Editor

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ/ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ

ಸಮಗ್ರ ನ್ಯೂಸ್‌: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನರಿಗೆ ಕೊಟ್ಟ ಭರವಸೆಯಂತೆ 5 ಪ್ರಮುಖ ಗ್ಯಾರಂಟಿಗಳನ್ನು ಜಾರಿಗೆ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ನಮ್ಮ ಸರ್ಕಾರ ಜನರಿಗೆ ಮಾತು ನೀಡಿದ್ದಂತೆ ಎಲ್ಲಾ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಅಧಿಕಾರಕ್ಕೆ ಬಂದು ಒಂದು ವರ್ಷ ಮೂರು ತಿಂಗಳಲ್ಲಿ ನಮ್ಮ ಐದು ಕಾರ್ಯಕ್ರಮಗಳನ್ನು ಜಾರಿ ಮಾಡಲಾಗಿದೆ. ಎಲ್ಲಾ ಧರ್ಮ, ಜಾತಿಯ ಬಡವರಿಗೆ ಈ ಕಾರ್ಯಕ್ರಮಗಳನ್ನು ತಲುಪಿಸುವ ಪ್ರಯತ್ನ ಮಾಡುತ್ತಿದ್ದೇವೆ. ವಿರೋಧ ಪಕ್ಷದವರು […]

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ/ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ Read More »

ಡೈರಿ ರಿಚ್ ಐಸ್ ಕ್ರೀಂ ಮಾಲೀಕರ ಸೊಸೆ ಸುಳ್ಯದ ಐಶ್ವರ್ಯ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಮರುಜೀವ| ನೂತನ ಪ್ರಾಸಿಕ್ಯೂಟರ್ ನೇಮಿಸಿದ ರಾಜ್ಯ ಸರ್ಕಾರ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕನಕಮಜಲು ಮೂಲದ ಮಹಿಳೆ ಐಶ್ವರ್ಯ ಬೆಂಗಳೂರಿನಲ್ಲಿ ಅನುಮಾನಾಸ್ಪದವಾಗಿ ಸಾವಿಗೆ ಶರಣಾಗಿದ್ದ ಪ್ರಕರಣಕ್ಕೆ ಮರುಜೀವ ನೀಡಲಾಗಿದ್ದು ನೂತನ ಪಬ್ಲಿಕ್‌ ಪ್ರಾಸಿಕ್ಯೂಟರ್‌ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಪರ ಹೈಕೋರ್ಟ್‌ಗೆ ಹಿರಿಯ ವಕೀಲ ಶ್ಯಾಮ್ ಸುಂದರ್ ಅವರನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ರಾಜ್ಯ ಸರ್ಕಾರ ನೇಮಿಸಿದೆ. 2023ರ ಅಕ್ಟೋಬರ್ 26ರಂದು ಸುಳ್ಯ ಮೂಲದ ಐಶ್ವರ್ಯ ಗೋವಿಂದರಾಜ ನಗರದ ತಮ್ಮ ತಂದೆಯ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.

ಡೈರಿ ರಿಚ್ ಐಸ್ ಕ್ರೀಂ ಮಾಲೀಕರ ಸೊಸೆ ಸುಳ್ಯದ ಐಶ್ವರ್ಯ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಮರುಜೀವ| ನೂತನ ಪ್ರಾಸಿಕ್ಯೂಟರ್ ನೇಮಿಸಿದ ರಾಜ್ಯ ಸರ್ಕಾರ Read More »

ಹೊರಗಡೆಯಿಂದ ಸೆರೆಮನೆ; ಒಳಗಡೆ ಅರಮನೆ| ದರ್ಶನ್ ಗೆ ಜೈಲೊಳಗೆ ರಾಜಮಾರ್ಯಾದೆ| ಜೈಲಿನಲ್ಲಿ ವಿಡಿಯೋ ಕಾಲ್ ಗೂ ಅನುಮತಿ ಇದ್ಯಾ?

