Editor

ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಎಲ್ಲಾ ಟ್ವೀಟ್‌ಗಳನ್ನು ಅಳಿಸಿ ಹಾಕಿದ ಕರಂದ್ಲಾಜೆ.!

ಉಡುಪಿ: ಶೋಭಾ ಕರಂದ್ಲಾಜೆಯವರು ಕೇಂದ್ರ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿದ್ದ ಈ ಹಿಂದಿನ ಎಲ್ಲಾ ಟ್ವೀಟ್ ಗಳನ್ನು ಅಳಿಸಿ ಹಾಕಿದ್ದಾರೆ. ನಿನ್ನೆಯಷ್ಟೆ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಪ್ರಮಾಣವಚನ ಸ್ವೀಕರಿಸಿದ್ದರು. ಇದೇ ಸಂದರ್ಭದಲ್ಲಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿದ್ದ ಹಿಂದಿನ ಎಲ್ಲಾ ಟ್ವೀಟ್‌ಗಳನ್ನು ಅಳಿಸಿ ಹಾಕಿದ್ದಾರೆ. ಆದರೆ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭದ ಟ್ವೀಟ್ ಹೊರತುಪಡಿಸಿ ಉಳಿದ ಅವರ ಎಲ್ಲ ಸಂದೇಶಗಳನ್ನು ಡಿಲೀಟ್ […]

ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಎಲ್ಲಾ ಟ್ವೀಟ್‌ಗಳನ್ನು ಅಳಿಸಿ ಹಾಕಿದ ಕರಂದ್ಲಾಜೆ.! Read More »

ಜಾಲತಾಣಗಗಳಲ್ಲಿ ವೈರಲ್ ಆಗುತ್ತಿದೆ ಕೈಕಟ್ಟಿ ನಿಂತ ಹೆಚ್‌ಡಿಕೆ ಫೋಟೋ!! ಇದರ ಹಿಂದಿನ ರಹಸ್ಯವೇನು??

ಮಂಡ್ಯ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ರ ನಡುವೆ ವಿವಾದಗಳು ಕೆಲ ದಿನಗಳಿಂದ ನಡೆವುತ್ತಿದೆ. ವಿವಾದ ಹೆಚುತ್ತಿದ್ದಂತೆ ಸುಮಲತಾ ಅವರ ಅಭಿಮಾನಿಗಳು ಸುಮಲತಾ ಮತ್ತು ಅಂಬರೀಶ್ ಬೆಂಬಲಿಗರು ಪೇಜ್ ಗಳಲ್ಲಿ ಹೆಚ್‌ಡಿಕೆ ಅಂಬರೀಶ್ ಮುಂದೆ ಕೈಕಟ್ಟಿ ನಿಂತ ಪೋಟೋವನ್ನು ವಿವಿಧ ಬರಹಗಳ ಮುಖಾಂತರ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಸುಮಲತಾ, ನಮ್ಮ ಪಕ್ಷ ನಿಮ್ಮಂತಹ ಸಾವಿರಾರೂ ಲೀಡರ್ ಗಳನ್ನು ತಯಾರು ಮಾಡಿದೆ ಅಂತ ಹೇಳುತ್ತಾರೆ. ನೀವು ಸಾವಿರಾರರು ಜನರನ್ನು ತಯಾರು

ಜಾಲತಾಣಗಗಳಲ್ಲಿ ವೈರಲ್ ಆಗುತ್ತಿದೆ ಕೈಕಟ್ಟಿ ನಿಂತ ಹೆಚ್‌ಡಿಕೆ ಫೋಟೋ!! ಇದರ ಹಿಂದಿನ ರಹಸ್ಯವೇನು?? Read More »

