Editor

ಕುಂದಾಪುರ: ಅಕ್ರಮ ಕಸಾಯಿಖಾನೆಗೆ ದಾಳಿ | 23 ಗೋವುಗಳ ರಕ್ಷಣೆ

ಕುಂದಾಪುರ: ಮೇಯಲು ಬಿಟ್ಟ ದನಗಳನ್ನು ಕದ್ದು ಮಾಂಸಕ್ಕಾಗಿ ಕೂಡಿಟ್ಟಿದ್ದ 23 ದನಗಳನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಮತ್ತು ಕುಂದಾಪುರ ಪೊಲೀಸರು ರಕ್ಷಣೆ ಮಾಡಿದ್ದಾರೆ. ತಾಲೂಕಿನಲ್ಲಿ ಮೇಯಲು ಬಿಟ್ಟ ದನಗಳ ಸರಣಿ ಕಳ್ಳತನವಾಗುತ್ತಿತ್ತು. ಈ ಹಿನ್ನಲೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಗೋ ಕಳ್ಳತನವಾಗುತ್ತಿರುವುದರ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಭಾನುವಾರ ದನ ಕಳ್ಳನ ಬಗ್ಗೆ ಮಾಹಿತಿ ಪಡೆದ ಕಾರ್ಯಕರ್ತರು ಕುಂದಾಪುರ ಗ್ರಾಮಾಂತರ ಠಾಣೆಗೆ ತಿಳಿಸಿದ್ದಾರೆ. ನಂತರ ಪೋಲೀಸರ ನೆರವಿನಿಂದ ಗುಳ್ವಾಡಿ ನಿವಾಸಿ ಅಬೂಬಕ್ಕರ್ ಎಂಬವರ ಮನೆಗೆ ದಾಳಿ ಮಾಡಿದ್ದಾರೆ. ಈ […]

ಕುಂದಾಪುರ: ಅಕ್ರಮ ಕಸಾಯಿಖಾನೆಗೆ ದಾಳಿ | 23 ಗೋವುಗಳ ರಕ್ಷಣೆ Read More »

ಪಾಕೆಟ್ ನಲ್ಲಿ ಮೊಬೈಲ್ ಇಟ್ಕೋತೀರಾ? | ಹಾಗಾದ್ರೆ ಈ ಸ್ಟೋರಿ ಓದ್ಲೇಬೇಕು | ತಜ್ಞರ ವರದಿಯಲ್ಲಿ ಏನಿದೆ ಗೊತ್ತಾ?

ನವದೆಹಲಿ : ಸಧ್ಯ ಮೊಬೈಲ್ ನಮ್ಮ ಜೀವನದ ಅತ್ಯಂತ ಪ್ರಮುಖ ಭಾಗವಾಗಿದೆ. ನಾವು ಎಲ್ಲಾದಕ್ಕೂ ಫೋನ್ ಅವಲಂಭಿಸಿದ್ದೇವೆ. ಊಟ ಮಾಡುವಾಗ, ಟಾಯ್ಲೆಟ್ ಹೋಗುವಾಗ, ಕುಳಿತಾಗ, ನಿದ್ರೆ ಮಾಡುವಾಗ ಮೊಬೈಲ್ ಹತ್ತಿರ ಇರಲೇ ಬೇಕು. ಆದರೆ ಇದರಿಂದ ಕಣ್ಣಿನ ದೃಷ್ಟಿ ಮತ್ತು ಕಳಪೆ ಭಂಗಿಯ ಸಮಸ್ಯೆಗಳನ್ನು ಉಂಟುಮಾಡಬಹುದು. ಜೊತೆಗೆ ಪುರುಷರ ಲೈಂಗಿಕ ಜೀವನದ ಮೇಲೆಯೂ ಪರಿಣಾಮ ಬೀರಬಹುದು. ಸ್ಮಾರ್ಟ್ ಫೋನ್ ನ ಹಾನಿಕಾರಕ ಪರಿಣಾಮಗಳು: ಮೊಬೈಲ್(Mobile) ನಿಂದ ಹೊರಹೊಮ್ಮುವ ವಿದ್ಯುತ್ಕಾಂತೀಯ ವಿಕಿರಣವು (ಎಲೆಕ್ಟ್ರೋ ಮ್ಯಾಗ್ನೆಟಿಕ್ ರೇಡಿಯೇಷನ್) ನಮ್ಮ ಆರೋಗ್ಯಕ್ಕೆ

