Editor

ಉಪ್ಪಿನಂಗಡಿ: ನೆಲ್ಯಾಡಿಯಲ್ಲಿ ಡಿವೈಡರ್ ಗೆ ಗುದ್ದಿದ ಕಾರು; ಓರ್ವ ಸಾವು

ಸಮಗ್ರ ನ್ಯೂಸ್: ಮಂಗಳೂರು-ಬೆಂಗಳೂರು ರಾಷ್ಟೀಯ ಹೆದ್ದಾರಿ 75ರ ದಕ್ಷಿಣ ಕನ್ನಡದ ನೆಲ್ಯಾಡಿಯಲ್ಲಿ ಕಾರು ಅಪಘಾತಕ್ಕೀಡಾಗಿ ಓರ್ವ ಸಾವನ್ನಪ್ಪಿದ್ದಾರೆ. ಭಾನುವಾರ ಸಂಜೆ ಈ ದುರ್ಘಟನೆ ಸಂಭವಿಸಿದ್ದು, ನೆಲ್ಯಾಡಿ ಸಮೀಪದ ಮಣ್ಣಗುಂಡಿಯಲ್ಲಿ ಕಾರೊಂದು ಡಿವೈಡರ್‌ಗೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರೋರ್ವರು ಮೃತಪಟ್ಟಿದ್ದಾರೆ. ಮೃತರು ಕುಂಬ್ರ ನಿವಾಸಿ ಅರಿಯಡ್ಕ ಗ್ರಾಮದ ಪಯಂದೂರು ನಿವಾಸಿ ಜಗದೀಶ್ (26) ಎಂದು ಗುರುತಿಸಲಾಗಿದೆ. ಕಾರು ಚಾಲಕ ಸಚಿನ್ ಸಣ್ಣ ಪುಟ್ಟ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ. ಇವರನ್ನು ಒಳಗೊಂಡ ಸ್ನೇಹಿತರ ತಂಡ 5 ಕಾರುಗಳಲ್ಲಿ ಶಿರಾಡಿ ಗಡಿ […]

ಉಪ್ಪಿನಂಗಡಿ: ನೆಲ್ಯಾಡಿಯಲ್ಲಿ ಡಿವೈಡರ್ ಗೆ ಗುದ್ದಿದ ಕಾರು; ಓರ್ವ ಸಾವು Read More »

ಪುತ್ತೂರು: ಮೃತ ಕಾರ್ಮಿಕನ ಶವವನ್ನು ಮನೆ ಮುಂದೆ‌ ಇರಿಸಿ ಹೋದ ಪ್ರಕರಣ| ಪ್ರಕರಣ ದಾಖಲಿಸಿಕೊಂಡ ಪೊಲೀಸರು

ಸಮಗ್ರ ನ್ಯೂಸ್: ಸಿಮೆಂಟ್ ಸಾರಣೆ ಕೆಲಸದ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಶಿವಪ್ಪ (69) ಎಂಬುವರು ಕೆಲಸದ ವೇಳೆ ಮೃತಪಟ್ಟಿದ್ದು, ಅವರ ಮೃತದೇಹವನ್ನು ಪಿಕಪ್ ವಾಹನದಲ್ಲಿ ತಂದು ಅವರ ಮನೆಯ ಸಮೀಪದ ರಸ್ತೆ ಬದಿಯಲ್ಲಿ ಇರಿಸಿಹೋದ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹ ಸಾಗಿಸಲು ಬಳಸಿದ ಪಿಕಪ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ‘ನ.16ರಂದು ಬೆಳಿಗ್ಗೆ ತಂದೆಯವರು ಮನೆಯಲ್ಲಿದ್ದ ವೇಳೆ ಸಾಲ್ಮರದ ತಾವ್ರೊ ಇಂಡಸ್ಟ್ರೀಸ್ ಸಂಸ್ಥೆಯ ಹೆನ್ರಿ ತಾವ್ರೊ ಅವರು ಬಂದು ಕೆಲಸಕ್ಕೆಂದು ಅವರನ್ನು

ಪುತ್ತೂರು: ಮೃತ ಕಾರ್ಮಿಕನ ಶವವನ್ನು ಮನೆ ಮುಂದೆ‌ ಇರಿಸಿ ಹೋದ ಪ್ರಕರಣ| ಪ್ರಕರಣ ದಾಖಲಿಸಿಕೊಂಡ ಪೊಲೀಸರು Read More »

