Editor

ಕೆ.ಆರ್.ಎಸ್ ಅಕ್ರಮ ಗಣಿಗಾರಿಕೆ ದಂಧೆ, ಶೀಘ್ರ ದಾಖಲೆ ಬಿಡುಗಡೆ – ಅಶ್ವಥ ನಾರಾಯಣ

ಬೆಂಗಳೂರು: ಮಂಡ್ಯ ಜಿಲ್ಲೆ ಕೆ.ಆರ್‌.ಎಸ್‌ ಸುತ್ತಮುತ್ತ ಸುಮಾರು 40ಕ್ಕೂ ಹೆಚ್ಚು ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಇವುಗಳ ಸಂಪೂರ್ಣ ದಾಖಲೆಗಳನ್ನು ಶೀಘ್ರ ಬಿಡುಗಡೆ ಮಾಡುವುದಾಗಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವಥ ನಾರಾಯಣ ಹೇಳಿದ್ದಾರೆ. ಅಕ್ರಮ ಗಣಿಗಾರಿಕೆಯಿಂದ ಅಣೆಕಟ್ಟು ಮಾತ್ರವಲ್ಲದೆ, ರೈತರ ಜನ ಜೀವನಕ್ಕೂ ತೊಂದರೆ ಆಗಿದೆ. ಈ ಅಕ್ರಮ ದಂಧೆಯ ಸಂಪೂರ್ಣ ದಾಖಲೆಗಳನ್ನು ಮುಂದಿನ ವಾರ ಬಹಿರಂಗಪಡಿಸುವುದಾಗಿ ಅವರು ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಬ್ಬ ವ್ಯಕ್ತಿ ಒಂದು ಗಣಿಗೆ ಪರವಾನಗಿ ಪಡೆದು 8-10 ಅಕ್ರಮ […]

ಕೆ.ಆರ್.ಎಸ್ ಅಕ್ರಮ ಗಣಿಗಾರಿಕೆ ದಂಧೆ, ಶೀಘ್ರ ದಾಖಲೆ ಬಿಡುಗಡೆ – ಅಶ್ವಥ ನಾರಾಯಣ Read More »

ರೋಗ ಬಾಧೆ, ಕಡಿಮೆ ಬೆಲೆಗೆ ಬೇಸತ್ತ ರೈತನಿಂದ 2ಎಕ್ರೆ ದಾಳಿಂಬೆಗೆ ಕೊಡಲಿ ಪೆಟ್ಟು

ಬೆಳಗಾವಿ: ‘ಸರಿಯಾದ ಬೆಲೆ ಮತ್ತು ಮಾರುಕಟ್ಟೆ ಸಿಗದಿರುವುದು ಹಾಗೂ ರೋಗ ಬಾಧೆಯಿಂದ ಕಂಗೆಟ್ಟು ರೈತನೋರ್ವ‌ಎರಡು‌ ಎಕರೆ ದಾಳಿಂಬೆ ಬೆಳೆಯನ್ನು ಕೊಡಲಿಯಿಂದ ಕತ್ತರಿಸಿದ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಅಜೂರ ಗ್ರಾಮದಲ್ಲಿ ನಡೆದಿದೆ. ರೈತ ನವನಾಥ ಮಾನೆ ಎಂಬವರು ತಮ್ಮ ಎರಡು ಎಕರೆ ಹೊಲದಲ್ಲಿ ದಾಳಿಂಬೆ ಬೆಳೆದಿದ್ದರು. ಹವಾಮಾನ ವೈಪರೀತ್ಯ, ರೋಗ ಬಾಧೆ ಮತ್ತು ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಸಿಗದೆ ಕಂಗಾಲಾಗಿ ಶುಕ್ರವಾರ ದಾಳಿಂಬೆ ಗಿಡಗಳನ್ನು ಕತ್ತರಿಸಿ ಹಾಕಿದ್ದಾರೆ. ಬೆಳೆಗೆ ವರ್ಷಕ್ಕೆ 2-3 ಲಕ್ಷ ಖರ್ಚಾಗುತ್ತದೆ. ಆದರೆ

ರೋಗ ಬಾಧೆ, ಕಡಿಮೆ ಬೆಲೆಗೆ ಬೇಸತ್ತ ರೈತನಿಂದ 2ಎಕ್ರೆ ದಾಳಿಂಬೆಗೆ ಕೊಡಲಿ ಪೆಟ್ಟು Read More »

ಕಿಚ್ಚ ನಟನೆಯ ‘ ವಿಕ್ರಾಂತ್ ರೋಣ’ ಪೋಸ್ಟರ್ ನಕಲಿ ಮಾಡಿದ ಬಾಲಿವುಡ್!