ಪಾಕೆಟ್ ನಲ್ಲಿ ಮೊಬೈಲ್ ಇಟ್ಕೋತೀರಾ? | ಹಾಗಾದ್ರೆ ಈ ಸ್ಟೋರಿ ಓದ್ಲೇಬೇಕು | ತಜ್ಞರ ವರದಿಯಲ್ಲಿ ಏನಿದೆ ಗೊತ್ತಾ? Read More »

ಲಡಾಕ್’ನಲ್ಲಿ ಬೆಳ್ಳಂಬೆಳಗ್ಗೆ ಭೂಕಂಪನ

ಜಮ್ಮು ಕಾಶ್ಮೀರ: ಲಡಾಖ್ ನ ಲೇಹ್ ನಲ್ಲಿ ಇಂದು ಬೆಳಗಿನ ಜಾವ ಭೂಕಂಪನ ಸಂಭವಿಸಿದೆ. ಯಾವುದೇ ಸಾವು-ನೋವು, ಹಾನಿಯ ಬಗ್ಗೆ ವರದಿಯಾಗಿಲ್ಲ. ಲೇಹ್ ಪ್ರದೇಶದ ನಿವಾಸಿಗಳಿಗೆ ಬೆಳಗಿನ ಜಾವಾ ಭೂಮಿ ನಡುಗಿದ ಅನುಭವಾಗಿದೆ. ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆ ದಾಖಲಾಗಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ (ಎನ್ ಸಿಎಸ್) ಹೇಳಿದೆ. ಎನ್ಸಿಎಸ್ ಪ್ರಕಾರ ಬೆಳಿಗ್ಗೆ 6:10 ರ ಸುಮಾರಿಗೆ ಕಂಪನದ ಅನುಭವವಾಗಿದೆ. ಲಡಾಖ್ ನ ಲೇಹ್ ನಲ್ಲಿ 4.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಿಳಿದು

ಲಡಾಕ್’ನಲ್ಲಿ ಬೆಳ್ಳಂಬೆಳಗ್ಗೆ ಭೂಕಂಪನ Read More »

ಪೊಲೀಸ್ ಅಧಿಕಾರಿ ಮನೆಗೆ ನುಗ್ಗಿ ಉಗ್ರರಿಂದ ಗುಂಡಿನ ದಾಳಿ |ದಂಪತಿ ಮೃತ್ಯು | ಮಗಳು ಗಂಭೀರ

ಜಮ್ಮು-ಕಾಶ್ಮೀರ: ವಾಯುಪಡೆ ಕೇಂದ್ರದ ಮೇಲೆ ಡ್ರೋನ್ ದಾಳಿ ನಡೆಸಿದ ಬೆನ್ನಲ್ಲೇ, ಪೊಲೀಸ್ ವಿಶೇಷಾಧಿಕಾರಿ ಮನೆಗೆ ನುಗ್ಗಿದ ಉಗ್ರರು ಗುಂಡಿನ ದಾಳಿ ನಡೆಸಿ ದಂಪತಿಯನ್ನು ಕೊಂದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಘಟನೆಯಲ್ಲಿ ಅಧಿಕಾರಿಯ ಪುತ್ರಿ ಗಂಭೀರ ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ 11 ಗಂಟೆಗೆ ಪುಲ್ವಾಮ ಜಿಲ್ಲೆಯ ಅವಂತಿಪೊರದ ಹರಿಪರಿಗಾಂವ್ ನಲ್ಲಿರುವ ಪೊಲೀಸ್ ವಿಶೇಷಾಧಿಕಾರಿ ಫಯಾಜ್ ಅಹ್ಮದ್ ಅವರ ಮನೆಗೆ ನುಗ್ಗಿದ ಉಗ್ರರು ಏಕಾಏಕಿ ಗುಂಡಿನ ಸುರಿಮಳೆಗೈದಿದ್ದಾರೆ. ಪರಿಣಾಮ ಫಯಾಜ್ ಮತ್ತು ಅವರ ಪತ್ನಿ ರಾಜಾ ಬೇಗಂ ಸ್ಥಳೀಯ

ಪೊಲೀಸ್ ಅಧಿಕಾರಿ ಮನೆಗೆ ನುಗ್ಗಿ ಉಗ್ರರಿಂದ ಗುಂಡಿನ ದಾಳಿ |ದಂಪತಿ ಮೃತ್ಯು | ಮಗಳು ಗಂಭೀರ Read More »

ಪೆಲತ್ತರಿ ಅಂತ ತಾತ್ಸಾರ ಮಾಡ್ಬೇಡಿ, ಅದಕ್ಕೂ ಭಾರೀ ರೇಟ್ ಮರಾಯ್ರೆ…!