ಸಮಗ್ರ ನ್ಯೂಸ್: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ಜೈಲಲ್ಲಿ ಐಷಾರಾಮಿ ಜೀವನ ಮಾಡುತ್ತಿರುವ ವಿಚಾರ ತಿಳಿದು ಬಂದಿದೆ. ನಟ ದರ್ಶನ್ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿದ್ದರೂ ಐಷಾರಾಮಿ ಜೀವನ ಮಾಡುತ್ತಿದ್ದು, ಮೊಬೈಲ್‌ನ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿರುವ ವಿಡಿಯೋ ಲಭ್ಯವಾಗಿವೆ. ಈಗಾಗಲೇ ನಟ ದರ್ಶನ್ ಜೈಲಿನಲ್ಲಿ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗನೊಂದಿಗೆ ಕುಳಿತು ಕಾಫಿ ಹೀರುತ್ತಾ, ಕೈಯಲ್ಲಿ ಸಿಗರೇಟ್ ಹಿಡಿದು ಸೇದುತ್ತಿರುವ ಫೋಟೋ ವೈರಲ್ ಆಗಿತ್ತು. ಬಳಿಕ ಜೈಲಿನಲ್ಲಿ ಮೊಬೈಲ್, ಫೋನ್

ಹೊರಗಡೆಯಿಂದ ಸೆರೆಮನೆ; ಒಳಗಡೆ ಅರಮನೆ| ದರ್ಶನ್ ಗೆ ಜೈಲೊಳಗೆ ರಾಜಮಾರ್ಯಾದೆ| ಜೈಲಿನಲ್ಲಿ ವಿಡಿಯೋ ಕಾಲ್ ಗೂ ಅನುಮತಿ ಇದ್ಯಾ? Read More »

ಆತ ಬರೀ ಭಗವಂತನಲ್ಲ; ಧರ್ಮದ ಸಾರಥಿ| ಬೆಣ್ಣೆ ಮೆತ್ತಿಕೊಂಡ ಹುಡುಗನ ಎತ್ತಿ ಕೊಂಡಾಡೋಣ ಬನ್ನಿ…

ಸಮಗ್ರ ವಿಶೇಷ: ಮಣ್ಣು ತಿಂದ ಬಾಯಲ್ಲಿ ಬ್ರಹ್ಮಾಂಡವನ್ನೇ ತೋರಿಸಿದರೂ ಆತ ಬರೀ ಭಗವಂತನಲ್ಲ, ಆತ ಬೆಣ್ಣೆ ಮೆತ್ತಿಕೊಂಡ ಪುಟ್ಟ ಹುಡುಗ. ಆದರೆ ಕೇವಲ ಬಾಲ್ಯಲೀಲೆಯ ತುಂಟ ಮಾತ್ರನಲ್ಲ, ಪೂತನಿಯ ಸಾವಿಗೆ ಕಾರಣನಾಗಿ, ಗೋವರ್ಧನ ಗಿರಿಧಾರಿಯಾಗಿ ಗೋಪಿಕೆಯರ ಜೊತೆಯಿದ್ದೂ ಪರಿಶುದ್ಧ ಪ್ರೇಮದ ಪ್ರತೀಕವಾಗುತ್ತಲೇ ತನ್ನಬಣ್ಣ ಮತ್ತು ಹೆಸರನ್ನೇ ಹೊತ್ತಿದ್ದ ಕೃಷ್ಣೆಗೆ (ದ್ರ್ರೌಪದಿ) ಅಕ್ಷಯವಸ್ತ್ರ ನೀಡಿದ ದಯಾಳುವಾಗಿ ಕಂಡವನು. ದ್ರೌಪದಿ ಸಮೇತ ಪಾಂಡವರನ್ನು ದೂರ್ವಾಸ ಮುನಿಯ ಕೋಪದಿಂದ ತಪಿಸಲು ಅನ್ನದ ಅಗುಳು ತಿಂದು ಕಾಪಾಡಿದವನು. ಕಾಳಿಂಗಮರ್ದನಕ್ಕೆ ಸೆಟೆದು ನಿಂತವನು. ಸತ್ಯಭಾಮೆಯ