ಕಿಚ್ಚ ಸುದೀಪ್​ ನಟನೆಯ ಬಹುನಿರೀಕ್ಷಿತ ‘ವಿಕ್ರಾಂತ್​ ರೋಣ’ ಸಿನಿಮಾದ ಪೋಸ್ಟರ್ ಅನ್ನು ಬಾಲಿವುಡ್ ಮಂದಿ ಕಾಪಿ ಮಾಡಿದ್ದಾರೆ. ಸ್ಯಾಂಡಲ್​ವುಡ್​ಗೆ ಸೀಮಿತವಾಗದೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ರಿಲೀಸ್​ ಆಗುತ್ತಿದ್ದು, ಈ​ ಸಿನಿಮಾದ ಪೋಸ್ಟರ್​ ಕಾಪಿ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ‘ವಿಕ್ರಾಂತ್ ರೋಣ’ ಚಿತ್ರಕ್ಕಾಗಿ ಸುದೀಪ್​ ಭಿನ್ನ ಅವತಾರ ತಾಳಿದ್ದಾರೆ. ‘ರಂಗಿತರಂಗ’ ಖ್ಯಾತಿಯ ನಿರ್ದೇಶಕ ಅನೂಪ್​ ಭಂಡಾರಿ ಅವರು ಈ ಚಿತ್ರಕ್ಕೆ ಆಕ್ಷನ್ ‌ಕಟ್ ಹೇಳಿದ್ದಾರೆ. ಈ ಕಾರಣಕ್ಕೆ ಚಿತ್ರದ ಬಗ್ಗೆ

ಕಿಚ್ಚ ನಟನೆಯ ‘ ವಿಕ್ರಾಂತ್ ರೋಣ’ ಪೋಸ್ಟರ್ ನಕಲಿ ಮಾಡಿದ ಬಾಲಿವುಡ್! Read More »

ಕಾರ್ಕಳ: ಕಾಂಗ್ರೆಸ್ ಕಾರ್ಯಕರ್ತನ ಮೇಲೆ ದೌರ್ಜನ್ಯ ಆರೋಪ, ಮಾಜಿ ಸಿಎಂ ಸಿದ್ದು ಖಂಡ‌ನೆ

ಕಾರ್ಕಳದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಪೊಲೀಸ್ ದೌರ್ಜನ್ಯದ ಆರೋಪ ಕೇಳಿಬಂದಿದ್ದು, ಇದೀಗ ಕಾರ್ಯಕರ್ತನ ಸ್ಥಿತಿ ಗಂಭೀರವಾಗಿದೆ. ಹಿರ್ಗಾನ ನಿವಾಸಿ ರಾಧಾಕೃಷ್ಣ ಹಲ್ಲೆಗೆ ಒಳಗಾದವರು. ಇವರು ಸೈನಿಕರ ಬಗ್ಗೆ ಫೇಸ್‌ಬುಕ್‌ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದರು ಎಂಬ ಆರೋಪದ ಮೇಲೆ ಠಾಣಾಧಿಕಾರಿ ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ರಾಧಾಕೃಷ್ಣ ಎಂಬವರು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ತನ್ನ ಫೇಸ್ ಬುಕ್ ನಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪೋಸ್ಟ್ ಗಳನ್ನು ಹಾಕುತ್ತಿದ್ದರು. ಆದರೆ 2020

ಕಾರ್ಕಳ: ಕಾಂಗ್ರೆಸ್ ಕಾರ್ಯಕರ್ತನ ಮೇಲೆ ದೌರ್ಜನ್ಯ ಆರೋಪ, ಮಾಜಿ ಸಿಎಂ ಸಿದ್ದು ಖಂಡ‌ನೆ Read More »