ಬಂಟ್ವಾಳ: ಹಿಟಾಚಿ ಸಾಗಿಸುತ್ತಿದ್ದ ಟಿಪ್ಪರ್ ಮನೆ ಮೇಲೆ ಪಲ್ಟಿ: ಓರ್ವ ಗಂಭೀರ

ಬಂಟ್ವಾಳ: ಹಿಟಾಚಿ ಸಾಗಿಸುತ್ತಿದ್ದ ವೇಳೆ ಟಿಪ್ಪರೊಂದು ಮನೆಯ ಮೇಲೆ ಬಿದ್ದು ಟಿಪ್ಪರ್ ನಲ್ಲಿದ್ದ ವ್ಯಕ್ತಿ ಗಂಭೀರ ಗಾಯಗೊಂಡ ಘಟನೆ ಅಮ್ಟಾಡಿಯ ಕೆಂಪುಗುಡ್ಡೆ ಕ್ರಾಸ್ ಬಳಿ ಇಂದು ನಡೆದಿದೆ. ಟಿಪ್ಪರ್ ನಲ್ಲಿದ್ದ ವಿಠಲ್ ರವರು ಗಾಯಗೊಂಡವರು. ಇವರು ಟಿಪ್ಪರ್ ಅಡಿಗೆ ಸಿಲುಕಿದ್ದು, ಬಿ.ಸಿ.ರೋಡಿನ ವಿಜಯಲಕ್ಷ್ಮಿ ಕ್ರೇನ್ ತಕ್ಷಣ ಸ್ಥಳಕ್ಕೆ ತೆರಳಿ ಟಿಪ್ಪರನ್ನು ಮೇಲಕ್ಕೆತ್ತಿದ್ದು, ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯಲ್ಲಿ ನಾರಾಯಣ ಭಂಡಾರಿ ಅವರ ಮನೆ ಸಂಪೂರ್ಣ ಜಖಂಗೊಂಡಿದ್ದು, ಮನೆ ಮಂದಿಗೆ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ

ಬಂಟ್ವಾಳ: ಹಿಟಾಚಿ ಸಾಗಿಸುತ್ತಿದ್ದ ಟಿಪ್ಪರ್ ಮನೆ ಮೇಲೆ ಪಲ್ಟಿ: ಓರ್ವ ಗಂಭೀರ Read More »

ಮೋದಿ ಸಂಪುಟ 2.0: ಯಾರಿಗೆ ಯಾವ ಖಾತೆ? ಇಲ್ಲಿದೆ ಡೀಟೈಲ್ ವರದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟಕ್ಕೆ ನೂತನ 15 ಸಾರಥಿಗಳು ಸೇರ್ಪಡೆಯಾಗಿದ್ದಾರೆ. ಇಂತಹ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಯಾರಿಗೆ ಯಾವ ಖಾತೆ ನೀಡಲಾಗಿದೆ ಎಂಬುದರ ಡೀಟೈಲ್ ಇಲ್ಲಿದೆ. ಉನ್ನತ ವರದಿಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಮೇಲೆ ನಿಗಾ ಇಡಲಿದ್ದು, ಅಮಿತ್ ಶಾ ಅವರು ಗೃಹ ಸಚಿವಾಲಯದ ಜೊತೆಗೆ ಸಹಕಾರ ಸಚಿವಾಲಯದ ಮೇಲೆ ನಿಗಾ ಇಡಲಿದ್ದಾರೆ. ಮನ್ಸುಖ್ ಮಾಂಡವಿಯಾ ಅವರು ಕೇಂದ್ರ

ಮೋದಿ ಸಂಪುಟ 2.0: ಯಾರಿಗೆ ಯಾವ ಖಾತೆ? ಇಲ್ಲಿದೆ ಡೀಟೈಲ್ ವರದಿ Read More »

ಐಎಂಎ ವಂಚನೆ ಪ್ರಕರಣ: ರೋಷನ್ ಬೇಗ್ ಆಸ್ತಿ‌ ಮುಟ್ಟುಗೋಲು

ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ‌ ಸಚಿವ ರೋಷನ್ ಬೇಗ್ ಆಸ್ತಿಯನ್ನು ಸರ್ಕಾರ ಬುಧವಾರ ಜಪ್ತಿ‌ ಮಾಡಿದೆ. ಪ್ರಕರಣದಲ್ಲಿ 36ನೇ ಆರೋಪಿಯಾಗಿರುವ ರೋಷನ್ ಬೇಗ್ ರ ಬ್ಯಾಂಕ್ ಖಾತೆ ಹಾಗೂ‌ ಸ್ಥಿರಾಸ್ತಿಯನ್ನ ಜಪ್ತಿ‌ ಮಾಡಲಾಗಿದ್ದು, ಎಷ್ಟು ಮೊತ್ತದ ಆಸ್ತಿ ಜಪ್ತಿಯಾಗಿದೆ ಎಂಬುದು ತಿಳಿದುಬಂದಿಲ್ಲ. ಐಎನ್ಎ ಸಂಸ್ಥಾಪಕ ಹಾಗೂ ಪ್ರಕರಣದ ಪ್ರಮುಖ ‌ಆರೋಪಿ ಮನ್ಸೂರ್ ಅಲಿಖಾನ್ ನಿಂದ ಅಕ್ರಮವಾಗಿ ಹಣ ಸಂಪಾದನೆ ಮಾಡಿದ್ದಾರೆ ಅನ್ನೋದು‌ ಸಾಬೀತಾದ ಬಳಿಕ ಕೋರ್ಟ್ ಆಸ್ತಿ ಜಪ್ತಿಗೆ ಆದೇಶಿಸಿತ್ತು. ಅದರಂತೆ ಇದೀಗ