ದಕ್ಷಿಣ ಕನ್ನಡದಲ್ಲಿ ಸುರಿದ‌ ಭಾರೀ ಮಳೆ|‌ ಕೆದಿಲದಲ್ಲಿ ಸಿಡಿಲಿಗೆ ಬಾಲಕ ಬಲಿ

ಸಮಗ್ರ ನ್ಯೂಸ್: ಭಾನುವಾರ (ನ.17) ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದೆ. ಸಿಡಿಲು ಮಿಂಚಿನೊಂದಿಗೆ ಭಾರಿ ಮಳೆಯಾಗಿದ್ದು, ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಪುತ್ತೂರು, ಕಡಬ, ಬಂಟ್ವಾಳ ಹಾಗೂ ಮಂಗಳೂರಿನ ಕೆಲವೆಡೆ ಮಳೆಯಾಗಿದೆ. ಬೆಳ್ತಂಗಡಿ ತಾಲೂಕಿನ ವಿವಿಧ ಭಾಗಗಳಲ್ಲಿಯೂ ಸಂಜೆ ವೇಳೆ ವರುಣನ ಅಬ್ಬರವಾಗಿದೆ. ಈ ನಡುವೆ ಬಂಟ್ವಾಳ ತಾಲೂಕಿನ ಕೆದಿಲದಲ್ಲಿ ಸಿಡಿಲಾಘಾತಕ್ಕೆ ಕುಸಿದು ಬಿದ್ದು ಹೈಸ್ಕೂಲ್ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಗಡಿಯಾರ ಸಮೀಪ ಮುರಿಯಾಜೆ ಮನೆಯ ಚಂದ್ರಹಾಸ

ದಕ್ಷಿಣ ಕನ್ನಡದಲ್ಲಿ ಸುರಿದ‌ ಭಾರೀ ಮಳೆ|‌ ಕೆದಿಲದಲ್ಲಿ ಸಿಡಿಲಿಗೆ ಬಾಲಕ ಬಲಿ Read More »

ಅಡಿಕೆ ಬೆಳೆ ಮೇಲೆ ನಿಷೇಧದ ತೂಗುಗತ್ತಿ| ಕ್ಯಾನ್ಸರ್ ಕಾರಕ ಎಂದು ಶಿಫಾರಸು ಮಾಡಿದ WHO

ಸಮಗ್ರ ನ್ಯೂಸ್: ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಗೆ ಮತ್ತೆ ಕ್ಯಾನ್ಸರ್ ಕಾರಕ ಪಟ್ಟ ನೀಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಗಸಂಸ್ಥೆಯೊಂದು ಅಡಕೆ ಬಳಕೆಯನ್ನು ನಿಯಂತ್ರಣ ಮಾಡಿದಲ್ಲಿ ವಿಶ್ವದಲ್ಲಿ ಬಾಯಿ ಕ್ಯಾನ್ಸರ್ ಪ್ರಮಾಣವನ್ನು ಬಹುತೇಕ ಕಡಿಮೆ ಮಾಡಬಹುದಾಗಿದೆ ಎಂದು ವರದಿ ಸಲ್ಲಿಸಿದ್ದು, ಇದು ಅಡಕೆ ಬಳಕೆ ಮೇಲೆ ನಿಯಂತ್ರಣ ಹೇರುವ ಆತಂಕ ಮೂಡಿಸಿದೆ. ತಂಬಾಕು ಮಾದರಿಯಲ್ಲಿ ಅಡಿಕೆ ನಿಯಂತ್ರಣಕ್ಕೆ ಕಾರಣವಾಗುವ ಆತಂಕ ಅಡಿಕೆ ಬೆಳೆಗಾರರಲ್ಲಿ ಮೂಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಅಡಿಕೆಯ ಕುರಿತು

ಅಡಿಕೆ ಬೆಳೆ ಮೇಲೆ ನಿಷೇಧದ ತೂಗುಗತ್ತಿ| ಕ್ಯಾನ್ಸರ್ ಕಾರಕ ಎಂದು ಶಿಫಾರಸು ಮಾಡಿದ WHO Read More »

