Editor

ಮಂಗಳೂರು: ಹುಕ್ಕಾ ಕೆಫೆಗೆ ದಾಳಿ | ಇಬ್ಬರ ಬಂಧನ

ಮಂಗಳೂರು: ನಿಯಮ ಉಲ್ಲಂಘಿಸಿ ಹುಕ್ಕಾ ಕೆಫೆಯನ್ನು ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ ನಗರದ ವೆಲೆನ್ಸಿಯಾದಲ್ಲಿ ಘಟನೆ ನಡೆದಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಒಳಗೆ ಕುಳಿತು ಪಾರ್ಟಿ ಮಾಡುವಂತಿಲ್ಲ. ಅಲ್ಲದೆ ಕೋಲ್ಡ್ ಡ್ರಿಂಕ್ಸ್ ಆಗಲೀ, ಹುಕ್ಕಾವನ್ನಾಗಲೀ ಸರ್ವ್ ಮಾಡುವಂತಿಲ್ಲ. ಹುಕ್ಕಾ ಕೆಫೆಯಲ್ಲಿ ಗ್ರಾಹಕರು ಕುಳಿತು ಹುಕ್ಕಾ ಸೇವಿಸುತ್ತಿದ್ದರು. ಕೋಲ್ಡ್ ಡ್ರಿಂಕ್ಸ್ ಇನ್ನಿತರ ಸ್ನಾಕ್ಸ್ ಸೇವನೆ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಪಾಂಡೇಶ್ವರ ಪೊಲೀಸರು ದಾಳಿ ನಡೆಸಿದ್ದು ೧೭ ಮಂದಿಯ ವಿರುದ್ಧ ಲಾಕ್‌ಡೌನ್ ನಿಯಮ […]

ಮಂಗಳೂರು: ಹುಕ್ಕಾ ಕೆಫೆಗೆ ದಾಳಿ | ಇಬ್ಬರ ಬಂಧನ Read More »

UAPA ಕಾಯ್ದೆಯಡಿ ಬಂಧಿಯಾಗಿದ್ದಾತ 12 ವರ್ಷಗಳ ಬಳಿಕ ನಿರಪರಾಧಿ ಎಂದು ಸಾಬೀತು | ಗೂಡು ಸೇರಿದ ಜೈಲು ಹಕ್ಕಿ

ಶ್ರೀನಗರ; ಭಯೋತ್ಪಾದನೆಯನ್ನು ಮಟ್ಟಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ UAPA ಕಾಯ್ದೆಯ ಅಡಿಯಲ್ಲಿ ಪೊಲೀಸರು ಯಾರನ್ನೂ ಪ್ರಶ್ನೆ ಮಾಡದೆ ಪೊಲೀಸರು ಆರೋಪಿಯನ್ನು ತನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುವ ಹಕ್ಕನ್ನು ಹೊಂದಿರುತ್ತಾರೆ. ಹೀಗೆ ಭಯೋತ್ಪಾದನೆ ಪ್ರಕರಣದ ಆರೋಪ ಹೊತ್ತು ಗುಜರಾತ್​ನ ಜೈಲಿನಲ್ಲಿದ್ದ ಕಾಶ್ಮೀರ ಮೂಲದ ಬಶೀರ್ ಅಹ್ಮದ್ ಬಾಬಾ (44) ಅವರು ನಿರಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದ್ದು, 12 ವರ್ಷಗಳ ಬಳಿಕ ಈಗ ಗುಜರಾತ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅವರ ವಿರುದ್ದ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ

UAPA ಕಾಯ್ದೆಯಡಿ ಬಂಧಿಯಾಗಿದ್ದಾತ 12 ವರ್ಷಗಳ ಬಳಿಕ ನಿರಪರಾಧಿ ಎಂದು ಸಾಬೀತು | ಗೂಡು ಸೇರಿದ ಜೈಲು ಹಕ್ಕಿ Read More »

ಮಂಗಳೂರು: ನ್ಯಾಪ್ಟಾಲ್ ಸಂಸ್ಥೆ ಹೆಸರಿನಲ್ಲಿ ಲಕ್ಷ ಲಕ್ಷ ಪಂಗನಾಮ | ಈ ಬಹುಮಾನದ ರಿಜಿಸ್ಟರ್ ಪೋಸ್ಟ್ ನಿಮ್ಮ ಮನೆಗೂ ಬರಬಹುದು ಎಚ್ಚರ…..!!