ಐಎಂಎ ವಂಚನೆ ಪ್ರಕರಣ: ರೋಷನ್ ಬೇಗ್ ಆಸ್ತಿ‌ ಮುಟ್ಟುಗೋಲು Read More »

ಮಡಿಕೇರಿ: ಅಕ್ರಮ‌ ಗಾಂಜಾ ಬೆಳೆ ಪತ್ತೆ, ಆರೋಪಿ ‌ವಶಕ್ಕೆ

ಮಡಿಕೇರಿ: ಮನೆಗೆ ಸಮೀಪದಲ್ಲಿರುವ ತೋಟದಲ್ಲಿ ಗಾಂಜಾ ಗಿಡ ಬೆಳೆದಿರುವದನ್ನು ಪತ್ತೆ ಹಚ್ಚಿದ ಮಡಿಕೇರಿ ಗ್ರಾಮಾಂತರ ಪೋಲಿಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಮೂರ್ನಾಡು ಸಮೀಪದ ಕಟ್ಟೆಮಾಡು ಗ್ರಾಮದ ಕೊಪ್ಪಂಗೇರಿ ಪೈಸಾರಿ ನಿವಾಸಿ ಎಚ್.ಎಸ್.ಲೋಕೇಶ್ ಅಣ್ಣಯ್ಯ ಬಂಧಿತ ಆರೋಪಿ.ಲೋಕೇಶ್ ತನ್ನ ಮನೆಯ ಸಮೀಪವಿರುವ ತೋಟದಲ್ಲಿ ಗಾಂಜಾ ಗಿಡ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೋಲಿಸರು ದಾಳಿ ಮಾಡಿದ್ದಾರೆ. ಈ ಸಂದರ್ಭ ತೋಟದಲ್ಲಿ ಎರಡು ಬೆಳೆದು ಕಟಾವಿಗೆ ಬಂದಿರುವ ಗಿಡಗಳು ಪತ್ತೆಯಾಗಿವೆ. ಗಿಡಗಳನ್ನು ವಶಪಡಿಸಿಕೊಂಡ ಪೋಲಿಸರು, ಆರೋಪಿ ಲೋಕೇಶ್‌ನನ್ನು ಬಂಧಿಸಿ ಮುಂದಿನ

ಮಡಿಕೇರಿ: ಅಕ್ರಮ‌ ಗಾಂಜಾ ಬೆಳೆ ಪತ್ತೆ, ಆರೋಪಿ ‌ವಶಕ್ಕೆ Read More »

ಕೇಂದ್ರ ಸಂಪುಟಕ್ಕೆ ಇಂದು ಮೇಜರ್ ಸರ್ಜರಿ, ಹೊಸಬರಿಗೆ ಅವಕಾಶ, ಹಳೆಮುಖಗಳಿಗೆ ಕೊಕ್?

