Editor

ಪುತ್ತೂರು: ಹನಿಟ್ರ್ಯಾಪ್ ಯುವತಿ ಬಂಧನ

ಪುತ್ತೂರು: ಹನಿಟ್ರ್ಯಾಪ್‌ಗೊಳಗಾಗಿ ಲಕ್ಷಾಂತರ ರೂ. ಕಳೆದುಕೊಂಡಿರುವುದಾಗಿ ನೆಟ್ಟಣಿಗೆ ಮುಡ್ನೂರು ನಿವಾಸಿ ಯುವಕನೋರ್ವ 7 ಮಂದಿ ವಿರುದ್ಧ ಪೊಲೀಸ್ ದೂರು ನೀಡಿದ್ದು, ಆರೋಪಿಗಳ ಪೈಕಿ ಯುವತಿಯೋರ್ವಳನ್ನು ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಚೀಚಗದ್ದೆ ನಿವಾಸಿ, ವೃತ್ತಿಯಲ್ಲಿ ಸೇಲ್ಸ್‌ಮ್ಯಾನ್ ಆಗಿರುವ ಅಬ್ದುಲ್ ನಾಸಿರ್ (25) ಹನಿಟ್ರ್ಯಾಪ್‌ಗೆ ಒಳಗಾಗಿ 30 ಲಕ್ಷ ರೂ. ಕಳೆದುಕೊಂಡವರು. ಈ ಬಗ್ಗೆ ನೆಟ್ಟಣಿಗೆ ಮುಡ್ನೂರು ಚೀಚಗದ್ದೆಯ ಹನೀಫ್ ಯಾನೆ ಕೆಎಂವೈ ಹನೀಫ್, ಕೊಟ್ಯಾಡಿಯ ಮುಹಮ್ಮದ್ ಕುಂಞಿ, ಕೊಟ್ಯಾಡಿಯ ಶಾಫಿ, ಸವಣೂರಿನ ಅಝರ್, […]

ಪುತ್ತೂರು: ಹನಿಟ್ರ್ಯಾಪ್ ಯುವತಿ ಬಂಧನ Read More »

ಕೊಡಗಿನಲ್ಲಿ ಜು.19ರವರೆಗೆ ಲಾಕ್ ಡೌನ್ ಕಂಟಿನ್ಯೂ, ಸೀಮಿತ ಸೇವೆಗಳಿಗಷ್ಟೇ ಅವಕಾಶ, ಪ್ರವಾಸಿಗರಿಗೆ‌ ನಿಷೇಧ

ಕೊಡಗು ವರದಿ: ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ರೇಟ್ ಕಡಿಮೆಯಾಗದ ಹಿನ್ನೆಲೆ ಕೆಲವು ಸಡಿಲಿಕೆಯೊಂದಿಗೆ ಲಾಕ್‌ಡೌನ್ ಜು19ರವರೆಗೆ ಮುಂದುವರೆಸಲಾಗಿದೆ.ಈ ಹಿಂದೆ ವಾರದ ಮೂರು ದಿನ ಬೆಳಿಗ್ಗೆ 6ರಿಂದ 1ಗಂಟೆಯವರೆಗೆ ಅಗತ್ಯ ಸಾಮಗ್ರಿ ಖರೀದಿಗೆ ಅವಕಾಶ ನೀಡಲಾಗಿತ್ತು. ಸಡಿಲಿಕೆ ಆದೇಶದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 6 ರಿಂದ 2 ಗಂಟೆಯವರೆಗೆ ಅಗತ್ಯ ಸಾಮಗ್ರಿ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.ಕಂಟೈನ್ಮೇಂಟ್ ವಲಯದಲ್ಲಿ ಯಾವುದೇ ಚಟುವಟಿಕೆ ನಡೆಸಲು ಅವಕಾಶವಿಲ್ಲ. ಅತ್ಯವಶ್ಯಕ ಸೇವೆಗಳಡಿ ಬರುವ ತರಕಾರಿ, ಹಣ್ಣು-ಹಂಪಲು, ದಿನಸಿ, ಕೃಷಿಗೆ ಸಂಬಂಧಿಸಿದ ಅಂಗಡಿ ಮಳಿಗೆ ಮತ್ತು

ಕೊಡಗಿನಲ್ಲಿ ಜು.19ರವರೆಗೆ ಲಾಕ್ ಡೌನ್ ಕಂಟಿನ್ಯೂ, ಸೀಮಿತ ಸೇವೆಗಳಿಗಷ್ಟೇ ಅವಕಾಶ, ಪ್ರವಾಸಿಗರಿಗೆ‌ ನಿಷೇಧ Read More »

