Editor

ಕ್ಷೇತ್ರದ ಜನ ನನ್ನನ್ನು ಆರು ಬಾರಿ ಗೆಲ್ಲಿಸಿದ್ದಾರೆ | ನಾನು ಯಾವತ್ತೂ, ಯಾರನ್ನೂ ಕಡೆಗಣಿಸಿಲ್ಲ | ಕಿಡಿಕಾರಿದ ಭೋಜೇಗೌಡರಿಗೆ ಪ್ರತಿಕ್ರಿಯೆಸಿದ ಎಸ್. ಅಂಗಾರ

ಚಿಕ್ಕಮಗಳೂರು: ತನ್ನ ವಿರುದ್ಧ ಕಿಡಿಕಾರಿದ ಭೋಜೆಗೌಡರಿಗೆ, ಕ್ಷೇತ್ರದ ಜನ ನನ್ನನ್ನು ಆರು ಬಾರಿ ಗೆಲ್ಲಿಸಿದ್ದಾರೆ. ನಾನು ಯಾವತ್ತೂ, ಯಾರನ್ನೂ ಕಡೆಗಣಿಸಿಲ್ಲ ಎಂದು ಹೇಳುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಪ್ರತಿಕ್ರಿಯೆ ನೀಡಿದರು. ತಮ್ಮ ಮೇಲಿನ ಆರೋಪಕ್ಕೆ ತಾಲೂಕಿನ ಸಖರಾಯಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಯಾವುದೇ ಪಕ್ಷದ, ಯಾವುದೇ ಜನಪ್ರತಿನಿಧಿಯನ್ನು ಕಡೆಗಣಿಸಿಲ್ಲ. ಯಾವುದೇ ಸಭಾ ಕಾರ್ಯಕ್ರಮ ಮಾಡಿಲ್ಲ. ನನ್ನ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳ ಬಗ್ಗೆ ಸ್ಥಳ ಪರಿಶೀಲನೆ ಮಾಡಿದ್ದೇನೆ. ನಾನು ಜಿಲ್ಲಾ ಉಸ್ತುವಾರಿ ಸಚಿವನಾದ ಮೇಲೆ […]

ಕ್ಷೇತ್ರದ ಜನ ನನ್ನನ್ನು ಆರು ಬಾರಿ ಗೆಲ್ಲಿಸಿದ್ದಾರೆ | ನಾನು ಯಾವತ್ತೂ, ಯಾರನ್ನೂ ಕಡೆಗಣಿಸಿಲ್ಲ | ಕಿಡಿಕಾರಿದ ಭೋಜೇಗೌಡರಿಗೆ ಪ್ರತಿಕ್ರಿಯೆಸಿದ ಎಸ್. ಅಂಗಾರ Read More »

ಮನೆ ಗೋಡೆ ಕುಸಿದು ಓರ್ವ ಸಾವು | ಇನ್ನೋರ್ವ ಗಂಭೀರ

ಕಾರವಾರ: ಮನೆ ದುರಸ್ತಿ ವೇಳೆ ಗೋಡೆ ಕುಸಿದು ಕಾರ್ಮಿಕ ಸಾವನ್ನಪ್ಪಿದ್ದು, ಇನ್ನೋರ್ವ ಕಾರ್ಮಿಕನ ಸ್ಥಿತಿ ಗಂಭೀರವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸದಾಶಿವಘಡದ ವೈಶ್ಯವಾಡದಲ್ಲಿ ನಡೆದಿದೆ. ಹುಚ್ಚಪ್ಪ (35) ಸ್ಥಳದಲ್ಲೇ ಸಾವು ಕಂಡ ಕಾರ್ಮಿಕನಾಗಿದ್ದು, ಗೋಡೆಯ ಅಡಿಯಲ್ಲಿ ಸಿಲುಕಿಕೊಂಡಿದ್ದ ಇನ್ನೋರ್ವ ಕಾರ್ಮಿಕನನ್ನು ಅಗ್ನಿಶಾಮ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಇಂದು ಸದಾಶಿವಘಡದ ತುಳಸಿ ಬಾಯಿ ಅವರ ಮನೆಯ ದುರಸ್ತಿ ಕಾರ್ಯ ಮಾಡಲು ಕಾರ್ಮಿಕರು ತೆರಳಿದ್ದರು. ಈ ವೇಳೆ ಗೋಡೆ ಕೆಡವುವಾಗ ಘಟನೆ ನಡೆದಿದೆ. ಈ