ಮಂಗಳೂರು: ವಾರದ ರಜೆ ಸವಿಯಲು ರೆಸಾರ್ಟ್ಗೆ ಬಂದ ಹುಡುಗಿಯರು ಯಮಪಾದಕ್ಕೆ| ರೆಸಾರ್ಟ್ ಗೆ ಬೀಗ ಜಡಿದ ಅಧಿಕಾರಿಗಳು

ಸಮಗ್ರ ನ್ಯೂಸ್: ವಾರದ ರಜೆ ಕಳೆಯಲು ಮಂಗಳೂರಿಗೆ ಬಂದ ಮೂವರು ಸ್ನೇಹಿತೆಯರು ಈಜುಕೊಳದಲ್ಲಿ ಮುಳುಗಿ ಸಾವನಪ್ಪಿದ್ದಾರೆ. ಆನ್ಲೈನಲ್ಲೇ ರೂಂ ಬುಕ್ ಮಾಡಿ ಮೂವರು ಒಟ್ಟಾಗಿ ಮಂಗಳೂರಿನ ಸೋಮೇಶ್ವರ ಬೀಚ್ ಬಳಿಯ ಖಾಸಗಿ ರೆಸಾರ್ಟಿನ ಈಜು ಕೊಳಕ್ಕಿಳಿದು ವಿಲ ವಿಲ ಒದ್ದಾಡಿ ಪ್ರಾಣ ಕಳಕೊಂಡಿದ್ದಾರೆ. ಮೈಸೂರಿನ ವಿಜಯನಗರ 2ನೇ ಅಡ್ಡರಸ್ತೆಯ ನಿವಾಸಿ ಕೀರ್ತನಾ ಎನ್.(21), ಮೈಸೂರು ಕುರುಬರಹಳ್ಳಿ ನಿವಾಸಿ ನಿಶಿತಾ ಎಂ.ಡಿ.(21), ರಾಮಾನುಜ ರಸ್ತೆಯ 11ನೇ ಕ್ರಾಸ್ ನಿವಾಸಿ ಪಾರ್ವತಿ ಎಸ್ (20) ಮೃತಪಟ್ಟವರಾಗಿದ್ದು, ಮೂವರು ಒಂದೇ ಕಾಲೇಜಿನಲ್ಲಿ

ಮಂಗಳೂರು: ವಾರದ ರಜೆ ಸವಿಯಲು ರೆಸಾರ್ಟ್ಗೆ ಬಂದ ಹುಡುಗಿಯರು ಯಮಪಾದಕ್ಕೆ| ರೆಸಾರ್ಟ್ ಗೆ ಬೀಗ ಜಡಿದ ಅಧಿಕಾರಿಗಳು Read More »

ಚಿಕ್ಕಮಗಳೂರು: ಗಾಂಜಾ ಮಾರಾಟ|ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

ಚಿಕ್ಕಮಗಳೂರು: ಮಾದಕ ವಸ್ತುಗಳ ವಿರುದ್ಧ ಸಮರ ಮುಂದುವರೆಸಿರುವ ಚಿಕ್ಕಮಗಳೂರು ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ತಾಲೂಕಿನ ಕೊಂಬುಗತ್ತಿ ಗ್ರಾಮದಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಸಿ.ಇ.ಎನ್. ಅಪರಾಧ ಪೊಲೀಸರು 1.26 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾಫಿನಾಡಿನಲ್ಲಿ ಮಾದಕ ವಸ್ತುಗಳ ನಿಯಂತ್ರಣಕ್ಕೆ ಪೊಲೀಸರು ಹಲವು ದಿಟ್ಟ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಐಸ್.ಐ ರಘುನಾಥ ಎಸ್. ವಿ ಮತ್ತು ಪೊಲೀಸ್ ಸಿಬ್ಬಂದಿಗಳಾದ ಇಮ್ರಾನ್ ಖಾನ್, ಹರೀಶ ಟಿ. ಕೆ, ಧರ್ಮರಾಜ, ಹರಿಪ್ರಸಾದ,

ಚಿಕ್ಕಮಗಳೂರು: ಗಾಂಜಾ ಮಾರಾಟ|ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ Read More »

ಅಪ್ಪಾ.. ಅಪ್ಪಾ.. ಮೊಬೈಲ್ ಕೊಡಿಸಪ್ಪಾ ಎಂದು ಕೇಳಿದ 14 ವರ್ಷದ ಮಗನ ಕಥೆಯನ್ನೇ ಮುಗಿಸಿದ ಅಪ್ಪ!

