Editor

ಪತಿಯ ಕುಚಿಕು ಜೊತೆ ಹೆಂಡತಿಯ ಕುಚುಕುಚು | ಮನೆ ಕಡೆ ಸ್ವಲ್ಪ ನೋಡಿಕೋ ಎಂದಾತನ ಹೆಂಡತಿಯನ್ನೇ ಲಪಟಾಯಿಸಿದ ಸ್ನೇಹಿತ

ಬೆಂಗಳೂರು: ಹೊರ ಊರಿನಲ್ಲಿ ಕೆಲಸದಲ್ಲಿದ್ದ ಸ್ನೇಹಿತನ ಹೊಸ ಮನೆ ಕೆಲಸ ನೋಡಿಕೊಳ್ಳಲು ಬಂದ ಗೆಳೆಯನೊಂದಿಗೆ ಮನೆ ಮಾಲೀಕನ ಪತ್ನಿಯೇ ಪರಾರಿಯಾದ ಘಟನೆ ನಗರದ ಕೋಣನಕುಂಟೆ ಎಂಬಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ದೇವರಾಜ್ ಎಂಬವರು ನೂತನ ಮನೆ ನಿರ್ಮಾಣ ಮಾಡುತ್ತಿದ್ದರು. ಜೊತೆಯಲ್ಲಿ ಕೆಲಸಕ್ಕೂ ಹೋಗುತ್ತಿದ್ದರು. ಈ ಸಮಯದಲ್ಲಿ ಊರಿನಲ್ಲೇ ಇದ್ದ ಗೆಳೆಯ ಮಹೇಶನಿಗೆ ಮನೆ ಕೆಲಸದವರನ್ನು ನೋಡಿಕೊಳ್ಳುವ ಉಸ್ತುವಾರಿ ನೀಡಿದ್ದರು. ಮನೆ ನಿರ್ಮಾಣದ ಕೆಲಸದವರನ್ನು ನೋಡಿಕೊಳ್ಳಲು ಬಂದ ಮಹೇಶ, ದೇವರಾಜ್ ರ ಹೆಂಡತಿಯನ್ನೇ ನೋಡಿಕೊಂಡಿದ್ದಾನೆ. ನಿತ್ಯ ಬರುತ್ತಿದ್ದ ದೇವರಾಜ್ […]

ಪತಿಯ ಕುಚಿಕು ಜೊತೆ ಹೆಂಡತಿಯ ಕುಚುಕುಚು | ಮನೆ ಕಡೆ ಸ್ವಲ್ಪ ನೋಡಿಕೋ ಎಂದಾತನ ಹೆಂಡತಿಯನ್ನೇ ಲಪಟಾಯಿಸಿದ ಸ್ನೇಹಿತ Read More »

ದಕ್ಷಿಣ ಆಫ್ರಿಕಾದ ಧಗಧಗ | 250ಕ್ಕೂ ಹೆಚ್ಚು ಬಲಿ | ಹಿಂಸಾಚಾರಿಗಳಿಗೆ ಭಾರತೀಯರೇ ಟಾರ್ಗೆಟ್…!

ಡರ್ಬನ್: ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜೋಕೋಬ್ ಜೂಮಾ ಬಂಧನದ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಸುಮಾರು 250ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಹಿಂಸಾಚಾರಿಗಳು ಭಾರತೀಯರನ್ನು ಟಾರ್ಗೆಟ್ ಮಾಡುತ್ತಿದ್ದು 70ಕ್ಕೂ ಹೆಚ್ಚು ಭಾರತೀಯ ಮೂಲದವರನ್ನು ಕೊಲ್ಲಲಾಗಿದೆ. ಮಾಜಿ ಅಧ್ಯಕ್ಷ ಜೋಕೋಬ್ ಜೂಮಾ ಅವರು ತಮ್ಮ ಅಧಿಕಾರವಧಿಯಲ್ಲಿ ಮಾಡಿದ ಜನಾಂಗೀಯ ನಿಂದನೆ ಆರೋಪ ಎದುರಿಸುತ್ತಿದ್ದು ಕಳೆದವಾರ ಬಂಧನವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜಕೀಯ ಪ್ರೇರಿತ ಹಿಂಸಾಚಾರ ಭುಗಿಲೆದ್ದಿದ್ದು ಇಂದು ಆರನೇ ದಿನಕ್ಕೆ ಕಾಲಿಟ್ಟಿದೆ. ಆಕ್ರೋಶಿತ ಜನರು ಅಂಗಡಿ ಮುಂಗಟ್ಟುಗಳನ್ನು ಒಡೆದು ಹಾಕುತ್ತಿದ್ದು