ಅಪ್ಪ-ಮಗನಿಗೆ ಒಬ್ಬಳೇ ಹೆಂಡತಿ…! ಮಾಹಿತಿ ಹಕ್ಕಿನ ವರದಿ ನೋಡಿ ಇಬ್ಬರೂ ಶಾಕ್

ಲಖನೌ: ಮದುವೆಯಾಗಿದ್ದ ಹೆಂಡತಿ ದೂರವಾದ ಮೇಲೆ ಅಕೆಯನ್ನು ಮತ್ತೆ ಎಲ್ಲೇ ನೋಡಿದರೂ ತಮ್ಮ ಹಳೆ ನೆನಪುಗಳು ಕಾಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಯುವಕನ ಕಥೆ ಕೇಳಿದರೆ ಅಯ್ಯೋ ಪಾಪ ಎನಿಸದಿರದು. ತಾನು ಮದುವೆಯಾಗಿದ್ದ ಹೆಂಡತಿಯೇ ತನ್ನಿಂದ ದೂರಾಗಿ ತನ್ನ ತಂದೆಯನ್ನೇ ವರಿಸಿದ್ದಾಳೆ ಎಂದು ತಿಳಿದು ಯುವಕ ಕಂಗಾಲಾಗಿದ್ದಾನೆ. ಯುವಕನೊಬ್ಬ 2016ರಲ್ಲಿ ಯುವತಿಯೊಬ್ಬಳನ್ನು ಮದುವೆಯಾಗಿದ್ದನಂತೆ. ಆ ವೇಳೆಗೆ ಇಬ್ಬರೂ ಅಪ್ರಾಪ್ತರಾಗಿದ್ದರಾದರೂ ಅವರು ಆರು ತಿಂಗಳ ಕಾಲ ಸಂಸಾರ ನಡೆಸಿದ್ದರು. ಅದಾದ ಮೇಲೆ ಗಂಡ ಮದ್ಯಪಾನ ಮಾಡುತ್ತಾನೆ ಎನ್ನುವ ಕಾರಣ

ಅಪ್ಪ-ಮಗನಿಗೆ ಒಬ್ಬಳೇ ಹೆಂಡತಿ…! ಮಾಹಿತಿ ಹಕ್ಕಿನ ವರದಿ ನೋಡಿ ಇಬ್ಬರೂ ಶಾಕ್ Read More »

ಮಡಿಕೇರಿ: ಎರಡು ಕಾಡಾನೆಗಳ ಕಳೇಬರ ಪತ್ತೆ, ಹುಲಿ ದಾಳಿಯ ಶಂಕೆ

ಮಡಿಕೇರಿ: ಪ್ರತ್ಯೇಕ ಪ್ರಕರಣಗಳಲ್ಲಿ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಟ್ಟ ಮತ್ತು ವಡ್ಡರಮಾಡು ಎಂಬಲ್ಲಿ ಎರಡು ಕಾಡಾನೆಗಳ ಕಳೇಬರ ಪತ್ತೆಯಾಗಿದೆ. ಕುಟ್ಟ ಗ್ರಾಮದ ಪೂಜೆಕಲ್ ಎಂಬಲ್ಲಿ ಕಾಕೇರ ಕಾಳಪ್ಪ ಎಂಬುವವರಿಗೆ ಸೇರಿದ ಕಾಫಿ ತೋಟದಲ್ಲಿ ಸುಮಾರು 12 ವರ್ಷದ ಗಂಡು ಕಾಡಾನೆ ಕಳೇಬರ ಭಾನುವಾರ ಮುಂಜಾನೆ ಪತ್ತೆಯಾಗಿದೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಶನಿವಾರ ರಾತ್ರಿ ಸಾವಿಗೀಡಾಗಿರಬಹುದು ಎಂದು ಅಂದಾಜಿಸಲಾಗಿದೆ. ನಾಗರಹೊಳೆ ಉದ್ಯಾನವನ ವ್ಯಾಪ್ತಿಯ ವಡ್ಡರಮಾಡು ಎಂಬಲ್ಲಿ ಹುಲಿ ದಾಳಿಗೆ 1 ತಿಂಗಳು ಪ್ರಾಯದ ಕಾಡಾನೆ ಮರಿ

ಮಡಿಕೇರಿ: ಎರಡು ಕಾಡಾನೆಗಳ ಕಳೇಬರ ಪತ್ತೆ, ಹುಲಿ ದಾಳಿಯ ಶಂಕೆ Read More »

ಈ ಬ್ಯಾಂಕಲ್ಲಿ ಲೋನ್ ತಗೋಬೇಕಾದ್ರೆ ಬ್ಯಾಂಕ್ ಮ್ಯಾನೇಜರ್ ಗೆ ಲೈಂಗಿಕ ಸುಖ ನೀಡಬೇಕು…!

