಉದ್ದೇಶದೊಂದಿಗೆ ಆರಂಭದಲ್ಲಿ ಕಾಡಿನ ದಾರಿಯಲ್ಲಿ ಸ್ವಚ್ಛತೆ

ಸುಬ್ರಹ್ಮಣ್ಯ: ಪರಿಸರ ರಕ್ಷಣೆಗಾಗಿ‌ ಯುವಕರ ಮಾದರಿ‌ ಕಾರ್ಯ| ಕಮಿಲದ ಬಾಂಧವ್ಯ ಗೆಳೆಯರ ಬಳಗದಿಂದ ರಸ್ತೆ ಬದಿ ಸ್ವಚ್ಛತೆ| ಕಸ ಹಾಕುವವರ ಪತ್ತೆಗೆ ಸಿಸಿ ಕ್ಯಾಮೆರಾ ಅಳವಡಿಕೆ Read More »

ಅಂಗನವಾಡಿಯಲ್ಲಿ ವಿತರಿಸಿದ‌ ಬೆಲ್ಲದ ಪೊಟ್ಟಣದಲ್ಲಿ ಸತ್ತ ಇಲಿ!!

ಸಮಗ್ರ ನ್ಯೂಸ್: ಅಂಗನವಾಡಿ ಕೇಂದ್ರದಲ್ಲಿ ಇತ್ತೀಚೆಗೆ ವಿತರಿಸಲಾದ ಬೆಲ್ಲದ ಪೊಟ್ಟಣದಲ್ಲಿ ಸತ್ತ ಇಲಿ ಪತ್ತೆಯಾಗಿದೆ ಎಂಬ ಆರೋಪ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದಿಂದ ವರದಿಯಾಗಿದೆ. ಗರ್ಭಿಣಿಯರು, ಬಾಣಂತಿಯರಿಗೆ ಅಂಗನವಾಡಿ ಕೇಂದ್ರದಲ್ಲಿ ಈ ಪೊಟ್ಟಣಗಳನ್ನು ವಿತರಿಸಲಾಗಿತ್ತು. ಗರುಡಾಚಾರ್ಲಹಳ್ಳಿ ಗ್ರಾಮದ ನಿವಾಸಿ ರತ್ನಮ್ಮ ಎಂಬುವರಿಗೆ ನೀಡಿದ ಎರಡು ಬೆಲ್ಲದ ಪೊಟ್ಟಣಗಳ ಪೈಕಿ ಒಂದರಲ್ಲಿ ಈ ಸತ್ತ ಇಲಿ ಕಂಡುಬಂದಿವೆ. ಕೂಡಲೇ ಅವರು ಪೊಟ್ಟಣಗಳನ್ನು ಅಂಗನವಾಡಿ ಕಾರ್ಯಕರ್ತೆ ಗಮನಕ್ಕೆ ತಂದಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಅಂಗನವಾಡಿಗಳಿಗೆ ಪೂರೈಸುವ

ಅಂಗನವಾಡಿಯಲ್ಲಿ ವಿತರಿಸಿದ‌ ಬೆಲ್ಲದ ಪೊಟ್ಟಣದಲ್ಲಿ ಸತ್ತ ಇಲಿ!! Read More »

ರಾಜ್ಯದ 6 ರಂಗಾಯಣಗಳಿಗೆ ನಿರ್ದೇಶಕರ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ

ಸಮಗ್ರ ನ್ಯೂಸ್: ರಾಜ್ಯದ ಆರು ರಂಗಾಯಣಗಳಿಗೆ ನಿರ್ದೇಶಕರ ನೇಮಕ ಮಾಡಿ ಹಿಂದುಳಿದ ವರ್ಗಗಳ ಕಲ್ಯಾಣ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಚಿವ ಶಿವರಾಜ ತಂಗಡಗಿ ಆದೇಶ ಹೊರಡಿಸಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಇಂದು ರಾಜ್ಯದ ಆರು ರಂಗಾಯಣಗಳಿಗೆ ನಿರ್ದೇಶಕರನ್ನು ನೇಮಕ ಮಾಡಿ ಘೋಷಣೆ ಮಾಡುವ ಮೂಲಕ ರಾಜ್ಯದ ರಂಗಭೂಮಿ ಚಟುವಟಿಕೆಗಳಿಗೆ ದೊಡ್ಡ ಮಟ್ಟದಲ್ಲಿ ಚಾಲನೆ ನೀಡಿದ್ದಾರೆ. ಈ ಸಂಬಂಧ ಅಧಿಕೃತ ಸರ್ಕಾರಿ ಆದೇಶವನ್ನು ಹೊರಡಿಸಲಾಗಿದೆ. ನಿರ್ದೇಶಕರು ಅಧಿಕಾರ ವಹಿಸಿಕೊಂಡ

ರಾಜ್ಯದ 6 ರಂಗಾಯಣಗಳಿಗೆ ನಿರ್ದೇಶಕರ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ Read More »