ಸಮಗ್ರ ನ್ಯೂಸ್:ಅಪ್ಪಾ.. ಅಪ್ಪ.. ನಂಗೆ ನೀನು ಹೊಸ ಮೊಬೈಲ್ ಕೊಡಿಸಪ್ಪಾ.. ಇಲ್ಲ, ಮನೆಯಲ್ಲಿರುವ ಹಳೆಯ ಮೊಬೈಲ್ ಅನ್ನೇ ರಿಪೇರಿ ಮಾಡಿಸು ಅಪ್ಪಾ.. ಎಂದು ಕೇಳಿದ 14 ವರ್ಷದ ಮಗನನ್ನು ನಿಷ್ಕರುಣಿ ತಂದೆ, ಮಗನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಶಿನಗರದಲ್ಲಿ ನಿನ್ನೆ ತಡರಾತ್ರಿ ವೇಳೆ ಈ ನಡೆದಿದೆ. ತೇಜಸ್ (14) ತಂದೆಯಿಂದಲೇ ಹಲ್ಲೆಗೊಳಗಾಗಿ ಸಾವನ್ನಪ್ಪಿದ ಮಗ ಆಗಿದ್ದಾನೆ. ಈ ಘಟನೆ ಕುರಿತಂತೆ ಕುಮಾರಸ್ವಾಮಿ

ಅಪ್ಪಾ.. ಅಪ್ಪಾ.. ಮೊಬೈಲ್ ಕೊಡಿಸಪ್ಪಾ ಎಂದು ಕೇಳಿದ 14 ವರ್ಷದ ಮಗನ ಕಥೆಯನ್ನೇ ಮುಗಿಸಿದ ಅಪ್ಪ! Read More »

ಬೆಳಗಾವಿಯಲ್ಲಿ ವೇಶ್ಯಾವಾಟಿಕೆ ಆರೋಪದ ಮೇಲೆ ಮಹಿಳೆ ಬಟ್ಟೆ ಹರಿದು ಹಲ್ಲೆ!

ಸಮಗ್ರ ನ್ಯೂಸ್:ಬೆಳಗಾವಿಯಲ್ಲಿ ಸಾರ್ವಜನಿಕವಾಗಿ ಮಹಿಳೆಯ ಬಟ್ಟೆಯನ್ನು ಹರಿದು ಹಾಕಿ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯ ವಡ್ಡರವಾಡಿಯಲ್ಲಿ ನಡೆದಿದೆ.ಮಗಳು ವೇಶ್ಯಾವಾಟಿಕೆ ಮಾಡುತ್ತಿದ್ದಾಳೆ ಎಂದು ಆರೋಪಿಸಿ ತಾಯಿ, ಮಗಳ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಪಕ್ಕದ ಮನೆಯ ಅಷ್ಟೇಕರ್ ಕುಟುಂಬದಿಂದ ಹಲ್ಲೆ ಮಾಡಲಾಗಿದ್ದು, ಸಂಬಂಧ ಇಲ್ಲದವರೆಲ್ಲ ಮನೆಗೆ ಬಂದು ಹೋಗುತ್ತಾರೆ. ವೇಶ್ಯಾವಾಟಿಕೆ ದಂಧೆ ಮಾಡುತ್ತಿದ್ದೀರಿ ಎಂದು ಹಲ್ಲೆ ನಡೆಸಲಾಗಿದೆ. ತಾಯಿ, ಮಗಳನ್ನು ಮನೆ ಬಿಡಿಸಲು ಜಗಳ ತೆಗೆದು ಹಲ್ಲೆ ಮಾಡಲಾಗಿದೆ ಎನ್ನಲಾಗಿದ್ದು, ತಮಗೆ ಜೀವ ಭಯ ಇದೆ

ಬೆಳಗಾವಿಯಲ್ಲಿ ವೇಶ್ಯಾವಾಟಿಕೆ ಆರೋಪದ ಮೇಲೆ ಮಹಿಳೆ ಬಟ್ಟೆ ಹರಿದು ಹಲ್ಲೆ! Read More »