ದಕ್ಷಿಣ ಆಫ್ರಿಕಾದ ಧಗಧಗ | 250ಕ್ಕೂ ಹೆಚ್ಚು ಬಲಿ | ಹಿಂಸಾಚಾರಿಗಳಿಗೆ ಭಾರತೀಯರೇ ಟಾರ್ಗೆಟ್…! Read More »

ನಂದಿಬೆಟ್ಟಕ್ಕೆ ಶನಿವಾರ-ಭಾನುವಾರ ನೋ ಎಂಟ್ರಿ

ಚಿಕ್ಕಬಳ್ಳಾಪುರ: ಶನಿವಾರ ಮತ್ತು ಭಾನುವಾರ ನಂದಿಬೆಟ್ಟವನ್ನು ಸಂಪೂರ್ಣ ಬಂದ್ ಮಾಡಲಾಗುತ್ತಿದ್ದು, ಪ್ರವಾಸಿಗರೇ ನಂದಿಬೆಟ್ಟಕ್ಕೆ ಬರಬೇಡಿ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಆದೇಶಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಲತಾ ಅವರು, ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಶನಿವಾರ ಹಾಗೂ ಭಾನುವಾರ ಸಾವಿರಾರು ಮಂದಿ ಪ್ರವಾಸಿಗರು ನಂದಿಬೆಟ್ಟಕ್ಕೆ ಆಗಮಿಸಿಸುತ್ತಾರೆ. ಇದರಿಂದ ಕೊರೊನಾ ನಿಯಮಗಳನ್ನು ಉಲ್ಲಂಘನೆ ಅಲ್ಲದೆ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿ ಪ್ರವಾಸಿಗರು ಪರದಾಡುವಂತಾಗಿದೆ. ಕಳೆದ ಭಾನುವಾರ 12,000 ಮಂದಿ ಪ್ರವಾಸಿಗರು ನಂದಿಬೆಟ್ಟಕ್ಕೆ ಬಂದು ಹೋಗಿದ್ದು, ಪ್ರವಾಸಿಗರ

ನಂದಿಬೆಟ್ಟಕ್ಕೆ ಶನಿವಾರ-ಭಾನುವಾರ ನೋ ಎಂಟ್ರಿ Read More »

ಕುಂದಾಪುರ: ಗಾಳಿ-ಮಳೆ |ಮನೆ ಮೇಲೆ ಮರ ಬಿದ್ದು ದಂಪತಿಗೆ ಗಾಯ

ಉಡುಪಿ: ಭಾರಿ ಗಾಳಿ ಮಳೆಯಿಂದ ಮನೆ ಮೇಲೆ ಮರ ಬಿದ್ದು ಮನೆಯೊಳಗಿದ್ದ ದಂಪತಿಗೆ ಗಂಭೀರ ಗಾಯವಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾದ ಘಟನೆ ಕುಂದಾಪುರದಲ್ಲಿ ನಡೆದಿದೆ. ಬಸ್ರೂರು ಮಕ್ಕಿಮನೆ ಗಣಪಯ್ಯ ಗಾಣಿಗರಿಗೆ ಸೇರಿದ ಮನೆ ಇದಾಗಿದ್ದು, ಗಣಪಯ್ಯ ಗಾಣಿಗ ಮತ್ತು ಪತ್ನಿ ವಾರಿಜ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ. ಕಳೆದ ರಾತ್ರಿ ಈ ಘಟನೆ ನಡೆದಿದ್ದು ಮನೆಯ ಪಕ್ಕದಲ್ಲಿದ್ದ ತೆಂಗಿನ ಮರ ಮತ್ತು ಬೃಹತ್ ಗಾತ್ರದ ಧೂಪದ ಮರ ಬಿದ್ದು ಮನೆ ಹಾನಿಯಾಗಿದೆ. ಮನೆಯಲ್ಲಿ ಇದ್ದ ಮಕ್ಕಳಿಗೆ