ಆತ ಬರೀ ಭಗವಂತನಲ್ಲ; ಧರ್ಮದ ಸಾರಥಿ| ಬೆಣ್ಣೆ ಮೆತ್ತಿಕೊಂಡ ಹುಡುಗನ ಎತ್ತಿ ಕೊಂಡಾಡೋಣ ಬನ್ನಿ… Read More »

ಮಡಿಕೇರಿ: ಲಾರಿ – ಟ್ಯಾಂಕರ್ ನಡುವೆ ಡಿಕ್ಕಿ; ಓರ್ವ ಸಾವು

ಸಮಗ್ರ ನ್ಯೂಸ್: ಲಾರಿ ಮತ್ತು ಟ್ಯಾಂಕರ್ ನಡುವೆ ಢಿಕ್ಕಿ ಸಂಭವಿಸಿ ಓರ್ವ ಸಾವನ್ನಪ್ಪಿರುವ ಘಟನೆ ಗುಡ್ಡೆಹೊಸೂರುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಕುಶಾಲನಗರದಿಂದ ಸುಂಟಿಕೊಪ್ಪಕ್ಕೆ ಬರುತ್ತಿದ್ದ ಲಾರಿ ಮತ್ತು ಕುಶಾಲನಗರದ ಕಡೆ ತೆರಳುತ್ತಿದ್ದ ಟ್ಯಾಂಕರ್ ನಡುವೆ ಢಿಕ್ಕಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಲಾರಿಯಲ್ಲಿದ್ದ ಸುಂಟಿಕೊಪ್ಪದ ಕಾರ್ಮಿಕ ರಾಜು ಎಂದು ಗುರುತಿಸಲಾಗಿದೆ. ಲಾರಿ ಚಾಲಕ 7ನೇ ಹೊಸಕೋಟೆಯ ಜಬ್ಬಾರ್ ಅವರಿಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಡಿಕೇರಿ: ಲಾರಿ – ಟ್ಯಾಂಕರ್ ನಡುವೆ ಡಿಕ್ಕಿ; ಓರ್ವ ಸಾವು Read More »

ಸಿಗರೇಟು ಸೇದುತ್ತಾ, ಕಾಫಿ ಕುಡಿಯುತ್ತಿರುವ ದರ್ಶನ್.. ಜೈಲಿನಲ್ಲಿ ದಾಸನಿಗೆ ರಾಜಾತ್ಯಿಥ್ಯ…?

ಸಮಗ್ರ ನ್ಯೂಸ್: ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಜೈಲು ಸೇರಿದ್ದು, ಆದರೆ ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆಯಾ ಎಂಬ ಅನುಮಾನ ಇದೀಗ ಮೂಡಿದೆ. ಹೌದು ದರ್ಶನ್ ಅವರ ಒಂದು ಫೋಟೋ ವೈರಲ್ ಆಗಿದೆ. ಅದರಲ್ಲಿ ಅವರು ಸಿಗರೇಟು ಸೇದುತ್ತಾ, ಕಾಫಿ ಕುಡಿಯುತ್ತಿರುವ ದೃಶ್ಯ ಸೆರೆಯಾಗಿದೆ. ವೈರಲ್ ಆಗಿರುವ ಫೋಟೋದಿಂದ ಅನೇಕ ಅನುಮಾನಗಳು ಮೂಡಿವೆ. ದರ್ಶನ್ ಅವರು ಸ್ಪೆಷಲ್ ಬ್ಯಾಂಕ್ನಲ್ಲಿ ಇದ್ದು, ಇದೀಗ ಅಲ್ಲಿಂದ ಹೊರಬಂದು, ಮೂವರ ಜೊತೆ ಕುಳಿತು ಹರಟೆ ಹೊಡೆಯುತ್ತಿದ್ದಾರೆ. ಕಾಫಿ

