Editor

ಆಷಾಡ ಮಾಸದಲ್ಲೇಕೆ ದಂಪತಿಗಳು ದೂರ ಇರ್ತಾರೆ ಗೊತ್ತಾ?. ಇಲ್ಲಿನ ಶಾಸ್ತ್ರ ಹಾಗೂ ವೈಜ್ಞಾನಿಕ ಕಾರಣಗಳು.

ಹಿಂದೂ ಧರ್ಮ ಹಲವು ಸಾಂಸ್ಕೃತಿಕ ಆಚರಣೆಗಳನ್ನು ತನ್ನ ಉದರದಲ್ಲಿಟ್ಟುಕೊಂಡು ಜಗತ್ತಿನ ಗಮನ ಸೆಳೆಯುತ್ತಿದೆ. ಹಲವು ವಿದೇಶಿ ವಿದ್ವಾಂಸರು ಸಂಸ್ಕೃತಿಯೇ ಹಿಂದೂ ಧರ್ಮ ಎಂದು ವ್ಯಾಖ್ಯಾನ ಮಾಡಿದ್ದಾರೆ. ಅಲ್ಲದೇ ಹಿಂದೂ ಧರ್ಮದಲ್ಲಿ ಹಲವು ಧಾರ್ಮಿಕ ನಂಬಿಕೆಗಳು, ಆಚರಣೆಗಳು ಅಸ್ತಿತ್ವದಲ್ಲಿವೆ. ಅವು ಜನರ ಸಾಮಾಜಿಕ ಜೀವನದ ಭಾಗವೇ ಆಗಿವೆ. ಇಂತಹ ನಂಬಿಕೆಗಳಲ್ಲಿ ಕಾಲನ ಚಲನೆಯನ್ನು ತಿಳಿಸುವ 12 ಮಾಸಗಳು ಸಹ ಸೇರುತ್ತವೆ. ಸೌರಮಾನದ ಮಾಸಗಳಲ್ಲಿ ಆಷಾಢ ನಾಲ್ಕನೇ ಮಾಸವಾಗಿದ್ದು, ಇದು ಸಾಮಾನ್ಯವಾಗಿ ಜುಲೈ ಹಾಗೂ ಆಗಸ್ಟ್​ನಲ್ಲಿ ಪ್ರಾರಂಭವಾಗುತ್ತದೆ. ಈ ಮಾಸವನ್ನು […]

ಆಷಾಡ ಮಾಸದಲ್ಲೇಕೆ ದಂಪತಿಗಳು ದೂರ ಇರ್ತಾರೆ ಗೊತ್ತಾ?. ಇಲ್ಲಿನ ಶಾಸ್ತ್ರ ಹಾಗೂ ವೈಜ್ಞಾನಿಕ ಕಾರಣಗಳು. Read More »

ಚೀನಾ ಗಡಿಗೆ 50 ಸಾವಿರ ಸೈನಿಕರ ರವಾನೆ, ಗಡಿಯಲ್ಲಿ ಯುದ್ದ ಭೀತಿ!?

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ ಸರ್ಕಾರ ಚೀನಾ-ಭಾರತ ಗಡಿಗೆ 50,000 ಸೈನಿಕರನ್ನ ಕಳುಹಿಸಿದೆ. ಅಲ್ಲದೇ ಮೂರು ಫೈಟರ್​ ಜೆಟ್​ಗಳನ್ನೂ ಸಹ ಮೂರು ಗಡಿ ಪ್ರದೇಶಗಳಿಗೆ ಕಳುಹಿಸಿದೆ ಎನ್ನಲಾಗಿದ್ದು ಸದ್ಯ ಚೀನಾ-ಭಾರತ ಗಡಿಯಲ್ಲಿ ಒಟ್ಟು 2 ಲಕ್ಷ ಟ್ರೂಪ್​ಗಳಿವೆ. ಕಳೆದ ವರ್ಷಕ್ಕಿಂತ 40 ಪಟ್ಟು ಹೆಚ್ಚು ಸೈನಿಕರನ್ನ ನಿಯೋಜಿಸಿದಂತಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಈ ಹಿಂದೆ ಚೀನಾದಿಂದ ಎದುರಾಗುವ ದಾಳಿಯನ್ನ ತಡೆಯುವಷ್ಟು ಮಾತ್ರವೇ ಸೇನೆಯನ್ನ ನಿಯೋಜಿಸಲಾಗಿತ್ತು. ಇದೀಗ ಚೀನಾದಿಂದ ಎದುರಾಗುವ ಸಂಭಾವ್ಯ ದಾಳಿಯ ವಿರುದ್ಧ ಹೋರಾಡಿ