ಮನೆ ಗೋಡೆ ಕುಸಿದು ಓರ್ವ ಸಾವು | ಇನ್ನೋರ್ವ ಗಂಭೀರ Read More »

ದಕ ದಲ್ಲಿ ವೀಕೆಂಡ್ ಕರ್ಫ್ಯೂ ಆನ್ | ಜಿಲ್ಲೆಯಲ್ಲಿ ಹೇಗಿದೆ ಕೋವಿಡ್ ಪರಿಸ್ಥಿತಿ | ಜಿಲ್ಲಾಧಿಕಾರಿ ನೀಡಿದ ಮಾಹಿತಿಯ ವಿಡಿಯೋ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7ಗಂಟೆವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲ್ಲಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಇನ್ನು ಈ ಅವಧಿಯಲ್ಲಿ ಹಾಲು, ಪತ್ರಿಕೆ, ಮೆಡಿಕಲ್ ಹಾಗೂ ತುರ್ತು ಸೇವೆಗಳಿಗಷ್ಟೇ ಅವಕಾಶವಿದೆ. ವೀಕೆಂಡ್ ಕರ್ಫ್ಯೂವಿನಲ್ಲಿ ದಿನಸಿ ಅಂಗಡಿ, ಮದ್ಯದಂಗಡಿ ಸೇರಿದಂತೆ ಎಲ್ಲಾ ಅಂಗಡಿಗಳು ಬಂದ್ ಆಗಲಿದ್ದು, ತುರ್ತು ಸೇವೆಗಳಿಗೆ ಮಾತ್ರ ಅವಕಾಶವಿರಲಿದೆ.ಎಲ್ಲಾ ರಾಜ್ಯ ಮತ್ತು ಕೇಂದ್ರ ಸರಕಾರದ ಕಚೇರಿಗಳು ಮತ್ತು ಅವುಗಳ ಸ್ವಾಯತ್ತ ಸಂಸ್ಥೆಗಳು, ನಿಗಮಗಳು, ತುರ್ತು ಅಗತ್ಯ ಸೇವೆಗಳು ಮತ್ತು ಕೋವಿಡ್

ದಕ ದಲ್ಲಿ ವೀಕೆಂಡ್ ಕರ್ಫ್ಯೂ ಆನ್ | ಜಿಲ್ಲೆಯಲ್ಲಿ ಹೇಗಿದೆ ಕೋವಿಡ್ ಪರಿಸ್ಥಿತಿ | ಜಿಲ್ಲಾಧಿಕಾರಿ ನೀಡಿದ ಮಾಹಿತಿಯ ವಿಡಿಯೋ Read More »

ಶಿಕ್ಷಣ ಸಚಿವರೇನು ಗೆಣಸು ಕೀಳೋದಕ್ಕಿರೋದಾ? |ಆಕ್ರೋಶಭರಿತ ಪೋಷಕರಿಂದ ಹಿಗ್ಗಾಮುಗ್ಗಾ ತರಾಟೆ

ಬೆಂಗಳೂರು: ಶಿಕ್ಷಣ ಸಚಿವ ಸುರೇಶ್ ಕುಮಾರ್​ ಅವರನ್ನು ನಾರಾಯಣ ಇ-ಟೆಕ್ನೊ ಶಾಲಾ ಮಕ್ಕಳ ಪೋಷಕರು ಇಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ. ಶಿಕ್ಷಣ ಸಚಿವರ ಪಂಚೇಂದ್ರಿಯಗಳೇ ಸತ್ತು ಹೋಗಿದೆ. ಅವರ ತೆವಲನ್ನ ತೀರಿಸಿಕೊಳ್ಳಲು ಹೀಗೆಲ್ಲ ನಡೆದುಕೊಳ್ತಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಖಾಸಗಿ ಶಾಲೆಗಳ ಗುಲಾಮರಾಗಿದ್ದಾರೆ. ಶುಲ್ಕ ಸಮಸ್ಯೆ ಬಗೆಹರಿಸೊಲ್ಲ ಅಂದ್ರೆ ಸಚಿವ ಸ್ಥಾನದಲ್ಲಿ ಯಾಕಿದ್ದೀರಿ? ಸಚಿವ ಸ್ಥಾನ ನಿಭಾಯಿಸೋಕೆ ಆಗೊಲ್ಲ ಅಂದ್ರೆ ಕೆಳಗಿಳಿಯಿರಿ ಎಂದು ಪೋಷಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಮಸ್ಯೆಯನ್ನ ಪೋಷಕರು ಮತ್ತು ಖಾಸಗಿ ಶಾಲೆಗಳೇ