ಕುಂದಾಪುರ: ಗಾಳಿ-ಮಳೆ |ಮನೆ ಮೇಲೆ ಮರ ಬಿದ್ದು ದಂಪತಿಗೆ ಗಾಯ Read More »

ಕಾಸರಗೋಡು: ಬೈಕ್ ಢಿಕ್ಕಿ | ಪಾದಚಾರಿ ಮೃತ್ಯು

ಕಾಸರಗೋಡು: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಯುವಕನೋರ್ವ ಬೈಕ್ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಇಂದು (ಜು.15 ರಂದು) ನಡೆದಿದೆ. ಮೃತರನ್ನು ತೃಕ್ಕನ್ನಾಡ್ ನಿವಾಸಿ ರತೀಶ್ ( 37) ಎಂದು ಗುರುತಿಸಲಾಗಿದೆ. ಇವರು ಮೀನು ಕಾರ್ಮಿಕರಾಗಿದ್ದು, ರಾತ್ರಿ ಮನೆಗೆ ತೆರಳುತ್ತಿದ್ದಾಗ ಕಾಞ೦ಗಾಡ್ ಕಡೆಗೆ ತೆರಳುತ್ತಿದ್ದ ಬೈಕ್ ಢಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ರತೀಶ್ ರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಸರಗೋಡು: ಬೈಕ್ ಢಿಕ್ಕಿ | ಪಾದಚಾರಿ ಮೃತ್ಯು Read More »

ಶೃಂಗೇರಿ ಆಸಿಡ್ ದಾಳಿ ಪ್ರಕರಣ | ಆರೋಪಿಗಳಿಗೆ 20 ಲಕ್ಷ ದಂಡ ಸಹಿತ ಜೀವವಾಧಿ ಶಿಕ್ಷೆ ಪ್ರಕಟ

ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ಮಹಿಳೆಯ ಮೇಲೆ ಆಸಿಡ್ ದಾಳಿ ಪ್ರಕರಣದ ತೀರ್ಪು ಇಂದು ಹೊರ ಬಿದ್ದಿದೆ. ನಾಲ್ವರು ಆರೋಪಿಗಳಿಗೆ ತಲಾ 5 ಲಕ್ಷ ರು ದಂಡ ಮತ್ತು ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಬರೋಬ್ಬರಿ ಆರು ವರ್ಷಗಳ ಬಳಿಕ ಪ್ರಕರಣದ ತೀರ್ಪು ಹೊರ ಬಿದ್ದಿದೆ. ಆರೋಪಿಗಳನ್ನು ಸುದೀರ್ಘ ವಿಚಾರಣೆ ಬಳಿಕ ಅಪರಾಧಿಗಳು ಎಂದು ಸಾಬೀತುಪಡಿಸಲಾಗಿದೆ. ಆರೋಪಿಗಳಾದ ಗಣೇಶ್ ಅಲಿಯಾಸ್ ಗಣಿ (36), ಮಹಮ್ಮದ್ ಕಬೀರ್ (31), ವಿನೋದ್ ಕುಮಾರ್(38), ಹಾಗೂ ಅಬ್ದುಲ್ ವಾಜೀದ್(37) ಅವರಿಗೆ ಜೀವಾವಧಿ ಶಿಕ್ಷೆ

ಶೃಂಗೇರಿ ಆಸಿಡ್ ದಾಳಿ ಪ್ರಕರಣ | ಆರೋಪಿಗಳಿಗೆ 20 ಲಕ್ಷ ದಂಡ ಸಹಿತ ಜೀವವಾಧಿ ಶಿಕ್ಷೆ ಪ್ರಕಟ Read More »

ಮಂಗಳೂರು: ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ | ಅಂದಾಜು ಮುಕ್ಕಾಲು ಕೆಜಿ ಚಿನ್ನ ವಶ