ಮಂಗಳೂರು ವಿ.ವಿ ಗ್ರೂಪ್ ನಲ್ಲಿ ಹರಿದಾಡಿತು ಹಸಿಬಿಸಿ ವಿಡಿಯೋ, ಪ್ರೊಫೆಸರ್ ನ ಎಡವಟ್ಟಿಗೆ ಎಲ್ಲೆಡೆ ಆಕ್ರೋಶ

ಮಂಗಳೂರು: ಇಲ್ಲಿನ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ವಿವಿಧ ಕಾಲೇಜುಗಳ ಪ್ರೊಫೆಸರ್ ಮತ್ತು ಉಪನ್ಯಾಸಕರನ್ನು ಒಳಗೊಂಡ ಟೆಲಿಗ್ರಾಮ್ ಗ್ರೂಪಿನಲ್ಲಿ ಕೊಡಗು ಮೂಲದ ಪ್ರೊಫೆಸರ್ ಒಬ್ಬರು ಅಶ್ಲೀಲ ವಿಡಿಯೋ ಪೋಸ್ಟ್ ಮಾಡಿರುವ ಘಟನೆ ನಡೆದಿದ್ದು, ವಿವಿಯಿಂದ ತನಿಖೆಗೆ ಆದೇಶ ಮಾಡಲಾಗಿದೆ. ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ವಿಚಾರದಲ್ಲಿ ಮಂಗಳೂರು ವಿವಿಯಿಂದ ಗ್ರೂಪ್ ರಚಿಸಲಾಗಿತ್ತು. ವಾಟ್ಸಪ್ ಮಾದರಿಯದ್ದೇ ಟೆಲಿಗ್ರಾಮ್ ನಲ್ಲಿ ಗ್ರೂಪ್ ರಚಿಸಿದ್ದು, ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ವ್ಯಾಪ್ತಿಯ ವಿವಿಧ ಕಾಲೇಜುಗಳ ಸಾವಿರಕ್ಕಿಂತಲೂ ಹೆಚ್ಚು ಸದಸ್ಯರನ್ನು ಸೇರಿಸಲಾಗಿತ್ತು.

ಮಂಗಳೂರು ವಿ.ವಿ ಗ್ರೂಪ್ ನಲ್ಲಿ ಹರಿದಾಡಿತು ಹಸಿಬಿಸಿ ವಿಡಿಯೋ, ಪ್ರೊಫೆಸರ್ ನ ಎಡವಟ್ಟಿಗೆ ಎಲ್ಲೆಡೆ ಆಕ್ರೋಶ Read More »

ಮತ್ತೆ ದೇಶದಲ್ಲಿ ಏರಿಕೆಕಾಣುತ್ತಿರುವ ಕೊರೊನ ಸೋಂಕಿನ ಪ್ರಮಾಣ, ಮೈಮರೆತೀರಾ ಜೋಕೆ….

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಕೊರೊನಾ ಸೋಂಕ್ 43,393 ಜನರಲ್ಲಿ ಪತ್ತೆಯಾಗಿದ್ದು ಇದರಿಂದ ದೇಶದಲ್ಲಿ ಸೋಂಕಿತರ ಸಂಖ್ಯೆ 3,07,52,950ಕ್ಕೆ ಏರಿದೆ. ಇದಿರಿಂದ ಮತ್ತೆ ಲಾಕ್ ಡೌನ್ ಆಗುವ ಮುನ್ಸೂಚನೆ ಇದೆ. ಕಳೆದ 24 ಗಂಟೆಯಲ್ಲಿ 911 ಜನರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇದುವರೆಗೂ ದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 4,05,939ಕ್ಕೆ ಏರಿಕೆಯಾಗಿದೆ.ದೇಶದಲ್ಲಿ ದಿನದಿಂದ ದಿನಕ್ಕೆ ಸೋಂಕಿನ ಪ್ರಮಾಣ ಮತ್ತು ಸಾವಿನ ಪ್ರಮಾಣ ಹೆಚ್ಚಾಗುತ್ತಿರುವುದಲ್ಲದೆ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಹಿನ್ನಲೆ ಲಾಕ್ ಡೌನ್ ಮಾಡುವ ಸ್ಥಿತಿ