ನವದೆಹಲಿ(ಜು.07): ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟದ ವಿಸ್ತರಣೆ/ ಪುನಾರಚನೆ ಕಾರ್ಯಕ್ರಮ ಇಂದು ಸಂಜೆ 6 ಗಂಟೆಗೆ ನಿಗದಿಯಾಗಿದೆ ಎನ್ನಲಾಗಿದೆ. ಇದಕ್ಕೆ ಪೂರಕವೆಂಬಂತೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಬಿಜೆಪಿ ಮತ್ತು ಎನ್‌ಡಿಎ ಮಿತ್ರಪಕ್ಷಗಳ ಸಂಸದರಿಗೆ ಕೇಂದ್ರದ ಬಿಜೆಪಿ ನಾಯಕರಿಂದ ಕರೆ ಬಂದಿದ್ದು, ಅವರೆಲ್ಲಾ ಮಂಗಳವಾರವೇ ದೆಹಲಿಗೆ ದೌಡಾಯಿಸಿದ್ದಾರೆ. ಇದು 2019ರಲ್ಲಿ 2ನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಲಿರುವ ಮೊದಲ ಸಂಪುಟ ಬದಲಾವಣೆ ಪ್ರಕ್ರಿಯೆಯಾಗಲಿದೆ. ಕೇಂದ್ರ ಸಂಪುಟದಲ್ಲಿ 81 ಜನರಿಗೆ ಅವಕಾಶವಿದ್ದು,

ಕೇಂದ್ರ ಸಂಪುಟಕ್ಕೆ ಇಂದು ಮೇಜರ್ ಸರ್ಜರಿ, ಹೊಸಬರಿಗೆ ಅವಕಾಶ, ಹಳೆಮುಖಗಳಿಗೆ ಕೊಕ್? Read More »

ಬಾಲಿವುಡ್ ಲೆಜೆಂಡ್ ಕಿಂಗ್ ದಿಲೀಪ್ ಕುಮಾರ್ ವಿಧಿವಶ, ಕಣ್ಣೀರಲ್ಲಿ ಮುಳುಗಿದ ಚಿತ್ರರಂಗ

ಮುಂಬೈ: ಬಾಲಿವುಡ್‌ ಹಿರಿಯ ನಟ ದಿಲೀಪ್‌ ಕುಮಾರ್‌ ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ 98 ವರ್ಷದ ದಿಲೀಪ್‌ ಕುಮಾರ್‌ ಅವರನ್ನು ಎರಡು ದಿನಗಳ ಹಿಂದಷ್ಟೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪಾಕಿಸ್ತಾನದ ಪೇಶಾವರದಲ್ಲಿ ಡಿಸೆಂಬರ್‌ 11, 1922 ರಲ್ಲಿ ಜನಿಸಿದ್ದ ಮಹಮ್ಮದ್‌ ಯೂಸೂಫ್‌ ಖಾನ್‌ ವಿಭಜನೆ ವೇಳೆ ಭಾರತಕ್ಕೆ ಬಂದಿದ್ದು ಬಾಲಿವುಡ್‌ ಚಿತ್ರರಂಗದಲ್ಲಿ ತಮ್ಮನ್ನು ಗುರುತಿಸಿಕೊಂಡ ಬಳಿಕ ದಿಲೀಪ್‌ ಕುಮಾರ್‌ ಎಂಬ ಹೆಸರಿನಿಂದಲೇ ಖ್ಯಾತರಾಗಿದ್ದರು. ಪತ್ನಿ ಸಾಯಿರಾಬಾನು ಜೊತೆ ಮುಂಬೈನಲ್ಲಿ ನೆಲೆಸಿದ್ದ ದಿಲೀಪ್‌ ಕುಮಾರ್‌ ಇಂದು ಬಾರದ ಲೋಕಕ್ಕೆ

ಬಾಲಿವುಡ್ ಲೆಜೆಂಡ್ ಕಿಂಗ್ ದಿಲೀಪ್ ಕುಮಾರ್ ವಿಧಿವಶ, ಕಣ್ಣೀರಲ್ಲಿ ಮುಳುಗಿದ ಚಿತ್ರರಂಗ Read More »

ಲಸಿಕೆ ಹಾಕಿಸಿದ ಬಳಿಕ ಹೋಗಿದ್ದ ದೃಷ್ಟಿ ಮರಳಿ ಬಂತು! ಹೀಗೊಂದು ಪವಾಡವೇ?