ವಿಜಯವಾಡ: ಮಹಿಳಾ ಗ್ರಾಹಕರಿಗೆ ಲೋನ್​ ಬೇಕಾದರೆ ಅದಕ್ಕೆ ಪ್ರತಿಯಾಗಿ ಬ್ಯಾಂಕ್​ ಮ್ಯಾನೇಜರ್​ಗೆ ಲೈಂಗಿಕ ಸುಖ ನೀಡಬೇಕಂತೆ. ಈ ರೀತಿ ಕಿರುಕುಳ ಪ್ರಕರಣ ಆಂಧ್ರದ ನೆಲ್ಲೂರು ಜಿಲ್ಲೆಯ ಪೊದಲಕುರ್​ ಎಸ್ ಬಿ ಐ ಶಾಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಎಸ್​ಬಿಐ ಶಾಖೆಯಲ್ಲಿ ಮ್ಯಾನೇಜರ್​ ನಾಗೇಶ್​ ಪೊದಲಕುರ್​ ಎಂದು ಗುರುತಿಸಲಾಗಿದೆ. ಈತ ಕಚೇರಿಯ ಮಹಿಳಾ ಸಹೋದ್ಯೋಗಿಗಳಿಗೆ ಮಾತ್ರವಲ್ಲದೆ, ಮಹಿಳಾ ಗ್ರಾಹಕರ ಮೇಲೂ ತನ್ನ ಕಾಮದೃಷ್ಟಿ ಬೀರಿರುವ ಘಟನೆ ವರದಿಯಾಗಿದೆ.ಈತನ ವಿರುದ್ಧ ಮಹಿಳಾ ಸಹೋದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪವಿದೆ. ಅಲ್ಲದೆ,

ಈ ಬ್ಯಾಂಕಲ್ಲಿ ಲೋನ್ ತಗೋಬೇಕಾದ್ರೆ ಬ್ಯಾಂಕ್ ಮ್ಯಾನೇಜರ್ ಗೆ ಲೈಂಗಿಕ ಸುಖ ನೀಡಬೇಕು…! Read More »

ಮಹಿಳಾ ಏಕದಿನ ಕ್ರಿಕೆಟ್ ಸರಣಿ: ಭಾರತಕ್ಕೆ 4 ವಿಕೆಟ್ ಜಯ, ಟ್ರೋಫಿ ಇಂಗ್ಲೆಂಡ್ ‌ಪಾಲು

ವೋರ್ಸೆಸ್ಟರ್: ಆತಿಥೇಯ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಮಹಿಳಾ ತಂಡ ನಾಲ್ಕು ವಿಕೆಟ್ ಗಳಿಂದ ಗೆಲುವು ಸಾಧಿಸಿ ವೈಟ್ ವಾಶ್ ಮುಖಭಂಗದಿಂದ ತಪ್ಪಿಸಿಕೊಂಡಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ 2-1 ಅಂತರದಿಂದ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಇಂಗ್ಲೆಂಡ್ ಮೊದಲ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 219 ರನ್ ಗಳಿಗೆ ಆಲೌಟ್ ಆಯಿತು. ನಂತರ ಟೀ ಇಂಡಿಯಾಗೆ ಓವರ್ ಕಡಿತಗೊಳಿಸಿ

ಮಹಿಳಾ ಏಕದಿನ ಕ್ರಿಕೆಟ್ ಸರಣಿ: ಭಾರತಕ್ಕೆ 4 ವಿಕೆಟ್ ಜಯ, ಟ್ರೋಫಿ ಇಂಗ್ಲೆಂಡ್ ‌ಪಾಲು Read More »