ಮತ್ತೆ ದೇಶದಲ್ಲಿ ಏರಿಕೆಕಾಣುತ್ತಿರುವ ಕೊರೊನ ಸೋಂಕಿನ ಪ್ರಮಾಣ, ಮೈಮರೆತೀರಾ ಜೋಕೆ…. Read More »

ಕೇರಳದಲ್ಲಿ ‌ಕಾಣಿಸಿಕೊಳ್ತು ಮಾರಕ ಝಿಕಾ ವೈರಸ್

ತಿರುವನಂತಪುರಂ: ಮೊದಲ ಬಾರಿಗೆ ಕೇರಳದಲ್ಲಿ ಮಹಿಳೆಯೊಬ್ಬರಿಗೆ ಝಿಕಾ ವೈರಸ್ ಸೋಂಕು ತಗುಲಿರುವುದಾಗಿ ಆರೋಗ್ಯ ಸಚಿವೆ ಹೇಳಿದ್ದಾರೆ. ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪರಶಾಲಾದ (24) ಗರ್ಭಿಣಿಯಲ್ಲಿ ಈ ರೋಗ ಪತ್ತೆಯಾಗಿದೆ. ಜೂ. 28 ರಂದು ಮಹಿಳೆಯನ್ನು ಜ್ವರ, ತಲೆನೋವು ಮತ್ತು ಕೆಂಪು ಕಲೆಗಳಿಂದ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ನಡೆದ ಮೊದಲ ಪರೀಕ್ಷೆಯಲ್ಲಿ ಅಲ್ಪ ಪ್ರಮಾಣದ ಧನಾತ್ಮಕ ಅಂಶ ಕಂಡುಬಂದಿದೆ. ಝಿಕಾ ವೈರಸ್ ಅನ್ನು ಪತ್ತೆಹಚ್ಚಲು ಎನ್‌ಐವಿ ಅನ್ನು ಬಳಸಬಹುದು. ಮಾದರಿಗಳನ್ನು ಪುಣೆಗೆ ಕಳುಹಿಸಲಾಗಿದೆ. ಅದೇ ಸಮಯದಲ್ಲಿ,

ಕೇರಳದಲ್ಲಿ ‌ಕಾಣಿಸಿಕೊಳ್ತು ಮಾರಕ ಝಿಕಾ ವೈರಸ್ Read More »

ಪಕ್ಷನಿಷ್ಠೆ, ಜವಾಬ್ದಾರಿ ನಿರ್ವಹಣೆಗೆ ಕೇಂದ್ರ ಸಚಿವೆ ಸ್ಥಾನ. ಇದು‌ ಲಕ್ ಅಲ್ಲ, ಪರಿಶ್ರಮದ ಪ್ರತಿಫಲ

ಶೋಭಾ ಕರಂದ್ಲಾಜೆ, ಕರಾವಳಿಯ ಈ ಹೆಣ್ಣು‌ಮಗಳು ಈಗ ರಾಷ್ಟ್ರೀಯ ರಾಜಕಾರಣಕ್ಕೆ ಸಕ್ರಿಯವಾಗಿ‌ ಎಂಟ್ರಿಕೊಟ್ಟಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ ಕೃಷಿ ಹಾಗೂ ರೈತಕಲ್ಯಾಣ ಸಹಾಯಕ ಸಚಿವೆಯಾಗಿ ನಿನ್ನೆಯಷ್ಟೇ ಅಧಿಕಾರ ವಹಿಸಿಕೊಂಡರು. ಇವರ ಈ ಆಯ್ಕೆ ರಾಜಕೀಯ ವಲಯದಲ್ಲಿ ಅಚ್ಚರಿ ಹಾಗೂ ಆಶ್ಚರ್ಯಕ್ಕೆ ಎಡೆಮಾಡಿಕೊಟ್ಟಿತ್ತು. ಶೋಭಾ ಕರಂದ್ಲಾಜೆಯವರ ರಾಜಕೀಯ ಗುರು ಡಿ.ವಿ ಸದಾನಂದ ಗೌಡರನ್ನೇ ಕೈಬಿಟ್ಟು, ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಈ ಸಂಸದೆಯನ್ನು ಆಯ್ಕೆ ಮಾಡಿರುವುದು ಇವರ ರಾಜಕೀಯ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಎಂಬುದು ಬಿಜೆಪಿ