ಮಂಗಳೂರು: ನ್ಯಾಪ್ಟಾಲ್ ಸಂಸ್ಥೆ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಅಂಚೆ ಮೂಲಕ ಸ್ಕ್ರ‍್ಯಾಚ್ ಕಾರ್ಡ್ ಕಳುಹಿಸಿ 12 ಲಕ್ಷ. ರೂ ಬಂದಿದೆ ಎಂದು ಹೇಳಿ ಲಕ್ಷ ಲಕ್ಷ ರೂ. ಪಡೆದು ವಂಚನೆ ಎಸಗಿರುವ ಘಟನೆ ನಡೆದಿದೆ. ಮಂಗಳೂರು ಮೂಲದ ವ್ಯಕ್ತಿಯೋರ್ವರಿಗೆ ನ್ಯಾಪ್ಟಾಲ್ ಸಂಸ್ಥೆಯಿಂದದ ರಿಜಿಸ್ಟರ್ ಪೋಸ್ಟ್ ಬಂದಿತ್ತು. ಅದನ್ನು ತೆರೆದು ನೋಡಿದ ವೇಳೆ ಅದರಲ್ಲಿ ಸ್ಕ್ರ‍್ಯಾಚ್ ಕಾರ್ಡ್ ಹಾಗೂ ಪತ್ರ ಇತ್ತು. ಅಲ್ಲದೇ, 12 ಲಕ್ಷ ರೂ. ಬಹುಮಾನ ಬಂದಿರುವುದಾಗಿ ನಮೂದಿಸಲಾಗಿತ್ತು. ರಿಜಿಸ್ಟರ್ ಪೋಸ್ಟ್ನಲ್ಲಿದ್ದ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದ

ಮಂಗಳೂರು: ನ್ಯಾಪ್ಟಾಲ್ ಸಂಸ್ಥೆ ಹೆಸರಿನಲ್ಲಿ ಲಕ್ಷ ಲಕ್ಷ ಪಂಗನಾಮ | ಈ ಬಹುಮಾನದ ರಿಜಿಸ್ಟರ್ ಪೋಸ್ಟ್ ನಿಮ್ಮ ಮನೆಗೂ ಬರಬಹುದು ಎಚ್ಚರ…..!! Read More »

ಸುಳ್ಯ: ಜೋಕಾಲಿ ಬಿಗಿದು ಬಾಲಕ ಸಾವು

ಜೋಕಾಲಿಯಲ್ಲಿ ಆಡುತ್ತಿದ್ದ ಬಾಲಕನ ಕುತ್ತಿಗೆಗೆ ಹಗ್ಗ ಸುತ್ತಿಕೊಂಡು ಮೃತಪಟ್ಟ ಘಟನೆ ಚೆಂಬು ಗ್ರಾಮದ ಪನೇಡ್ಕದಿಂದ ವರದಿಯಾಗಿದೆ. ಪನೇಡ್ಕ ತಾರಾಕುಮಾರ ಎಂಬವರ ಮಗ ಭರತ್ ಮೃತಪಟ್ಟ ಬಾಲಕ. 4 ನೇ ತರಗತಿಯಲ್ಲಿ ಓದುತ್ತಿರುವ 10 ವರ್ಷದ ಬಾಲಕ ಭರತ್ ಮನೆಯಲ್ಲಿ ಜೋಕಾಲಿ ಆಡುತ್ತಿರುವಾಗ ಈ ಘಟನೆ ನಡೆದಿದ್ದು , ಬಾಲಕನ ಮೃತದೇಹವನ್ನು ಸುಳ್ಯದ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ತರಲಾಗಿದೆ ಎಂದು ತಿಳಿದು ಬಂದಿದೆ

ಸುಳ್ಯ: ಜೋಕಾಲಿ ಬಿಗಿದು ಬಾಲಕ ಸಾವು Read More »