ಚೀನಾ ಗಡಿಗೆ 50 ಸಾವಿರ ಸೈನಿಕರ ರವಾನೆ, ಗಡಿಯಲ್ಲಿ ಯುದ್ದ ಭೀತಿ!? Read More »

ಶಾಕಿಂಗ್ ಸಮಾಚಾರ |ನಿರಂತರ‌ ಏರಿಕೆಯತ್ತ ಪೆಟ್ರೋಲ್

ನವದೆಹಲಿ: ಒಂದು ದಿನದ ವಿರಾಮದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆ ಮಾಡಲಾಗಿದೆ. ಇವತ್ತು ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 35 ಪೈಸೆ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರಿಗೆ 28 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ. ಈಗಾಗಲೇ ಸಾರ್ವಕಾಲಿಕ ಗರಿಷ್ಠ ದಾಖಲೆ ಬರೆದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರುಗತಿಯಲ್ಲೇ ಸಾಗುತ್ತಿರುವುದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ. ಅಗತ್ಯ ವಸ್ತು ಸೇರಿದಂತೆ ಹಲವು ವಸ್ತುಗಳ ಬೆಲೆ ದುಬಾರಿಯಾಗಿದ್ದು, ಗಾಯದ ಮೇಲೆ ಬರೆ ಎಳೆದಂತೆ ಪ್ರತಿದಿನವೂ

ಶಾಕಿಂಗ್ ಸಮಾಚಾರ |ನಿರಂತರ‌ ಏರಿಕೆಯತ್ತ ಪೆಟ್ರೋಲ್ Read More »

ಕನ್ನಡ ಗ್ರಾಮಗಳ ಹೆಸರನ್ನು ಯಾವುದೇ ಕಾರಣಕ್ಕೂ ಮಲಯಾಳೀಕರಣ ಮಾಡುವುದಿಲ್ಲ: ಮಂಜೇಶ್ವರ ಶಾಸಕ ಕೆ. ಎಂ. ಅಶ್ರಫ್ ಸ್ಪಷ್ಟನೆ

ಮಂಜೇಶ್ವರ: ಕಾಸರಗೋಡು ಜಿಲ್ಲೆಯ ಕನ್ನಡ ಗ್ರಾಮಗಳ ಹೆಸರುಗಳನ್ನು ಮಲಯಾಳಂಗೆ ಬದಲಾಯಿಸಲು ಕೇರಳ ಸರ್ಕಾರ ಆದೇಶಿಸಿದೆ ಎಂದು ವ್ಯಾಪಕ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಈ ಬಗ್ಗೆ ಮಂಜೇಶ್ವರ ಶಾಸಕ ಸ್ಪಷ್ಟನೆ ನೀಡಿದ್ದಾರೆ. ಗ್ರಾಮಗಳ ಹೆಸರು ಬದಲಾಯಿಸುವ ಬಗ್ಗೆ ಈವರೆಗೆ ಕೇರಳ ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ. ಈ ಬಗ್ಗೆ ನಾನು ಮುಖ್ಯಮಂತ್ರಿ ಕಚೇರಿ ಮತ್ತು ಕಾಸರಗೋಡು ಜಿಲ್ಲಾಧಿಕಾರಿ ಅವರಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಈ ಬಗ್ಗೆ ಯಾವುದೇ ಸುತ್ತೋಲೆ ಹೊರಡಿಸಿಲ್ಲ ಎಂದು ಮಂಜೇಶ್ವರ ಶಾಸಕ ಕೆ ಎಂ ಅಶ್ರಫ್ ಸಾಮಾಜಿಕ ಜಾಲತಾಣಗಳ

