ಜನಸೇವೆ ಅಂದ್ರೆ ಇದಪ್ಪಾ! ಈ ಆಸ್ಪತ್ರೆಗೆ ಹಣಪವಾತಿ ಕೌಂಟರೇ ಇಲ್ಲ, ವಿಶ್ವದರ್ಜೆಯ ನೇತ್ರ ಚಿಕಿತ್ಸೆ ಸಂಪೂರ್ಣ ಉಚಿತ
ಸಮಗ್ರ ನ್ಯೂಸ್ : ಕುಂದಾಪುರ ಶಂಕರನಾರಾಯಣದಲ್ಲಿ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆಯು ವಿಶ್ವದರ್ಜೆಯ ಚಿಕಿತ್ಸಾ ಸೌಲಭ್ಯಗಳನ್ನು ಉಚಿತವಾಗಿ ಚಿಕಿತ್ಸೆ ನೀಡುವ ಉದ್ದೇಶದೊಂದಿಗೆ ಡಿ 08 ರಂದು ಉದ್ಘಾಟನೆಗೊಂಡಿತು. ನಾರಾಯಣ ನೇತ್ರಾಲಯ ಇದರ ನಿರ್ವಹಣೆ ಮಾಡಲಿದೆ. ಉನ್ನತ ಗುಣಮಟ್ಟದ ಆರೈಕೆಗಾಗಿ ತಜ್ಞ ವೈದ್ಯರ ಮತ್ತು ಆರೋಗ್ಯ ವೃತ್ತಿಪರರ ಸೇವೆಯನ್ನು ಒದಗಿಸಲು ಈ ಚಾರಿಟೇಬಲ್ ಆಸ್ಪತ್ರೆ ಸಜ್ಜಾಗಿದೆ.ಶಂಕರನಾರಾಯಣ ಕನ್‌ಸ್ಟ್ರಕ್ಷನ್ಸ್ ಪ್ರೈ. ಲಿ.ನ ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ಎನ್. ಸೀತಾರಾಮ್ ಶೆಟ್ಟಿ ಅವರು ತಮ್ಮ ಸಂಸ್ಥೆಯ ಸಿಎಸ್‌ಆರ್ ಯೋಜನೆಯಡಿ […]