ಮುಂಬೈ: ಕರೊನಾ ಲಸಿಕೆ ಪಡೆದ ನಂತರ ದೇಹದಲ್ಲಿ ಅಯಸ್ಕಾಂತೀಯ ಶಕ್ತಿ ಕಾಣಿಸಿಕೊಂಡಿದೆ ಎಂದಿರುವ ಅನೇಕರನ್ನು ನೀವು ನೋಡಿರುತ್ತೀರಿ. ಆದರೆ ವರ್ಷಗಳ ಹಿಂದೆ ಹೋಗಿದ್ದ ದೃಷ್ಟಿಯೇ ವಾಪಸು ಬಂದಿದೆ ಎಂದರೆ ನಂಬುತ್ತೀರಾ? ನಂಬಲೇ ಬೇಕು. ಏಕೆಂದರೆ ಅಂತದ್ದೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ನಿವಾಸಿ ಮಥುರಾಬಾಯಿ ಬಿಡ್ವೆ(70)ಗೆ ಒಂಬತ್ತು ವರ್ಷಗಳ ಹಿಂದೆ ಎರಡೂ ಕಣ್ಣುಗಳ ದೃಷ್ಟಿ ಹೋಗಿತ್ತಂತೆ. ಆಕೆ ಜೂನ್ 26ರಂದು ಹತ್ತಿರದ ಕರೊನಾ ಲಸಿಕಾ ಕೇಂದ್ರಕ್ಕೆ ತೆರಳಿ ಕೋವಿಶೀಲ್ಡ್ ಲಸಿಕೆಯ ಮೊದಲನೇ ಡೋಸೇಜ್ ಪಡೆದುಕೊಂಡು

ಲಸಿಕೆ ಹಾಕಿಸಿದ ಬಳಿಕ ಹೋಗಿದ್ದ ದೃಷ್ಟಿ ಮರಳಿ ಬಂತು! ಹೀಗೊಂದು ಪವಾಡವೇ? Read More »

‘ನಾ ನಿನ್ನ ಬಿಡಲಾರೆ’ ಅಂತ ಸುತ್ತಿಕೊಳ್ತಿದೆ ಅಕ್ರಮ ಭೂ ಡಿನೋಟಿಫಿಕೇಶನ್ ಪ್ರಕರಣ, ಮತ್ತೆ ತನಿಖೆಗೆ ಆದೇಶಿಸಿದ ಕೋರ್ಟ್, ಸಿಎಂಗೆ ಹಿನ್ನಡೆ

ಬೆಂಗಳೂರು. ಅಕ್ರಮ ಭೂ ಡಿನೋಟಿಫಿಕೇ‍ಷನ್‌ಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರಿಗೆ ಹಿನ್ನಡೆಯಾಗಿದ್ದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬಿಎಸ್‌ವೈ ವಿರುದ್ಧ ಮರು ತನಿಖೆಗೆ ಆದೇಶಿಸಿದೆ. ಅಕ್ರಮ ಭೂ ಡಿನೋಟಿಫಿಕೇ‍ಷನ್‌ಗೆ ಸಂಬಂಧಿಸಿದಂತೆ ತನಿಖಾ ಅಧಿಕಾರಿ ಸಲ್ಲಿಸಿದ್ದ ‘ಬಿ’ ರಿಪೋರ್ಟ್‌ಅನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲಿನ ಆರೋಪ ಗಂಭೀರ ಸ್ವರೂಪದ್ದಾಗಿದ್ದು ಸಮರ್ಪಕ ತನಿಖೆಯನ್ನು ನಡೆಸದೇ ಕ್ಲೀನ್‌ ಚೀಟ್‌ ನೀಡಿರುವುದು ಸರಿಯಲ್ಲ ಎಂದಿರುವ ನ್ಯಾಯಾಲಯ ಹೆಚ್ಚಿನ ತನಿಖೆಗೆ ಇಂದು ಆದೇಶ ನೀಡಿತು. ನ್ಯಾಯಮೂರ್ತಿ ಶ್ರೀಧರ್ ಗೋಪಾಲಕೃಷ್ಣ ಭಟ್ ಪ್ರಕರಣದ ತನಿಖೆ ಕುರಿತು

‘ನಾ ನಿನ್ನ ಬಿಡಲಾರೆ’ ಅಂತ ಸುತ್ತಿಕೊಳ್ತಿದೆ ಅಕ್ರಮ ಭೂ ಡಿನೋಟಿಫಿಕೇಶನ್ ಪ್ರಕರಣ, ಮತ್ತೆ ತನಿಖೆಗೆ ಆದೇಶಿಸಿದ ಕೋರ್ಟ್, ಸಿಎಂಗೆ ಹಿನ್ನಡೆ Read More »