ಕನ್ನಡ ಗ್ರಾಮಗಳ ಹೆಸರನ್ನು ಯಾವುದೇ ಕಾರಣಕ್ಕೂ ಮಲಯಾಳೀಕರಣ ಮಾಡುವುದಿಲ್ಲ: ಮಂಜೇಶ್ವರ ಶಾಸಕ ಕೆ. ಎಂ. ಅಶ್ರಫ್ ಸ್ಪಷ್ಟನೆ Read More »

ಇಂದಿನಿಂದ ಕೇರಳದಿಂದ ಬರುವವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ: ಡಿಸಿ ಡಾ. ರಾಜೇಂದ್ರ

ಮಂಗಳೂರು: ಕೇರಳದಿಂದ ಕರ್ನಾಟಕಕ್ಕೆ ಬರುವವರಿಗೆ ಇಂದಿನಿಂದ ಆರ್’ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ ಎಂದು ದ. ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ಹೇಳಿದ್ದಾರೆ. ನಿನ್ನೆ ತಲಪಾಡಿ ಚೆಕ್ ಪೋಸ್ಟ್ ನಲ್ಲಿ ತಾವೇ ಕುದ್ದು ತಪಾಸಣೆ ನಡೆಸಿದ ಜಿಲ್ಲಾಧಿಕಾರಿ ಮಂಗಳವಾರ (29-06-2021) ದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಕೇರಳ ಗಡಿ ಭಾಗದಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿದ್ದು, ಡೆಲ್ಟಾ ವೇರಿಯಂಟ್ ಪತ್ತೆಯಾಗಿರುವ ಸಂಶಯವಿದೆ. ಈ ಬಗ್ಗೆ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಆದ್ದರಿಂದ

ಇಂದಿನಿಂದ ಕೇರಳದಿಂದ ಬರುವವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ: ಡಿಸಿ ಡಾ. ರಾಜೇಂದ್ರ Read More »

ಕಾರು ಪ್ರಪಾತಕ್ಕೆ ಉರುಳಿ 9 ಜನ ಸಾವು

ಶಿಮ್ಲಾ: ಕಾರೊಂದು ಪ್ರಪಾತಕ್ಕೆ ಉರುಳಿ ಬಿದ್ದು 9 ಜನ ಮೃತ ಪಟ್ಟ ಘಟನೆ ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿ ನಡೆದಿದೆ. ಪಚಾಡ್ ಪ್ರದೇಶದ ಬಾಗ್ ಪಶೋಗ್ ಗ್ರಾಮದ ಬಳಿ ಸೋಮವಾರ ಸಂಜೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಪ್ರಪಾತಕ್ಕೆ ಉರುಳಿದೆ. ಅಪಘಾತಕ್ಕೀಡಾದ ಕಾರಿನಲ್ಲಿದ್ದ ಪ್ರಯಾಣಿಕರು ಮದುವೆಯ ಪಾರ್ಟಿಗೆ ಹೊರಟಿದ್ದರು ಎಂದು ಪೊಲೀಸರು ತಿಳಿಸಿದ್ದು, ಮೃತರನ್ನು ಯಾರೆಂದು ಇನ್ನೂ ಗುರುತಿಸಲಾಗಿಲ್ಲ ಎಂದು ಪೌಂಟಾ ಸಾಹಿಬ್ ಡಿಎಸ್ ಪಿ ಬೀರ್ ಬಹದ್ದೂರ್ ಹೇಳಿದ್ದಾರೆ.