ಸಿಗರೇಟು ಸೇದುತ್ತಾ, ಕಾಫಿ ಕುಡಿಯುತ್ತಿರುವ ದರ್ಶನ್.. ಜೈಲಿನಲ್ಲಿ ದಾಸನಿಗೆ ರಾಜಾತ್ಯಿಥ್ಯ…? Read More »

ಕಾರ್ಕಳದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿಲ್ಲ| ಉಡುಪಿ ಪಶ್ಚಿಮ ವಲಯ ಐಜಿಪಿ ಸ್ಪಷ್ಟನೆ

ಸಮಗ್ರ ನ್ಯೂಸ್: ಕಾರ್ಕಳದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ ಎಂದು ಉಡುಪಿ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ಹಿಂದೂ ಯುವತಿಯನ್ನು ಕೇವಲ 3 ತಿಂಗಳಲ್ಲಿ ಪುಸಲಾಯಿಸಿದ ಆರೋಪಿ ಅಲ್ತಾಫ್ ಹಾಗೂ ಯುವಕರಿಬ್ಬರು, ಕಾರಿನಲ್ಲಿ ಪಾರ್ಟಿ ಮಾಡುವುದಾಗಿ ಕರೆದೊಯ್ದು ಬಿಯರ್‌ನಲ್ಲಿ ಡ್ರಗ್ಸ್ ಮಿಶ್ರಣ ಮಾಡಿ ಕೊಟ್ಟು ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿದ್ದಾರೆ. ಇದರಲ್ಲಿ ಯುವಕ ಅಲ್ತಾಫ್ ಅತ್ಯಾಚಾರ ಮಾಡಿದ್ದು, ಇದು ಗ್ಯಾಂಗ್ ರೇಪ್ ಅಲ್ಲವೆಂದು ಉಡುಪಿ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್

ಕಾರ್ಕಳದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿಲ್ಲ| ಉಡುಪಿ ಪಶ್ಚಿಮ ವಲಯ ಐಜಿಪಿ ಸ್ಪಷ್ಟನೆ Read More »

ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ ಪ್ರಕರಣ| ಶಾಸಕ ಹರೀಶ್ ಪೂಂಜಾಗೆ ಮತ್ತೆ ರಿಲೀಫ್

ಸಮಗ್ರ ನ್ಯೂಸ್: ಪರವಾನಗಿ ಪಡೆಯದೆ ಅಕ್ರಮವಾಗಿ ಗಣಿಗಾರಿಕೆ ನಡೆಸಿದ ಹಾಗೂ ಸ್ಫೋಟಕ ವಸ್ತುಗಳನ್ನು ದಾಸ್ತಾನು ಮಾಡಿದ್ದ ವ್ಯಕ್ತಿಯೋರ್ವನ ಬಂಧನ ಖಂಡಿಸಿ ಪೊಲೀಸ್‌ ಠಾಣೆ ಮುಂದೆ ಪ್ರತಿಭಟಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ವಿರುದ್ಧ ದಾಖಲಿಸಲಾದ ಪ್ರಕರಣ ಸಂಬಂಧ ನೀಡಿದ ಮಧ್ಯಂತರ ತಡೆಯನ್ನು ಹೈಕೋರ್ಟ್‌ ಪುನಃ ವಿಸ್ತರಿಸಿದೆ. ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಶಾಸಕ ಹರೀಶ್‌ ಪೂಂಜ ಸಲ್ಲಿಸಿದ್ದ ಅರ್ಜಿಯ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ

ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ ಪ್ರಕರಣ| ಶಾಸಕ ಹರೀಶ್ ಪೂಂಜಾಗೆ ಮತ್ತೆ ರಿಲೀಫ್ Read More »