ಮಂಗಳೂರು: ಇಂದು ವಿದೇಶದಿಂದ ಅಕ್ರಮವಾಗಿ ಚಿನ್ನ ತರುತ್ತಿದ್ದ ಇಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 703 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಅಧಿಕಾರಿಗಳು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸುತ್ತಿದ್ದರು. ಕೇರಳ ಮೂಲದ ಮೊಹ್ಮದ್ ಅನ್ಸಾರ್ ಹಾಗೂ ಮೊಹಮ್ಮದ್ ಮೂಸಾ ಮಿಯಾಸ್ ಬಂಧಿತರು. ಅವರಿಬ್ಬರು ಜೊತೆಗಿದ್ದ ಸೂಟ್‌ಕೇಸ್‌ನ ತಳಭಾಗದಲ್ಲಿ ಚಿನ್ನವನ್ನು ಅಡಗಿಸಿ ಇಟ್ಟು ಸಾಗಿಸುತ್ತಿದ್ದರು. ದುಬೈನಿಂದ ತರಲಾಗುತ್ತಿದ್ದ ಒಟ್ಟು ₹ 34,46,464 ಮೌಲ್ಯದ 703 ಗ್ರಾಂ‌ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು: ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ | ಅಂದಾಜು ಮುಕ್ಕಾಲು ಕೆಜಿ ಚಿನ್ನ ವಶ Read More »

ಕೃತಕ ಹಲ್ಲು ನುಂಗಿ ಮಹಿಳೆ ಸಾವು

ಚೆನ್ನೈ: ಆಕಸ್ಮಿಕವಾಗಿ ನೀರಿನೊಂದಿಗೆ ಕೃತಕ ಹಲ್ಲನ್ನು ನುಂಗಿದ ಮಹಿಳೆ ಮೃತಪಟ್ಟಿರುವ ಘಟನೆ ಜುಲೈ 4 ರಂದು ಚೆನ್ನೈನಲ್ಲಿ ನಡೆದಿದ್ದು. ವಲಸರವಕ್ಕಂನ 43 ವರ್ಷದ ಮಹಿಳೆ ರಾಜಲಕ್ಷ್ಮಿ ಎಂಬವರು ಮೃತಪಟ್ಟವರು. ಇವರು ನೀರು ಕುಡಿಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೃತಕ ಹಲ್ಲನ್ನು ನುಂಗಿದ್ದಾರೆ. ಆ ಬಳಿಕ ಮಹಿಳೆಗೆ ತಲೆತಿರುಗುವಿಕೆ ಮತ್ತು ವಾಂತಿ ಉಂಟಾಗಿತ್ತು. ಬಳಿಕ ವೈದ್ಯರು ಆಕೆಯನ್ನು ಪರೀಕ್ಷಿಸಿ ಬಿಡುಗಡೆ ಮಾಡಿದ್ದರು. ಮರುದಿನ, ಪರೀಕ್ಷಿಸಿಸಲು ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ನಿಧನರಾದರು. ಶವಪರೀಕ್ಷೆ ನಡೆಸಿ ದೇಹವನ್ನು ಬಿಟ್ಟುಕೊಡಲಾಗಿದೆ. ಕ್ರಿಮಿನಲ್ ಪ್ರೊಸಿಜರ್ನ ಕೋಡ್ನ

ಕೃತಕ ಹಲ್ಲು ನುಂಗಿ ಮಹಿಳೆ ಸಾವು Read More »

ಸುಳ್ಯ: ಬೇರೊಬ್ಬರ ಖಾತೆಗೆ ಜಮೆಯಾಯ್ತು ವಸತಿ ಯೋಜನೆಯ ಒಂದು ಕಂತು | ಇನ್ನೊಂದು ಕಂತು ಮಾಯ | ಕೊಡಿಯಾಲ ಗ್ರಾ.ಪಂ., ಇಲಾಖೆ ಎಡವಟ್ಟಿಗೆ ಬಡ ಮಹಿಳೆಯ ಪರದಾಟ