ಕಾರು ಪ್ರಪಾತಕ್ಕೆ ಉರುಳಿ 9 ಜನ ಸಾವು Read More »

ಪ್ರೀತಿಯ ಹುಡುಕಿ ಗಡಿ ದಾಟಿದಾತ ಪೊಲೀಸರ ಅತಿಥಿಯಾದ

ಬಾಂಗ್ಲಾದೇಶ: ಭಾರತೀಯ ಮೂಲದ ಯುವಕನೊಬ್ಬ ತನ್ನ ಫೇಸ್’ಬುಕ್ ಪ್ರೇಮಿಯನ್ನು ಹುಡುಕಿಕೊಂಡು ಬಾಂಗ್ಲಾ ಗಡಿ ದಾಟಿ ಹೋಗಿ ಅಲ್ಲಿಯ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ. ದಿನದವಿಡಿ ಮೊಬೈಲ್ ನಲ್ಲೇ ಕಾಲ ಕಳೆಯುತ್ತಿದ್ದ ಯುವಕನಿಗೆ ಫೇಸ್ ​ಬುಕ್’ನಲ್ಲಿ ಬಾಂಗ್ಲಾ ಮೂಲದ ಯುವತಿಯ ಪರಿಚಯವಾಗಿದೆ. ​ ಪರಿಚಯ ಪ್ರೀತಿಗೆ ತಿರುಗಿ ಮದುವೆ ಮಾತುಕಥೆಯೂ ಫೇಸ್​ಬುಕ್​ನಲ್ಲೇ ನಿರ್ಧಾರ ಮಾಡಿಕೊಂಡಿದ್ದ. ಈತ ಹೇಗಾದರೂ ಆಕೆಯನ್ನ ಭೇಟಿ ಮಾಡಲೇಬೇಕೆಂಬ ಹಠಕ್ಕೆ ಬಿದ್ದು ಬಾರ್ಡರ್​ ದಾಟಲು ನಿರ್ಧರಿಸಿದ್ದಾನೆ. ಅದರಂತೆ ಎಲ್ಲರ ಕಣ್ಣು ತಪ್ಪಿಸಿ ಗಡಿ ದಾಟಿದ ಯುವಕ ಪ್ರೇಯಸಿಯ

ಪ್ರೀತಿಯ ಹುಡುಕಿ ಗಡಿ ದಾಟಿದಾತ ಪೊಲೀಸರ ಅತಿಥಿಯಾದ Read More »

ಶಿಖರ್ ಧವನ್ ನೇತೃತ್ವದಲ್ಲಿ ಶ್ರೀಲಂಕಾ ತಲುಪಿದ ಟೀಂ ಇಂಡಿಯಾ

ಶಿಖರ್ ಧವನ್ ನೇತೃತ್ವದ ಭಾರತೀಯ ಸೀಮಿತ ಓವರ್‌ಗಳ ತಂಡ ಸೋಮವಾರ ಸಂಜೆ ಶ್ರೀಲಂಕಾವನ್ನು ತಲುಪಿದೆ. ರಾಹುಲ್ ದ್ರಾವಿಡ್ ಕೋಚ್ ಆಗಿ ತೆರಳಿರುವ ಈ ತಂಡದಲ್ಲಿ ಯುವ ಆಟಗಾರರ ದಂಡೇ ಇದೆ. ಮೂರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ ಲಂಕಾ ತಂಡವನ್ನು ಎದುರಿಸಲಿದೆ. ಭಾರತ ತಂಡದ ಖಾಯಂ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ಪ್ರವಾಸದಲ್ಲಿದ್ದು ಟೀಮ್ ಇಂಡಿಯಾ ತಂಡವನ್ನು ಟೆಸ್ಟ್ ಸರಣಿಯಲ್ಲಿ ಮುನ್ನಡೆಸಲಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿ ಇಂಗ್ಲೆಂಡ್

ಶಿಖರ್ ಧವನ್ ನೇತೃತ್ವದಲ್ಲಿ ಶ್ರೀಲಂಕಾ ತಲುಪಿದ ಟೀಂ ಇಂಡಿಯಾ Read More »