ಪುತ್ತೂರು: ಚೂರಿ ಇರಿದಿದ್ದಾನೆಂದು ಸುಳ್ಳು ದೂರು ನೀಡಿದ ವಿದ್ಯಾರ್ಥಿನಿಯ ವಜಾಗೊಳಿಸಲು ಮನವಿ

ಸಮಗ್ರ ನ್ಯೂಸ್: ‘ಹರಿತ ಆಯುಧದಿಂದ ಕೈಗೆ ಇರಿಯಲಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿ ಮೇಲೆ ಸುಳ್ಳು ದೂರು ನೀಡಿ ಆತನ ಮಾನಹಾನಿ ಮಾಡಿರುವ ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ವಜಾಗೊಳಿಸಬೇಕು’ ಎಂದು ಕಾಲೇಜಿನ ವಿದ್ಯಾರ್ಥಿ ಸಂಘಟನೆಯವರು ಕಾಲೇಜಿನ ಪ್ರಾಂಶುಪಾಲರಿಗೆ ಮತ್ತು ಪುತ್ತೂರು ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ಸತೀಶ್ ಜಿ.ಜೆ.ಅವರಿಗೆ ಮನವಿ ಸಲ್ಲಿಸಿದ್ದಾರೆ. ಸುಳ್ಳು ದೂರು ದಾಖಲಾಗಿರುವ ಸಂತ್ರಸ್ತ ವಿದ್ಯಾರ್ಥಿಯ ಪೊಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಲಾಗುತ್ತಿದ್ದು, ಅವರ ವಿರುದ್ಧವೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಸುಳ್ಳು ದೂರು ನೀಡಿರುವ

ಪುತ್ತೂರು: ಚೂರಿ ಇರಿದಿದ್ದಾನೆಂದು ಸುಳ್ಳು ದೂರು ನೀಡಿದ ವಿದ್ಯಾರ್ಥಿನಿಯ ವಜಾಗೊಳಿಸಲು ಮನವಿ Read More »

ಉಡುಪಿಯಲ್ಲಿ ಪತ್ನಿಯನ್ನು ಕಡಿದು ಕೊಂದು ಹಾಕಿದ ಪತಿ!

ಸಮಗ್ರ ನ್ಯೂಸ್: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳ್ಳಂಬೆಳಗ್ಗೆ ನೆತ್ತರು ಹರಿದಿದೆ. ಪತಿಯೇ ತನ್ನ ಪತ್ನಿಯನ್ನು ಕಡಿದು ಕೊಲೆ ಮಾಡಿರುವ ಶಂಕೆ ಇದೆ. ಜಯಶ್ರೀ (28) ಕೊಲೆಯಾದವಳು. ಕಿರಣ್ ಉಪಾಧ್ಯ(30) ಕೊಲೆ ಆರೋಪಿಯಾಗಿದ್ದಾನೆ. ಉಡುಪಿಯಲ್ಲಿ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಕಾರ್ಕಡ ಕಡಿದ ಹೆದ್ದಾರಿ ಬಳಿ ಘಟನೆ ನಡೆದಿದೆ. ಈ ಜೋಡಿ ಕಾರ್ಕಡ ಅಂಗನವಾಡಿ ಕೇಂದ್ರದ ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಶುಕ್ರವಾರ ಮುಂಜಾನೆ ಪತ್ನಿಯನ್ನು ಕಿರಣ್ ಉಪಾಧ್ಯ ಕೊಲೆ ಮಾಡಿದ್ದ ಎನ್ನುವ ಮಾಹಿತಿ ಇದೆ. ಶಂಕೆ ಮೇರೆಗೆ

ಉಡುಪಿಯಲ್ಲಿ ಪತ್ನಿಯನ್ನು ಕಡಿದು ಕೊಂದು ಹಾಕಿದ ಪತಿ! Read More »