ದ್ವಾದಶ ರಾಶಿಗಳ ವಾರಭವಿಷ್ಯ, ಯಾವ ರಾಶಿಯವರಿಗೆ ಈ ವಾರ ಶುಭ? ಇಲ್ಲಿದೆ ಸಂಪೂರ್ಣ ವಿವರ

ಜು.4 ರಿಂದ 11 ರವರೆಗಿನ ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆ ಮತ್ತು ಅವುಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ಮೇಷರಾಶಿ:ಉತ್ತಮ ಗ್ರಹಗಳು ನಿಮ್ಮೊಡನೆ ಪರಿಣಾಮ ಬೀರಲಿದೆ. ನಿಮಗಿರುವ ವಿರೋಧ, ಭಿನ್ನಾಭಿಪ್ರಾಯ ಹಂತ ಹಂತವಾಗಿ ಕರಗಿಹೋಗಲಿದೆ. ರಾಹುಬಲ ಉತ್ತಮವಿದ್ದು, ಏನೋ ಒಂದು ಒಳ್ಳೆಯದು ನಿಮಗಾಗಲಿದೆ ಎಂಬ ಅರಿವು ಗೋಚರಕ್ಕೆ ಬಂದೀತು. ಅವಿವಾಹಿತರಿಗೆ ವಿವಾಹ ಪೂರಕ ವಾರ. ಮನಸ್ಸಿನ ವಿಚಾರವನ್ನು ವ್ಯಕ್ತಪಡಿಸುವ ಸಂದರ್ಭವಿರುತ್ತದೆ. ಸದುಪಯೋಗ ನಿಮ್ಮದಾಗಲಿ. ಆರ್ಥಿಕವಾಗಿ ಖರ್ಚುವೆಚ್ಚಗಳಿದ್ದರೂ

ದ್ವಾದಶ ರಾಶಿಗಳ ವಾರಭವಿಷ್ಯ, ಯಾವ ರಾಶಿಯವರಿಗೆ ಈ ವಾರ ಶುಭ? ಇಲ್ಲಿದೆ ಸಂಪೂರ್ಣ ವಿವರ Read More »

ಮುಜುರಾಯಿ ಇಲಾಖೆಯ ನಿರ್ಲಕ್ಷ್ಯ, ಅಧಿಕಾರಿಗಳ ಬೇಜವಾಬ್ದಾರಿ. 13 ವರ್ಷಗಳಿಂದ ಮಳೆನೀರಿಗೆ ಮೈಯೊಡ್ಡುತ್ತಿದ್ದಾನೆ ಕುಕ್ಕೆ ಪುರದೊಡೆಯ ಶ್ರೀಸುಬ್ರಹ್ಮಣ್ಯ

ಮಂಗಳೂರು, ಜುಲೈ 3: ನಂಬಿದವರ ಇಷ್ಟಾರ್ಥವನ್ನು ಸಿದ್ಧಿಗೊಳಿಸುವ, ಅಭೀಷ್ಠೆಗಳನ್ನು ಪೂರೈಸುವ ದಕ್ಷಿಣ ಭಾರತದ ಪರಮ ಪವಿತ್ರ ಪುಣ್ಯಕ್ಷೇತ್ರ ಸುಬ್ರಹ್ಮಣ್ಯ ದೇವರು ಮಳೆಗೆ ಮೈ ಒಡ್ಡಿ 13 ವರ್ಷಗಳೇ ಕಳೆದುಹೋಗಿದೆ. ಅಧಿಕಾರಿಗಳ ಬೇಜವಾಬ್ದಾರಿ, ಮುಜುರಾಯಿ‌ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದ ರಾಜ್ಯದ ಪ್ರಸಿದ್ಧ ಯಾತ್ರಾಕ್ಷೇತ್ರಕ್ಕೆ ಪ್ರತೀವರ್ಷ ಪ್ಲಾಸ್ಟಿಕ್ ಹೊದಿಕೆ ಹಾಕಲಾಗುತ್ತಿದೆ. ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಹಾಗೂ ರಾಜ್ಯದ ಅತೀ ಶ್ರೀಮಂತ ದೇವಸ್ಥಾನ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ದೇವರ ಸನ್ನಿಧಿ ಮಳೆಗಾಲದಲ್ಲಿ ಸೋರಲಾರಂಭಿಸಿ ಹದಿಮೂರು ವರ್ಷಗಳಾಗಿವೆ. ಸುಬ್ರಹ್ಮಣ್ಯ ಸ್ವಾಮಿಯ ದೇವರ

ಮುಜುರಾಯಿ ಇಲಾಖೆಯ ನಿರ್ಲಕ್ಷ್ಯ, ಅಧಿಕಾರಿಗಳ ಬೇಜವಾಬ್ದಾರಿ. 13 ವರ್ಷಗಳಿಂದ ಮಳೆನೀರಿಗೆ ಮೈಯೊಡ್ಡುತ್ತಿದ್ದಾನೆ ಕುಕ್ಕೆ ಪುರದೊಡೆಯ ಶ್ರೀಸುಬ್ರಹ್ಮಣ್ಯ Read More »

