Editor

ನೀಲೇಶ್ವರ ಪಟಾಕಿ ಅವಘಡ; ಆಸ್ಪತ್ರೆಯಲ್ಲಿ ಮೂವರ ಸ್ಥಿತಿ ಗಂಭೀರ

ಸಮಗ್ರ ನ್ಯೂಸ್: ನೀಲೇಶ್ವರದ ದೈವಸ್ಥಾನದಲ್ಲಿ ಕಳಿಯಾಟ ಮಹೋತ್ಸವ ವೇಳೆ ಅ.28 ರಂದು ರಾತ್ರಿ ಸಂಭವಿಸಿದ ಸುಡುಮದ್ದು ದುರಂತದಲ್ಲಿ ಗಾಯಗೊಂಡವರ ಪೈಕಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿ ಡಾ | ತಿಮ್ಮಯ್ಯ ತಿಳಿಸಿದ್ದಾರೆ. ಎ.ಜೆ ಆಸ್ಪತ್ರೆಯಲ್ಲಿ ಒಟ್ಟು 26 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 7 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಮೂವರು ಸಾಮಾನ್ಯ ಗಾಯಗಳೊಂದಿಗೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಹಾಗೂ ಓರ್ವರು […]

ನೀಲೇಶ್ವರ ಪಟಾಕಿ ಅವಘಡ; ಆಸ್ಪತ್ರೆಯಲ್ಲಿ ಮೂವರ ಸ್ಥಿತಿ ಗಂಭೀರ Read More »

ಗ್ಯಾರಂಟಿ ಯೋಜನೆ’ ಬಗ್ಗೆ ಲಘುವಾಗಿ ಮಾತನಾಡಬೇಡಿ : ರಾಜ್ಯದ ‘ಕೈ’ ನಾಯಕರಿಗೆ ಹೈಕಮಾಂಡ್ ಎಚ್ಚರಿಕೆ ಸಂದೇಶ.!

ಸಮಗ್ರ ನ್ಯೂಸ್: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.ಗ್ಯಾರಂಟಿ ಯೋಜನೆ ಬಗ್ಗೆ ಲಘುವಾಗಿ ಮಾತನಾಡಬೇಡಿ.ಶಕ್ತಿ ಯೋಜನೆ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಮಹಿಳಾ ಮತಗಳ ಮೇಲೆ ಪರಿಣಾಮ ಬೀರಲಿದೆ. ಮಹಾರಾಷ್ಟ್ರದಲ್ಲಿ ಗ್ಯಾರಂಟಿ ಯೋಜನೆ ಜಾರಿಯಾಗಬೇಕಿದೆ ಎಂದು ಸೂಚನೆ ನೀಡಿದ್ದಾರೆ.ಗ್ಯಾರಂಟಿ ಯೋಜನೆಗಳ ಬಗ್ಗೆ ಸರ್ಕಾರದ ಬದ್ಧತೆಯ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುವ ಹೇಳಿಕೆಗಳ ಬಗ್ಗೆ ಕರ್ನಾಟಕದ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅ.31 ರಂದು ನಿರಾಕರಿಸಿದ್ದಾರೆ. ಖರ್ಗೆ ಈ ವಿಚಾರವನ್ನು

ಗ್ಯಾರಂಟಿ ಯೋಜನೆ’ ಬಗ್ಗೆ ಲಘುವಾಗಿ ಮಾತನಾಡಬೇಡಿ : ರಾಜ್ಯದ ‘ಕೈ’ ನಾಯಕರಿಗೆ ಹೈಕಮಾಂಡ್ ಎಚ್ಚರಿಕೆ ಸಂದೇಶ.! Read More »

ವಿಜಯಪುರದಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವ ಸಂಭ್ರಮ

ಸಮಗ್ರ ನ್ಯೂಸ್: ಜಿಲ್ಲೆಯಾದ್ಯಂತ ಸುವರ್ಣ ಕರ್ನಾಟಕ ರಾಜ್ಯೋತ್ಸವವನ್ನು, ಸಂಭ್ರಮ, ಸಡಗರರಿಂದ ಅದ್ದೂರಿಯಾಗಿ ಆಚರಿಸಲಾಯಿತು.ನಗರದ ಡಾ.ಬಿ.ಆ‌ರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಧ್ವಜಾರೋಹಣ ನೆರವೇರಿಸಿದರು. ಭಾರತಕ್ಕೆ ಬಲವಾಗಿ ಚಿರಕಾಲ ಬೆಳಗಲಿ ಕನ್ನಡದ ದೀಪ, ಉಳಿಸೋಣ, ಬೆಳೆಸೋಣ ಕನ್ನಡ ಎಂದು ಹೇಳಿದರು.ಪೊಲೀಸ್, ಸೈಟ್ ಮತ್ತು ಗೈಡ್ಸ್, ಎನ್ ಸಿಸಿ, ಎನ್ ಎಸ್ ಎಸ್, ಗೃಹ

ವಿಜಯಪುರದಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವ ಸಂಭ್ರಮ Read More »

ಹೊಲದಲ್ಲಿ ಹಾವು ಹೊಡೆದು ಕೊಂದ ವ್ಯಕ್ತಿ, 1 ಗಂಟೆಯೊಳಗೆ ಸೇಡು ತೀರಿಸಿಕೊಂಡ ಮತ್ತೊಂದು ಹಾವು.!

ಸಮಗ್ರ ನ್ಯೂಸ್:ಹೊಲದಲ್ಲಿ ವ್ಯಕ್ತಿಯೋರ್ವ ಹಾವನ್ನು ಹೊಡೆದು ಕೊಂದಿದ್ದಾನೆ. ಹಾವು ಹೊಡೆದು ಕೊಂದ 1 ಗಂಟೆಯೊಳಗೆ ಮತ್ತೊಂದು ಹಾವು ಆತನನ್ನು ಕೊಂದು ಸೇಡು ತೀರಿಸಿಕೊಂಡಿದೆ. ಇಂತಹ ಪ್ರಕರಣವೊಂದು ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಗೋವಿಂದ್ ಕಶ್ಯಪ್ (32) ಹೊಲಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಗ್ರಾಮದ ನಿವಾಸಿ ಅತುಲ್ ಸಿಂಗ್ ಮಂಗಳವಾರ ಬೆಳಿಗ್ಗೆ ಹೊಲದಲ್ಲಿ ಭತ್ತದ ಕೊಯ್ದು ಮಾಡಿದ ನಂತರ ಹುಲ್ಲು ಸಂಗ್ರಹಿಸುತ್ತಿದ್ದರು. ಈ ಸಮಯದಲ್ಲಿ, ಒಂದು ಹಾವು ಹೊರಬಂದಿತು. ತಕ್ಷಣ, ಅವನು ಅದನ್ನು ಕೋಲಿನಿಂದ

ಹೊಲದಲ್ಲಿ ಹಾವು ಹೊಡೆದು ಕೊಂದ ವ್ಯಕ್ತಿ, 1 ಗಂಟೆಯೊಳಗೆ ಸೇಡು ತೀರಿಸಿಕೊಂಡ ಮತ್ತೊಂದು ಹಾವು.! Read More »

ಕನ್ನಡ ರಾಜ್ಯೋತ್ಸವ| ಶುಭಕೋರಿದ ಪ್ರಧಾನಿ ಮೋದಿ

ಸಮಗ್ರ ನ್ಯೂಸ್ : ಇಂದು ಕನ್ನಡ ರಾಜ್ಯೋತ್ಸವ, ಕನ್ನಡಿಗರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲೇ ಕನ್ನಡ ರಾಜ್ಯೋತ್ಸವದಂದು ಶುಭಾಶಯ ಕೋರಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ತಮ್ಮ ಶುಭಾಶಯವನ್ನು ಕನ್ನಡದಲ್ಲಿಯೇ ಪೋಸ್ಟ್ ಮಾಡಿರುವ ಅವರು, ‘ಕನ್ನಡ ರಾಜ್ಯೋತ್ಸವವು ಅತ್ಯಂತ ವಿಶೇಷವಾದ ಸಂದರ್ಭವಾಗಿದ್ದು, ಇದು ಕರ್ನಾಟಕದ ಅನುಕರಣೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗುರುತಿಸುತ್ತದೆ”, ಎಂದು ತಿಳಿಸಿದ್ದಾರೆ. “ರಾಜ್ಯವು ಮಹಾನ್ ವ್ಯಕ್ತಿಗಳನ್ನು ಪಡೆದಿದ್ದು, ಅವರು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮತ್ತು ನಾವೀನ್ಯತೆಗೆ ಶಕ್ತಿ ತುಂಬುತ್ತಿದ್ದಾರೆ. ಕರ್ನಾಟಕದ ಜನರು ಸದಾ

ಕನ್ನಡ ರಾಜ್ಯೋತ್ಸವ| ಶುಭಕೋರಿದ ಪ್ರಧಾನಿ ಮೋದಿ Read More »

ವರ್ಕ್ಸ್ ಬೋರ್ಡನಿಂದ ಆಸ್ತಿ ಕಬಳಿಕೆಗೆ ಯತ್ನ :ಸುರೇಶ್ ತೆರದಾಳ್ ಅವರ ಕುಟುಂಬಕ್ಕೆ ಮಾನವೀಯತೆಯೇ ಮುಳುವಾಯಿತೇ?