ಶಿಕ್ಷಣ ಸಚಿವರೇನು ಗೆಣಸು ಕೀಳೋದಕ್ಕಿರೋದಾ? |ಆಕ್ರೋಶಭರಿತ ಪೋಷಕರಿಂದ ಹಿಗ್ಗಾಮುಗ್ಗಾ ತರಾಟೆ Read More »

ಮುಸ್ಲಿಂ ಯುವತಿ, ದಲಿತ ಯುವಕನ ಬರ್ಬರ ಹತ್ಯೆ ಪ್ರಕರಣ | ಕಲ್ಲು ಎತ್ತಿ ಹಾಕಿದ ಆರೋಪಿಗಳು ಅಂದರ್

ವಿಜಯಪುರ: ಮುಸ್ಲಿಂ ಯುವತಿ ಹಾಗೂ ದಲಿತ ಯುವಕನನ್ನು ಬರ್ಬರ ಹತ್ಯೆ ಮಾಡಿ, ಜಿಲ್ಲೆಯ ಸಲಾಡಹಳ್ಳಿ ಗುಡ್ಡಪ್ರದೇಶದಲ್ಲಿ ಇಬ್ಬರ ಶವನ್ನು ಎಸೆಯಲಾಗಿತ್ತು. ಇದೀಗ ಈ ಪ್ರಕರಣ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಲಕೇರಿ ಠಾಣಾ ವ್ಯಾಪ್ತಿಯಲ್ಲಿ ಮೊನ್ನೆ ಮಧ್ಯಾಹ್ನ ಬಸವರಾಜ್ (19), ದಾವಲಭಿ (18) ಎಂಬ ಪ್ರೇಮಿಗಳ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ಹತ್ಯೆ ಮಾಡಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಯುವತಿ ತಂದೆ ಬಂದಗಿಸಾಬ್ ತಂಬದ್ (50), ಸಹೋದರ ದಾವಲ್ ಪಟೇಲ್ (29), ಅಳಿಯರಾದ

ಮುಸ್ಲಿಂ ಯುವತಿ, ದಲಿತ ಯುವಕನ ಬರ್ಬರ ಹತ್ಯೆ ಪ್ರಕರಣ | ಕಲ್ಲು ಎತ್ತಿ ಹಾಕಿದ ಆರೋಪಿಗಳು ಅಂದರ್ Read More »

ಸಚಿವರಾಗಿದ್ರೂ ಅಂಗಾರರಿಗೆ ಪ್ರೋಟೋಕಾಲ್ ಗೊತ್ತಿಲ್ವೇ…? | ಕಿಡಿಕಾರಿದ ಎಂಎಲ್ ಸಿ ಭೋಜೇಗೌಡ

ಚಿಕ್ಕಮಗಳೂರು: ಜಿಲ್ಲಾಡಳಿತ ನನ್ನನ್ನು ನಿರ್ಲಕ್ಷ್ಯ ಮಾಡಿದೆ, ಜಿಲ್ಲಾ ಉಸ್ತುವಾರಿ ಸಚಿವರು ನನ್ನನ್ನು ಸಭೆಗಳಿಗೆ ಕರೆಯದೆ ಪ್ರೊಟೊಕಾಲ್ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ವಿಧಾನಪರಿಷತ್ ಸದಸ್ಯ , ಜೆಡಿಎಸ್ ಮುಖಂಡ ಎಸ್.ಎಲ್ ಭೋಜೇಗೌಡ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕುಳಿತ ಪ್ರಸಂಗ ನಡೆದಿದೆ. ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡಿದೆ. ಯಾವುದೇ ಸಭೆ -ಕಾರ್ಯಕ್ರಮಗಳಿಗೆ ಕರೆಯುವುದಿಲ್ಲ ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ಏಕಾಂಗಿಯಾಗಿ ಕುಳಿತು ಪ್ರತಿಭಟನೆ ನಡೆಸಿದರು. ‘ಹಲವು ಬಾರಿ ಶಾಸಕರಾಗಿ, ಈಗ ಸಚಿವರಾಗಿದ್ರೂ ಜಿಲ್ಲಾ ಮಂತ್ರಿಗಳಿಗೆ ಪ್ರೊಟೋಕಾಲ್ ಏನೆಂದು ಗೊತ್ತಿಲ್ವೇ?