“ವೈದ್ಯೋ ನಾರಾಯಣೋ ಹರಿ”, ಜೀವ ರಕ್ಷಕರೇ ನಿಮಗೊಂದು ಸಲಾಂ

ಈ ಮಾತಿನ ನಿಜವಾದ ಅರ್ಥ ಕಳೆದೆರಡು ವರ್ಷಗಳಿಂದ ಜಗತ್ತು ಎದುರಿಸುತ್ತಿರುವ ಸಾಂಕ್ರಾಮಿಕದಿಂದ ಅರಿವಿಗೆ ಬರುತ್ತಿದೆ ಎಂದರೆ ತಪ್ಪಾಗಲ್ಲ. ವೈದ್ಯರಿಲ್ಲದೇ ಈ ಕೊರೊನಾ ಮಹಾಮಾರಿಯನ್ನು ಎದುರಿಸುವ ವಿಚಾರ ಊಹಿಸಿಕೊಳ್ಳಲು ಅಸಾಧ್ಯ. ಅದೇ ರೀತಿ ಪ್ರತಿಯೊಬ್ಬ ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಡಾಕ್ಟರ್ ಗಳ ಪಾತ್ರ ಮಾತಿಗೆ ನಿಲುಕದ್ದು. ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೇ, ಜನಸೇವೆ ಮಾಡುವ ವೈದ್ಯರು ನಮ್ಮ ನಡುವೆ ಸಾಕಷ್ಟು ಜನರಿದ್ದಾರೆ. ತಮ್ಮ ಅನುಕೂಲತೆಯನ್ನು ಗಣನೆಗೆ ತೆಗೆದುಕೊಳ್ಳದೆ ರೋಗಿಯ ಆರೈಕೆಗೆ ಹೆಚ್ಚು ಕಾಲವನ್ನು ವಿನಿಯೋಗಿಸುವ ವೈದ್ಯರುಗಳು ಸದಾ ದೇವತೆಗಳಿಗೆ ಸಮನಾಗಿರುತ್ತಾರೆ.

“ವೈದ್ಯೋ ನಾರಾಯಣೋ ಹರಿ”, ಜೀವ ರಕ್ಷಕರೇ ನಿಮಗೊಂದು ಸಲಾಂ Read More »

ದೇಶದಲ್ಲೇ ಪ್ರಥಮ ಪ್ರಯೋಗ, ಇನ್ಮುಂದೆ ಬ್ಯಾಗ್ ನಲ್ಲಿ ಸಿಗಲಿದೆ ಮರಳು- ಸಚಿವ ನಿರಾಣಿ

ಬೆಂಗಳೂರು, ಜೂ. 30: ದೇಶದಲ್ಲೇ ಪ್ರಪ್ರಥಮ ಬಾರಿಗೆ ಗ್ರಾಹಕರಿಗೆ ಸುಲಭವಾಗಿ ಸಿಗುವಂತೆ ಅನುಕೂಲವಾಗಲು ಇನ್ನು ಮುಂದೆ ಬ್ಯಾಗ್ ಗಳಲ್ಲಿ ಮರಳು ಮಾರಾಟ ಮಾಡುವ ವಿನೂತನ ಯೋಜನೆಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಆರಂಭಿಸಲಿದೆ. ಬ್ಯಾಗ್ ಗಳಲ್ಲಿ ಮಾರಾಟ ಮಾಡುವ ಉದ್ದೇಶವೇನೆಂದರೆ ಸರಕಾರದ ವತಿಯಿಂದಲೇ ಕೈಗೆಟುಕವ ದರದಲ್ಲಿ ಜನಸಾಮಾನ್ಯರು ಹಾಗೂ ಎಲ್ಲಾ ವರ್ಗದವರಿಗೂ ಮರಳು ಸಿಗಲಿದ್ದು ಇದರ ಪ್ರಸ್ತಾವನೆಯು ಸಹಾ ಸಿದ್ದವಾಗಿದೆ. ಇದರಿಂದಾಗಿ ಮನೆ ಕಟ್ಟುವವರು ಹಾಗೂ ಇತರರಿಗೆ ಸುಲಭ ಮಾರ್ಗದಲ್ಲಿ ಮರಳು ಲಭ್ಯವಾಗಲಿದೆ. ಬುಧವಾರ ವಿಕಾಸಸೌಧದಲ್ಲಿ

ದೇಶದಲ್ಲೇ ಪ್ರಥಮ ಪ್ರಯೋಗ, ಇನ್ಮುಂದೆ ಬ್ಯಾಗ್ ನಲ್ಲಿ ಸಿಗಲಿದೆ ಮರಳು- ಸಚಿವ ನಿರಾಣಿ Read More »

ಅತ್ತೆ ಮೇಲೆ ಕುದಿಯುವ ಎಣ್ಣೆ ಎರಚಿದ ಪಾಪಿ ಸೊಸೆ!. ಕಾರಣ ಕೇಳಿದ್ರೆ ಶಾಕ್ ಆಗ್ತೀರಾ.