ಸಮಗ್ರ ನ್ಯೂಸ್: ವಿಜಯಪುರದ ಹೊನ್ನುಟಗಿ ಗ್ರಾಮದಲ್ಲಿ ಸೌಹಾರ್ದತೆಯಿಂದ ಮುಸ್ಲಿಂ ಸಮುದಾಯದ ಅಂತ್ಯಸಂಸ್ಕಾರಕ್ಕಾಗಿ ಸುರೇಶ್ ತೆರದಾಳ್ ಅವರು ತುಸು ಜಾಗ ನೀಡಿದ್ದ ಹಿನ್ನೆಯಲ್ಲಿ, ಹಿಂದೂ ಕುಟುಂಬಕ್ಕೆ ವಕ್ಸ್ ಬೋರ್ಡ್ ನಿಂದ ಆಸ್ತಿಯ ಹಕ್ಕು ಪಡೆಯಲು ನೋಟಿಸ್ ನೀಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.ಈ ಜಾಗದ ಹಕ್ಕಿಗೆ ಯಾವುದೇ ದಾಖಲೆ ನೀಡದ ಕಾರಣದಿಂದ, ಈಗ ವಕ್ಸ್ ಬೋರ್ಡ್ ಈ ಜಾಗ ಸೇರಿದಂತೆ 13.8 ಎಕರೆ ಭೂಮಿಯನ್ನು ತನ್ನದಾಗಿ ಘೋಷಿಸಿದೆ. ಸರ್ಕಾರವು ರೈತರ ಜಮೀನುಗಳನ್ನು ತೆಗೆದುಕೊಳ್ಳುವುದಿಲ್ಲವೆಂದು ಹೇಳಿದಂತೆಯೇ, ಅವರ ಜಮೀನಿನ ಪಹಣಿಯಲ್ಲಿ ವರ್ಕ್ಸ್

ವರ್ಕ್ಸ್ ಬೋರ್ಡನಿಂದ ಆಸ್ತಿ ಕಬಳಿಕೆಗೆ ಯತ್ನ :ಸುರೇಶ್ ತೆರದಾಳ್ ಅವರ ಕುಟುಂಬಕ್ಕೆ ಮಾನವೀಯತೆಯೇ ಮುಳುವಾಯಿತೇ? Read More »

ರಾಜ್ಯದಲ್ಲಿ ಮಹಿಳೆಯರ ಉಚಿತ ಬಸ್‌ ಪ್ರಯಾಣದ `ಶಕ್ತಿ’ ಯೋಜನೆ ಸ್ಥಗಿತ : CM ಸಿದ್ದರಾಮಯ್ಯ ಸ್ಪಷ್ಟನೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಶಕ್ತಿ ಯೋಜನೆ ಪರಿಷ್ಕರಣೆ ಕುರಿತಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಶಕ್ತಿ ಯೋಜನೆ ಪರಿಷ್ಕರಣೆ ಸರ್ಕಾರದ ಹಂತದಲ್ಲಿಲ್ಲ ಎಂದು ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಕ್ತಿ ಯೋಜನೆ ಪರಿಷ್ಕರಣೆ ಉದ್ದೇಶ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ. ಅನೇಕ ಮಂದಿ ಹೆಣ್ಣು ಮಕ್ಕಳು ನಮಗೆ ಟಿಕೆಟ್ ತೆಗೆದುಕೊಳ್ಳುವ ಶಕ್ತಿಯಿದೆ. ಉಚಿತ ಪ್ರಯಾಣ ಬೇಡ ಎಂದು ಟ್ವಿಟ್ ಹಾಗೂ ಇ-ಮೇಲ್ ಮೂಲಕ ವಿಚಾರ ತಿಳಿಸುತ್ತಿದ್ದಾರೆ. ಈ ಬಗ್ಗೆ ನಾವು ಚರ್ಚೆ ಮಾಡುತ್ತೇವೆ. “ನಾವು ಹಣ ಕೊಡಲು ಮುಂದಾದರೂ,

ರಾಜ್ಯದಲ್ಲಿ ಮಹಿಳೆಯರ ಉಚಿತ ಬಸ್‌ ಪ್ರಯಾಣದ `ಶಕ್ತಿ’ ಯೋಜನೆ ಸ್ಥಗಿತ : CM ಸಿದ್ದರಾಮಯ್ಯ ಸ್ಪಷ್ಟನೆ Read More »