ಸಾಮಾನ್ಯವಾಗಿ ಏನಾದರೂ ಮಾತನಾಡೋವಾಗ ಪೆಲತ್ತರಿ(ಹಲಸಿನ ಬೀಜ) ಅಂತ ತಾತ್ಸಾರ ಮಾಡ್ತೇವೆ. ಹುರುಳಿಲ್ಲದ ಮಾತಿಗೆ ಈ ರೀತಿ ಹೇಳುವುದುಂಟು. ಹೀಗೆ ಜನರ ಬಾಯಲ್ಲಿ ತಾತ್ಸಾರಗೊಂಡ, ಬೆಲೆಯಿಲ್ಲದ ಹಲಸಿನ ಬೀಜದ ಈಗಿನ ಮಾರ್ಕೆಟ್ ರೇಟ್ ಕೇಳಿದ್ರೆ ನೀವ್ ಬೆಚ್ಚಿ ಬೀಳ್ತೀರ.ಹೌದು, ಲಾಕ್ ಡೌನ್ ನಿಂದಾಗಿ ಎಲ್ಲಾ ವಸ್ತುಗಳು ಆನ್ ಲೈನ್ ನಲ್ಲೇ ಬಿಕರಿಯಾಗುತ್ತಿವೆ. ಈ ಮಾರುಕಟ್ಟೆಗೆ ಈಗ ಎಂಟ್ರಿ ಕೊಟ್ಟಿದೆ ಹಲಸಿನ ಬೀಜ. ಮಲೆನಾಡಲ್ಲಿ ಬಿದ್ದು ಹಾಳಾಗಿ ಹೋಗುವ ಹಲಸಿನ ಬೀಜದ 800 ಗ್ರಾಂ ಪ್ಯಾಕೆಟ್ ಗೆ 800 ರೂ

ಪೆಲತ್ತರಿ ಅಂತ ತಾತ್ಸಾರ ಮಾಡ್ಬೇಡಿ, ಅದಕ್ಕೂ ಭಾರೀ ರೇಟ್ ಮರಾಯ್ರೆ…! Read More »

ಮಂಗಳೂರು: ಪೊಲೀಸ್ ದಾಳಿ ವೇಳೆ ಲಾಡ್ಜ್ ನಲ್ಲಿ ಸಿಕ್ಕಿಬಿದ್ದ‌ ಭಿನ್ನ ಕೋಮಿನ 4 ಜೋಡಿ ವಶಕ್ಕೆ

ಮಂಗಳೂರು: ನಗರ ಪ್ರತಿಷ್ಟಿತ ಹೊಟೇಲ್ ಮೇಲೆ ಬಂದರು ಪೊಲೀಸರು ‌ದಾಳಿ ಮಾಡಿ ಭಿನ್ನಕೋಮಿನ ನಾಲ್ಕು ಯುವ ಜೋಡಿಗಳನ್ನು ವಶಪಡಿಸಿಕೊಂಡಿದ್ದಾರೆ. ಕೊಂಚಾಡಿಯ ಸಾಯಿ ಪ್ಯಾಲೇಸ್ ಹೊಟೇಲ್ ನಲ್ಲಿ ಯುವ ಜೋಡಿಗಳು ತಂಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಮಾಹಿತಿ ಕಲೆ‌ಹಾಕಿ ನಗರದ ಬಂದರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಹಿಂಜಾವೇ ಕಾರ್ಯಕರ್ತರ ದೂರಿನ ಮೇರೆಗೆ ಪೊಲೀಸರು ಇಂದು ಲಾಡ್ಜ್ ಮೇಲೆ ದಾಳಿ ನಡೆಸಿ ನಾಲ್ಕು ಮಂದಿ ಮುಸ್ಲಿಂ ಯುವಕರು ಹಾಗೂ

ಮಂಗಳೂರು: ಪೊಲೀಸ್ ದಾಳಿ ವೇಳೆ ಲಾಡ್ಜ್ ನಲ್ಲಿ ಸಿಕ್ಕಿಬಿದ್ದ‌ ಭಿನ್ನ ಕೋಮಿನ 4 ಜೋಡಿ ವಶಕ್ಕೆ Read More »

ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಅಪಘಾತಗೊಂಡು ಆಸ್ಪತ್ರೆಗೆ ದಾಖಲು | ಮುನಿದಳೇ‌ ಮಂತ್ರದೇವತೆ ಕಲ್ಲುರ್ಟಿ…? | ಆರೋಪಿ ರಕ್ಷಣೆಗೆ ರಾಜಕೀಯ ಶಕ್ತಿಗಳ ಕೈವಾಡ