ಮಹಿಳೆಯರನ್ನು ಎಳೆದಾಡಿ ಭೂತ ಬಿಡಿಸುತ್ತಿದ್ದವರನ್ನು ಹಿಡಿದು ಭೂತ ಬಿಡಿಸಲು ಕರೆದೊಯ್ದ ಪೊಲೀಸರು

ಪ್ರಯಾಗ್​ರಾಜ್​: ಮೈಮೇಲೆ ಬಂದ ದುಷ್ಟ ಶಕ್ತಿ ಬಿಡಿಸುತ್ತೇವೆ ಎಂದು ಹೇಳಿ ಮಹಿಳೆಯರನ್ನು ಹಿಡಿದು ಎಳೆದಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯರ ಮೈ ಮುಟ್ಟಿ, ಡ್ರಂಗಳನ್ನು ಬಾರಿಸುತ್ತಾ ಭೂತವನ್ನು ಬಿಡಿಸುತ್ತಿದ್ದ 30ಮಂದಿಯನ್ನು ಪ್ರಯಾಗ್​ರಾಜ್​ ಸಂಗಂ ನದಿಯ ತೀರದಿಂದ ಬಂಧಿಸಲಾಗಿದೆ. ಬಂಧಿತರು ಮಹೋಬಾ ಮತ್ತು ಛತ್ತರಪುರ ಜಿಲ್ಲೆಗಳ ನಿವಾಸಿಗಳು ಎನ್ನಲಾಗಿದೆ. ಇವರು ಭೂತ ಬಿಡಿಸುವ ನೆಪ ಹೇಳಿ ಮಹಿಳೆಯರನ್ನು ನದಿ ತೀರಕ್ಕೆ ಕರೆತಂದು ಮೈಮುಟ್ಟಿ , ಕೂದಲು ಹಿಡಿದು ಎಳೆದಾಡಿ ಬೆತ್ತದಿಂದ ಹೊಡೆದು ಹಿಂಸೆ ನೀಡುತ್ತಿದ್ದರು. ನಿಂಬೆಹಣ್ಣು ಹಿಡಿದುಕೊಂಡು ಕುಂಕುಮ ಎರಚಿ

ಮಹಿಳೆಯರನ್ನು ಎಳೆದಾಡಿ ಭೂತ ಬಿಡಿಸುತ್ತಿದ್ದವರನ್ನು ಹಿಡಿದು ಭೂತ ಬಿಡಿಸಲು ಕರೆದೊಯ್ದ ಪೊಲೀಸರು Read More »

ಜಿಲ್ಲೆಗೆ ಆಗಮಿಸುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿ: ಎಂಎಲ್’ಸಿ ಶಾಂತೆಯಂಡ ವೀಣಾ ಅಚ್ಚಯ್ಯ ಒತ್ತಾಯ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಾರದೆ ಇರುವುದರಿಂದ ಹೊರ ಭಾಗದಿಂದ ಜಿಲ್ಲೆಗೆ ಆಗಮಿಸುವ ಕಾರ್ಮಿಕರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಬೇಕೆಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾಅಚ್ಚಯ್ಯ ಒತ್ತಾಯಿಸಿದ್ದಾರೆ. ಇಷ್ಟು ದಿನಗಳೇ ಕಳೆದರೂ ಕೊಡಗು ಕೋವಿಡ್ ಮುಕ್ತವಾಗುತ್ತಿಲ್ಲ. ಸೋಂಕಿತರ ಸಂಖ್ಯೆಯಲ್ಲಿ ಏರಿಳಿತವಾಗುತ್ತಿದ್ದು, ಪಾಸಿಟಿವಿಟಿ ಪ್ರಮಾಣ ಶೇ.೫ ಕ್ಕಿಂತ ಕೆಳಗಿಳಿಯುತ್ತಿಲ್ಲ. ಪರಿಸ್ಥಿತಿ ಹೀಗಿದ್ದರೂ ಹೊರ ಜಿಲ್ಲೆಗಳಿಂದ ಗುಂಪು ಗುಂಪಾಗಿ ಕಾರ್ಮಿಕರನ್ನು ಕರೆ ತರಲಾಗುತ್ತಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೆ ಇರಲು ಇದೂ ಕೂಡ ಒಂದು ಕಾರಣವೆಂದು ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲೆಗೆ ಆಗಮಿಸುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿ: ಎಂಎಲ್’ಸಿ ಶಾಂತೆಯಂಡ ವೀಣಾ ಅಚ್ಚಯ್ಯ ಒತ್ತಾಯ Read More »