ಜು.5ರಿಂದ ರಾಜ್ಯದಲ್ಲಿ ಅನ್ ಲಾಕ್ 3.0 ಜಾರಿ; ಹಲವು ನಿರ್ಬಂಧ ಸಡಿಲಿಕೆ, ಮಾಲ್, ಶ್ರದ್ದಾಕೇಂದ್ರಗಳು ಓಪನ್

ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಚಿವರು, ಅಧಿಕಾರಿಗಳು ತಜ್ಞರೊಂದಿಗೆ ಸಭೆ ನಡೆಸಿ ಜುಲೈ 5 ರಿಂದ 19 ರ ವರೆಗೆ 15 ದಿನಗಳ ಕಾಲ ಅನೇಕ ನಿರ್ಬಂಧ ಸಡಿಲಿಕೆ ಮಾಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ಸೋಮವಾರದಿಂದ ಕಚೇರಿ, ಕೈಗಾರಿಕೆ, ವಾಣಿಜ್ಯ ಚಟುವಟಿಕೆ, ಮಾಲ್ ತೆರೆಯಲು ಅವಕಾಶವಿದೆಸರ್ಕಾರಿ, ಖಾಸಗಿ ಕಚೇರಿ, ಕೈಗಾರಿಕೆ, ವಾಣಿಜ್ಯ ಚಟುವಟಿಕೆ ಶೇಕಡ 100 ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬಹುದು.ಮಾಲ್ ಗಳನ್ನು ತೆರೆಯಲು ಅವಕಾಶ ನೀಡಲಾಗಿದ್ದು, ಮೆಟ್ರೋ ಸೇರಿ ಸಾರ್ವಜನಿಕ ಸಾರಿಗೆ ಶೇಕಡ 100 ಪ್ರಯಾಣಿಕರೊಂದಿಗೆ ಕಾರ್ಯಾಚರಣೆ

ಜು.5ರಿಂದ ರಾಜ್ಯದಲ್ಲಿ ಅನ್ ಲಾಕ್ 3.0 ಜಾರಿ; ಹಲವು ನಿರ್ಬಂಧ ಸಡಿಲಿಕೆ, ಮಾಲ್, ಶ್ರದ್ದಾಕೇಂದ್ರಗಳು ಓಪನ್ Read More »

ಟೀಚರ್ ಕೆಲಸಕ್ಕೆ ಅರ್ಜಿ ಸಲ್ಲಿಸಿದ ಸಚಿನ್ ತೆಂಡೂಲ್ಕರ್ ಪುತ್ರ ಎಂಎಸ್ ಧೋನಿ….!?

ಛತ್ತಿಸ್’ಗಢ: ಶಿಕ್ಷಕರ ಹುದ್ದೆಗೆ ಎಂಎಸ್ ಧೋನಿ ಎಂಬ ಅಭ್ಯರ್ಥಿ ಹೆಸರಿನ ಅರ್ಜಿ ಸಲ್ಲಿಕೆ ಆದ ಘಟನೆ ಛತ್ತಿಸ್’ಗಢ ರಾಜ್ಯದಲ್ಲಿ ನಡೆದಿದೆ. ಅರ್ಜಿಯಲ್ಲಿ ಎಂಎಸ್ ಧೋನಿ ತಂದೆ ಸಚಿನ್ ತೆಂಡೂಲ್ಕರ್ ಎಂದು ನಮೂದು ಆಗಿರುವುದು ಮತ್ತಷ್ಟು ಅಚ್ಚರಿ ಮೂಡಿಸಿದೆ. ಅಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ಒಟ್ಟು 14,850 ಶಿಕ್ಷಕರ ನೇಮಕಾತಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿತ್ತು. ಇದಕ್ಕೆ ಲಕ್ಷಾಂತರ ಮಂದಿ ಉದ್ಯೋಗಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಅಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸುವಾಗ ಎಂಎಸ್ ಧೋನಿ ಎಂಬ ಅಭ್ಯರ್ಥಿಯ ಹೆಸರು ಇರುವ ಅರ್ಜಿ ಪತ್ತೆಯಾಗಿದೆ.

ಟೀಚರ್ ಕೆಲಸಕ್ಕೆ ಅರ್ಜಿ ಸಲ್ಲಿಸಿದ ಸಚಿನ್ ತೆಂಡೂಲ್ಕರ್ ಪುತ್ರ ಎಂಎಸ್ ಧೋನಿ….!? Read More »