ಬಂಟ್ವಾಳ : ಚಿಕ್ಕಪ್ಪನೇ ನಿರಂತರ ಅತ್ಯಾಚಾರ ಎಸಗಿ ಸಂತ್ರಸ್ತಳಾಗಿದ್ದ ಯುವತಿಯ ಪೋಷಕರು ಪನೋಲಿಬೈಲು ಕಲ್ಲುರ್ಟಿ‌ ಮೊರೆ ಹೋಗಿದ್ದು, ಆಕೆ ಧರ್ಮ ರಕ್ಷಿಸಿದ್ದಾಳೆ ಎಂಬ ಮಾತೀಗ ತುಳುನಾಡಿನಲ್ಲಿ ಕೇಳಿಬಂದಿದ್ದು, ತಾಯಿಯ ಸತ್ಯ ಮತ್ತೆ‌ ಗೋಚರಿಸಿದೆ. ಮಗಳ ಮೇಲೆ ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಚಿಕ್ಕಪ್ಪ, ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ಆಲಾಡಿ ನಿವಾಸಿ ಪುರುಷೋತ್ತಮನಿಗೆ ಕಳೆದ ಶುಕ್ರವಾರ ಬೆಳಿಗ್ಗೆ ಆಕ್ಸಿಡೆಂಟ್ ಆಗಿದ್ದು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಾಮುಕ ಚಿಕ್ಕಪ್ಪನಿಂದಲೇ ನಿರಂತರ ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಸಂತ್ರಸ್ತ ಯುವತಿಯಿಂದ

ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಅಪಘಾತಗೊಂಡು ಆಸ್ಪತ್ರೆಗೆ ದಾಖಲು | ಮುನಿದಳೇ‌ ಮಂತ್ರದೇವತೆ ಕಲ್ಲುರ್ಟಿ…? | ಆರೋಪಿ ರಕ್ಷಣೆಗೆ ರಾಜಕೀಯ ಶಕ್ತಿಗಳ ಕೈವಾಡ Read More »

ಪುತ್ತೂರು: ಎರಡು ತಿಂಗಳ ಬಾಣಂತಿ ಮೃತ್ಯು

ಪುತ್ತೂರು: ಎರಡು ತಿಂಗಳ ಬಾಣಂತಿ ಒಬ್ಬರು ಅನಾರೋಗ್ಯದಿಂದ ಮೃತಪಟ್ಟ ಘಟನೆ ಇಂದು ನಡೆದಿದೆ. ಪುತ್ತೂರಿನ ಕೃಷ್ಣ ನಗರ ನಿವಾಸಿ ದಿಲೀಪ್ ಎಂಬವರ ಪತ್ನಿ ಅಕ್ಷತಾ (26) ಮೃತಪಟ್ಟವರು. ಅಕ್ಷತಾ 2 ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದರು. ಆ ಬಳಿಕ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿತು. ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಕ್ಷತಾ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಪುತ್ತೂರು: ಎರಡು ತಿಂಗಳ ಬಾಣಂತಿ ಮೃತ್ಯು Read More »

ತಪ್ಪಿದ ಕರೆಯಿಂದ ಹುಟ್ಟಿದ ಪ್ರೀತಿ ಬದುಕಿನ ಹಳಿ ತಪ್ಪಿಸಿತು | ಮದುವೆಯಾದ ಕೆಲವೇ ತಿಂಗಳಲ್ಲಿ ಯುವತಿ ನಿಗೂಢ ಸಾವು | ಇದು ಕೊಲೆಯೋ…? ಆತ್ಮಹತ್ಯೆಯೋ….?