ವಿದ್ಯಾರ್ಥಿನಿ, ಶಿಕ್ಷಕಿ ಹಾಗೂ ಗ್ರಾ.ಪಂ ಅಧ್ಯಕ್ಷೆಗೆ ಸ್ವಾತಂತ್ರ್ಯೋತ್ಸವದ ಆಮಂತ್ರಣ| ಸುಳ್ಯದ ಅಚ್ರಪ್ಪಾಡಿ ಶಾಲೆ ಮಾಜಿ ಶಿಕ್ಷಕಿ ಶ್ವೇತಾ ವೇಣುಗೋಪಾಲ್ ಸೇರಿ ಜಿಲ್ಲೆಯ ಮೂವರಿಗೆ ಅವಕಾಶ

ಸಮಗ್ರ ನ್ಯೂಸ್: ಹೊಸದಿಲ್ಲಿಯಲ್ಲಿ ನಡೆಯುವ 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯದ ನಾಲ್ಕು ಪಿಎಂಶ್ರೀ ಶಾಲೆಗಳ ನಾಲ್ವರು ವಿದ್ಯಾರ್ಥಿಗಳು ಹಾಗೂ ನಾಲ್ವರು ಶಿಕ್ಷಕರು ವಿಶೇಷ ಅವಕಾಶ ಪಡೆದುಕೊಂಡಿದ್ದು, ಇದರಲ್ಲಿ ಮೈಸೂರು ಶೈಕ್ಷಣಿಕ ವಿಭಾಗದಿಂದ ದ.ಕ. ಜಿಲ್ಲೆಯ ಓರ್ವ ವಿದ್ಯಾರ್ಥಿನಿ, ಶಿಕ್ಷಕಿ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷೆಯೊಬ್ಬರಿಗೆ ಭಾಗವಹಿಸಲು ವಿಶೇಷ ಆಮಂತ್ರಣ ದೊರಕಿದೆ. ದ.ಕ. ಜಿಲ್ಲೆಯ ಮಂಗಳೂರಿನ ಶಕ್ತಿನಗರ ನಾಲ್ಯಪದವು ಕುವೆಂಪು ಶತಮಾನೋತ್ಸವ ಉನ್ನತೀಕರಿಸಿದ ಮಾದರಿ ಸ.ಹಿ.ಪ್ರಾ. ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಪೂರ್ವಿ ಯು. ಶೆಟ್ಟಿ ಹಾಗೂ

ವಿದ್ಯಾರ್ಥಿನಿ, ಶಿಕ್ಷಕಿ ಹಾಗೂ ಗ್ರಾ.ಪಂ ಅಧ್ಯಕ್ಷೆಗೆ ಸ್ವಾತಂತ್ರ್ಯೋತ್ಸವದ ಆಮಂತ್ರಣ| ಸುಳ್ಯದ ಅಚ್ರಪ್ಪಾಡಿ ಶಾಲೆ ಮಾಜಿ ಶಿಕ್ಷಕಿ ಶ್ವೇತಾ ವೇಣುಗೋಪಾಲ್ ಸೇರಿ ಜಿಲ್ಲೆಯ ಮೂವರಿಗೆ ಅವಕಾಶ Read More »

ಮೈಸೂರು ದಸರಾಗೆ ಮುಹೂರ್ತ ಫಿಕ್ಸ್…ಅ. 3ರಿಂದ ಅದ್ಧೂರಿ ದಸರಾ ಆಚರಣೆ

ಸಮಗ್ರ ನ್ಯೂಸ್: ವಿಶ್ವ ವಿಖ್ಯಾತ ಮೈಸೂರು ದಸರಾ-2024 ಆಚರಣೆಗೆ ಮುಹೂರ್ತ ಫಿಕ್ಸ್ ಆಗಿದೆ. ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದೆ. ಈ ಬಾರಿ ಅಕ್ಟೋಬರ್ 3ರಿಂದ 12ರವರೆಗೆ ಅದ್ಧೂರಿಯಾಗಿ ದಸರಾ ಆಚರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ದಸರಾ 2024 ಉನ್ನತ ಮಟ್ಟದ ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌, ಮೈಸೂರು ಜಿಲ್ಲಾ ಉಸ್ತುವಾರಿ ಮಹದೇವಪ್ಪ, ಸಚಿವರಾದ ಕೆ.ವೆಂಕಟೇಶ್, ಕೆಜೆ ಜಾರ್ಜ್‌, ಹಿರಿಯ ಶಾಸಕ ಜಿಟಿ ದೇವೇಗೌಡ ಸೇರಿ ಮೈಸೂರು-ಕೊಡಗು, ಚಾಮರಾಜನಗರ ಭಾಗದ ಶಾಸಕರು, ಎಂಎಲ್‌ಸಿಗಳು

ಮೈಸೂರು ದಸರಾಗೆ ಮುಹೂರ್ತ ಫಿಕ್ಸ್…ಅ. 3ರಿಂದ ಅದ್ಧೂರಿ ದಸರಾ ಆಚರಣೆ Read More »