ಮೂಲವ್ಯಾಧಿ ಸಮಸ್ಯೆ ಇದ್ಯಾ.? ಈ ಎಲೆ ಜಗಿದು ತಿನ್ನಿ, ಜೀವನದುದ್ದಕ್ಕೂ ಸಮಸ್ಯೆ ಕಾಡೋದಿಲ್ಲ

ಇಲ್ಲಿದೆ ಸಂಪೂರ್ಣ ಮಾಹಿತಿ ಸಮಗ್ರ ನ್ಯೂಸ್: ಇಂದಿನ ಕಾಲದಲ್ಲಿ ಮೂಲವ್ಯಾಧಿಯ ಸಮಸ್ಯೆ ಹೆಚ್ಚುತ್ತಿದ್ದು, ನಿಮಗೆ ಈ ಸಮಸ್ಯೆ ಕಾಡುತ್ತಿದ್ದರೆ ನೀವು ಈ ಎಲೆಗಳನ್ನ ಅಗಿದು ತಿಂದರೆ, ನಿಮ್ಮ ಜೀವನದುದ್ದಕ್ಕೂ ಮೂಲವ್ಯಾಧಿಯ ಸಮಸ್ಯೆಗಳನ್ನ ಮತ್ತೆ ಕಾಣಿಸಿಕೊಳ್ಳುವುದಿಲ್ಲ. ನೀವು ತೊಗರಿ ಗಿಡದ ಎಲೆಗಳನ್ನ ಜಗಿದು ತಿನ್ನಬೇಕು. ಯಾಕಂದ್ರೆ, ತೊಗರಿ ಎಲೆಗಳು ಪ್ರೋಟೀನ್ ಜೊತೆಗೆ ಹೆಚ್ಚಿನ ಪ್ರಮಾಣದ ಫೈಬ‌ರ್ ಹೊಂದಿರುತ್ತವೆ. ಈ ಕಾರಣದಿಂದಾಗಿ, ಹೊಟ್ಟೆಯಲ್ಲಿ ಮಲಬದ್ಧತೆ ರೂಪುಗೊಳ್ಳುವುದಿಲ್ಲ ಮತ್ತು ಮೂಲವ್ಯಾಧಿಯ ಸಮಸ್ಯೆ ಕ್ರಮೇಣ ಕಡಿಮೆಯಾಗುತ್ತದೆ. ಇದು ಮಾತ್ರವಲ್ಲ, ತೊಗರಿ ಎಲೆಗಳು ಪ್ರತಿಜೀವಕ

ಮೂಲವ್ಯಾಧಿ ಸಮಸ್ಯೆ ಇದ್ಯಾ.? ಈ ಎಲೆ ಜಗಿದು ತಿನ್ನಿ, ಜೀವನದುದ್ದಕ್ಕೂ ಸಮಸ್ಯೆ ಕಾಡೋದಿಲ್ಲ Read More »

ಹೃದಯಾಘಾತದಿಂದ 12 ವರ್ಷದ ಬಾಲಕಿ ಸಾವು

ಸಮಗ್ರ ನ್ಯೂಸ್: 12 ವರ್ಷದ ಬಾಲಕಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ತೆಲಂಗಾಣ ಚೆನ್ನೂರು ಪಟ್ಟಣದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಚೆನ್ನೂರಿನ ಪದ್ಮನಗರ ಬಡಾವಣೆಯ ಶ್ರೀನಿವಾಸ್-ರಾಮ ದಂಪತಿ ಪುತ್ರಿ ನಿವೃತ್ತಿ(12) ಎಂದು ಗುರುತಿಸಲಾಗಿದೆ. ‌ ಈಕೆ ಚೆನ್ನೂರು ಪಟ್ಟಣದ ಸ್ಥಳೀಯ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಳು. ಕಾರ್ತಿಕ ಹುಣ್ಣಿಮೆ ಇದ್ದ ಕಾರಣ ಶಾಲೆಗೆ ರಜೆ ನೀಡಲಾಗಿತ್ತು. ಹಬ್ಬದ ಚಟುವಟಿಕೆಯಲ್ಲಿ ನಿರತರಾಗಿದ್ದ ಮಗುವೊಂದು ದಿಢೀರ್ ಕುಸಿದು ಬಿದ್ದು, ಇದನ್ನು ಗಮನಿಸಿದ ಮನೆಯವರು ನಿವೃತಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವನ್ನು

ಹೃದಯಾಘಾತದಿಂದ 12 ವರ್ಷದ ಬಾಲಕಿ ಸಾವು Read More »