ಸುಳ್ಯ: ಆತ್ಮಹತ್ಯೆಗೆ ಯತ್ನಿಸಿದ್ದ ಅಡಿಕೆ ವ್ಯಾಪಾರಿ ಚಿಕಿತ್ಸೆ ಫಲಿಸದೇ ಸಾವು| ಶೇಟುಗಳ ಮೋಸದಾಟಕ್ಕೆ ಬಲಿಯಾದರೇ ಯುವ ಉದ್ಯಮಿ?
ಸಮಗ್ರ ನ್ಯೂಸ್: ಕೆಲದಿನಗಳ ಹಿಂದೆ ಆತ್ಮಹತ್ಯೆಗೆ ಪ್ರಯತ್ನಿಸಿ ಮಂಗಳೂರಿನ ಎಜೆ ಆಸ್ಪತ್ರೆಯೊಂದರ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಳ್ಯದ ಯುವ ಅಡಿಕೆ ವ್ಯಾಪಾರಿ ಕೋಲ್ಚಾರಿನ ಅಭಿಲಾಷ್ ಕೊಲ್ಲರಮೂಲೆ (29 ವ) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅಭಿಲಾಷ್ ಸುಳ್ಯದ ಗಾಂಧಿನಗರದಲ್ಲಿ ಪಾಲುದಾರಿಕೆಯಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿದ್ದರು. ಸುಳ್ಯ ಭಾಗಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಿಂದೂ ಸಂಘಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಅಡಿಕೆ ಶೇಟ್ ಗಳಿಂದ ಮೋಸ ..?ಅಡಿಕೆ ವ್ಯಾಪಾರಿಗಳಿಂದ ಇತ್ತಿಚೆಗೆ ಸಾವಿರಾರು ಕ್ವಿಂಟಾಲ್ ಅಡಿಕೆ ಉತ್ತರ ಭಾರತದ ಕಡೆ ಹೋಗಿತ್ತು. […]