ಹಾಸನಾಂಬೆ ದರ್ಶನದ ಎಲ್ಲಾ ಪಾಸ್‌ ರದ್ದು: ಆಡಳಿತ ಮಂಡಳಿ ಆದೇಶ

ಸಮಗ್ರ ನ್ಯೂಸ್: ಜಿಲ್ಲೆಯ ಶಕ್ತಿ ದೇವತೆ ಹಾಸನಾಂಬ ತಾಯಿಯ ದರ್ಶನಕ್ಕೆ ಜನರು ಸಾಲುಗಟ್ಟಿ ನಿಂತಿದ್ದಾರೆ. ಭಕ್ತರ ಸಂಖ್ಯೆ ಹೆಚ್ಚಾಗಿ ಜನಜಂಗುಳಿ ಏರ್ಪಟ್ಟ ಹಿನ್ನೆಲೆಯಲ್ಲಿ ಹಾಸನಾಂಬ ಆಡಳಿತ ಮಂಡಳಿಯಿಂದ ಎಲ್ಲಾ ಪಾಸ್ ರದ್ದುಮಾಡಿ ಆದೇಶಿಸಿದೆ. ಸದ್ಯ ಸರದಿ ಸಾಲಿನಲ್ಲಿ ನಿಂತಿರುವ ಭಕ್ತರ ಪಾಸ್‌ ಹೊರತಾಗಿ ಬೇರೆ ಎಲ್ಲಾ ಪಾಸ್ ರದ್ದು ಮಾಡಿರುವುದಾಗಿ ತಿಳಿಸಿದೆ.ಹಾಸನಾಂಬೆ ದರ್ಶನಕ್ಕೆ ಈಗ ಮಳೆ ಅಡ್ಡಿಯಾಗಿದೆ. ಭಾರೀ ಮಳೆಯ ಕಾರಣದಿಂದ ಮಕ್ಕಳು, ಜನರು ಪರದಾಡುವಂತೆ ಆಗಿದೆ. ಅಲ್ಲದೇ ಭಕ್ತರನ್ನು ನಿಯಂತ್ರಣ ಮಾಡಲು ಪೊಲೀಸರು ಹರಸಾಹಸ ಪಡುವಂತೆ

ಹಾಸನಾಂಬೆ ದರ್ಶನದ ಎಲ್ಲಾ ಪಾಸ್‌ ರದ್ದು: ಆಡಳಿತ ಮಂಡಳಿ ಆದೇಶ Read More »

ಗುಜರಾತ್‌’ನಲ್ಲಿ ಯೋಧರಿಗೆ ಸಿಹಿ ತಿನ್ನಿಸಿ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

ಸಮಗ್ರ ನ್ಯೂಸ್: ದೇಶಾದ್ಯಮತ ಸಂಭ್ರಮ, ಸಡಗರದಿಂದ ದೀಪಾವಳಿ ಹಬ್ಬ ಆಚರಿಸಲಾಗುತ್ತಿದ್ದು,ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷದ ಹಾಗೆ ಈ ವರ್ಷವೂ ಕೂಡ ಗುಜರಾತ್‌ನ ಕಚ್‌ನಲ್ಲಿ ಸೈನಿಕರರಿಗೆ ಸಿಹಿ ತಿನ್ನಿಸಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದಾರೆ.

ಗುಜರಾತ್‌’ನಲ್ಲಿ ಯೋಧರಿಗೆ ಸಿಹಿ ತಿನ್ನಿಸಿ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ Read More »

ನಾಳೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ಕನ್ನಡ ರಾಜ್ಯೋತ್ಸವ’ ಆಚರಣೆ ಕಡ್ಡಾಯ

ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯ ಉದಯವಾಗಿ 70 ವರ್ಷ ಸಂದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ನವೆಂಬ‌ರ್ 1ರಂದು ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವ ಆಚರಿಸಬೇಕೆಂದು ಶಾಲಾ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ರಾಜ್ಯದ ಎಲ್ಲಾ ಶಾಲೆ, ಕಾಲೇಜುಗಳು, ಐಟಿ, ಬಿಟಿ ಸಂಸ್ಥೆಗಳಲ್ಲಿಯೂ ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವ ಆಚರಿಸುವಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಟಿಪ್ಪಣಿ ಹೊರಡಿಸಿ ಸೂಚನೆ ನೀಡಿದ್ದಾರೆ.

ನಾಳೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ಕನ್ನಡ ರಾಜ್ಯೋತ್ಸವ’ ಆಚರಣೆ ಕಡ್ಡಾಯ Read More »