ವಿಜಯವಾಡ: ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲಿ ಅತ್ತೆ-ಸೊಸೆ ಜಗಳ ವಿಕೋಪಕ್ಕೆ ತಿರುಗಿದ್ದು, ಕುದಿಯುವ ಎಣ್ಣೆಯನ್ನು ಅತ್ತೆಯ ಮೇಲೆ ಸೊಸೆ ಎರಚಿರುವ ಘಟನೆ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಅತ್ತೆಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಸರ್ಕಾರದಿಂದ ಬಂದ ಹಣದ ವಿಚಾರವಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿದೆ. ಜಗನ್​​ ಚೆಯುತಾ ಯೋಜನೆಯಡಿ ಹಣ ಬಂದಿತ್ತು. ಹಣ ಹಂಚಿಕೆ ವಿಚಾರದಲ್ಲಿ ಅತ್ತೆ-ಸೊಸೆ ಮಧ್ಯೆ ವಾಗ್ವಾನ ನಡೆದಿದೆ. ಅತ್ತೆಯ ಮಾತುಗಳಿಂದ ಕುಪಿತಗೊಂಡ ಸೊಸೆ ಈ ಕೃತ್ಯವೆಸಗಿದ್ದಾಳೆ. ಗುಡಿವಾಡದ ನಿವಾಸಿಗಳಾದ ಅತ್ತೆ ಲಕ್ಷ್ಮಿ(55) ಹಾಗೂ

ಅತ್ತೆ ಮೇಲೆ ಕುದಿಯುವ ಎಣ್ಣೆ ಎರಚಿದ ಪಾಪಿ ಸೊಸೆ!. ಕಾರಣ ಕೇಳಿದ್ರೆ ಶಾಕ್ ಆಗ್ತೀರಾ. Read More »

ಯೂತ್ ಕಾಂಗ್ರೇಸ್ ನಲ್ಲಿ ನೆಲೆ‌ ಸಿಗದ ನಲಪಾಡ್, ರಕ್ಷಾ ರಾಮಯ್ಯಗೆ ಶ್ರೀರಕ್ಷೆ

ಬೆಂಗಳೂರು: ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಬದಲಾವಣೆ ವಿವಾದಕ್ಕೆ ಕೊನೆಗೂ ಕಾಂಗ್ರೆಸ್ ತೆರೆ ಎಳೆದಿದ್ದು, ಅಧಿಕಾರ ಹಸ್ತಾಂತರ ಎಂಬುದು ಸುಳ್ಳು ಸುದ್ದಿ. ಅಂತಹ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದೆ. ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಅವರನ್ನು ಕೆಳಗಿಳಿಸಿ ಮೊಹಮ್ಮದ್ ನಲಪಾಡ್ ಗೆ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಭಾರಿ ಚರ್ಚೆ ನಡೆದಿತ್ತು. ಅಲ್ಲದೇ ಡಿಸೆಂಬರ್ ಅಂತ್ಯದವರೆಗೆ ರಕ್ಷಾ ರಾಮಯ್ಯ ಅಧಿಕಾರದಲ್ಲಿರಲು ಗಡುವು ನೀಡಲಾಗಿದೆ ಎಂಬ ಮಾತು ಕೇಳಿ ಬಂದಿತ್ತು. ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಬಣ

ಯೂತ್ ಕಾಂಗ್ರೇಸ್ ನಲ್ಲಿ ನೆಲೆ‌ ಸಿಗದ ನಲಪಾಡ್, ರಕ್ಷಾ ರಾಮಯ್ಯಗೆ ಶ್ರೀರಕ್ಷೆ Read More »

ಬೆಳ್ತಂಗಡಿಯಲ್ಲೊಂದು ‘ಲವ್, ಸೆಕ್ಸ್, ಆ್ಯಂಡ್ ದೋಖಾ’, ಆರೋಪಿ ಪೊಲೀಸ್ ಅತಿಥಿ.