ಶಿವಮೊಗ್ಗ: ಮಿಸ್ಸ್’ಡ್ ಕಾಲ್’ನಿಂದ ಪರಿಚಯವಾದ ಯುವಕನನ್ನು ಪ್ರೀತಿಸಿ ಮದುವೆಯಾಗಿ ದಾಂಪತ್ಯ ಜೀವನದ ಏಳೇ ತಿಂಗಳಿನಲ್ಲಿ ಯುವತಿ ಒಬ್ಬಳು ನಿಗೂಢವಾಗಿ ಸಾವನ್ನಪ್ಪಿದ ಘಟನೆ ಹೊಸನಗರ ತಾಲೂಕಿನ ಕಾಡಿಗ್ಗೇರಿಯಲ್ಲಿ ನಡೆದಿದೆ. ಹಾಸನದ ಸಕಲೇಶಪುರ ತಾಲೂಕಿನ ಗೋಳಗೊಂಡ ಗ್ರಾಮದ ಸುಂದರ ಯುವತಿ ಸೌಂದರ್ಯ(21) ಗೆ ಒಂದು ಮಿಸ್ಸ್’ಡ್ ಕಾಲ್ ಮೂಲಕ ಕಾಡಿಗ್ಗೇರಿಯ ಯುವಕ ಉಮೇಶ್ ಎಂಬಾತನ ಪರಿಚಯವಾಗಿದೆ. ನಂತರ ಫೇಸ್ಬುಕ್’ನಲ್ಲಿ ಸ್ನೇಹಿತರಾಗಿದ್ದಾರೆ. ದಿನಕಳೆದಂತೆ ವಾಟ್ಸಾಪ್’ಲ್ಲಿ ಇಬ್ಬರ ನಡುವೆ ಪ್ರೀತಿ ಚಿಗುರೊಡೆದು ಬೆಳೆದಿದೆ. ಯುವತಿ ಮನೆಯವರ ವಿರೋಧದ ನಡುವೆಯೂ ಕಳೆದ ಏಳು ತಿಂಗಳ

ತಪ್ಪಿದ ಕರೆಯಿಂದ ಹುಟ್ಟಿದ ಪ್ರೀತಿ ಬದುಕಿನ ಹಳಿ ತಪ್ಪಿಸಿತು | ಮದುವೆಯಾದ ಕೆಲವೇ ತಿಂಗಳಲ್ಲಿ ಯುವತಿ ನಿಗೂಢ ಸಾವು | ಇದು ಕೊಲೆಯೋ…? ಆತ್ಮಹತ್ಯೆಯೋ….? Read More »

ರಾಜ್ಯಕ್ಕೆ ಶೀಘ್ರದಲ್ಲೇ ಹೊಸ‌ ಮುಖ್ಯಮಂತ್ರಿ ಸಾಧ್ಯತೆ, ನಾಯಕತ್ವ ಬದಲಾವಣೆ ಕಸರತ್ತು ನಡೆಸುತ್ತಿರುವ ಬಿಜೆಪಿ ಹೈಕಮಾಂಡ್!?

ಬೆಂಗಳೂರು : ನಾಯಕತ್ವದ ಬದಲಾಣೆಗಾಗಿ ಶುರುವಾಗಿದ್ದ ರಾಜ್ಯ ಬಿಜೆಪಿಯೊಗಿನ ಭಿನ್ನಮತದ ಬೆಂಕಿ ಈಗಲೂ ಬೂದಿ ಮುಚ್ಚಿದ ಕೆಂಡದಂತಿದೆ. ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಭೇಟಿಯ ಬೆನ್ನಲೇ ಎಲ್ಲವೂ ತಣ್ಣಗಾದಂತೆ ಕಂಡರೂ, ಮತ್ತೆ ರಾಜ್ಯ ಬಿಜೆಪಿಯಲ್ಲಿ ಈಗ ಕುತೂಹಲಕಾರಿ ಬೆಳವಣಿಗೆಗಳು ನಡೆದಿವೆ. ಬಿಜೆಪಿ ಹೈಕಮಾಂಡ್‌ ರಾಜ್ಯ ಬಿಜೆಪಿ ನಾಯಕತ್ವದ ಬದಲಾವಣೆಗೆ ತೆರೆಮರೆಯಲ್ಲೇ ಕಸರತ್ತು ನಡೆಸುತ್ತಿರುವುದು ಸಚಿವ ಹಾಗೂ ರಾಜ್ಯ ಬಿಜೆಪಿ ಭಿನ್ನರ ಬಣದ ಮುಖಂಡ ಸಿ.ಪಿ.ಯೋಗೇಶ್ವರ್‌ ಅವರ ಹೇಳಿಕೆಗಳ ಮೂಲಕ ತೋರಿಸಿದೆ.ಮೂಲಗಳ ಪ್ರಕಾರ ಅತೀ ಶೀಘ್ರದಲ್ಲೇ ರಾಜ್ಯ ಬಿಜೆಪಿ

ರಾಜ್ಯಕ್ಕೆ ಶೀಘ್ರದಲ್ಲೇ ಹೊಸ‌ ಮುಖ್ಯಮಂತ್ರಿ ಸಾಧ್ಯತೆ, ನಾಯಕತ್ವ ಬದಲಾವಣೆ ಕಸರತ್ತು ನಡೆಸುತ್ತಿರುವ ಬಿಜೆಪಿ ಹೈಕಮಾಂಡ್!? Read More »