ಪಕ್ಷನಿಷ್ಠೆ, ಜವಾಬ್ದಾರಿ ನಿರ್ವಹಣೆಗೆ ಕೇಂದ್ರ ಸಚಿವೆ ಸ್ಥಾನ. ಇದು‌ ಲಕ್ ಅಲ್ಲ, ಪರಿಶ್ರಮದ ಪ್ರತಿಫಲ Read More »

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸಿಂಗಂ ಅಣ್ಣಾಮಲೈ

ದೆಹಲಿ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರನ್ನು ನೇಮಿಸಿ ಬಿಜೆಪಿ ಹೈಕಮಾಂಡ್ ಅಧಿಕೃತ ಆದೇಶ ಹೊರಡಿಸಿದೆ.ಕಳೆದ ಬಾರಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಅಣ್ಣಾಮಲೈ ಅವರಿಗೆ ಇದೀಗ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆದೇಶ ಹೊರಡಿಸಿದ್ದಾರೆ. 2024 ರ ಲೋಕಸಭಾ ಚುನಾವಣೆಗಳನ್ನು ಕೇಂದ್ರೀಕರಿಸಿ ಬಿಜೆಪಿ ಪಕ್ಷವು ಪ್ರಸ್ತುತ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಎಲ್. ಮುರುಗನ್ ಅವರನ್ನು ಮೀನುಗಾರಿಕೆ, ಪಶುಸಂಗೋಪನೆ ಮತ್ತು

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸಿಂಗಂ ಅಣ್ಣಾಮಲೈ Read More »

ವಾಹನ ಸವಾರರಿಗೆ ಗುಡ್ ನ್ಯೂಸ್, ಪೊಲೀಸ್ ತಪಾಸಣೆಗೆ ಡಿಜಿಟಲ್ ‌ದಾಖಲೆ‌ ಸಾಕು

ಬೆಂಗಳೂರು, ಜು.8- ಇನ್ನು ಮುಂದೆ ಪೊಲೀಸರ ತಪಾಸಣೆಯ ವೇಳೆ ವಾಹನ ಸವಾರರು ಡಿಜಿಟಲ್ ದಾಖಲೆಗಳನ್ನೇ ಪ್ರದರ್ಶನ ಮಾಡಬಹುದು ಎಂದು ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಸ್ಪಷ್ಟಪಡಿಸಿದ್ದಾರೆ. ಡಿಜಿಟಲ್ ಕ್ರಾಂತಿ ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದು , ಬೆಂಗಳೂರು ನಗರ ಪೊಲೀಸ್ ವಿಭಾಗವು ಡಿಜಿಟಿಲೀಕರಣದ ಮುಂಚೂಣಿಯಲ್ಲಿದೆ. ವಾಹನ ಸವಾರರಿಗೆ ಎಲ್ಲಾ ಸಮಯದಲ್ಲಿಯೂ ಅಗತ್ಯ ದಾಖಲಾತಿಗಳನ್ನು ಭೌತಿಕವಾಗಿ ತೆಗೆದುಕೊಂಡು ಹೋಗುತ್ತಿರುವ ಕಿರಿಕಿರಿಯಾಗುತ್ತಿರುವ ಹಿನ್ನೆಲೆಯಲ್ಲಿ ಡಿಜಿಟಲ್ ರೂಪದ ದಾಖಲೆಗಳನ್ನು ಹಾಜರುಪಡಿಸಲು ಅವಕಾಶ ನೀಡಲಾಗಿದೆ. ಕೇಂದ್ರ ಹೆದ್ದಾರಿ ಮತ್ತು ರಸ್ತೆ

ವಾಹನ ಸವಾರರಿಗೆ ಗುಡ್ ನ್ಯೂಸ್, ಪೊಲೀಸ್ ತಪಾಸಣೆಗೆ ಡಿಜಿಟಲ್ ‌ದಾಖಲೆ‌ ಸಾಕು Read More »