ಸಚಿವರಾಗಿದ್ರೂ ಅಂಗಾರರಿಗೆ ಪ್ರೋಟೋಕಾಲ್ ಗೊತ್ತಿಲ್ವೇ…? | ಕಿಡಿಕಾರಿದ ಎಂಎಲ್ ಸಿ ಭೋಜೇಗೌಡ Read More »

ತೋಟಕ್ಕೆ ಹೋದ ರೈತನ ಬರ್ಬರ ಹತ್ಯೆ ಪ್ರಕರಣ | ತಂದೆಯ ಕೊಲೆಗೆ ಲಕ್ಷ ರೂ. ಸುಪಾರಿ ಕೊಟ್ಟಿದ್ದ ಮಗ | ಒಂದಲ್ಲ, ಎರಡಲ್ಲ ಮೂರನೇ ಪ್ರಯತ್ನಕ್ಕೆ ತಂದೆ ಯಮಲೋಕಕ್ಕೆ

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ಜೋಡಿಬಿಸಲಹಳ್ಳಿ ಗ್ರಾಮದಲ್ಲಿ ತೋಟಕ್ಕೆ ಹೋದ ರೈತನ ಬರ್ಬರ ಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಪಾಪಿ ಮಗನೇ ಸುಪಾರಿ ಲಕ್ಷ ರೂ.ಕೊಟ್ಟು ಜನ್ಮ ಕೊಟ್ಟ ತಂದೆಯನ್ನೇ ಕೊಲೆ ಮಾಡಿಸಿರುವುದಾಗಿ, ಅದಲ್ಲದೆ ಒಂದಲ್ಲಾ, ಎರಡಲ್ಲಾ ಮೂರನೇ ಬಾರಿಯಲ್ಲಿ ತಂದೆ ತಂದೆಯ ಕೊಲೆ ನಡೆದಿದೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ರೈತ ಶ್ರೀನಿವಾಸಮೂರ್ತಿ (65)ರವರು ಮಗನಿಂದ ಕೊಲೆಯಾದವರು. ಅವರ ಮಗ ರೋಹಿತ್, ಹಾಗೂ ರಂಗನಾಥ್ ಮತ್ತು ರವಿಕುಮಾರ್ ಕೊಲೆ ಪ್ರಕರಣದ ಅರೋಪಿಗಳು. ಶ್ರೀನಿವಾಸಮೂರ್ತಿಯವರ ಮಗ

ತೋಟಕ್ಕೆ ಹೋದ ರೈತನ ಬರ್ಬರ ಹತ್ಯೆ ಪ್ರಕರಣ | ತಂದೆಯ ಕೊಲೆಗೆ ಲಕ್ಷ ರೂ. ಸುಪಾರಿ ಕೊಟ್ಟಿದ್ದ ಮಗ | ಒಂದಲ್ಲ, ಎರಡಲ್ಲ ಮೂರನೇ ಪ್ರಯತ್ನಕ್ಕೆ ತಂದೆ ಯಮಲೋಕಕ್ಕೆ Read More »

ಪುತ್ತೂರು: ಯುವಕ ನೇಣಿಗೆ ಶರಣು

ಪುತ್ತೂರು: ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲದಲ್ಲಿ ನಡೆದಿದೆ. ಇಲ್ಲಿನ ನೆರೋಲ್ತಡ್ಕ ನಿವಾಸಿ 20 ವರ್ಷದ ಯುವಕ ಶರತ್ ಆತ್ಮಹತ್ಯೆ ಮಾಡಿಕೊಂಡವರು. ಇಂದು ಮದ್ಯಾಹ್ನ ಇದ್ದಕ್ಕಿದ್ದಂತೆ ಶರತ್ ಮನೆಯಿಂದ ಕಾಣೆಯಾಗಿದ್ದಾರೆ. ಮನೆಯವರು ಹುಡುಕಾಡಿದಾಗ ಮನೆಯ ಪಕ್ಕದ ರಬ್ಬರ್ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶರತ್ಪ ಮೃತದೇಹ ಪತ್ತೇಯಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈಶ್ವರಮಂಗಲ ಹೊರಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪುತ್ತೂರು: ಯುವಕ ನೇಣಿಗೆ ಶರಣು Read More »