ಬೆಳ್ತಂಗಡಿ: ‘ನಾನು ನಿನ್ನ ಮದುವೆಯಾಗೋ ಹುಡುಗ, ಯಾವತ್ತಿದ್ರೂ ನಾನು ನಿನ್ನವನೇ’ ಅಂತ ರಂಗುರಂಗಿನ ಮಾತುಗಳಿಂದ ದಂಗುಬಡಿಸಿ, ಯುವತಿಯೋರ್ವಳನ್ನು ಗರ್ಭವತಿಯನ್ನಾಗಿಸಿ ಕೈಕೊಟ್ಟ ಘಟನೆ ಇಲ್ಲಿನ ಕಡಿರುದ್ಯಾವರದಿಂದ ವರದಿಯಾಗಿದೆ.ಯುವಕನ‌ ಮಾತಿನಿಂದ ಮರುಳಾದ ಯುವತಿ ಸದ್ಯ ಏಳು ತಿಂಗಳ ಗರ್ಭಿಣಿ. ಮದುವೆಯ ನೆಪವೊಡ್ಡಿ ಸರಸವಾಡಿದ ಯುವಕ ಇದೀಗ ಕೈಕೊಟ್ಟಿದ್ದು, ಹತಾಶೆಗೊಂಡ ಆಕೆ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದು, ಆಕೆಯ ದೂರಿನ ಮೇರೆಗೆ ಲಾಯಿಲದ ಕಿರಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಯುವತಿಯ ಇಚ್ಛೆಗೆ ವಿರುದ್ದವಾಗಿ ಲೈಂಗಿಕ ಸಂಪರ್ಕ ಮಾಡಿರುವುದಾಗಿಯೂ ದೂರಲ್ಲಿ ದಾಖಲಿಸಿದ್ದು,

ಬೆಳ್ತಂಗಡಿಯಲ್ಲೊಂದು ‘ಲವ್, ಸೆಕ್ಸ್, ಆ್ಯಂಡ್ ದೋಖಾ’, ಆರೋಪಿ ಪೊಲೀಸ್ ಅತಿಥಿ. Read More »

ದೇರಳಕಟ್ಟೆಯಲ್ಲಿ ಗಾಂಜಾ ಘಾಟು | ಕೋಟಿಗಟ್ಟಲೆ ಮೌಲ್ಯದ ಮರಿಜುವನ ಸಹಿತ ಯುವಕ-ಯುವತಿ ಪೊಲೀಸ್ ವಶ | ಬಂಧಿತ ಆರೋಪಿಗಳೆಲ್ಲರು ವೈದ್ಯರು

ಮಂಗಳೂರು: ನಗರ ಹೊರವಲಯದ ದೇರಳಕಟ್ಟೆಯಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿ ಕೋಟ್ಯಾಂತರ ರೂ. ಮೌಲ್ಯದ ಗಾಂಜಾ ಸಹಿತ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ತಮಿಳುನಾಡು ಮೂಲದ ವೈದ್ಯ ವಿದ್ಯಾರ್ಥಿನಿ ವಿನು ರಶ್ಮಿ (27) ಮತ್ತು ಕಾಸರಗೋಡು ಮೂಲದ ಅಜ್ಮಲ್ (24) ಎಂದು ಗುರುತಿಸಲಾಗಿದೆ. ವಿನು ರಶ್ಮಿ ಸುರತ್ಕಲ್ ನಲ್ಲಿ ವಾಸ್ತವ್ಯ ಹೂಡಿದ್ದು ನಗರದ ಕಾಲೇಜೊಂದರಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾಳೆ. ವ್ಯಾಸಂಗದ ಜೊತೆ ಈಕೆ ಕಾಸರಗೋಡಿನಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದು ಅಲ್ಲಿ ಪರಿಚಿತನಾದ ವೈದ್ಯ ಡಾ.

ದೇರಳಕಟ್ಟೆಯಲ್ಲಿ ಗಾಂಜಾ ಘಾಟು | ಕೋಟಿಗಟ್ಟಲೆ ಮೌಲ್ಯದ ಮರಿಜುವನ ಸಹಿತ ಯುವಕ-ಯುವತಿ ಪೊಲೀಸ್ ವಶ | ಬಂಧಿತ ಆರೋಪಿಗಳೆಲ್ಲರು ವೈದ್ಯರು Read More »