ಸುಳ್ಯ: ವಸತಿ ಯೋಜನೆಯ ಫಲಾನುಭವಿ ಮಹಿಳೆಯೊಬ್ಬರ ಕಂತಿನ ಹಣ ಅಧಿಕಾರಿಗಳ ಎಡವಟ್ಟಿನಿಂದ ಬೇರೊಬ್ಬರ ಖಾತೆಗೆ ಜಮೆಯಾಗಿದೆ. ಇದರಿಂದ ಬಡ ಮಹಿಳೆ ಮನೆ ಪೂರ್ಣಗೊಳ್ಳದೆ ಪರದಾಡುವಂತಾಗಿದೆ. ಈ ಬಗ್ಗೆ ವಿಚಾರಿಸಿದರೆ ಪಂಚಾಯತ್ ಮತ್ತು ಇಲಾಖೆ ಅಧಿಕಾರಿಗಳು ಇದು ನಮ್ಮ ತಪ್ಪಲ್ಲ ಎಂದು ಪರಸ್ಪರ ದೂರಿಕೊಂಡು ಸುಮ್ಮನಾಗುತ್ತಿದ್ದಾರೆ. ಇತ್ತ ಫಲಾನುಭವಿ ಮಹಿಳೆಗೆ ದಿಕ್ಕುತೋಚದಂತಾಗಿದೆ. 2015-16 ನೇ ಸಾಲಿನ ಡಾ. ಬಿ ಆರ್ ಅಂಬೇಡ್ಕರ್ ಗ್ರಾಮೀಣ ವಸತಿ ಯೋಜನೆಯಡಿಯಲ್ಲಿ ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಕಲ್ಪನೆಯ ಪರಿಶಿಷ್ಟ ಜಾತಿಯ ಶ್ರೀಮತಿ ರಾಜೀವಿ

ಸುಳ್ಯ: ಬೇರೊಬ್ಬರ ಖಾತೆಗೆ ಜಮೆಯಾಯ್ತು ವಸತಿ ಯೋಜನೆಯ ಒಂದು ಕಂತು | ಇನ್ನೊಂದು ಕಂತು ಮಾಯ | ಕೊಡಿಯಾಲ ಗ್ರಾ.ಪಂ., ಇಲಾಖೆ ಎಡವಟ್ಟಿಗೆ ಬಡ ಮಹಿಳೆಯ ಪರದಾಟ Read More »

ಮಡಿಕೇರಿ: ಮುಂದುವರಿದ ವರುಣನ ಆರ್ಭಟ | ಆಕಾಶವಾಣಿ ಟವರ್ ತಡೆಗೋಡೆ ಕುಸಿತ

ಕೊಡಗು: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ಮಡಿಕೇರಿ ಆಕಾಶವಾಣಿ ಟವರ್ ನ ತಡೆಗೋಡೆ ಕುಸಿದಿದೆ. ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಕೊಡಗು ತತ್ತರಿಸಿದೆ. ಇಂದು ಆಕಾಶವಾಣಿಯ ಟವರ್ ನ ತಡೆಗೋಡೆ ಕುಸಿದಿದ್ದುಕಳೆದ ವರ್ಷದ ಮಳೆ ಕುಸಿದ ತಡೆಗೊಡೆಯನ್ನು ಮರು ನಿರ್ಮಿಸಲಾಗಿತ್ತು. ಕೊಡಗಿನ ಕಾವೇರಿ ನದಿ ತುಂಬಿ ಹರಿಯಿತ್ತಿದ್ದು ಹಲವೆಡೆಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಗಳು ಕಂಡುಬರುತ್ತಿವೆ. ಕಳೆದೆರಡು ವರ್ಷಗಳಿಂದ ಕೊಡಗಿನಲ್ಲಿ ಭಾರಿ ಮಳೆಗೆ ಗುಡ್ಡ ಕುಸಿತ ಉಂಟಾಗುತ್ತಿದ್ದು ಈ ವರ್ಷವೂ ಗುಡ್ಡ ಕುಸಿಯಲಾರಂಭಿಸಿದೆ.ಇದೀಗ ಕಳೆದ ಎರಡು

ಮಡಿಕೇರಿ: ಮುಂದುವರಿದ ವರುಣನ ಆರ್ಭಟ | ಆಕಾಶವಾಣಿ ಟವರ್ ತಡೆಗೋಡೆ ಕುಸಿತ Read More »