ಕನಸಿನಲ್ಲಿ ಬಂದು ನಿರಂತರ ಅತ್ಯಾಚಾರ……! | ಪೊಲೀಸರಿಗೆ ದೂರು ನೀಡಿದ ಮಹಿಳೆ

ಔರಂಗಬಾದ್: ಮಂತ್ರವಾದಿಯೊಬ್ಬ ನಿತ್ಯ ಕನಸಿನಲ್ಲಿ ಬಂದು ನನ್ನ ಮೇಲೆ ಅತ್ಯಾಚಾರ ಎಸಗುತ್ತಿದ್ದಾನೆ ಎಂದು ಆರೋಪಿಸಿ ಮಹಿಯೊಬ್ಬಳು ಪೊಲೀಸರಿಗೆ ದೂರು ನೀಡಿದ ಘಟನೆ ಜಿಲ್ಲೆಯ ಕುದ್ವ ಎಂಬಲ್ಲಿ ನಡೆದಿದೆ. ನನ್ನ ಮಗನಿಗೆ ಹುಷಾರಿಲ್ಲದೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದರೂ ಆತ ಗುಣಮುಖವಾಗಿರಲಿಲ್ಲ. ಹಾಗಾಗಿ ಮಂತ್ರವಾದಿ ಪ್ರಶಾಂತ್ ಚತುರ್ವೇದಿ ಬಳಿ ತೆರಳಿ ಖಾಯಿಲೆ ಗುಣಪಡಿಸುವಂತೆ ಕೇಳಿಕೊಂಡಿದ್ದೆ. ಆ ವೇಳೆ ಆತ ಮಗುವಿನ ಚೇತರಿಕೆಗಾಗಿ ಮಂತ್ರ ಒಂದನ್ನು ಹೇಳಿಕೊಟ್ಟಿದ್ದ. ಅದನ್ನು ಪಠಿಸುತ್ತಾ ದಿನನಿತ್ಯ ಶಾಸ್ತ್ರ ಒಂದನ್ನು ಮಾಡಲು ತಿಳಿಸಿದ್ದ. ಆತನ ಸೂಚನೆಯನ್ನು

ಕನಸಿನಲ್ಲಿ ಬಂದು ನಿರಂತರ ಅತ್ಯಾಚಾರ……! | ಪೊಲೀಸರಿಗೆ ದೂರು ನೀಡಿದ ಮಹಿಳೆ Read More »

ಉಡುಪಿ : ಚೆಕ್ ದುರ್ಬಳಕೆ | 10 ಲಕ್ಷ ರೂ. ವಂಚನೆ

ಉಡುಪಿ: ಪ್ರೋವಿಶನ್ ಸ್ಟೋರ್ಸ್ ಮಾಲೀಕರ ಸ್ಕೂಟರ್‌ನಲ್ಲಿದ್ದ ಬ್ಯಾಗ್ ಕದ್ದು ಅದರಲ್ಲಿದ್ದ ಚೆಕ್‌ಗಳನ್ನು ದುರ್ಬಳಕೆ ಮಾಡಿ ೧೦ ಲಕ್ಷ ರೂ. ವಂಚಿಸಿದ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬ್ರಹ್ಮಾವರ ದೂಪದಕಟ್ಟೆ ನಿವಾಸಿ ಗೋಪಾಲ ಅಮೀನ್ (55) ಎಂದು ಗುರುತಿಸಲಾಗಿದೆ. ಈತ 2019ರ ಜುಲೈ 13ರಂದು ಕರಾವಳಿ ಬೈಪಾಸ್‌ನ ಬಳಿ ಸಂತೆಕಟ್ಟೆಯಲ್ಲಿರುವ ದಶಮಿ ಪ್ರೋವಿಶನ್ ಸ್ಟೋರ್ಸ್ ಮಾಲೀಕರಾದ ಉಡುಪಿಯ ತೋನ್ಸೆ ಗ್ರಾಮದ ನಿವಾಸಿ ಉದಯ ಕುಮಾರ ಎಂಬವರ ಸ್ಕೂಟರ್‌ನ ಬ್ಯಾಗ್‌ನಲ್ಲಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಲ್ಯಾಣಪುರ ಶಾಖೆಯ

ಉಡುಪಿ : ಚೆಕ್ ದುರ್ಬಳಕೆ | 10 ಲಕ್ಷ ರೂ. ವಂಚನೆ Read More »